ಹಣಕಾಸು ಸಚಿವಾಲಯ
azadi ka amrit mahotsav

ಗ್ರಾಮೀಣ ಹಣದುಬ್ಬರದ ಕುಸಿಯುತ್ತಿರುವ ಪ್ರವೃತ್ತಿಯು ಗ್ರಾಮೀಣ ಜನರ ಒತ್ತಡವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ;


ಹೆಚ್ಚಿನ ರಾಜ್ಯಗಳಲ್ಲಿ ಹಣದುಬ್ಬರವು ಸಹಿಷ್ಣುತೆಯ ಗಡಿಯೊಳಗಡೆಯೇ ಉಳಿದಿದೆ;

प्रविष्टि तिथि: 29 JAN 2026 2:15PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2025-26 ರ ಆರ್ಥಿಕ ಸಮೀಕ್ಷೆಯು, ಹಿಂದಿನ ವರ್ಷಗಳಿಗಿಂತ (2023 ಮತ್ತು 2024 ಕ್ಕೆ ಹೋಲಿಸಿದರೆ) ಭಿನ್ನವಾಗಿದ್ದು, ಗ್ರಾಮೀಣ ಹಣದುಬ್ಬರವು ನಗರಗಳ ಹಣದುಬ್ಬರಕ್ಕಿಂತ ಕಡಿಮೆ ಇದೆ, ಗ್ರಾಮೀಣ ಒತ್ತಡವನ್ನು ಇದು ಮತ್ತಷ್ಟು ಕಡಿಮೆ ಮಾಡಿದೆ ಎಂದು ಹೇಳಿದೆ. 2023 ಮತ್ತು 2024 ರ ಹೆಚ್ಚಿನ ಅವಧಿಯಲ್ಲಿ, ಗ್ರಾಮೀಣ ಹಣದುಬ್ಬರವು ನಗರಗಳ ಹಣದುಬ್ಬರಕ್ಕಿಂತ ಹೆಚ್ಚಿತ್ತು. ಈ ರೀತಿಯ ಮಾದರಿಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಳಕೆಯ ಪ್ರಮಾಣದಲ್ಲಿನ ವ್ಯತ್ಯಾಸವನ್ನು ಸೂಚಿಸುತ್ತದೆ, ವಿಶೇಷವಾಗಿ ಗ್ರಾಮೀಣ ಬಳಕೆಯಲ್ಲಿ ಆಹಾರ ಪದಾರ್ಥಗಳ ಪಾಲು ದೊಡ್ಡದಾಗಿದ್ದು, ಇದು ಗ್ರಾಮೀಣ ಹಣದುಬ್ಬರವನ್ನು ಆಹಾರ ಬೆಲೆಗಳಲ್ಲಿನ ಬದಲಾವಣೆಗಳಿಗೆ ಹೆಚ್ಚು ಸ್ಪಂದಿಸುವಂತೆ ಮಾಡಿದೆ. 2025 ರಲ್ಲಿ ಆಹಾರ ಹಣದುಬ್ಬರ ಕಡಿಮೆಯಾದಂತೆ, ಗ್ರಾಮೀಣ ಮತ್ತು ನಗರ ಪ್ರದೇಶ ಎರಡೂ ವಲಯಗಳಲ್ಲಿ ಹಣದುಬ್ಬರ ಕಡಿಮೆಯಾಗಿದ್ದು, ಗ್ರಾಮೀಣ ವಲಯದಲ್ಲಿನ ಹಣದುಬ್ಬರವು ನಗರ ವಲಯದ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ.

2025-26ನೇ ಸಾಲಿನ ಅವಧಿಯಲ್ಲಿ, ರಾಜ್ಯ ಮಟ್ಟದ ಹಣದುಬ್ಬರವು ರಾಷ್ಟ್ರೀಯ ಪ್ರವೃತ್ತಿಯನ್ನು ಅನುಸರಿಸಿದ್ದು, ಕೇರಳ ಮತ್ತು ಲಕ್ಷದ್ವೀಪಗಳು ಇದಕ್ಕೆ ಹೊರತಾಗಿವೆ. ಈ ಎರಡೂ ರಾಜ್ಯಗಳಲ್ಲಿ ಹಣದುಬ್ಬರದಲ್ಲಿ ವ್ಯಾಪಕ ಇಳಿಕೆ ಕಂಡುಬಂದಿದ್ದು, ಅವುಗಳಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 6 ಕ್ಕಿಂತ ಹೆಚ್ಚಿನ ಸಹಿಷ್ಣುತೆಯ ಗಡಿಯನ್ನು ದಾಟಿದೆ. ಉಳಿದ ರಾಜ್ಯಗಳಲ್ಲಿ, ಸರಾಸರಿ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕಿನ ಶೇಕಡಾ 2-6 ಸಹಿಷ್ಣುತೆಯ ಗಡಿಯೊಳಗೆ ಅಥವಾ ಅದಕ್ಕಿಂತ ಕಡಿಮೆ ಕಂಡುಬಂದಿದೆ.

Chapter 5 - Inflation- English_Artboard 2.jpg

ರಾಜ್ಯ ಹಣದುಬ್ಬರದಲ್ಲಿನ ವ್ಯತ್ಯಾಸಗಳು ಹೆಚ್ಚಾಗಿ ವಿಸ್ತಾರ-ಆಧಾರಿತ ಹಣದುಬ್ಬರ ನಿರಂತರತೆಗಿಂತ ಸ್ಥಳೀಯ ಸಾಪೇಕ್ಷ-ಬೆಲೆ ಬದಲಾವಣೆಳಿಂದ ಪ್ರೇರೇಪಿಸಲ್ಪಡುತ್ತವೆ. ಜನವರಿ 2014 ರಿಂದ ಡಿಸೆಂಬರ್ 2025 ರವರೆಗಿನ ಮಾಸಿಕ ರಾಜ್ಯವಾರು CPI ಹಣದುಬ್ಬರ ದತ್ತಾಂಶವನ್ನು ವಿಶ್ಲೇಷಿಸಿದರೆ, ಕೆಲವು ರಾಜ್ಯಗಳು ನಿರಂತರವಾಗಿ ರಾಷ್ಟ್ರೀಯ ಸರಾಸರಿಗಿಂತ ಎಷ್ಟು ಭಿನ್ನವಾದ ಹಣದುಬ್ಬರವನ್ನು ದಾಖಲಿಸಿವೆ ಎಂದು ಈ ಸಮೀಕ್ಷೆಯು ತಿಳಿಸುತ್ತದೆ. ಈ ಸಮೀಕ್ಷೆಯ ಪ್ರಕಾರ, ರಾಜ್ಯಗಳಾದ್ಯಂತ ಹಣದುಬ್ಬರದಲ್ಲಿನ ವ್ಯತ್ಯಾಸಗಳು ಸಂಪೂರ್ಣವಾಗಿ ಕ್ಷಣಿಕವಲ್ಲದೆ, ರಾಷ್ಟ್ರೀಯ ಸರಾಸರಿಗಿಂತ ವಿಚಲನಗಳು ಹೆಚ್ಚಾಗಿ ಒಂದು ತಿಂಗಳಿಗಿಂತ ಹೆಚ್ಚು ಪ್ರಸ್ತುತವಿದೆ ಹಾಗೂ ದಕ್ಷಿಣ ಮತ್ತು ಈಶಾನ್ಯದಲ್ಲಿನ ದೂರದ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಹಣದುಬ್ಬರವನ್ನು ದಾಖಲಿಸಿವೆ. ಮತ್ತೊಂದೆಡೆ, ದೆಹಲಿ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳು ಸಾಮಾನ್ಯವಾಗಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಹಣದುಬ್ಬರವನ್ನು ದಾಖಲಿಸಿವೆ.

ಹಣದುಬ್ಬರದ ಫಲಿತಾಂಶಗಳನ್ನು ನಿರ್ಧರಿಸುವಲ್ಲಿ ರಾಷ್ಟ್ರೀಯ ಅಂಶಗಳು ಮುಖ್ಯ ಕೇಂದ್ರಬಿಂದುವಾಗಿದ್ದರೂ, ರಾಜ್ಯ ಮಟ್ಟದ ಹಣದುಬ್ಬರ ಚಲನಶೀಲತೆಯು ಕಾಲಾನಂತರದಲ್ಲಿ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಒಂದು ದಶಕದಲ್ಲಿ ರಾಜ್ಯ ಮಟ್ಟದಲ್ಲಿ ಹಣದುಬ್ಬರ ಮತ್ತು ವೇತನ ದರಗಳ ಪರಿಶೀಲನೆಯು ರಾಷ್ಟ್ರೀಯ ವೇತನಕ್ಕಿಂತ ಹೆಚ್ಚಿನ ಸರಾಸರಿ ವೇತನ ದರವನ್ನು ಹೊಂದಿರುವ ರಾಜ್ಯಗಳು ತುಲನಾತ್ಮಕವಾಗಿ ಹೆಚ್ಚಿನ ಹಣದುಬ್ಬರವನ್ನು ಅನುಭವಿಸುತ್ತವೆ ಎಂದು ಇದು ಸೂಚಿಸುತ್ತದೆ. "ನಮ್ಮ ಹೆಚ್ಚಿನ ವಿಶ್ಲೇಷಣೆಯು ರಾಜ್ಯ ಮಟ್ಟದ ಹಣದುಬ್ಬರ ದರಗಳು ವೇತನ ದರಗಳು, ರಾಜ್ಯ ಮಟ್ಟದ GDP ಬೆಳವಣಿಗೆ ದರಗಳು ಮತ್ತು COVID ನ ಪರಿಣಾಮದೊಂದಿಗೆ ಗಮನಾರ್ಹವಾದ ಸಕಾರಾತ್ಮಕ ಸಂಬಂಧವನ್ನು ಹೊಂದಿವೆ" ಎಂದು ಸಮೀಕ್ಷೆಯು ನಿರೂಪಿಸುತ್ತದೆ. "ಆದಾಗ್ಯೂ, ಕೈಗಾರಿಕಾ ಉತ್ಪಾದನೆಯ ಪಾಲು ರಾಜ್ಯ ಮಟ್ಟದ ಹಣದುಬ್ಬರದೊಂದಿಗೆ ನಕಾರಾತ್ಮಕ ಸಂಬಂಧವನ್ನು ಹೊಂದಿದೆ, ಇದು ಬೆಲೆಯ ಒತ್ತಡಗಳನ್ನು ತಗ್ಗಿಸುವಲ್ಲಿ ಉತ್ಪಾದನಾ ವಲಯದಲ್ಲಿನ ಪೂರೈಕೆ-ಆಧಾರಿತ ದಕ್ಷತೆಯ ಸೌಮ್ಯ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ" ಎಂದು ಅದು ಮತ್ತಷ್ಟು ಹೇಳುತ್ತದೆ. ರಾಜ್ಯ ಮಟ್ಟದ ಹಣದುಬ್ಬರದಲ್ಲಿನ ವ್ಯತ್ಯಾಸಕ್ಕೆ GST ಹೇರಿಕೆಯು ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಕಂಡುಬಂದಿದೆ.

 

*****

 


(रिलीज़ आईडी: 2220264) आगंतुक पटल : 2
इस विज्ञप्ति को इन भाषाओं में पढ़ें: English , Urdu , हिन्दी , Marathi , Punjabi , Gujarati , Tamil , Malayalam