ಹಣಕಾಸು ಸಚಿವಾಲಯ
“ಭಾರತದ ಚಲನೆಯು ಸ್ವದೇಶಿಯಿಂದ ಕಾರ್ಯತಂತ್ರ ಚೇತರಿಕೆ ಕಡೆಗೆ ಮತ್ತು ಚೇತರಿಕೆಯಿಂದ ಕಾರ್ಯತಂತ್ರ ಅಗತ್ಯತೆ ಕಡೆಗೆ ಸಾಗುತ್ತಿದೆ, ಅದನ್ನು ಕೇವಲ ನಿರೋಧನ ಅಥವಾ ತಡೆಗೋಡೆ(ಪ್ರತಿರೋಧ) ಮೂಲಕ ಸಾಧಿಸಲು ಸಾಧ್ಯವಿಲ್ಲ”: ಆರ್ಥಿಕ ಸಮೀಕ್ಷೆ 2025-26
ಕಾರ್ಯತಂತ್ರ ಅಗತ್ಯತೆಯು ಭಾರತವನ್ನು ಜಾಗತಿಕ ಮಾರುಕಟ್ಟೆಗಳು, ದೇಶದ ಆರ್ಥಿಕ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡುವ ಬದಲು ಸ್ಥಿರತೆ ಮತ್ತು ಮೌಲ್ಯದ ಮೂಲವನ್ನಾಗಿ ಮಾಡುವಂತೆ ಒತ್ತಾಯಿಸುತ್ತದೆ
“ಅನಿಶ್ಚಯ ಸಂದರ್ಭದಲ್ಲೂ ಕ್ರಿಯೆ, ಪ್ರಯೋಗ ಮತ್ತು ಕಲಿಕೆ ಪ್ರೋತ್ಸಾಹಿಸುವ ಸಾಂಸ್ಥಿಕ ಪ್ರೋತ್ಸಾಹಕ ರಚನೆಯೇ ಭಾರತದ ಅತಿಮುಖ್ಯ ಆದ್ಯತೆಯಾಗಿದೆ”: ಆರ್ಥಿಕ ಸಮೀಕ್ಷೆ 2025-26
ಹೊಸ 'ಅನುಸರಣಾ ನಿಯಮಗಳ ನಿಯಂತ್ರಣ ಮತ್ತು ಅನಿಯಂತ್ರಣ ಉಪಕ್ರಮ'ವು ರಾಜ್ಯಗಳ ಮಟ್ಟದ ಅನಿಯಂತ್ರಣಕ್ಕಾಗಿ 5 ವಿಶಾಲ ವಲಯಗಳ 23 ಆದ್ಯತಾ ಪ್ರದೇಶಗಳನ್ನು ಗುರುತಿಸಲಾಗಿದೆ; 76%ರಷ್ಟು ಕಾರ್ಯಸಾಧು ಸುಧಾರಣೆಗಳು ಈಗಾಗಲೇ ಜಾರಿಗೆ ಬಂದಿವೆ
प्रविष्टि तिथि:
29 JAN 2026 1:36PM by PIB Bengaluru
ಭಾರತದ ಪರಿವರ್ತನೆಯು ಸ್ವದೇಶಿ ಚೇತರಿಕೆಯಿಂದ ಕಾರ್ಯತಂತ್ರ ಅಗತ್ಯತೆಗೆ ಹೇಗೆ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ಆರ್ಥಿಕತೆಯು ಎಷ್ಟು ವೇಗವಾಗಿ ಬೆಳೆಯುತ್ತದೆ ಎಂಬುದರ ಮೂಲಕ ಮಾತ್ರ ಅಳೆಯುವುದಲ್ಲ. ಬದಲಾಗಿ ವಿಶ್ವಾಸಾರ್ಹತೆ, ಕಲಿಕೆ ಮತ್ತು ಬಾಹ್ಯ ಸ್ಥಿರತೆ ಹೆಚ್ಚಿಸುವ ರೀತಿಯಲ್ಲಿ ಜಾಗತಿಕ ಉತ್ಪಾದನಾ ವ್ಯವಸ್ಥೆಗಳಲ್ಲಿ ದೇಶೀಯ ಸಾಮರ್ಥ್ಯಗಳು ಅಡಗುತ್ತವೆಯೇ ಅಥವಾ ಬೇರೂರುತ್ತವೆಯೇ ಎಂಬುದರ ಮೂಲಕವೂ ನಿರ್ಧರಿಸುತ್ತದೆ ಎಂದು 2025-26ರ ಆರ್ಥಿಕ ಸಮೀಕ್ಷೆ ತಿಳಿಸಿದೆ. ಕಾರ್ಯತಂತ್ರ ಚೇತರಿಕೆಯು ದುರ್ಬಲತೆ(ಹಾನಿಗೊಳಗಾಗುವ ಸ್ಥಿತಿ)ಗಳನ್ನು ನಿರೀಕ್ಷಿಸುವ, ಸಂಸ್ಥೆಗಳಾದ್ಯಂತ ಸಮನ್ವಯಗೊಳಿಸುವ ಮತ್ತು ಒತ್ತಡದಲ್ಲಿ ಅಸ್ವಸ್ಥಗೊಳ್ಳದೆ ಸ್ಪಂದಿಸುವ ದೇಶದ ನೈಜ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ ಎಂದು ಅದು ಒತ್ತು ನೀಡಿದೆ. ಕಾರ್ಯತಂತ್ರ ಅಗತ್ಯತೆಯು ಹೆಚ್ಚಿನದನ್ನು ಬಯಸುತ್ತದೆ, ಇತರರು ಅವಲಂಬಿಸಿರುವ ಸಾಮರ್ಥ್ಯಗಳನ್ನು ನಿರ್ಮಿಸುವ ಸಾಮರ್ಥ್ಯ, ಭಾರತವನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಭಾಗವಹಿಸುವ ಬದಲು ಸ್ಥಿರತೆ ಮತ್ತು ಮೌಲ್ಯದ ಮೂಲವನ್ನಾಗಿ ಮಾಡಲು ಒತ್ತಾಯಿಸುತ್ತದೆ.
ವಿಪರೀತ ಅನಿಶ್ಚಯಗಳನ್ನು ಹೊಂದಿರುವ ಜಗತ್ತಿನಲ್ಲಿ ಮಾರುಕಟ್ಟೆಗಳನ್ನು ಬದಲಾಯಿಸುವುದು ಸರಿಯಲ್ಲ, ಬದಲಾಗಿ ಎದುರಾಗಿರುವ ಅನಿಶ್ಚಯದಲ್ಲೇ ಕಾರ್ಯ ನಿರ್ವಹಿಸಲು, ಅಪಾಯಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ವ್ಯವಸ್ಥಿತವಾಗಿ ಕಲಿಯಲು ಬೇಕಾದ ಉದ್ಯಮಶೀಲ ದೇಶದತ್ತ ಬದಲಾಗುವುದು ಇಂದಿನ ಅಗತ್ಯವಾಗಿದೆ ಎಂದು ಸಮೀಕ್ಷೆ ಪ್ರತಿಪಾದಿಸಿದೆ. ಆದ್ದರಿಂದ, ಅನಿಶ್ಚಯ ಜಗತ್ತಿನಲ್ಲೇ ಕ್ರಿಯೆ, ಪ್ರಯೋಗ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವ ಸಾಂಸ್ಥಿಕ ಪ್ರೋತ್ಸಾಹಕ ರಚನೆಯನ್ನು ಭಾರತವು ಪ್ರಮುಖ ಆದ್ಯತೆಯಾಗಿ ಮಾಡಿಕೊಳ್ಳಲಿದೆ ಎಂದು ಸಮೀಕ್ಷೆ ಪ್ರತಿಪಾದಿಸಿದೆ. ರಚನಾತ್ಮಕ ರೂಪಾಂತರವನ್ನು ಯಶಸ್ವಿಯಾಗಿ ದಾಟಿದ ಯಾವುದೇ ದೇಶವು ತನ್ನ ಸಂಪೂರ್ಣ ಅಧಿಕಾರಶಾಹಿಯನ್ನು ಉದ್ಯಮಶೀಲವಾಗಿಸಲು ಪ್ರಯತ್ನಿಸಲಿಲ್ಲ ಎಂದು ಅದು ಹೇಳಿದೆ. ಸಮಾನವಾಗಿ, ಅಧಿಕಾರಶಾಹಿಯು ಎಲ್ಲಾ ಸಮಯದಲ್ಲೂ ಉದ್ಯಮಶೀಲವಾಗಿರಲು ಸಾಧ್ಯವಾಗದಿರಬಹುದು, ಏಕೆಂದರೆ ಸ್ಥಿರತೆ ಮತ್ತು ಭವಿಷ್ಯವಾಣಿಯು ಸಹ ಉತ್ತಮ ಆಡಳಿತದ ಅಗತ್ಯ ಲಕ್ಷಣಗಳಾಗಿವೆ. ಬದಲಾಗಿ, ಯಶಸ್ವಿ ದೇಶಗಳು ಸೀಮಿತ ಸಾಂಸ್ಥಿಕ ಸ್ಥಳಗಳನ್ನು ರಚಿಸಿದವು, ವಲಯಗಳಲ್ಲಿ ಪ್ರಯೋಗಗಳಿಗೆ ಅನುಮತಿ ನೀಡಿದವು, ಹೊಣೆಗಾರಿಕೆ ನಿಯಮಗಳನ್ನು ಪ್ರತ್ಯೇಕಿಸಲಾಯಿತು, ಆದರೆ ಕಲಿಕೆಯು ಸ್ಪಷ್ಟವಾಗಿತ್ತು ಎಂದು ಸಮೀಕ್ಷೆ ತಿಳಿಸಿದೆ.
ಕೈಗಾರಿಕಾ ಕಾರ್ಯತಂತ್ರ, ಹಣಕಾಸು ನಿಯಂತ್ರಣ, ತಂತ್ರಜ್ಞಾನ ಆಡಳಿತ ಅಥವಾ ಸಾಮಾಜಿಕ ನೀತಿಯಲ್ಲಿ ಅನಿರ್ದಿಷ್ಟ ಭೂಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ನೀತಿಗಳನ್ನು ಮೊದಲೇ ಅತ್ಯುತ್ತಮವಾಗಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಅವುಗಳನ್ನು ಪರೀಕ್ಷಿಸಬೇಕು, ಪರಿಷ್ಕರಿಸಬೇಕು ಮತ್ತು ಕೆಲವೊಮ್ಮೆ ಕೈಬಿಡಬೇಕು. ರಾಜಕೀಯ ನಾಯಕತ್ವವು ಮರುಕಳಿಸವ ವೈಫಲ್ಯ ಸ್ವೀಕಾರಾರ್ಹ, ಪ್ರಯೋಗ ಅಗತ್ಯ ಮತ್ತು ಮಾರ್ಗ ತಿದ್ದುಪಡಿ ದೌರ್ಬಲ್ಯಕ್ಕಿಂತ ಸಾಮರ್ಥ್ಯದ ಸಂಕೇತವಾಗಿದೆ ಎಂಬ ಸ್ಥಿರ ಸಂಕೇತಗಳನ್ನು ಕಳುಹಿಸಬೇಕು. ಉತ್ತಮ ನಂಬಿಕೆಯ ದೋಷ ಮತ್ತು ದುಷ್ಕೃತ್ಯದ ನಡುವಿನ ಸ್ಪಷ್ಟ ವ್ಯತ್ಯಾಸದೊಂದಿಗೆ ಜೋಡಿಸಿದಾಗ ಮಾತ್ರ ಸಾಂಸ್ಥಿಕ ಕ್ಷಮೆ ಅರ್ಥಪೂರ್ಣವಾಗುತ್ತದೆ.
ಮುಂದಿನ ದಶಕಗಳಲ್ಲಿ, ಭಾರತವು ಯಾವುದೇ ಕೈಪಿಡಿಗಳಿಲ್ಲದ ನಿರ್ಧಾರಗಳನ್ನು ಎದುರಿಸಬೇಕಾಗುತ್ತದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಪ್ರತಿಯೊಂದು ಸಂದರ್ಭದಲ್ಲೂ, ಫಲಿತಾಂಶಗಳು ಆರಂಭಿಕ ಆಯ್ಕೆಗಳನ್ನು ಸರಿಪಡಿಸುವ ಮೇಲೆ ಕಡಿಮೆ ಮತ್ತು ಅನಿಶ್ಚಯದಲ್ಲಿ ಆತ್ಮವಿಶ್ವಾಸದಿಂದ ಕಲಿಯುವ, ಪರಿಷ್ಕರಿಸುವ ಮತ್ತು ಕಾರ್ಯ ನಿರ್ವಹಿಸುವ ದೇಶದ ಸಾಮರ್ಥ್ಯದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಅನಿಶ್ಟಯದಲ್ಲಿ ಕಲಿಯುವ, ಸರಿಪಡಿಸುವ ಮತ್ತು ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸುವ ರಾಜ್ಯದ ಸಾಮರ್ಥ್ಯವು ಅಂತಿಮವಾಗಿ ತನ್ನ ಸಂಸ್ಥೆಗಳಲ್ಲಿ ಜವಾಬ್ದಾರಿಗಳು, ಅಧಿಕಾರ ಮತ್ತು ಮಾಲೀಕತ್ವವನ್ನು ಹೇಗೆ ಆಯೋಜಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಮೀಕ್ಷೆ ಹೇಳಿದೆ. ಇಂದು ಭಾರತದ ಅತ್ಯಂತ ಪರಿಣಾಮದ ನಿರ್ಬಂಧವೆಂದರೆ ನೀತಿ ಉದ್ದೇಶ, ಆಲೋಚನೆಗಳು ಅಥವಾ ಸಂಪನ್ಮೂಲಗಳ ಅನುಪಸ್ಥಿತಿಯಲ್ಲ, ಆದರೆ ಅನಿಶ್ಚಯದಲ್ಲೂ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ರೂಪಿಸುವ ಸಂಸ್ಥೆಗಳೊಳಗಿನ ಪ್ರೋತ್ಸಾಹಕ ರಚನೆಗಳು. ಅನಿಶ್ಚಯದಲ್ಲೇ ವ್ಯಾಖ್ಯಾನಿಸಲ್ಪಟ್ಟ ಜಗತ್ತಿನಲ್ಲಿ, ಹೆಚ್ಚು ನಿಯಂತ್ರಿಸುವ ದೇಶಗಳು ಯಶಸ್ವಿಯಾಗುವುದಿಲ್ಲ, ಆದರೆ ವೇಗವಾಗಿ ಕಲಿಯುವ, ಹೆಚ್ಚು ಬುದ್ಧಿವಂತಿಕೆಯಿಂದ ಹೊಂದಿಕೊಳ್ಳುವ ಮತ್ತು ಸರಿಯಾದ ಹಾದಿ ಹಿಡಿಯುವ ವಿಶ್ವಾಸ ಉಳಿಸಿಕೊಳ್ಳುವ ದೇಶಗಳು ಯಶಸ್ವಿಯಾಗುತ್ತವೆ ಎಂದು ಅದು ಎಚ್ಚರಿಸಿದೆ.
ಒಂದು ದೇಶದ ಸಾಮರ್ಥ್ಯವು ಒಂದೇ ಸುಧಾರಣಾ ಕಾರ್ಯಸೂಚಿಯಲ್ಲ, ಬದಲಾಗಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲಾಗುತ್ತದೆ, ಅಪಾಯ ಮತ್ತು ವೈಫಲ್ಯವನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ, ಫಲಿತಾಂಶಗಳ ಸುತ್ತ ಆಡಳಿತವನ್ನು ಹೇಗೆ ಆಯೋಜಿಸಲಾಗುತ್ತದೆ, ನಿಯಂತ್ರಣವನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತದೆ, ವಿತರಿಸಲಾಗುತ್ತದೆ, ಅಧಿಕಾರಿಗಳು, ಸಂಸ್ಥೆಗಳು ಮತ್ತು ನಾಗರಿಕರ ನಡವಳಿಕೆಯನ್ನು ಪ್ರೋತ್ಸಾಹಗಳು ಹೇಗೆ ರೂಪಿಸುತ್ತವೆ ಎಂಬುದರ ಮೂಲಕ ರೂಪುಗೊಂಡ ಸಂಯೋಜಿತ ಫಲಿತಾಂಶವಾಗಿದೆ ಎಂದು ಸಮೀಕ್ಷೆಯು ಗಮನಿಸಿದೆ.
ದೇಶದ ಸಾಮರ್ಥ್ಯವು ಮಾನವ ವ್ಯವಸ್ಥೆಗಳ ಕಾರ್ಯವಾಗಿದೆ, ಅದರ ಮೂಲಕ ಸಾರ್ವಜನಿಕ ಅಧಿಕಾರವನ್ನು ಆಚರಣೆಯಲ್ಲಿ ಬಳಸಲಾಗುತ್ತದೆ. ಆಡಳಿತದ ಸವಾಲುಗಳು ಹೆಚ್ಚು ಸಂಕೀರ್ಣವಾಗುತ್ತಿದ್ದಂತೆ, ನಾಗರಿಕ ಸೇವಕರು ಪಾತ್ರಗಳನ್ನು ಹೇಗೆ ವ್ಯಾಖ್ಯಾನಿಸುತ್ತಾರೆ, ತೀರ್ಪು ನೀಡುತ್ತಾರೆ ಮತ್ತು ನಾಗರಿಕರೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಸಾರ್ವಜನಿಕ ಫಲಿತಾಂಶಗಳ ಗುಣಮಟ್ಟವು ಹೆಚ್ಚಾಗಿ ಅವಲಂಬಿತವಾಗಿರುತ್ತದೆ. ದೇಶದ ಸಾಮರ್ಥ್ಯವು ಕಾರ್ಯತಂತ್ರ ಚೇತರಿಕೆ ನಿರ್ಮಿಸುವ ಭದ್ರ ಅಡಿಪಾಯವಾಗಿದೆ, ಕಾರ್ಯತಂತ್ರ ಅಗತ್ಯತೆಯು ಕಾರ್ಯಸಾಧು (ಸಾಧ್ಯವಾಗುವ) ಮಾರ್ಗವಾಗಿದೆ. ಆದ್ದರಿಂದ ಸಾಮರ್ಥ್ಯವನ್ನು ಘೋಷಣೆಯಿಂದ ನಿರ್ಮಿಸಲಾಗುವುದಿಲ್ಲ, ಬದಲಾಗಿ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ಸ್ಥಿರವಾದ ಜೋಡಣೆಯ ಮೂಲಕ ನಿರ್ಮಿಸಲಾಗುತ್ತದೆ. ಇದು ದೇಶ, ಸಂಸ್ಥೆಗಳು ಮತ್ತು ನಾಗರಿಕರ ದೈನಂದಿನ ನಡವಳಿಕೆಯ ಮೂಲಕ ಸಹ-ರಚಿಸಲ್ಪಟ್ಟಿದೆ. ಈ ಮೂರರಲ್ಲೂ ಹಂಚಿಕೆಯ ಬಾಧ್ಯತೆ ಮತ್ತು ಪರಸ್ಪರ ಒಪ್ಪಂದದ ಮೇಲೆ ನೈಜ ಸಾಮರ್ಥ್ಯ ನಿಂತಿದೆ.
ನಿಯಂತ್ರಣವು ದೇಶ ಮತ್ತು ಆರ್ಥಿಕತೆಯ ನಡುವಿನ ಅತ್ಯಂತ ಪರಿಣಾಮಕಾರಿ ಸಂಪರ್ಕ ಸಾಧನಗಳಲ್ಲಿ ಒಂದಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ನಿಯಂತ್ರಕ ಸಾಮರ್ಥ್ಯವು ಉದ್ದೇಶ ಅಥವಾ ಪ್ರಯತ್ನದಷ್ಟೇ ಸಾಂಸ್ಥಿಕ ವಿನ್ಯಾಸದ ಪ್ರಶ್ನೆಯಾಗಿದೆ. ನಿಯಮ ರಚನೆ, ಜಾರಿ, ಹೊಣೆಗಾರಿಕೆ ಮತ್ತು ನಿಯೋಜಿತ ಅಧಿಕಾರದ ರಚನೆಯನ್ನು ವ್ಯಾಪಿಸಿದೆ. ನಿಯಂತ್ರಕ ಸಾಮರ್ಥ್ಯವು ನಿಯಂತ್ರಕರಿಗೆ ನೀಡಲಾದ ಔಪಚಾರಿಕ ಅಧಿಕಾರಗಳನ್ನು ಸಾಂಸ್ಥಿಕ ವಿನ್ಯಾಸದ ಮೂಲಕ ಹೇಗೆ ರಚಿಸಲಾಗಿದೆ, ಚಲಾಯಿಸಲಾಗಿದೆ ಮತ್ತು ನಿರ್ಬಂಧಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಂಸ್ಥಿಕ ವಿನ್ಯಾಸ ಆಯ್ಕೆಗಳಲ್ಲಿ ಕೆಲವು ಪ್ರಮುಖ ಪರಿಗಣನೆಗಳೆಂದರೆ, ನಿಯಮ ರಚನೆ ಮತ್ತು ಮಾರ್ಗದರ್ಶನದಲ್ಲಿ ಸ್ಪಷ್ಟತೆ, ಅಧಿಕಾರದೊಳಗಿನ ಪ್ರತ್ಯೇಕತೆ, ಹೊಣೆಗಾರಿಕೆಯನ್ನು ಆಧಾರವಾಗಿಟ್ಟುಕೊಳ್ಳುವ ನಿಯಂತ್ರಕ ಮಂಡಳಿಗಳು, ಜಾರಿಯಲ್ಲಿ ಅನುಪಾತ ಮತ್ತು ಶಿಸ್ತು, ಕಾರ್ಯಾಚರಣೆ ರೂಢಿಯಾಗಿ ಸರಿಯಾದ ಪ್ರಕ್ರಿಯೆ, ಪ್ರಜಾಪ್ರಭುತ್ವ ಆಧಾರ ಮತ್ತು ಪಾರದರ್ಶಕತೆ ಪ್ರಮುಖವಾಗಿವೆ.
ನಿಯಂತ್ರಕರಿಗೆ ಸ್ವಾತಂತ್ರ್ಯ ಮತ್ತು ಮೇಲ್ವಿಚಾರಣೆ ಸಮತೋಲನಗೊಳಿಸುವ ಸಾಮರ್ಥ್ಯವಿರುವ ತಜ್ಞರು ಅಗತ್ಯವಿದೆ ಎಂದು ಸಮೀಕ್ಷೆ ಒತ್ತಿ ಹೇಳಿದೆ, ಆದರೆ ವ್ಯವಹಾರಗಳ ನಿಯಮಗಳಿಗೆ ಬದ್ಧವಾಗಿ ಬೆಳವಣಿಗೆ ಹೆಚ್ಚಿಸಲು ಈ ಸ್ವಾತಂತ್ರ್ಯ ಬಳಸಿಕೊಳ್ಳುವ ವೃತ್ತಿಪರರು ಬೇಕಾಗುತ್ತಾರೆ. ನಿಯಂತ್ರಕ ಅಧ್ಯಯನ ಶಾಲೆಗಳನ್ನು ಹೊಸ ಸ್ವತಂತ್ರ ಸಂಸ್ಥೆಗಳಾಗಿ ಅಥವಾ ಈ ಪ್ರತಿಭೆಗಳನ್ನು ಒದಗಿಸಲು ಅಸ್ತಿತ್ವದಲ್ಲಿರುವ ಸಂಸ್ಥೆಗಳಿಗೆ ಸೇರ್ಪಡೆಯಾಗಿ ಸ್ಥಾಪಿಸಬಹುದು ಎಂದು ಸಮೀಕ್ಷೆ ಸೂಚಿಸಿದೆ. ಅನುಮೋದನೆಗಳು, ತನಿಖೆಗಳು, ಜಾರಿ ಕ್ರಮಗಳು, ವಿವಾದಗಳು ಮತ್ತು ಮೇಲ್ಮನವಿಗಳು ಸೇರಿದಂತೆ ಹೆಚ್ಚಿನ ನಿಯಂತ್ರಕ ಪ್ರಕ್ರಿಯೆಗಳಲ್ಲಿನ ವಿಳಂಬವು ನಿಜವಾದ ಆರ್ಥಿಕ ವೆಚ್ಚಗಳನ್ನು ವಿಧಿಸುತ್ತದೆ ಎಂದು ಅದು ಹೇಳಿದೆ. ಇದನ್ನು ಪರಿಹರಿಸಲು ನಿರ್ಧಾರಗಳು ಕಟ್ಟುನಿಟ್ಟಾದ ಕಾಲಮಿತಿಗಳಿಗೆ ಒಳಪಟ್ಟಿರಬೇಕು, ಅಧಿಕಾರಿಗಳು ನಿಗದಿತ ಅವಧಿಯೊಳಗೆ ಕಾರ್ಯ ನಿರ್ವಹಿಸಲು ವಿಫಲವಾದಾಗ ಪರಿಗಣಿಸಲಾದ (ಡೀಮ್ಡ್) ಅನುಮೋದನೆಗಳಿಗೆ ನಿಬಂಧನೆಗಳನ್ನು ಹೊಂದಿರಬೇಕು.
ಭಾರತದ ಕಾರ್ಪೊರೇಟ್ ವಲಯವು ಕೇವಲ ನಿಯಂತ್ರಣದ ವಿಷಯವಾಗಿಲ್ಲ, ದೇಶವು ತನ್ನ ಸಾಮರ್ಥ್ಯವನ್ನು ನವೀಕರಿಸುತ್ತದೆಯೇ ಅಥವಾ ವಿವೇಚನೆಯ ಮೂಲಕ ಆಡಳಿತ ನಡೆಸುತ್ತದೆಯೇ ಎಂಬುದನ್ನು ನಿರ್ಧರಿಸುವ ಪ್ರೋತ್ಸಾಹಕ ಪರಿಸರದಲ್ಲಿ ಅದು ರಚನಾತ್ಮಕವಾಗಿ ಭಾಗವಹಿಸುವುದಾಗಿದೆ ಎಂದು ಸಮೀಕ್ಷೆ ಗಮನಿಸಿದೆ. ಸಂಸ್ಥೆಗಳು ಉತ್ಪಾದಕತೆ, ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಮೇಲೆ ಸ್ಪರ್ಧಿಸಿದಾಗ, ಅವು ಬಲವಾದ, ಊಹಿಸಬಹುದಾದ ಮತ್ತು ನಿಷ್ಪಕ್ಷಪಾತ ಸಾರ್ವಜನಿಕ ಸಂಸ್ಥೆಗಳಲ್ಲಿ ನೇರ ಆಸಕ್ತಿ ಬೆಳೆಸಿಕೊಳ್ಳುತ್ತವೆ ಎಂದು ಸಮೀಕ್ಷೆ ತಿಳಿಸಿದೆ.
ಖಾಸಗಿ ಕಾರ್ಪೊರೇಟ್ ವಲಯವು ದೇಶದ ಸಾಮರ್ಥ್ಯ ವಿಕಸನಗೊಳ್ಳುವ ಪ್ರೋತ್ಸಾಹಕ ವಾತಾವರಣವನ್ನು ಸಹ-ರೂಪಿಸಿದರೆ, ಸಾರ್ವಜನಿಕ ವ್ಯವಸ್ಥೆಗಳು ಜಾರಿಯನ್ನು ಅವಲಂಬಿಸಬೇಕೇ ಅಥವಾ ಆಂತರಿಕ ಜವಾಬ್ದಾರಿಯ ಮೂಲಕ ಕಾರ್ಯ ನಿರ್ವಹಿಸಬಹುದೇ ಎಂಬುದನ್ನು ನಿರ್ಧರಿಸುವ ದೈನಂದಿನ ಮಾನದಂಡಗಳ ಮೂಲಕ ನಾಗರಿಕರು ಅದನ್ನು ಇನ್ನಷ್ಟು ವ್ಯಾಪಕವಾಗಿ ರೂಪಿಸುತ್ತಾರೆ. ನಾಗರಿಕರು ಹಂಚಿಕೆಯ ಸ್ಥಳಗಳಲ್ಲಿ ಜವಾಬ್ದಾರಿ ಮಾನದಂಡಗಳನ್ನು ಆಂತರಿಕಗೊಳಿಸಿದಾಗ, ಕಲಿಕೆಯನ್ನು ಅಭ್ಯಾಸವಾಗಿ ಪರಿಗಣಿಸಿದಾಗ, ಭೌತಿಕ ಮತ್ತು ತಾಂತ್ರಿಕ ಕೆಲಸವನ್ನು ಗೌರವಿಸಿದಾಗ, ತಂತ್ರಜ್ಞಾನಕ್ಕೆ ಬಂಧಿಯಾಗದೆ ಬಳಸಿದಾಗ ಮತ್ತು ಇಂದಿನ ಸೌಕರ್ಯವು ಕೆಲವೊಮ್ಮೆ ನಾಳೆಯ ಹೊರೆಯಾಗಬಹುದು ಎಂದು ಅರ್ಥ ಮಾಡಿಕೊಂಡಾಗ, ಅವರು ದೇಶದ ನಿರಂತರ ಜಾರಿಯ ಅಗತ್ಯವನ್ನು ಕಡಿಮೆ ಮಾಡುತ್ತಾರೆ, ಜತೆಗೆ ಸಾಂಸ್ಥಿಕ ಸಾಮರ್ಥ್ಯವು ಬೆಳೆಯುವ ನಂಬಿಕೆಯನ್ನು ಸೃಷ್ಟಿಸುತ್ತಾರೆ.
ಉತ್ಪಾದನೆ, ಸರಕು ಸಾಗಣೆ, ಸಂಸ್ಥೆಗಳು ಅಥವಾ ಗಣ್ಯ ಕ್ರೀಡೆಗಳ ಜಾಗತಿಕ ದೊಡ್ಡ ಲೀಗ್ ನಲ್ಲಿ ಸ್ಪರ್ಧಿಸುವುದರಿಂದ ಅನಿಶ್ಚಯ, ವಿಳಂಬ ಮತ್ತು ಅಲ್ಪಾವಧಿಯಲ್ಲಿ ಹೆಚ್ಚಾಗಿ ಅಗೋಚರವಾಗಿರುವ ಆದಾಯಕ್ಕಾಗಿ ಅಲ್ಪಾವಧಿಯ ವೆಚ್ಚಗಳನ್ನು ಭರಿಸಬೇಕಾಗುತ್ತದೆ ಎಂದು ಸಮೀಕ್ಷೆ ಗಮನಿಸಿದೆ. ವಿಳಂಬವಾದ ತೃಪ್ತಿ ದುರ್ಬಲಗೊಂಡಾಗ, ವ್ಯವಸ್ಥೆಗಳು ಸಾಮರ್ಥ್ಯಕ್ಕಾಗಿ ಶಾರ್ಟ್ ಕಟ್ ಹುಡುಕುವುದನ್ನು, ಆಳಕ್ಕಾಗಿ ಗೋಚರತೆಯನ್ನು ಮತ್ತು ಕಲಿಕೆಯ ವೇಗವನ್ನು ಬದಲಿಸಲು ಪ್ರಾರಂಭಿಸುತ್ತವೆ.

ರಾಜ್ಯ ಮಟ್ಟದ ನಿಯಂತ್ರಣ ಕಡಿತ ಮತ್ತು ನಿಯಂತ್ರಣ ರದ್ದತಿ ಉಪಕ್ರಮವು 5 ವಿಶಾಲ ವಲಯಗಳ 23 ಆದ್ಯತಾ ಕ್ಷೇತ್ರಗಳನ್ನು ಗುರುತಿಸಿದೆ ಎಂದು ಸಮೀಕ್ಷೆ ಹೇಳಿದೆ. ಕೇಂದ್ರ ಸಚಿವಾಲಯಗಳು, ರಾಜ್ಯಗಳು, ಕೈಗಾರಿಕಾ ಸಂಘಗಳು ಮತ್ತು ಜ್ಞಾನ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳ ಮೂಲಕ ಈ ಆದ್ಯತಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ನಿಯಂತ್ರಣ ರದ್ದತಿಯನ್ನು ನಿರಂತರ ಮತ್ತು ಸಂಘಟಿತ ಆಡಳಿತ ಪ್ರಕ್ರಿಯೆಯಾಗಿ ಅನುಸರಿಸಿದಾಗ, ಅದು ರಾಜ್ಯಗಳನ್ನು ಬಲಪಡಿಸುತ್ತದೆ. ಹಿಂದಿನ ನಿಯಂತ್ರಣ ರದ್ದತಿ ಕ್ರಮಗಳಿಂದ ಈ ಅಭ್ಯಾಸವನ್ನು ಪ್ರತ್ಯೇಕಿಸುವುದು ಸುಧಾರಣೆಗಳ ಸಂಖ್ಯೆ ಮಾತ್ರವಲ್ಲ, ಸಾಂಸ್ಥಿಕ ಪ್ರಕ್ರಿಯೆಯಾಗಿದೆ. ಅಂತರ ಸಂಸ್ಥೆ ಸಮನ್ವಯ, ರಾಜ್ಯಗಳೊಂದಿಗೆ ಪುನರಾವರ್ತಿತ ಸಮಸ್ಯೆ ಪರಿಹಾರ ಮತ್ತು ನೈಜ ಸಮಯದ ಕಲಿಕೆ, ಇದು ದೇಶದ ಸಾಮರ್ಥ್ಯದ ಪ್ರಮುಖ ಅಂಶಗಳನ್ನು ಸ್ಪರ್ಶಿಸುತ್ತದೆ.
36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಲಾ 23 ಆದ್ಯತಾ ಕ್ಷೇತ್ರಗಳನ್ನು ಜಾರಿಗೆ ತರುವ ನಿರೀಕ್ಷೆಯಿದ್ದು, ದೇಶಾದ್ಯಂತ ಒಟ್ಟು ಕಾರ್ಯಸಾಧು ಸುಧಾರಣೆಗಳ ಸಂಖ್ಯೆ 828 ಆಗಿದೆ.

2026 ಜನವರಿ 23ರ ಹೊತ್ತಿಗೆ, ಒಟ್ಟು ಶೇಕಡ 76ರಷ್ಟಿರುವ 630 ಆದ್ಯತಾ ಪ್ರದೇಶಗಳನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ. ಇನ್ನೂ 79 ಆದ್ಯತಾ ಪ್ರದೇಶಗಳು ಶೇಕಡ 10ರಷ್ಟಿದ್ದು, ಸಕ್ರಿಯ ಅನುಷ್ಠಾನ ಹಂತದಲ್ಲಿವೆ.
ಭಾರತ ಈಗ ಎದುರಿಸುತ್ತಿರುವ ಸವಾಲಿನ ಸ್ವರೂಪ ಬದಲಾಗುತ್ತಿದೆ, ಅದರ ಇತ್ತೀಚಿನ ಆರ್ಥಿಕ ಕಾರ್ಯಕ್ಷಮತೆಯು ಪ್ರಕ್ಷುಬ್ಧ ಜಾಗತಿಕ ಪರಿಸರದಲ್ಲೂ ದೇಶದ ಬೃಹತ್ ಅರ್ಥ ವ್ಯವಸ್ಥೆಯು ಸ್ಥಿರತೆ ಮತ್ತು ಬೆಳವಣಿಗೆಯನ್ನು ಉಳಿಸಿಕೊಳ್ಳಬಹುದು ಎಂಬುದನ್ನು ತೋರಿಸಿದೆ ಎಂದು ಆರ್ಥಿಕ ಸಮೀಕ್ಷೆ ತೀರ್ಮಾನಿಸಿದೆ. ಹೆಚ್ಚು ಅನಿಶ್ಚಯ ಜಗತ್ತಿನಲ್ಲಿ ಅಪಾಯ ಅನಿವಾರ್ಯ. ಅದನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಅನುಕೂಲವಿದೆ. ಖಚಿತತೆ ಹೊರಹೊಮ್ಮುವ ಮೊದಲು ಕಾರ್ಯ ನಿರ್ವಹಿಸಬಲ್ಲ ದೇಶಗಳು, ಯಾವುದೇ ಕುಂದುಕೊರತೆ ಅಥವಾ ಅಡೆತಡೆ ಇಲ್ಲದೆ ಸರಿಯಾದ ಮಾರ್ಗವನ್ನು ಸರಿಪಡಿಸುವ ಮತ್ತು ಸಂಸ್ಥೆಗಳು ಮತ್ತು ನಾಗರಿಕರಾದ್ಯಂತ ಪ್ರೋತ್ಸಾಹಗಳನ್ನು ಜೋಡಿಸುವ ದೇಶಗಳು ಬೆಳವಣಿಗೆಯನ್ನು ಪ್ರಭಾವವಾಗಿ ಪರಿವರ್ತಿಸಲು ಉತ್ತಮ ಸ್ಥಾನದಲ್ಲಿವೆ. ಆದ್ದರಿಂದ ದೇಶದ ಸಾಮರ್ಥ್ಯವು ಕೇವಲ ಆಡಳಿತಾತ್ಮಕ ಕಾಳಜಿಯಲ್ಲ. ಇದು ಕಾರ್ಯತಂತ್ರ ಅಗತ್ಯತೆಯನ್ನು ನಿರ್ಮಿಸುವ ಭದ್ರ ಅಡಿಪಾಯ ಮತ್ತು ಕಾರ್ಯತಂತ್ರ ಅಗತ್ಯತೆಯನ್ನು ಸಾಧ್ಯವಾಗಿಸುವ ರಾಜ ಮಾರ್ಗವಾಗಿದೆ.
*****
(रिलीज़ आईडी: 2220239)
आगंतुक पटल : 2