ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರ ಮತ್ತು ಮನರಂಜನೆಯಲ್ಲಿ ನಾವೀನ್ಯತೆಯನ್ನು ಹೆಚ್ಚಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವೇವ್‌ ಎಕ್ಸ್ ದೆಹಲಿಯ ಎಫ್‌ ಐ ಟಿ ಟಿ-ಐಐಟಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ


ಮಾಧ್ಯಮ ತಂತ್ರಜ್ಞಾನ ಉದ್ಯಮಶೀಲತೆಯನ್ನು ವೇಗಗೊಳಿಸಲು ತಿಳುವಳಿಕೆ ಒಪ್ಪಂದ

प्रविष्टि तिथि: 06 JAN 2026 6:26PM by PIB Bengaluru

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ನವೋದ್ಯಮ ವೇಗವರ್ಧಕ ಉಪಕ್ರಮವಾದ ವೇವ್‌ ಎಕ್ಸ್ ಮಾಧ್ಯಮ, ಮನರಂಜನೆ, ಪ್ರಸಾರ ಮತ್ತು ಸಂವಹನ ತಂತ್ರಜ್ಞಾನಗಳಲ್ಲಿ ನಾವೀನ್ಯತೆ, ಇನ್ಕ್ಯುಬೇಶನ್ ಮತ್ತು ಉದ್ಯಮಶೀಲತೆಯನ್ನು ಬಲಪಡಿಸಲು ಸಹಕರಿಸುವ ಕುರಿತು ಐಐಟಿ ದೆಹಲಿಯ ಫೌಂಡೇಶನ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್‌ ಐ ಟಿ ಟಿ) ನೊಂದಿಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ.

ನವದೆಹಲಿಯ ಶಾಸ್ತ್ರಿ ಭವನದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಸಂಜಯ್ ಜಾಜು ಅವರ ಸಮ್ಮುಖದಲ್ಲಿ ವೇವ್‌ ಎಕ್ಸ್ ಮತ್ತು ಎಫ್‌ ಐ ಟಿ ಟಿ ತಂಡಗಳು ಈ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದವು.

ಈ ಸಹಯೋಗದ ಅಡಿಯಲ್ಲಿ, ದೇಶಾದ್ಯಂತ ಇನ್ಕ್ಯುಬೇಶನ್ ಕೇಂದ್ರಗಳನ್ನು ಸ್ಥಾಪಿಸುವ ಮತ್ತು ಬಲಪಡಿಸುವ ಮೂಲಕ ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಉಪಕ್ರಮವಾದ ವೇವ್‌ ಎಕ್ಸ್ ಕಾರ್ಯಕ್ರಮದ ಅನುಷ್ಠಾನ ಮತ್ತು ವಿಸ್ತರಣೆಗೆ ಐಐಟಿ ದೆಹಲಿಯ ಎಫ್ ಐ ಟಿ ಟಿ  ಬೆಂಬಲ ನೀಡಲಿದೆ. ಇನ್ಕ್ಯುಬೇಟರ್ ಸ್ಥಾಪನೆಗೆ ಎಫ್ ಐ ಟಿ ಟಿ  ಕಾರ್ಯತಂತ್ರದ ಮತ್ತು ಕಾರ್ಯಾಚರಣೆಯ ಮಾರ್ಗದರ್ಶನವನ್ನು ನೀಡುತ್ತದೆ, ಇತರ ಐಐಟಿಗಳು ಮತ್ತು ನಾವೀನ್ಯತೆ ಹಬ್‌ ಗಳೊಂದಿಗೆ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ತಾಂತ್ರಿಕ ಪರಿಣತಿ, ಸಂಶೋಧನಾ ಸೌಲಭ್ಯಗಳು, ಮಾರ್ಗದರ್ಶನ, ಬೌದ್ಧಿಕ ಆಸ್ತಿ ಬೆಂಬಲವನ್ನು ಒದಗಿಸುತ್ತದೆ ಮತ್ತು ನವೋದ್ಯಮಗಳು ಹಾಗೂ ಇನ್ಕ್ಯುಬೇಶನ್ ವ್ಯವಸ್ಥಾಪಕರಿಗಾಗಿ ಸಾಮರ್ಥ್ಯ ವೃದ್ಧಿ ಉಪಕ್ರಮಗಳನ್ನು ಸಕ್ರಿಯಗೊಳಿಸುತ್ತದೆ.

ವಾರ್ತಾಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ವೇವ್‌ ಎಕ್ಸ್, ಈ ಕಾರ್ಯಕ್ರಮಕ್ಕೆ ಆರ್ಥಿಕ ನೆರವು, ನೀತಿ ಮಾರ್ಗದರ್ಶನ ಮತ್ತು ರಾಷ್ಟ್ರೀಯ ಮಟ್ಟದ ಮಾನ್ಯತೆಯನ್ನು ನೀಡಲಿದೆ. ಈ ಸಹಯೋಗದ ಮೂಲಕ, ನವೋದ್ಯಮಗಳಿಗೆ ಧನಸಹಾಯದ ಬೆಂಬಲ, ಮಾರ್ಗದರ್ಶನ, ಮೂಲಸೌಕರ್ಯದ ಲಭ್ಯತೆ, ಉದ್ಯಮ ಪಾಲುದಾರಿಕೆಗಳು ಹಾಗೂ ಹೂಡಿಕೆದಾರರು ಮತ್ತು ಜಾಗತಿಕ ಮಾರುಕಟ್ಟೆಗಳ ಸಂಪರ್ಕವನ್ನು ಕಲ್ಪಿಸಿಕೊಡುವ ಮೂಲಕ ಭವಿಷ್ಯದ ಸಿದ್ಧತೆಯುಳ್ಳ ಮಾಧ್ಯಮ ಮತ್ತು ಮನರಂಜನಾ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಗುರಿಯನ್ನು ವೇವ್‌ ಎಕ್ಸ್ ಹೊಂದಿದೆ.

ಈ ಸಂದರ್ಭದಲ್ಲಿ ಶ್ರೀ ಜಾಜು ಅವರು ಮಾತನಾಡಿ, "ವೇವ್‌ ಎಕ್ಸ್ ಅನ್ನು ಮಾಧ್ಯಮ ಮತ್ತು ಮನರಂಜನಾ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಾಗಿ ಒಂದು ರಾಷ್ಟ್ರೀಯ ವೇಗವರ್ಧಕವಾಗಿ ರೂಪಿಸಲಾಗಿದೆ. ಮಾಧ್ಯಮ ಉದ್ಯಮದಲ್ಲಿ ಪ್ರಮುಖ ತಾಂತ್ರಿಕ ಬದಲಾವಣೆಗಳನ್ನು ತರುತ್ತಿರುವ ನವೋದ್ಯಮಗಳಿಗೆ, ಹಾಗೆಯೇ ಅಸ್ತಿತ್ವದಲ್ಲಿರುವ ತಂತ್ರಜ್ಞಾನ ವೇದಿಕೆಗಳಲ್ಲಿ ಹೊಸ ಅಪ್ಲಿಕೇಶನ್‌ ಗಳನ್ನು ನಿರ್ಮಿಸುತ್ತಿರುವ ನಾವೀನ್ಯಕಾರರಿಗೆ ವೇವ್‌ ಎಕ್ಸ್ ವೇಗ ನೀಡಲಿದೆ. ವಿಶಾಲವಾದ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಮಾಧ್ಯಮ ಹಾಗೂ ಮನರಂಜನಾ ನವೋದ್ಯಮಗಳಿಗಾಗಿ ವಿಶ್ವದರ್ಜೆಯ ಇನ್ಕ್ಯುಬೇಶನ್ ಸೌಲಭ್ಯಗಳನ್ನು ಸ್ಥಾಪಿಸುವುದು ವೇವ್‌ ಎಕ್ಸ್ ನ ಗುರಿಯಾಗಿದೆ," ಎಂದು ತಿಳಿಸಿದರು.

ಎಫ್ ಐ ಟಿ ಟಿ  ಪರವಾಗಿ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ ಐಐಟಿ ದೆಹಲಿಯ ಎಫ್ ಐ ಟಿ ಟಿ  ವ್ಯವಸ್ಥಾಪಕ ನಿರ್ದೇಶಕರಾದ ಡಾ. ನಿಖಿಲ್ ಅಗರ್ವಾಲ್ ಅವರು ಮಾತನಾಡಿ, "ವೇವ್‌ ಎಕ್ಸ್ ನೊಂದಿಗಿನ ಈ ಪಾಲುದಾರಿಕೆಯು ಉದಯೋನ್ಮುಖ ಮತ್ತು ಸೃಜನಶೀಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆಯನ್ನು ಸಕ್ರಿಯಗೊಳಿಸುವ ಎಫ್ ಐ ಟಿ ಟಿ  ಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನೀತಿ ಬೆಂಬಲ, ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯನ್ನು ಸಂಯೋಜಿಸುವ ಮೂಲಕ, ಮಾಧ್ಯಮ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಸಂಗಮದಲ್ಲಿ ಕೆಲಸ ಮಾಡುವ ನವೋದ್ಯಮಗಳನ್ನು ಬೆಂಬಲಿಸುವ ಬಲಿಷ್ಠ ರಾಷ್ಟ್ರೀಯ ಇನ್ಕ್ಯುಬೇಶನ್ ವೇದಿಕೆಯನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ," ಎಂದು ಹೇಳಿದರು.

ಈ ಪಾಲುದಾರಿಕೆಯು ವೇವ್‌ ಎಕ್ಸ್ ಚೌಕಟ್ಟಿನ ಅಡಿಯಲ್ಲಿ ನವೋದ್ಯಮಗಳ ಬೆಳವಣಿಗೆ ಮತ್ತು ತಂತ್ರಜ್ಞಾನದ ವಾಣಿಜ್ಯೀಕರಣವನ್ನು ವೇಗಗೊಳಿಸಲು ಐಐಟಿ ದೆಹಲಿಯ ಶೈಕ್ಷಣಿಕ, ಸಂಶೋಧನೆ ಮತ್ತು ನಾವೀನ್ಯತೆ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ, ಇದು ಭಾರತದ ಮಾಧ್ಯಮ ಮತ್ತು ಮನರಂಜನಾ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಎಫ್ ಟಿ ಟಿ  ಬಗ್ಗೆ

ಫೌಂಡೇಶನ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಟ್ರಾನ್ಸ್‌ಫರ್ (ಎಫ್ ಐ ಟಿ ಟಿ ), ಐಐಟಿ ದೆಹಲಿಯು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿಯ ಉದ್ಯಮ ಸಂಪರ್ಕ ಸಂಸ್ಥೆಯಾಗಿದೆ. ನಾವೀನ್ಯತೆ, ಉದ್ಯಮಶೀಲತೆ ಮತ್ತು ತಂತ್ರಜ್ಞಾನದ ವಾಣಿಜ್ಯೀಕರಣವನ್ನು ಸುಗಮಗೊಳಿಸಲು ಸ್ಥಾಪಿಸಲಾದ ಎಫ್ ಐ ಟಿ ಟಿ, ಐಐಟಿ ದೆಹಲಿ ಪರಿಸರ ವ್ಯವಸ್ಥೆಯ ಒಳಗೆ ಮತ್ತು ಹೊರಗೆ ಇನ್ಕ್ಯುಬೇಶನ್, ಉದ್ಯಮದ ಸಹಯೋಗ, ಸಂಶೋಧನೆಯ ಅನುವಾದ, ಬೌದ್ಧಿಕ ಆಸ್ತಿ ನಿರ್ವಹಣೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವೇವ್ಎಕ್ಸ್ ಬಗ್ಗೆ

ವೇವ್‌ ಎಕ್ಸ್ ಎಂಬುದು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿರುವ ಒಂದು ರಾಷ್ಟ್ರೀಯ ಮಾಧ್ಯಮ ಮತ್ತು ಮನರಂಜನಾ ತಂತ್ರಜ್ಞಾನ ನಾವೀನ್ಯತೆ ಮತ್ತು ಇನ್ಕ್ಯುಬೇಶನ್ ಕಾರ್ಯಕ್ರಮವಾಗಿದ್ದು, ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ ಎಫ್‌ ಡಿ ಸಿ) ಮೂಲಕ ಜಾರಿಗೆ ತರಲಾಗುತ್ತಿದೆ. ಈ ಉಪಕ್ರಮವು ಪ್ರಸಾರ, ಸಂವಹನ, ಮಾಧ್ಯಮ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕೆಲಸ ಮಾಡುವ ನವೋದ್ಯಮಗಳು ಮತ್ತು ಉದ್ಯಮಿಗಳಿಗೆ ವ್ಯವಸ್ಥಿತ ಇನ್ಕ್ಯುಬೇಶನ್ ಬೆಂಬಲ, ಉದ್ಯಮದ ಸಂಪರ್ಕ, ಮಾರ್ಗದರ್ಶನ ಹಾಗೂ ರಾಷ್ಟ್ರೀಯ ಮತ್ತು ಜಾಗತಿಕ ಮಾನ್ಯತೆಯನ್ನು ಒದಗಿಸುವ ಮೂಲಕ ಅವರನ್ನು ಪೋಷಿಸುವ ಗುರಿಯನ್ನು ಹೊಂದಿದೆ.

 

*****


(रिलीज़ आईडी: 2211942) आगंतुक पटल : 15
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Punjabi , Gujarati , Tamil , Telugu , Malayalam