ಚುನಾವಣಾ ಆಯೋಗ
azadi ka amrit mahotsav

ಭಾರತೀಯ ಚುನಾವಣಾ ಆಯೋಗ (ಇಸಿಐ)ನಿಂದ ಜನವರಿ 21 ರಿಂದ 23 ರವರೆಗೆ ಐಐಸಿಡಿಇಎಂ-2026 ಆಯೋಜನೆ


70ಕ್ಕೂ ಅಧಿಕ ದೇಶಗಳಿಂದ ಸುಮಾರು 100 ಪ್ರತಿನಿಧಿಗಳು ಭಾಗಿ

40ಕ್ಕೂ ಅಧಿಕ ದ್ವಿಪಕ್ಷೀಯ ಸಭೆಗಳು; 3 ದಿನಗಳಲ್ಲಿ 36 ಪ್ರತ್ಯೇಕ ಗೋಷ್ಠಿಗಳ ನಿಗದಿ

प्रविष्टि तिथि: 19 JAN 2026 11:39AM by PIB Bengaluru
  1. ಭಾರತೀಯ ಚುನಾವಣಾ ಆಯೋಗ (ಇಸಿಐ) 2026 ಪ್ರಜಾಪ್ರಭುತ್ವ ಮತ್ತು ಚುನಾವಣೆಗಳ ನಿರ್ವಹಣೆ ಕುರಿತ ಭಾರತೀಯ ಅಂತಾರಾಷ್ಟ್ರೀಯ ಸಮ್ಮೇಳನ (ಐಐಸಿಡಿಇಎಂ) ಉದ್ಘಾಟನೆಗೆ ಸಂಪೂರ್ಣ ಸಜ್ಜಾಗಿದೆ. ಜನವರಿ 21 ರಂದು ಆರಂಭವಾಗುವ 3 ದಿನಗಳ ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣಾ ಸಂಸ್ಥೆ ಕುರಿತ ಭಾರತೀಯ ಅಂತಾರಾಷ್ಟ್ರೀಯ ಸಮಾವೇಶವು (IIIDEM) ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ.
  2. ಭಾರತ ಆಯೋಜಿಸಿರುವ IICDEM 2026 ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣಾ ಕ್ಷೇತ್ರದಲ್ಲಿ ಆ ರೀತಿಯ ಅತಿದೊಡ್ಡ ಜಾಗತಿಕ ಸಮ್ಮೇಳನವಾಗಲಿದೆ. ಪ್ರಪಂಚದಾದ್ಯಂತದ 70ಕ್ಕೂ ಅಧಿಕ ದೇಶಗಳನ್ನು ಪ್ರತಿನಿಧಿಸುವ ಸುಮಾರು 100 ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ, ಜೊತೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳು, ಭಾರತದಲ್ಲಿನ ವಿದೇಶಿ ರಾಯಭಾರಿ ಕಚೇರಿಗಳು ಮತ್ತು ಚುನಾವಣಾ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ವೃತ್ತಿಪರತೆ ಹೊಂದಿರುವ ತಜ್ಞರು ಭಾಗವಹಿಸುವ ನಿರೀಕ್ಷೆಯಿದೆ.
  3. 2026ರ ಜನವರಿ 21ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರೊಂದಿಗೆ ಪ್ರತಿನಿಧಿಗಳನ್ನು ಸ್ವಾಗತಿಸಿ, ಕಾರ್ಯಕಲಾಪಗಳಿಗೆ ಚಾಲನೆ ನೀಡಲಿದ್ದಾರೆ.
  4. ಮೂರು ದಿನಗಳ ಕಾರ್ಯಕ್ರಮವು ಚುನಾವಣಾ ನಿರ್ವಹಣಾ ಸಂಸ್ಥೆಗಳ (ಇಎಂಬಿಗಳು) ಸಾಮಾನ್ಯ ಮತ್ತು ಪೂರ್ಣಾವಧಿಯ ಗೋಷ್ಠಿಗಳನ್ನು ಒಳಗೊಂಡಿದೆ. ಇದರಲ್ಲಿ ಉದ್ಘಾಟನಾ ಸಮಾರಂಭ, ಇಎಂಬಿ ನಾಯಕರ ಸಮಗ್ರ ಸಭೆ, ಇಎಂಬಿ ಕಾರ್ಯಪಡೆ ಸಭೆಗಳು, ಜಾಗತಿಕ ಚುನಾವಣಾ ಸಮಸ್ಯೆಗಳು, ಮಾದರಿ ಅಂತಾರಾಷ್ಟ್ರೀಯ ಚುನಾವಣಾ ಮಾನದಂಡಗಳು ಮತ್ತು ಚುನಾವಣಾ ಪ್ರಕ್ರಿಯೆಗಳಲ್ಲಿನ ನಾವೀನ್ಯತೆಗಳು ಮತ್ತು ಉತ್ತಮ ಪದ್ಧತಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ವಿಷಯಾಧಾರಿತ ಗೋಷ್ಠಿಗಳು ಸೇರಿವೆ.
  5. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ (ಸಿಇಒಗಳ) ನೇತೃತ್ವದಲ್ಲಿ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ ತಜ್ಞರ ಬೆಂಬಲದೊಂದಿಗೆ ಒಟ್ಟು 36 ವಿಷಯಾಧಾರಿತ ಗುಂಪುಗಳು ಸಮ್ಮೇಳನದ ಸಮಯದಲ್ಲಿ ಗಹನವಾದ ಚರ್ಚೆಗಳಿಗೆ ಕೊಡುಗೆ ನೀಡಲಿವೆ. ಈ ಚರ್ಚೆಗಳಲ್ಲಿ 4 ಐಐಟಿಗಳು, 6 ಐಐಎಂಗಳು, 12 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು (ಎನ್ಎಲ್ಯುಗಳು) ಮತ್ತು ಐಐಎಂಸಿ ಸೇರಿದಂತೆ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಲಿವೆ.
  6. ಇಸಿಐ, ಇಎಂಬಿಗಳೊಂದಿಗೆ 40ಕ್ಕೂ ಅಧಿಕ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದು, ವಿಶ್ವದಾದ್ಯಂತ ಇಎಂಬಿಗಳು ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ಹೆಚ್ಚಿನ ಚರ್ಚೆಗಳು ಮತ್ತು ಸಹಕಾರ ಸಂಬಂಧ ವಿಸ್ತರಣೆ ಸಂಬಂಧ ಮಾತುಕತೆಗಳು ನಡೆಯಲಿವೆ. ಚುನಾವಣಾ ಸಂಬಂಧಿತ ಎಲ್ಲಾ ಮಾಹಿತಿ ಮತ್ತು ಸೇವೆಗಳಿಗಾಗಿ ಇಸಿಐನ ಒಂದು-ನಿಲುಗಡೆ ಡಿಜಿಟಲ್ ವೇದಿಕೆಯಾದ ಇಸಿನೆಟ್(ECINET) ಅನ್ನು ಆಯೋಗವು ಅಧಿಕೃತವಾಗಿ ಆರಂಭಿಸಲಿದೆ.
  7. ಭಾರತದಲ್ಲಿ ಚುನಾವಣೆಗಳನ್ನು ನಡೆಸುವ ತೀವ್ರತೆ ಮತ್ತು ಸಂಕೀರ್ಣತೆಯನ್ನು ಪ್ರದರ್ಶಿಸುವ ಪ್ರದರ್ಶನ ಮತ್ತು ಚುನಾವಣೆಗಳ ಎರಡು ಸ್ತಂಭಗಳಾದ ಮತದಾರರ ಪಟ್ಟಿಗಳ ತಯಾರಿಕೆ ಮತ್ತು ಚುನಾವಣೆಗಳನ್ನು ನಡೆಸುವುದನ್ನು ಬಲಪಡಿಸಲು ಇಸಿಐ ತೆಗೆದುಕೊಂಡ ಇತ್ತೀಚಿನ ಉಪಕ್ರಮಗಳನ್ನು ಸಹ ಕಾರ್ಯಕ್ರಮದಲ್ಲಿ ಬಿಂಬಿಸಲಾಗುವುದು.
  8. ವಿಶ್ವದ ಅತಿದೊಡ್ಡ ಚುನಾವಣೆಯಾದ 2024 ರ ಲೋಕಸಭಾ ಚುನಾವಣೆಗಳನ್ನು ಪ್ರಮುಖವಾಗಿ ಬಿಂಬಿಸುವ  “ಇಂಡಿಯಾ ಡಿಸೈಡ್ಸ್’’ ಎಂಬ ಸಾಕ್ಷ್ಯಚಿತ್ರ ಸರಣಿಯನ್ನು IICDEM- 2026 ರ ಮೊದಲ ದಿನದಂದು ಪ್ರದರ್ಶಿಸಲಾಗುವುದು.

 

*****


(रिलीज़ आईडी: 2216081) आगंतुक पटल : 12
इस विज्ञप्ति को इन भाषाओं में पढ़ें: English , Malayalam , Urdu , हिन्दी , Marathi , Bengali , Punjabi , Gujarati , Tamil