ಹಣಕಾಸು ಸಚಿವಾಲಯ
ಕ್ರೀಡಾ ಸಾಮಗ್ರಿ(ಪರಿಕರ)ಗಳ ಉತ್ಪಾದನೆ, ಸಂಶೋಧನೆ ಮತ್ತು ನಾವೀನ್ಯತೆ ಉತ್ತೇಜಿಸಲು ಸಮರ್ಪಿತ ಉಪಕ್ರಮ ಆರಂಭವನ್ನು ಪ್ರಸ್ತಾಪಿಸಿದ ಕೇಂದ್ರ ಬಜೆಟ್ 2026-27
ಕೈಗೆಟುಕುವ ಬೆಲೆಗೆ ಗುಣಮಟ್ಟದ ಕ್ರೀಡಾ ಸರಕು(ಸಾಮಗ್ರಿ)ಗಳು ಲಭ್ಯವಾಗುವ ರೀತಿಯಲ್ಲಿ ಭಾರತದ ಸಾಮರ್ಥ್ಯ ಆಧರಿಸಿ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವಂತೆ ಉಪಕ್ರಮ ಜಾರಿಗೆ ಬರಲಿದೆ
ಮುಂದಿನ ದಶಕದಲ್ಲಿ ಕ್ರೀಡಾ ರಂಗವನ್ನು ಪರಿವರ್ತಿಸಲು ಖೇಲೋ ಇಂಡಿಯಾ ಮಿಷನ್ ಘೋಷಣೆ
ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಕ್ರೀಡಾ ಪ್ರತಿಭೆಗಳ ವ್ಯವಸ್ಥಿತ ಪೋಷಣೆಯನ್ನು ಮುನ್ನಡೆಸಲು ಖೇಲೋ ಇಂಡಿಯಾ ಮಿಷನ್ ಬರಲಿದೆ
ಪ್ರಕಟಣಾ ದಿನಾಂಕ:
01 FEB 2026 12:43PM by PIB Bengaluru
ಕೈಗೆಟುಕುವ ಬೆಲೆಗೆ ಗುಣಮಟ್ಟದ ಕ್ರೀಡಾ ಸಾಮಗ್ರಿ ಅಥವಾ ಪರಿಕರಗಳು ಲಭ್ಯವಾಗುವ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಭಾರತದ ಸಾಮರ್ಥ್ಯವನ್ನು ಬಳಸಿಕೊಂಡು, ದೇಶದಲ್ಲಿ ಕ್ರೀಡಾ ಸರಕುಗಳಿಗಾಗಿ ಸಮರ್ಪಿತ ಉಪಕ್ರಮ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಿದರು.
ಈ ವರ್ಷದ ಬಜೆಟ್ ಆಧಾರಸ್ತಂಭಗಳಾದ 3 ಕರ್ತವ್ಯಗಳಲ್ಲಿ ಮೊದಲನೆಯದಕ್ಕೆ ಗಮನ ಕೇಂದ್ರೀಕರಿಸಿ ಕ್ರೀಡಾ ಸಾಮಗ್ರಿಗಳ ಘೋಷಣೆ ಮಾಡಲಾಗಿದೆ, ಅವುಗಳೆಂದರೆ 'ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು ಮತ್ತು ಉಳಿಸಿಕೊಳ್ಳುವುದಾಗಿದೆ. ಅಸ್ಥಿರ ಜಾಗತಿಕ ಚಲನಶೀಲತೆಗೆ ಚೇತರಿಕೆಯನ್ನು ನಿರ್ಮಿಸುವುದು'. ಕ್ರೀಡಾ ಸಾಮಗ್ರಿಗಳ ಉಪಕ್ರಮದ ಉದ್ದೇಶವು ಸಲಕರಣೆಗಳ ವಿನ್ಯಾಸ ಮತ್ತು ವಸ್ತು ವಿಜ್ಞಾನ ಎರಡರಲ್ಲೂ ಉತ್ಪಾದನೆ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವುದಾಗಿದೆ ಎಂದರು.
ಭಾರತದ ಕ್ರೀಡಾ ಪರಿಸರ ವ್ಯವಸ್ಥೆ ಬಲಪಡಿಸಲು ಪ್ರಯತ್ನಿಸುವ ಮತ್ತೊಂದು ಪ್ರಮುಖ ಪ್ರಸ್ತಾಪವನ್ನು ಕೇಂದ್ರ ಬಜೆಟ್ ಮುಂದಿಡುತ್ತಿದೆ. ಹಣಕಾಸು ಸಚಿವೆ ಶ್ರೀಮತಿ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, "ಕ್ರೀಡಾ ವಲಯವು ಉದ್ಯೋಗ, ಕೌಶಲ್ಯ ಮತ್ತು ಉದ್ಯೋಗಾವಕಾಶಗಳ ಬಹು ಕಾರ್ಯವಿಧಾನಗಳನ್ನು ಒದಗಿಸುತ್ತದೆ. ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಚಾಲನೆಯಲ್ಲಿರುವ ಕ್ರೀಡಾ ಪ್ರತಿಭೆಗಳ ವ್ಯವಸ್ಥಿತ ಪೋಷಣೆಯನ್ನು ಮುಂದುವರಿಸುತ್ತಾ, ಮುಂದಿನ ದಶಕದಲ್ಲಿ ಕ್ರೀಡಾ ರಂಗವನ್ನು ಪರಿವರ್ತಿಸಲು ಖೇಲೋ ಇಂಡಿಯಾ ಮಿಷನ್ ಪ್ರಾರಂಭಿಸುವುದಾಗಿ ನಾನು ಪ್ರಸ್ತಾಪಿಸುತ್ತೇನೆ". ಈ ಹಂತವು ಬಜೆಟ್ ನಲ್ಲಿ ವಿವರಿಸಿರುವ 2ನೇ ಕರ್ತವ್ಯಕ್ಕೆ ಹೊಂದಿಕೆಯಾಗುತ್ತದೆ, ಅಂದರೆ 'ನಮ್ಮ ಜನರ ಆಕಾಂಕ್ಷೆಗಳನ್ನು ಪೂರೈಸುವುದು ಮತ್ತು ಅವರ ಸಾಮರ್ಥ್ಯವನ್ನು ನಿರ್ಮಿಸುವುದು, ಅವರನ್ನು ಭಾರತದ ಸಮೃದ್ಧಿಯ ಹಾದಿಯಲ್ಲಿ ಬಲವಾದ ಪಾಲುದಾರರನ್ನಾಗಿ ಮಾಡುವುದಾಗಿದೆ' ಎಂದರು.
ಹಣಕಾಸು ಸಚಿವರು ಹೇಳಿದಂತೆ, ಖೇಲೋ ಇಂಡಿಯಾ ಮಿಷನ್ ಈ ಕೆಳಗಿನ ಪ್ರಸ್ತಾವನೆಗಳನ್ನು ಸುಗಮಗೊಳಿಸುತ್ತದೆ:
- ಮೂಲಭೂತ, ಮಧ್ಯಂತರ ಮತ್ತು ಗಣ್ಯ ಹಂತಗಳಲ್ಲಿ ತರಬೇತಿ ಕೇಂದ್ರಗಳಿಂದ ಬೆಂಬಲಿತವಾದ ಸಮಗ್ರ ಪ್ರತಿಭೆಗಳ ಅಭಿವೃದ್ಧಿ ಮಾರ್ಗ,
- ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯ ವ್ಯವಸ್ಥಿತ ಅಭಿವೃದ್ಧಿ,
- ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನದ ಏಕೀಕರಣ,
- ಕ್ರೀಡಾ ಸಂಸ್ಕೃತಿ ಉತ್ತೇಜಿಸಲು ಮತ್ತು ವೇದಿಕೆಗಳನ್ನು ಒದಗಿಸಲು ಸ್ಪರ್ಧೆಗಳು ಮತ್ತು ಲೀಗ್ ಗಳು, ಮತ್ತು
- ತರಬೇತಿ ಮತ್ತು ಸ್ಪರ್ಧೆಗಾಗಿ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿ.

*****
(ಪ್ರಕಟಣೆ ಐ.ಡಿ.: 2221523)
ವಿಸಿಟರ್ ಕೌಂಟರ್ : 46
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam