ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದ ಭಾರತದ ರಾಷ್ಟ್ರಪತಿ

प्रविष्टि तिथि: 26 DEC 2025 1:25PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (2025 ಡಿಸೆಂಬರ್ 26) ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೌರ್ಯ, ಸಾಮಾಜಿಕ ಸೇವೆ, ಪರಿಸರ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಗಳನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಪಾತ್ರರಾದವನ್ನು ಅಭಿನಂದಿಸಿದರು. ಪ್ರಶಸ್ತಿ ವಿಜೇತ ಮಕ್ಕಳು ತಮ್ಮ ಕುಟುಂಬಗಳಿಗೆ, ಸಮುದಾಯಗಳಿಗೆ ಮತ್ತು ಇಡೀ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು. ಈ ಪ್ರಶಸ್ತಿಗಳು ದೇಶಾದ್ಯಂತ ಎಲ್ಲಾ ಮಕ್ಕಳಿಗೆ ಸ್ಫೂರ್ತಿ ನೀಡುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರನ್ನು ಮತ್ತಷ್ಟು ಪ್ರೋತ್ಸಾಹ ಮಾಡುವುದಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರಶಸ್ತಿಗಳು ದೇಶದ ಎಲ್ಲಾ ಮಕ್ಕಳಿಗೆ ಸ್ಫೂರ್ತಿ ನೀಡುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸುಮಾರು 320 ವರ್ಷಗಳ ಹಿಂದೆ, ಸಿಖ್ ಧರ್ಮದ ಹತ್ತನೇ ಗುರು ಮತ್ತು ಎಲ್ಲಾ ಭಾರತೀಯರು ಆರಾಧಿಸುತ್ತಿದ್ದ ಗುರು ಗೋವಿಂದ ಸಿಂಗ್ ಜಿ ಮತ್ತು ಅವರ ನಾಲ್ವರು ಪುತ್ರರು ಸತ್ಯ ಮತ್ತು ನ್ಯಾಯಕ್ಕೆ ಬೆಂಬಲ ನೀಡಿ ಹೋರಾಡುವಾಗ ಪರಮೋಚ್ಛ ತ್ಯಾಗಗಳನ್ನು ಮಾಡಿದರು ಎಂದು ರಾಷ್ಟ್ರಪತಿಗಳು ಹೇಳಿದರು. ಇಬ್ಬರು ಕಿರಿಯ ಸಾಹಿಬ್ಜಾದಾಸ್ ಅವರ ಧೈರ್ಯವನ್ನು ಭಾರತ ಮತ್ತು ವಿದೇಶಗಳಲ್ಲಿ ಗೌರವಿಸಲಾಗುತ್ತದೆ ಮತ್ತು ಮನ್ನಣೆ ನೀಡಲಾತ್ತದೆ ಎಂದು ಅವರು ಹೇಳಿದರು. ಸತ್ಯ ಮತ್ತು ನ್ಯಾಯಕ್ಕಾಗಿ ಹೆಮ್ಮೆಯಿಂದ ತಮ್ಮ ಪ್ರಾಣವನ್ನೇ ಅರ್ಪಿಸಿದ ಮಹಾನ್ ಬಾಲ ವೀರರನ್ನು ರಾಷ್ಟ್ರಪತಿ ಗೌರವದಿಂದ ಸ್ಮರಿಸಿದರು

ಒಂದು ದೇಶದ ಮಕ್ಕಳು ದೇಶಭಕ್ತಿ ಮತ್ತು ಉನ್ನತ ಆದರ್ಶಗಳಿಂದ ಕೂಡಿದ್ದರೆ ಆ ದೇಶದ ಶ್ರೇಷ್ಠತೆ ಸಾಧಿಸುವುದು ಖಚಿತ ಎಂದು ರಾಷ್ಟ್ರಪತಿಗಳು ಹೇಳಿದರು. ಶೌರ್ಯ, ಕಲೆ ಮತ್ತು ಸಂಸ್ಕೃತಿ, ಪರಿಸರ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ ಮತ್ತು ಕ್ರೀಡೆಯಂತಹ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಏಳು ವರ್ಷದ ವಕ ಲಕ್ಷ್ಮಿ ಪ್ರಾಗ್ನಿಕಾ ಅವರಂತಹ ಪ್ರತಿಭಾನ್ವಿತ ಮಕ್ಕಳ ಕಾರಣದಿಂದಾಗಿ ಭಾರತವನ್ನು ವಿಶ್ವ ವೇದಿಕೆಯಲ್ಲಿ ಚೆಸ್ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ತಮ್ಮ ಶೌರ್ಯ ಮತ್ತು ಬುದ್ಧಿವಂತಿಕೆಯಿಂದ ಇತರರ ಜೀವಗಳನ್ನು ಉಳಿಸಿದ ಅಜಯ್ ರಾಜ್ ಮತ್ತು ಮೊಹಮ್ಮದ್ ಸಿದಾನ್  ಪಿ ಅವರು ಎಲ್ಲಾ ಪ್ರಶಂಸೆಗೆ ಅರ್ಹರು. ಒಂಬತ್ತು ವರ್ಷದ ಗಂಡುಮಗು ವ್ಯೋಮ ಪ್ರಿಯಾ ಮತ್ತು ಹನ್ನೊಂದು ವರ್ಷದ ಧೈರ್ಯಶಾಲಿ ಮಗ ಕಮಲೇಶ್ ಕುಮಾರ್ ತಮ್ಮ ಧೈರ್ಯದಿಂದ ಇತರರ ಜೀವಗಳನ್ನು ಉಳಿಸುವಾಗ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆಪರೇಷನ್ ಸಿಂಧೂರ್ ಸಮಯದಲ್ಲಿ ಯುದ್ಧಕ್ಕೆ ಸಂಬಂಧಿಸಿದ ಅಪಾಯಗಳ ನಡುವೆಯೂ ಹತ್ತು ವರ್ಷದ ಶ್ರವಣ್ ಸಿಂಗ್, ತನ್ನ ಮನೆಯ ಸಮೀಪ ಗಡಿಯಲ್ಲಿ ಬೀಡುಬಿಟ್ಟಿದ್ದ ಭಾರತೀಯ ಸೈನಿಕರಿಗೆ ನಿರಂತರವಾಗಿ ನೀರು, ಹಾಲು ಮತ್ತು ಲಸ್ಸಿಯನ್ನು ತಲುಪಿಸುತ್ತಿದ್ದರು. ಆದರೆ, ವಿಶೇಷಚೇತನ ಶಿವಾನಿ ಹೊಸೂರು ಉಪ್ಪಾರ ಆರ್ಥಿಕ ಮತ್ತು ದೈಹಿಕ ಮಿತಿಗಳನ್ನು ನಿವಾರಿಸಿ ಕ್ರೀಡಾ ಜಗತ್ತಿನಲ್ಲಿ ಅಸಾಧಾರಣ ಸಾಧನೆಗಳನ್ನು ಸಾಧಿಸಿದ್ದಾರೆ. ಅತ್ಯಂತ ಸ್ಪರ್ಧಾತ್ಮಕ ಮತ್ತು ಪ್ರತಿಭೆಯಿಂದ ಕೂಡಿದ ಕ್ರಿಕೆಟ್ ಜಗತ್ತಿನಲ್ಲಿ ವೈಭವ್ ಸೂರ್ಯವಂಶಿ ತಮ್ಮದೇ ಆದ ಹೆಸರು ಮಾಡಿದ್ದಾರೆ ಮತ್ತು ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರಂತಹ ಧೈರ್ಯಶಾಲಿ ಮತ್ತು ಪ್ರತಿಭಾನ್ವಿತ ಮಕ್ಕಳು ಉತ್ತಮ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ ಮತ್ತು ಭಾರತದ ಭವಿಷ್ಯವನ್ನು ಉಜ್ವಲಗೊಳಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಅವರ ಪೂರ್ಣ ಭಾಷಣಕ್ಕೆ ಇಲ್ಲಿ ಕ್ಲಿಕ್‌ ಮಾಡಿ-

 

*****


(रिलीज़ आईडी: 2208821) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati , Odia , Tamil , Telugu , Malayalam