ಹಣಕಾಸು ಸಚಿವಾಲಯ
2030-31ರ ವೇಳೆಗೆ ಶೇ.50±1 ರಷ್ಟು ಸಾಲ-ಜಿಡಿಪಿ ಅನುಪಾತ ತಲುಪುವ ಹಾದಿಯಲ್ಲಿರುವ ಭಾರತ
2025-26ರ ವೇಳೆಗೆ ಹಣಕಾಸಿನ ಕೊರತೆಯು ಜಿಡಿಪಿಯ ಶೇಕಡ 4.4 ರಷ್ಟು ನಿಗದಿ
2026-27ರ ವೇಳೆಗೆ ಹಣಕಾಸಿನ ಕೊರತೆಯು ಜಿಡಿಪಿಯ ಶೇಕಡಾ 4.3 ರಷ್ಟು ಎಂದು ಅಂದಾಜು
2025-26ರ ವೇಳೆಗೆ ಒಟ್ಟು ವೆಚ್ಚದ 49.6 ಲಕ್ಷ ಕೋಟಿಯ 11 ಲಕ್ಷ ಕೋಟಿ ಬಂಡವಾಳ ವೆಚ್ಚದ ಸ್ಥಿತಿಗತಿ
26.7 ಲಕ್ಷ ಕೋಟಿಯ ಮುಟ್ಟಲಿರುವ ಕೇಂದ್ರದ ನಿವ್ವಳ ತೆರಿಗೆ ಸ್ವೀಕೃತಿಗಳು
ಪ್ರಕಟಣಾ ದಿನಾಂಕ:
01 FEB 2026 12:42PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಾ, ”ಸಾಮಾಜಿಕ ಅಗತ್ಯತೆಗಳ ಬಗ್ಗೆ ರಾಜಿ ಮಾಡಿಕೊಳ್ಳದೆ ಸರ್ಕಾರವು ನಿರಂತರವಾಗಿ ಹಣಕಾಸು ಬದ್ಧತೆಗಳನ್ನು ಪೂರೈಸುತ್ತಿದೆ’’ ಎಂದು ಹೇಳಿದರು. ಅದಕ್ಕೆ ಅನುಗುಣವಾಗಿ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಶೇ.56.1 ಕ್ಕೆ ಹೋಲಿಸಿದರೆ 2026-27ರ ಆರ್ಥಿಕ ವರ್ಷದಲ್ಲಿ ಸಾಲ-ಜಿಡಿಪಿ ಅನುಪಾತವು ಜಿಡಿಪಿಯ ಶೇ.55.6 ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಸಾಲ-ಜಿಡಿಪಿ ಅನುಪಾತವು ಕಡಿಮೆಯಾಗುವುದರಿಂದ ಬಡ್ಡಿ ಪಾವತಿಗಳ ಮೇಲಿನ ಹೊರಹೋಗುವಿಕೆಯನ್ನು ತಗ್ಗಿಸುವ ಮೂಲಕ ಆದ್ಯತೆಯ ವಲಯದ ವೆಚ್ಚಕ್ಕೆ ಸಂಪನ್ಮೂಲಗಳನ್ನು ಕ್ರಮೇಣ ಮುಕ್ತಗೊಳಿಸಲಾಗುತ್ತಿದೆ.
ವಿತ್ತೀಯ ಕೊರತೆ

ಸಾಲ ಗುರಿಯನ್ನು ಸಾಧಿಸುವ ಪ್ರಮುಖ ಕಾರ್ಯಾಚರಣಾ ಸಾಧನಗಳಲ್ಲಿ ಒಂದಾದ ವಿತ್ತೀಯ ಕೊರತೆಯ ಬಗ್ಗೆ ಮಾತನಾಡುವಾಗ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2025-26ರ ವೇಳೆಗೆ ಜಿಡಿಪಿಯ ಶೇಕಡ 4.5 ಕ್ಕಿಂತ ಕಡಿಮೆ ಹಣಕಾಸಿನ ಕೊರತೆಯನ್ನು ಕಡಿಮೆ ಮಾಡಲು 2021-22ರ ಹಣಕಾಸು ವರ್ಷದಲ್ಲಿ ಮಾಡಿದ ಬದ್ಧತೆಯನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು. 2025-26ರ ಆರ್ ಇ ನಲ್ಲಿ ಹಣಕಾಸಿನ ಕೊರತೆಯನ್ನು 2025-26ರ ಬಜೆಟ್ ಅಂದಾಜಿಗೆ ಸಮಾನವಾಗಿ ಜಿಡಿಪಿಯ ಶೇಕಡ 4.4 ರಷ್ಟು ಎಂದು ಅಂದಾಜಿಸಲಾಗಿದೆ. ಸಾಲ ಕ್ರೋಢೀಕರಣದ ಹೊಸ ಹಣಕಾಸಿನ ವಿವೇಕದ ಮಾರ್ಗಕ್ಕೆ ಅನುಗುಣವಾಗಿ 2026-27ರ ಬಜೆಟ್ ಅಂದಾಜಿನಲ್ಲಿ ಹಣಕಾಸಿನ ಕೊರತೆಯನ್ನು ಜಿಡಿಪಿಯ ಶೇಕಡ 4.3 ರಷ್ಟು ಎಂದು ಅಂದಾಜಿಸಲಾಗಿದೆ’’ ಎಂದರು.
ಪರಿಷ್ಕೃತ ಅಂದಾಜು (ಆರ್ ಇ) 2025-26.
“ಸಾಲ ಹೊರತುಪಡಿಸಿದ ಸ್ವೀಕೃತಿಗಳ ಪರಿಷ್ಕೃತ ಅಂದಾಜು 34 ಲಕ್ಷ ಕೋಟಿ ರೂ.ಗಳಾಗಿದ್ದು, ಅದರಲ್ಲಿ ಕೇಂದ್ರದ ನಿವ್ವಳ ತೆರಿಗೆ ಸ್ವೀಕೃತಿಗಳು 26.7 ಲಕ್ಷ ಕೋಟಿ ರೂಪಾಯಿಗಳಾಗಿವೆ. ಒಟ್ಟು ಖರ್ಚಿನ ಪರಿಷ್ಕೃತ ಅಂದಾಜು 49.6 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಅದರಲ್ಲಿ ಬಂಡವಾಳ ವೆಚ್ಚ ಸುಮಾರು 11 ಲಕ್ಷ ಕೋಟಿ ರೂಪಾಯಿಗಳಾಗಿದೆ’’ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.
ಬಜೆಟ್ ಅಂದಾಜು (ಬಿಇ) 2026-27
ಕೇಂದ್ರ ಹಣಕಾಸು ಸಚಿವರು, “ಸಾಲೇತರ ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚವನ್ನು ಕ್ರಮವಾಗಿ 36.5 ಲಕ್ಷ ಕೋಟಿ ರೂಪಾಯಿ ಮತ್ತು 53.5 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೇಂದ್ರದ ನಿವ್ವಳ ತೆರಿಗೆ ಸ್ವೀಕೃತಿಗಳು 28.7 ಲಕ್ಷ ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ’’ ಎಂದು ಹೇಳಿದರು.
ಒಟ್ಟು ಮಾರುಕಟ್ಟೆ ಸಾಲಗಳು
“ಹಣಕಾಸಿನ ಕೊರತೆಯನ್ನು ನೀಗಿಸಲು, ಡೇಟೆಡ್ ಸೆಕ್ಸುರಿಟಿಗಳಿಂದ ನಿವ್ವಳ ಮಾರುಕಟ್ಟೆ ಸಾಲಗಳನ್ನು 11.7 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಾಕಿ ಹಣಕಾಸು ಸಣ್ಣ ಉಳಿತಾಯ ಮತ್ತು ಇತರ ಮೂಲಗಳಿಂದ ಬರುವ ನಿರೀಕ್ಷೆಯಿದೆ. ಒಟ್ಟು ಮಾರುಕಟ್ಟೆ ಸಾಲಗಳನ್ನು 17.2 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ’’ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ.
*****
(ಪ್ರಕಟಣೆ ಐ.ಡಿ.: 2221459)
ವಿಸಿಟರ್ ಕೌಂಟರ್ : 62
ಪ್ರಕಟಣೆಯನ್ನು ಇದರಲ್ಲಿ ಓದಿ:
Marathi
,
Telugu
,
Malayalam
,
Tamil
,
Manipuri
,
English
,
Urdu
,
हिन्दी
,
Bengali
,
Bengali-TR
,
Punjabi
,
Gujarati