ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2026-27: ಸೃಜನಶೀಲ ಆರ್ಥಿಕತೆ ಮತ್ತು ಸೃಜನಶೀಲ ಶಿಕ್ಷಣಕ್ಕೆ ಪ್ರಮುಖ ಉತ್ತೇಜನ ಘೋಷಿಸಿದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್


ಭಾರತದಾದ್ಯಂತ ಎವಿಜಿಸಿ ವಲಯ ಮತ್ತು ಕೌಶಲ್ಯ ಪೂರಕ ವ್ಯವಸ್ಥೆಯನ್ನು ಬಲವರ್ಧನೆಗೆ ಬಜೆಟ್ ಘೋಷಣೆಗಳು

ಈ ಬಜೆಟ್ ಯುವ ಶಕ್ತಿ ಮತ್ತು ನಾರಿ ಶಕ್ತಿಯನ್ನು ಬಲಪಡಿಸುವ ಗುರಿ ಹೊಂದಿದೆ ಮತ್ತು ಕರ್ತವ್ಯದಿಂದ ಪ್ರೇರಿತವಾಗಿದೆ: ಶ್ರೀ ಅಶ್ವಿನಿ ವೈಷ್ಣವ್

ಪ್ರಕಟಣಾ ದಿನಾಂಕ: 01 FEB 2026 7:35PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಭಾರತದ ಶಿಕ್ಷಣ ಮತ್ತು ಕೌಶಲ್ಯಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ಪರಿವರ್ತನಾತ್ಮಕ ನೀಲನಕ್ಷೆಯನ್ನು ಮಂಡಿಸಿದ ಹಣಕಾಸು ಸಚಿವರು, ಸೃಜನಶೀಲ (ಆರೇಂಜ್) ಆರ್ಥಿಕತೆಗೆ ಉತ್ತೇಜನ ಮತ್ತು ದೇಶದ ಸೃಜನಶೀಲ ಉದ್ದಿಮೆಗಳ ಬಲವರ್ಧನೆಗೆ ಹಲವು ಪ್ರಮುಖ ಉಪಕ್ರಮಗಳನ್ನು ಘೋಷಿಸಿದರು.

ಭಾರತದ ಆನಿಮೇಷನ್, ವಿಜುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಲಯದ ಕ್ಷಿಪ್ರ ಬೆಳವಣಿಗೆಯನ್ನು ಪ್ರಮುಖವಾಗಿ ಉಲ್ಲೇಖಿಸಿರುವ ವಿತ್ತ ಸಚಿವರು ಉದ್ಯಮಕ್ಕೆ 2030 ವೇಳೆಗೆ 2 ಮಿಲಿಯನ್ ವೃತ್ತಿಪರರ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದರು. ಈ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ವಿಸ್ತರಿಸಲು ಅವರು ಮುಂಬೈನ ಭಾರತೀಯ ಸೃಜನಶೀಲ ತಂತ್ರಜ್ಞಾನ ಕೇಂದ್ರದ ಮೂಲಕ ದೇಶಾದ್ಯಂತ 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಎವಿಜಿಸಿ ಕಂಟೆಂಟ್ ಸೃಷ್ಟಿ ಲ್ಯಾಬ್ ಗಳನ್ನು ಸ್ಥಾಪಿಸಲು ಸಹಾಯಧನ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರಕಟಿಸಿದರು. ಈ ಪ್ರಯೋಗಾಲಯಗಳು ಯುವಜನತೆಗೆ ಹೊಸ ಸೃಜನಶೀಲ ವೃತ್ತಿಪರ ಅವಕಾಶಗಳನ್ನು ಒದಗಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಈ ಉಪಕ್ರಮ ಭವಿಷ್ಯಕ್ಕೆ ಸಿದ್ಧವಾದ ದುಡಿಯವ ಪಡೆ, ಭಾರತದ ಸೃಜನಶೀಲ ಆರ್ಥಿಕತೆ ಬಲವರ್ಧನೆ ಮತ್ತು ದೇಶಾದ್ಯಂತ ಕಲಿಕಾರ್ಥಿಗಳಿಗೆ ವ್ಯಾಪಕ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾಗಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ಬಜೆಟ್ ನ ಘೋಷಣೆಗಳ ಕುರಿತಂತೆ ಇಂದು ರೈಲ್ವೆ ಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಅವರು “ಈ ಬಜೆಟ್ ಕರ್ತವ್ಯದಿಂದ ಪ್ರೇರಿತವಾದ ಯುವಜನತೆಗೆ ಶಕ್ತಿ ತುಂಬುವ ಮತ್ತು ಮಹಿಳೆಯರನ್ನು ಬಲವರ್ಧನೆಗೊಳಿಸುವ ಬಜೆಟ್ ಆಗಿದೆ” ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವೇವ್ಸ್ ಮೂಲಕ ಭಾರತದ ಸೃಜನಶೀಲ ಆರ್ಥಿಕತೆಯನ್ನು ಜಾಗತಿಕ ವೇದಿಕೆಗೆ ಏರಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಐಐಟಿಗಳು ಮತ್ತು ಐಐಎಂಗಳ ಮಾದರಿಯಲ್ಲೇ ಮುಂಬೈನಲ್ಲಿರುವ ಐಐಸಿಟಿ 15,000 ಪ್ರೌಢ ಶಾಲೆಗಳು ಮತ್ತು 500 ಕಾಲೇಜುಗಳನ್ನು ಕ್ರಿಯೇಟರ್ಸ್ ಲ್ಯಾಬ್ ಮೂಲಕ ಸಂಪರ್ಕಿಸುವುದಲ್ಲದೆ 20 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದರು.

ಆರ್ಥಿಕ ಸಮೀಕ್ಷೆ ಕೂಡ ಭಾರತದ ಮಾಧ್ಯಮ ಮತ್ತು ಮನರಂಜನಾ ವಲಯ(ಎಂ&ಇ) ಸೇವಾ ಆರ್ಥಿಕತೆಯಲ್ಲಿ ಅತ್ಯಂತ ಪ್ರಮುಖ ಆಧಾರಸ್ತಂಭವಾಗಲಿದೆ ಎಂದು ಉಲ್ಲೇಖಿಸಲಾಗಿದ್ದು, ಅದರ ವ್ಯಾಪ್ತಿಗೆ ಆಡಿಯೋ ವಿಜುಯಲ್ ಪ್ರೊಡಕ್ಷನ್, ಬ್ರಾಡ್ ಕಾಸ್ಟಿಂಗ್, ಡಿಜಿಟಲ್ ಕಂಟೆಂಟ್, ಆನಿಮೇಷನ್, ಗೇಮಿಂಗ್, ಜಾಹಿರಾತು ಮತ್ತು ಲೈವ್ ಕಾರ್ಯಕ್ರಮಗಳು ಒಳಪಡಲಿವೆ. ಕಳೆದೊಂದು ದಶಕದಿಂದೀಚೆಗೆ ಈ ವಲಯ ಅತ್ಯಂತ ಬಲಿಷ್ಠವಾಗಿ ಡಿಜಿಟಲ್ ಮತ್ತು ಪ್ಲಾಟ್ ಫಾರಂ ಆಧಾರಿತ ಸೇವಾ ವಲಯವಾಗಿ ಪರಿವರ್ತನೆಯಾಗಿದ್ದು, ಆದಾಯದ ಮಾದರಿಗಳನ್ನು ರೂಪಿಸಿರುವುದಲ್ಲದೆ, ಉದ್ಯೋಗ ಮತ್ತು ಮೌಲ್ಯಸರಣಿಯನ್ನು ಸೃಷ್ಟಿಸಿದೆ. 2024ರಲ್ಲಿ ಸುಮಾರು 2.5 ಟ್ರಿಲಿಯನ್ ಪ್ರಗತಿ ಅಂದಾಜಿಸಲಾಗಿದ್ದು, ಆದಾಯ ಹೆಚ್ಚಳ, ಇಂಟರ್ನೆಟ್ ಬಳಕೆ ಹೆಚ್ಚಳ, ಒಟಿಟಿ ವಿಸ್ತರಣೆ ಮತ್ತು ಎಐ ಆಧಾರಿತ ನಾವೀನ್ಯತೆಗಳಿಂದಾಗಿ ಈ ಬೆಳವಣಿಗೆ ಸಾಧಿಸಲಾಗುತ್ತಿದೆ.

ಸೃಜನಶೀಲ (ಆರೇಂಜ್) ಆರ್ಥಿಕತೆ ಕುರಿತು

“ಸೃಜನಶೀಲ ಆರ್ಥಿಕತೆ” ಇದು ಆರ್ಥಿಕತೆಯ ಒಂದು ಭಾಗವೆಂದು ಉಲ್ಲೇಖಿಸಲಾಗಿದ್ದು, ಅದರಲ್ಲಿ ಸೃಜನಶೀಲತೆ, ಸಂಸ್ಕೃತಿ ಮತ್ತು ಬೌದ್ಧಿಕ ಸಮೃದ್ಧಿಯನ್ನು ಆಧರಿಸಿವೆ. ಅಲ್ಲಿ ಮುಖ್ಯವಾಗಿ ಚಿಂತನೆಗಳು, ಜ್ಞಾನ, ಕಲಾತ್ಮಕ ಅಭಿವ್ಯಕ್ತಿ ಮತ್ತು ಭೌತಿಕ ಸರಕುಗಳಿಗಿಂತ ಸಾಂಸ್ಕೃತಿಕ ಕಂಟೆಂಟ್ ಸೃಷ್ಟಿಗೆ ಒತ್ತು ನೀಡುವ ಮೂಲಕ ಮೌಲ್ಯಗಳನ್ನು ಸೃಷ್ಟಿಸಲಾಗುತ್ತಿದೆ.

 

*****


(ಪ್ರಕಟಣೆ ಐ.ಡಿ.: 2221931) ವಿಸಿಟರ್ ಕೌಂಟರ್ : 129
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , Marathi , हिन्दी , Bengali , Assamese , Punjabi , Gujarati , Telugu , Malayalam