ಸಂಪುಟ
ಅಟಲ್ ಪಿಂಚಣಿ ಯೋಜನೆ (ಎಪಿವೈ) ಮುಂದುವರಿಕೆ ಮತ್ತು 2030-31 ರವರೆಗೆ ಪ್ರಚಾರ ಮತ್ತು ಅಭಿವೃದ್ಧಿ ಚಟುವಟಿಕೆಗಳು ಮತ್ತು ಅಂತರ ನಿಧಿಗೆ ಹಣಕಾಸು ಬೆಂಬಲವನ್ನು ವಿಸ್ತರಿಸಲು ಸಂಪುಟದ ಅನುಮೋದನೆ
प्रविष्टि तिथि:
21 JAN 2026 12:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಅಟಲ್ ಪಿಂಚಣಿ (ಎಪಿವೈ) ಯನ್ನು 2030-31ರ ಹಣಕಾಸು ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ. ಇದರೊಂದಿಗೆ ಪ್ರಚಾರ ಮತ್ತು ಅಭಿವೃದ್ಧಿ ಚಟುವಟಿಕೆಗಳು ಹಾಗೂ 'ಗ್ಯಾಪ್ ಫಂಡಿಂಗ್' (ಹಣಕಾಸಿನ ಅಂತರವನ್ನು ಭರಿಸುವಿಕೆ) ಬೆಂಬಲವನ್ನು ವಿಸ್ತರಿಸಲಾಗಿದೆ.
ಅನುಷ್ಠಾನ ತಂತ್ರ
ಈ ಯೋಜನೆಯು ಸರ್ಕಾರದ ಈ ಕೆಳಗಿನ ಬೆಂಬಲದೊಂದಿಗೆ 2030-31ರವರೆಗೆ ಮುಂದುವರಿಯುತ್ತದೆ:
I. ಅಸಂಘಟಿತ ವಲಯದ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವುದು, ಸಾಮರ್ಥ್ಯ ವೃದ್ಧಿ ಸೇರಿದಂತೆ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಚಾರ ಮತ್ತು ಅಭಿವೃದ್ಧಿ ಚಟುವಟಿಕೆಗಳು.
II. ಯೋಜನೆಯ ಕಾರ್ಯಸಾಧ್ಯತೆಯ ಅಗತ್ಯತೆಗಳನ್ನು ಪೂರೈಸಲು ಮತ್ತು ಅದರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು 'ಗ್ಯಾಪ್ ಫಂಡಿಂಗ್' (ಹಣಕಾಸಿನ ಅಂತರವನ್ನು ಭರಿಸುವಿಕೆ).
ಪ್ರಮುಖ ಪರಿಣಾಮ:
- ಲಕ್ಷಾಂತರ ಕಡಿಮೆ ಆದಾಯದ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದ ಆದಾಯದ ಭದ್ರತೆಯನ್ನು ಖಚಿತಪಡಿಸುತ್ತದೆ.
- ಹಣಕಾಸು ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತವು 'ಪಿಂಚಣಿ ಸಮಾಜ'ವಾಗಿ ಬದಲಾಗಲು ಬೆಂಬಲ ನೀಡುತ್ತದೆ.
- ಸುಸ್ಥಿರ ಸಾಮಾಜಿಕ ಭದ್ರತೆಯನ್ನು ಒದಗಿಸುವ ಮೂಲಕ 'ವಿಕಸಿತ ಭಾರತ @2047' ದೃಷ್ಟಿಕೋನವನ್ನು ಬಲಪಡಿಸುತ್ತದೆ.
ಹಿನ್ನೆಲೆ
- ಪ್ರಾರಂಭ: ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದ ಆದಾಯ ಭದ್ರತೆಯನ್ನು ಒದಗಿಸುವ ಉದ್ದೇಶದೊಂದಿಗೆ ಅಟಲ್ ಪಿಂಚಣಿ ಯೋಜನೆಯನ್ನು 9 ಮೇ 2015 ರಂದು ಪ್ರಾರಂಭಿಸಲಾಯಿತು.
- ಯೋಜನೆಯ ವೈಶಿಷ್ಟ್ಯಗಳು: ಚಂದಾದಾರರ ಕೊಡುಗೆಯ ಆಧಾರದ ಮೇಲೆ, 60 ವರ್ಷ ವಯಸ್ಸಿನ ನಂತರ ತಿಂಗಳಿಗೆ ಕನಿಷ್ಠ 1,000 ರೂ.ನಿಂದ 5,000 ರೂ.ವರೆಗೆ ಖಾತರಿಪಡಿಸಿದ ಪಿಂಚಣಿಯನ್ನು ಈ ಯೋಜನೆ ನೀಡುತ್ತದೆ.
- ಪ್ರಗತಿ: 19 ಜನವರಿ 2026 ರ ಹೊತ್ತಿಗೆ, 8.66 ಕೋಟಿಗೂ ಹೆಚ್ಚು ಚಂದಾದಾರರು ನೋಂದಾಯಿಸಿಕೊಂಡಿದ್ದು, ಇದು ಭಾರತದ ಒಳಗೊಳ್ಳುವಿಕೆಯ ಸಾಮಾಜಿಕ ಭದ್ರತಾ ಚೌಕಟ್ಟಿನ ಪ್ರಮುಖ ಆಧಾರಸ್ತಂಭವಾಗಿದೆ.
- ವಿಸ್ತರಣೆಯ ಅಗತ್ಯತೆ: ನಿರಂತರ ಜಾಗೃತಿ, ಸಾಮರ್ಥ್ಯ ವೃದ್ಧಿ ಮತ್ತು ಯೋಜನೆಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸಿನ ಅಂತರವನ್ನು ಸರಿದೂಗಿಸಲು ಸರ್ಕಾರದ ನಿರಂತರ ಬೆಂಬಲ ಅಗತ್ಯವಾಗಿದೆ.
*****
(रिलीज़ आईडी: 2216780)
आगंतुक पटल : 22
इस विज्ञप्ति को इन भाषाओं में पढ़ें:
Marathi
,
Odia
,
Manipuri
,
English
,
Urdu
,
हिन्दी
,
Assamese
,
Bengali-TR
,
Bengali
,
Punjabi
,
Gujarati
,
Tamil
,
Telugu
,
Malayalam