ಪ್ರಧಾನ ಮಂತ್ರಿಯವರ ಕಛೇರಿ
ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರಪತಿಯವರ ಸ್ಪೂರ್ತಿದಾಯಕ ಭಾಷಣವು ನಮ್ಮ ಸಂವಿಧಾನದ ಅನನ್ಯತೆಯನ್ನು ಉಲ್ಲೇಖಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು, ಸಾಂವಿಧಾನಿಕ ಆದರ್ಶಗಳನ್ನು ಎತ್ತಿಹಿಡಿಯಲು ಹಾಗೂ ವಿಕಸಿತ ಭಾರತವನ್ನು ನಿರ್ಮಿಸಲು ನಾಗರಿಕರನ್ನು ಪ್ರೇರೇಪಿಸುತ್ತದೆ: ಪ್ರಧಾನಮಂತ್ರಿ
प्रविष्टि तिथि:
25 JAN 2026 9:30PM by PIB Bengaluru
ಗಣರಾಜ್ಯೋತ್ಸವದ ಮುನ್ನಾದಿನ ದೇಶದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ನೀಡಿದ ಪ್ರೇರಣಾದಾಯಕ ಭಾಷಣವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಶಂಸಿಸಿದ್ದಾರೆ.
ರಾಷ್ಟ್ರಪತಿಗಳು ಭಾರತದ ಸಂವಿಧಾನದ ವಿಶಿಷ್ಟತೆಯನ್ನು ಸೂಕ್ತವಾಗಿ ಉಲ್ಲೇಖಿದ್ದಾರೆ. ರಾಷ್ಟ್ರವನ್ನು ಮುನ್ನಡೆಸುತ್ತಿರುವ ಸಾಮೂಹಿಕ ಮನೋಭಾವವನ್ನು ಶ್ಲಾಘಿಸಿದ್ದಾರೆ. ಅವರ ಭಾಷಣವು ಪ್ರತಿಯೊಬ್ಬ ನಾಗರಿಕರು ಪ್ರಜಾಪ್ರಭುತ್ವವನ್ನು ಬಲಪಡಿಸಲು, ಸಾಂವಿಧಾನಿಕ ಆದರ್ಶಗಳನ್ನು ಎತ್ತಿಹಿಡಿಯಲು ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;
“ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರಪತಿಯವರು ಅತ್ಯಂತ ಪ್ರೇರಣಾದಾಯಕ ಭಾಷಣವನ್ನು ನೀಡಿದರು. ಅವರು ನಮ್ಮ ಸಂವಿಧಾನದ ವೈಶಿಷ್ಟ್ಯತೆಯನ್ನು ಸರಿಯಾಗಿ ಉಲ್ಲೇಖಿಸಿದ್ದು, ನಮ್ಮ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ದ ಸಮೂಹಾತ್ಮಕ ಮನೋಭಾವವನ್ನು ಮೆಚ್ಚಿಕೊಂಡಿದ್ದಾರೆ. ಅವರ ಭಾಷಣವು ಪ್ರಜಾಪ್ರಭುತ್ವವನ್ನು ಬಲಪಡಿಸಲು, ಸಂವಿಧಾನಾತ್ಮಕ ಆದರ್ಶಗಳನ್ನು ಕಾಪಾಡಲು ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬ ನಾಗರಿಕರೂ ತಮ್ಮ ಬದ್ಧತೆಯನ್ನು ಪುನಃ ದೃಢಪಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ.
@rashtrapatibhvn”
*****
(रिलीज़ आईडी: 2218930)
आगंतुक पटल : 4
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Odia
,
Telugu
,
Malayalam