ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav AI Impact Summit 2026

ಎ ಎನ್ ಐ ಸಂದರ್ಶನದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಜಾಗತಿಕ ಎಐ ಕ್ರಾಂತಿಯಲ್ಲಿ ಭಾರತದ ಪಾತ್ರವನ್ನು ಪ್ರಧಾನಮಂತ್ರಿ ಉಲ್ಲೇಖಿಸಿದ್ದಾರೆ

ಪ್ರಕಟಣಾ ದಿನಾಂಕ: 18 FEB 2026 9:51AM by PIB Bengaluru

ದೆಹಲಿ ನಗರದಲ್ಲಿ ಪ್ರತಿಷ್ಠಿತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಇಂಪ್ಯಾಕ್ಟ್ ಸಮಿಟ್ ಆಯೋಜನೆಗೊಳ್ಳುತ್ತಿರುವ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ (AI)ಯ ಪರಿವರ್ತನಾ ಸಾಮರ್ಥ್ಯ ಮತ್ತು ಜಾಗತಿಕ ಎಐ ಕ್ರಾಂತಿಯಲ್ಲಿ ಭಾರತದ ಪ್ರಮುಖ ಪಾತ್ರದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ದೃಷ್ಟಿಕೋಣವನ್ನು ಹಂಚಿಕೊಂಡಿದ್ದಾರೆ.

ಎ ಎನ್ ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಎಐ ಯುಗದಲ್ಲಿ ಭಾರತವು ನಾವೀನ್ಯತೆ, ಪ್ರತಿಭೆ ಮತ್ತು ನೈತಿಕ ನಾಯಕತ್ವದ ಕೇಂದ್ರವಾಗಿರುವ ವಿಶಿಷ್ಟ ಸ್ಥಾನವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಅವರು ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ:

“ದೆಹಲಿ ನಗರದಲ್ಲಿ ಎಐ ಇಂಪ್ಯಾಕ್ಟ್ ಸಮಿಟ್ ನಡೆಯುತ್ತಿರುವ ಸಂದರ್ಭದಲ್ಲಿ, ಎಐಯ ಪರಿವರ್ತನಾ ಸಾಮರ್ಥ್ಯ, ಜಾಗತಿಕ ಎಐ ಕ್ರಾಂತಿಯಲ್ಲಿ ಭಾರತ ವಹಿಸಬಹುದಾದ ಪಾತ್ರ ಮತ್ತು ಇನ್ನಿತರ ವಿಷಯಗಳ ಬಗ್ಗೆ ಎ ಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ.”

 

*****


(ಪ್ರಕಟಣೆ ಐ.ಡಿ.: 2229625) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , Marathi , हिन्दी , Assamese , Bengali-TR , Bengali , Punjabi , Gujarati , Tamil , Telugu