ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವಕಪ್ ಗೆದ್ದಿರುವ ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ 

ಪ್ರಕಟಣಾ ದಿನಾಂಕ: 06 FEB 2026 9:33PM by PIB Bengaluru

ವಿಶ್ವ ಕಪ್ ಜಯಿಸಿರುವ ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಅತ್ಯುತ್ತಮ ಪ್ರದರ್ಶನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ತಂಡವು ಪಂದ್ಯಾವಳಿಯುದ್ದಕ್ಕೂ ಅಸಾಧಾರಣ ಕೌಶಲ್ಯ ತೋರುತ್ತಾ ಅತ್ಯುತ್ತಮ ಪ್ರದರ್ಶನ ನೀಡಿದೆ ಎಂದು ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಗೆಲುವು ಹಲವಾರು ಯುವ ಕ್ರೀಡಾಪಟುಗಳನ್ನು ಹುರಿದುಂಬಿಸಲಿದೆ ಎಂದು ಅವರು ಹೇಳಿದ್ದಾರೆ.

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ:

"ಭಾರತದ ಕ್ರಿಕೆಟ್ ಪ್ರತಿಭೆ ಪ್ರಜ್ವಲಿಸುತ್ತಿದೆ !

ವಿಶ್ವಕಪ್ ಜಯಿಸಿರುವ ನಮ್ಮ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆಯಿದೆ. ತಂಡವು ಪಂದ್ಯಾವಳಿಯುದ್ದಕ್ಕೂ ಅಸಾಧಾರಣ ಕೌಶಲ್ಯ ಪ್ರದರ್ಶಿಸುತ್ತಾ ಉತ್ತಮವಾಗಿ ಆಡಿದೆ. ಈ ಗೆಲುವು ಹಲವಾರು ಯುವ ಕ್ರೀಡಾಪಟುಗಳಿಗೂ ಸ್ಫೂರ್ತಿ ನೀಡಲಿದೆ. ಆಟಗಾರರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು."

 

*****


(ಪ್ರಕಟಣೆ ಐ.ಡಿ.: 2224814) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , Marathi , हिन्दी , Bengali , Assamese , Gujarati , Odia , Telugu , Malayalam