ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸತ್ತಿನಲ್ಲಿ ಭಾರತದ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಬಿಂಬಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ ಪ್ರಧಾನಮಂತ್ರಿ

प्रविष्टि तिथि: 23 DEC 2025 6:19PM by PIB Bengaluru

ಲೋಕಸಭಾ ಭಾಷಣಗಳಲ್ಲಿ ಪ್ರಾದೇಶಿಕ-ಭಾಷೆಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಭಾರತದ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಸಂಸತ್ತಿನಲ್ಲಿ ಬಿಂಬಿಸಿದ್ದಕ್ಕಾಗಿ ಸ್ಪೀಕರ್‌ ಓಂ ಬಿರ್ಲಾ ಜೀ ಮತ್ತು ಪಕ್ಷಾತೀತ ಸಂಸದರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

"ಇದನ್ನು ನೋಡಿ ಸಂತೋಷವಾಗಿದೆ.

ಭಾರತದ ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆ ನಮ್ಮ ಹೆಮ್ಮೆಯಾಗಿದೆ. ಸಂಸತ್ತಿನಲ್ಲಿಈ ಚೈತನ್ಯವನ್ನು ಬಿಂಬಿಸಿದ್ದಕ್ಕಾಗಿ ಸ್ಪೀಕರ್‌ ಓಂ ಬಿರ್ಲಾ ಜೀ ಮತ್ತು ಪಕ್ಷಾತೀತ ಸಂಸದರಿಗೆ ಅಭಿನಂದನೆಗಳು."

https://hindustantimes.com/india-news/regional-languages-take-precedence-in-lok-sabha-addresses-101

@ombirlakota

 

*****


(रिलीज़ आईडी: 2207952) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Tamil , Telugu , Malayalam