ಹಣಕಾಸು ಸಚಿವಾಲಯ
ಕಸ್ಟಮ್ಸ್ ಮತ್ತು ಕೇಂದ್ರ ಸುಂಕಕ್ಕಾಗಿ ಬಜೆಟ್ ಪ್ರಸ್ತಾವನೆಗಳು ಸುಂಕ ರಚನೆಯನ್ನು ಇನ್ನಷ್ಟು ಸರಳಗೊಳಿಸುವ, ದೇಶೀಯ ಉತ್ಪಾದನೆ ಬೆಂಬಲಿಸುವ ಗುರಿ ಹೊಂದಿವೆ: ಕೇಂದ್ರ ಹಣಕಾಸು ಸಚಿವರು
ಕೇಂದ್ರ ಬಜೆಟ್ 2026-27 ಇಂಧನ ಪರಿವರ್ತನೆ ಮತ್ತು ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಹಲವು ಮೂಲಭೂತ ಕಸ್ಟಮ್ಸ್ ಸುಂಕ ವಿನಾಯಿತಿಗಳ ಪ್ರಸ್ತಾಪ
ನಾಗರಿಕ ಮತ್ತು ರಕ್ಷಣಾ ವಿಮಾನಯಾನದಲ್ಲಿ ಉತ್ಪಾದನೆ ಮತ್ತು ಎಂ ಆರ್ ಒ ಅವಶ್ಯಕತೆಗಳಿಗಾಗಿ ಪ್ರಸ್ತಾಪಿಸಲಾದ ಬಿಸಿಡಿ ವಿನಾಯಿತಿಗಳು
ಬಜೆಟ್ ಪ್ರಸ್ತಾವನೆಗಳು ವಿಶೇಷ ವಿತ್ತ ವಲಯಗಳಲ್ಲಿ ಅರ್ಹ ಉತ್ಪಾದನಾ ಘಟಕಗಳ ಮೂಲಕ ದೇಶೀಯ ಸುಂಕ ವಲಯಕ್ಕೆ ರಿಯಾಯಿತಿ ದರದಲ್ಲಿ ಮಾರಾಟ ಸುಗಮ
ಪ್ರಕಟಣಾ ದಿನಾಂಕ:
01 FEB 2026 1:04PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು 2026-27ರ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ತೆರಿಗೆಗೆ ಸಂಬಂಧಿಸಿದ ಬಜೆಟ್ ಪ್ರಸ್ತಾವನೆಗಳು ಸುಂಕ ರಚನೆಯನ್ನು ಮತ್ತಷ್ಟು ಸರಳಗೊಳಿಸುವ, ದೇಶೀಯ ಉತ್ಪಾದನೆಯನ್ನು ಬೆಂಬಲಿಸುವ, ರಫ್ತು ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಮತ್ತು ಸುಂಕದಲ್ಲಿ ಸರಿಯಾದ ಇನ್ವರ್ಷನ್ (inversion) ಮಾಡುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.
ದೀರ್ಘಕಾಲದಿಂದ ಮುಂದುವರಿಯುತ್ತಿರುವ ಕಸ್ಟಮ್ಸ್ ಸುಂಕ ವಿನಾಯಿತಿಗಳನ್ನು ತೆಗೆದುಹಾಕುವ ಮೂಲಕ ಭಾರತದಲ್ಲಿ ತಯಾರಿಸಲಾಗುತ್ತಿರುವ ಅಥವಾ ಆಮದುಗಳು ಅತ್ಯಲ್ಪವಾಗಿರುವ ವಸ್ತುಗಳ ಮೇಲಿನ ಕೆಲವು ವಿನಾಯಿತಿಗಳನ್ನು ತೆಗೆದುಹಾಕಲು ಬಜೆಟ್ ಪ್ರಸ್ತಾಪಿಸುತ್ತದೆ. ಅದೇ ರೀತಿ ನಿರ್ದಿಷ್ಟ ವಸ್ತುಗಳ ಮೇಲೆ ಅನ್ವಯವಾಗುವ ಸುಂಕದ ದರವನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು, ವಿವಿಧ ಕಸ್ಟಮ್ಸ್ ಅಧಿಸೂಚನೆಗಳಲ್ಲಿ ಕೆಲವು ಪರಿಣಾಮಕಾರಿ ದರಗಳನ್ನು ತೆರಿಗೆ ಶೆಡ್ಯೂಲ್ ಗೆ ಸೇರಿಸಲು ಬಜೆಟ್ ಪ್ರಸ್ತಾಪಿಸುತ್ತದೆ.
ರಫ್ತುಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಮುದ್ರ ಆಹಾರಗಳನ್ನು ರಫ್ತು ಮಾಡಲು ಸಂಸ್ಕರಣೆಗೆ ಬಳಸುವ ನಿರ್ದಿಷ್ಟ ವಸ್ತುಗಳ ಮೇಲಿನ ತೆರಿಗೆ ರಹಿತ ಆಮದು ಮಿತಿಯನ್ನು ಹೆಚ್ಚಿಸಲು ಶಿಫಾರಸ್ಸು ಮಾಡುತ್ತದೆ. ಎಫ್ಒಬಿ ಮೌಲ್ಯದ ಹಿಂದಿನ ವರ್ಷದ ವಹಿವಾಟಿನ ಮೇಲಿನ ಶೇ.1 ರಿಂದ ಶೇ.3ಕ್ಕೆ ಹೆಚ್ಚಿಸಲು ಬಯಸಿದೆ. ಅಲ್ಲದೆ ಬಜೆಟ್ ನಲ್ಲಿ ಸದ್ಯ ಚರ್ಮ ಅಥವಾ ಸಿಂಥೆಟಿಕ್ ಫುಟ್ ವೇರ್, ಶೂಗಳ ಮೇಲ್ಭಾಗಗಳ ರಫ್ತಿಗೆ ಸದ್ಯ ಇರುವ ತೆರಿಗೆ ಮುಕ್ತ ಆಮದನ್ನು ಮುಂದುವರಿಸಲು ಅವಕಾಶ ಕಲ್ಪಿಸಿದೆ. ಹಣಕಾಸು ಸಚಿವರು ಅಂತಿಮ ಉತ್ಪನ್ನಗಳ ರಫ್ತಿಗೆ ಹಾಲಿ ಇರುವ ಆರು ತಿಂಗಳ ಮಿತಿನ್ನು ಒಂದು ವರ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದ್ದಾರೆ. ಇದು ಚರ್ಮ ಅಥವಾ ಜವಳಿ ಗಾರ್ಮೆಂಟ್ಸ್ ರಫ್ತುದಾರರಿಗೆ, ಚರ್ಮ ಅಥವಾ ಸಿಂಥೆಟಿಕ್ ಪಾದರಕ್ಷೆಗಳು ಹಾಗೂ ಇತರೆ ಚರ್ಮದ ಉತ್ಪನ್ನದಾರರಿಗೆ ಅನುಕೂಲವಾಗಲಿದೆ.
ಬಜೆಟ್ ನಲ್ಲಿ ಇಂಧನ ಪರಿವರ್ತನೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಲು ಹಲವು ಪ್ರಸ್ತಾಪಗಳನ್ನು ಮಾಡಲಾಗಿದೆ. ಮೊದಲಿಗೆ ಬಜೆಟ್ ನಲ್ಲಿ ಬ್ಯಾಟರಿಗಳಿಗೆ ಲೀಥಿಯಂ ಅಯಾನ್ ಸೆಲ್ ಗಳನ್ನು ಅಭಿವೃದ್ಧಿಪಡಿಸಲು ಬಳಕೆ ಮಾಡುವ ಕ್ಯಾಪಿಟಲ್ ಗೂಡ್ಸ್ ಗೆ ಮೂಲ ಸುಂಕ ವಿನಾಯಿತಿಯನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಇದು ಇಂಧನ ಸಂಗ್ರಹ ವ್ಯವಸ್ಥೆಗಳನ್ನು ಮಾಡುವ ಬ್ಯಾಟರಿಗಳನ್ನು ಉತ್ಪಾದಿಸುವವರಿಗೂ ಅನ್ವಯವಾಗಲಿದೆ. ಸೌರ ಇಂಧನಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವರು, ಸೋಲಾರ್ ಗ್ಲಾಸ್ ಗಳನ್ನು ಉತ್ಪಾದಿಸಲು ಬಳಕೆ ಮಾಡುವ ಸೋಡಿಯಂ ಅಂಟಿಮೊನೇಟ್ ಆಮದು ಮೇಲಿನ ಮೂಲಸುಂಕದಿಂದ ವಿನಾಯಿತಿ ಪ್ರಕಟಿಸಿದೆ.

ಅಣು ಇಂಧನ ವಲಯಕ್ಕೆ ಒತ್ತು ನೀಡುವ ಸಲುವಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಅಣು ಇಂಧನ ಯೋಜನೆಗಳಿಗೆ ಅಗತ್ಯವಿರುವ ವಸ್ತುಗಳ ಆಮದಿಗಾಗಿ ನೀಡಿರುವ ತೆರಿಗೆ ವಿನಾಯಿತಿಯನ್ನು 2035ರವರೆಗೆ ವಿಸ್ತರಿಸಿದ್ದಾರೆ ಮತ್ತು ಇದು ಎಲ್ಲ ಅಣು ಘಟಕಗಳಿಗೂ ಅವುಗಳ ಸಾಮರ್ಥ್ಯವನ್ನು ಹೊರತುಪಡಿಸಿ ಅನ್ವಯವಾಗಲಿದೆ. ಬಜೆಟ್ ನಲ್ಲಿ ಭಾರತದಲ್ಲಿ ನಿರ್ಣಾಯಕ ಖನಿಜಗಳ ಸಂಸ್ಕರಣೆಗೆ ಅಗತ್ಯವಿರುವ ಕ್ಯಾಪಿಟಲ್ ಸರಕುಗಳ ಆಮದಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿಯನ್ನು ನೀಡಲು ಪ್ರಸ್ತಾಪಿಸಲಾಗಿದೆ. ಸಿಎನ್ ಜಿ ಜೊತೆ ಬಯೋಗ್ಯಾಸ್ ಮಿಶ್ರಣ ಉತ್ತೇಜಿಸಲು ಬಜೆಟ್ ನಲ್ಲಿ ಬಯೋಗ್ಯಾಸ್ ಮಿಶ್ರಿತ ಸಿ ಎನ್ ಜಿ ಗೆ ಪಾವತಿಸಬೇಕಾದ ಕೇಂದ್ರ ಅಬಕಾರಿ ಸುಂಕದಿಂದ ಹೊರಗಿಡಲು ಪ್ರಸ್ತಾಪಿಸಲಾಗಿದೆ.
ಹಣಕಾಸು ಸಚಿವರು, ನಾಗರಿಕ ವಿಮಾನಯಾನ ಮತ್ತು ತರಬೇತಿಗೆ ಅಗತ್ಯವಾಗಿರುವ ಬಿಡಿ ಭಾಗಗಳು ಹಾಗೂ ಸಾಧನಗಳ ಉತ್ಪಾದನೆಗೆ ಅಗತ್ಯವಿರುವ ಸಾಧನಗಳ ಆಮದಿಗೆ ಮೂಲ ಸುಂಕದಿಂದ ವಿನಾಯಿತಿ ನೀಡಲು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಬಜೆಟ್ ನಲ್ಲಿ ವಿಮಾನಗಳ ನಿರ್ವಹಣೆ, ದುರಸ್ಥಿ ಮತ್ತು ಓವರ್ ಆಲ್ ಅಗತ್ಯತೆಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲು ಮೂಲಸುಂಕದಲ್ಲಿ ವಿನಾಯಿತಿ ನೀಡಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಗ್ರಾಹಕರ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಮೌಲ್ಯವರ್ಧನೆಯನ್ನು ಹೆಚ್ಚಿಸಲುದ ಬಜೆಟ್ ನಲ್ಲಿ ಮೈಕ್ರೋಓವನ್ ಗಳಲ್ಲಿ ಬಳಸುವ ಕೆಲವು ನಿರ್ದಿಷ್ಟ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.
ಜಾಗತಿಕ ವ್ಯಾಪಾರ ಅಡಚಣೆಗಳ ನಡುವೆ ವಿಶೇಷ ಆರ್ಥಿಕ ವಲಯಗಳಲ್ಲಿ ಉತ್ಪಾದನಾ ಘಟಕಗಳ ಸೌಕರ್ಯಗಳ ಬಳಕೆ ಕುರಿತ ಆತಂಕಗಳನ್ನು ಬಜೆಟ್ ನಲ್ಲಿ ಗಮನಿಸಲಾಗಿದೆ. ಅದಕ್ಕಾಗಿ ವಿತ್ತ ಸಚಿವರು, ಎಸ್ಇ ಝೆಡ್ ಗಳಲ್ಲಿ ಅರ್ಹ ಉತ್ಪಾದನಾ ಘಟಕಗಳಿಗೆ ಮಾರಾಟವನ್ನು ಉತ್ತೇಜಿಸಲು ದೇಶೀಯ ತೆರಿಗೆ ಪ್ರದೇಶ(ಡಿಟಿಎ) ಅನ್ನು ರಿಯಾಯಿತಿ ದರದಲ್ಲಿ ವಿಶೇಷ ಒಂದು ಬಾರಿಯ ತೀರುವಳಿ ಕ್ರಮವಾಗಿ ನೀಡಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ ಮಾರಾಟದ ಮಿತಿ, ಆ ಕಂಪನಿಗಳ ರಫ್ತಿಗೆ ಅನುಗುಣವಾಗಿ ಇರುತ್ತದೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಡಿಟಿಎನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಘಟಕಗಳಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸಲು ಈ ಕ್ರಮಗಳನ್ನು ಜಾರಿಗೊಳಿಸಲು ಅಗತ್ಯ ನಿಯಮಾವಳಿಗಳನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ.
*****
(ಪ್ರಕಟಣೆ ಐ.ಡಿ.: 2221519)
ವಿಸಿಟರ್ ಕೌಂಟರ್ : 59
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam