ಪ್ರಧಾನ ಮಂತ್ರಿಯವರ ಕಛೇರಿ
ಈ ವರ್ಷದ #ParikshaPeCharcha ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ಅವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ
प्रविष्टि तिथि:
07 JAN 2026 7:05PM by PIB Bengaluru
ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮತ್ತೊಮ್ಮೆ ಬಹುನಿರೀಕ್ಷಿತ ವಾರ್ಷಿಕ ಕಾರ್ಯಕ್ರಮವಾದ #ParikshaPeCharcha ಕಾರ್ಯಕ್ರಮವನ್ನು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ಮೂಲಕ ನಡೆಸಲಿದ್ದಾರೆ.
ಇತರರಿಗೆ ಸ್ಫೂರ್ತಿ ನೀಡಬಹುದಾದ ತಮ್ಮ ಪ್ರಶ್ನೆಗಳು, ವಿಚಾರಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ದೇಶದ #ExamWarriors ರನ್ನು ಪ್ರಧಾನಮಂತ್ರಿ ಅವರು ಆಹ್ವಾನಿಸಿದ್ದಾರೆ.
ಎಕ್ಸ್ ತಾಣದ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೀಗೆ ಹೇಳಿದ್ದಾರೆ:
"ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿವೆ ಮತ್ತು ಈ ವರ್ಷದ #ParikshaPeCharcha ಕಾರ್ಯಕ್ರಮ ಕೂಡ ಸಮೀಪಿಸುತ್ತಿದೆ!
ಪರೀಕ್ಷೆಗಳ ವಿವಿಧ ಅಂಶಗಳ ಬಗ್ಗೆ, ಮುಖ್ಯವಾಗಿ ಪರೀಕ್ಷಾ ಒತ್ತಡವನ್ನು ನಿವಾರಿಸುವ ವಿಧಾನಗಳು, ಶಾಂತವಾಗಿ, ಆತ್ಮವಿಶ್ವಾಸದಿಂದ ಮತ್ತು ನಗುನಗುತ್ತಾ ಪರೀಕ್ಷೆಗಳಿಗೆ ಹಾಜರಾಗುವ ವಿಧಾನಗಳ ಕುರಿತು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ.
#ExamWarriors ರಿಂದ ವಿಷಯಗಳನ್ನು ಕೇಳಲು ನಾನು ಬಯಸುತ್ತೇನೆ, ಅದು ಅವರ ಪ್ರಶ್ನೆಗಳಾಗಿರಬಹುದು ಅಥವಾ ಅವರ ಅನುಭವಗಳಾಗಿರಬಹುದು, ಅದು ಖಂಡಿತಾವಾಗಿಯೂ ಇತರರನ್ನು ಪ್ರೇರೇಪಿಸುತ್ತದೆ...
https://innovateindia1.mygov.in/“
*****
(रिलीज़ आईडी: 2212258)
आगंतुक पटल : 10
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam
,
Malayalam