ಪ್ರಧಾನ ಮಂತ್ರಿಯವರ ಕಛೇರಿ
ಸಾಂಪ್ರದಾಯಿಕ ಔಷಧ ಕುರಿತಾದ ವಿಶ್ವ ಆರೋಗ್ಯ ಸಂಸ್ಥೆ ಎರಡನೇ ಜಾಗತಿಕ ಶೃಂಗಸಭೆಯ ಸಮಾರೋಪ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
19 DEC 2025 10:58PM by PIB Bengaluru
ನವದೆಹಲಿಯಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧ ಕುರಿತಾದ ಎರಡನೇ ಜಾಗತಿಕ ಶೃಂಗಸಭೆಯ ಸಮಾರೋಪ ಸಮಾರಂಭದ ಕ್ಷಣಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಪ್ರತ್ಯೇಕ ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದಾರೆ :
"ಸಾಂಪ್ರದಾಯಿಕ ಆರೋಗ್ಯ ಸೇವೆಯಲ್ಲಿ ಪ್ರಸ್ತುತದ ಅಗತ್ಯಗಳನ್ನು ಮೀರಿ ಗಮನಹರಿಸಬೇಕು. ಭವಿಷ್ಯದ ಪೀಳಿಗೆಯ ಆರೋಗ್ಯ ಮತ್ತು ಯೋಗಕ್ಷೇಮದೆಡೆಗೂ ನಾವು ಸಮಾನ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದೇವೆ."
"ಕಠಿಣ ಸಂದರ್ಭಗಳಲ್ಲಿಯೂ ಕೂಡ ಸಾಂಪ್ರದಾಯಿಕ ಔಷಧವು ಪರಿಣಾಮಕಾರಿ ಮತ್ತು ಅರ್ಥಪೂರ್ಣ ಪಾತ್ರ ವಹಿಸಬಲ್ಲದು ಎಂಬುದನ್ನು ಬಹು ಹಂತಗಳಲ್ಲಿ ನಿರಂತರ ಪ್ರಯತ್ನಗಳ ಮೂಲಕ ಭಾರತ ಪ್ರದರ್ಶಿಸುತ್ತಿದೆ."
"ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯಲ್ಲಿನ ವಸ್ತು ಪ್ರದರ್ಶನವು ಪ್ರಪಂಚದಾದ್ಯಂತದ ಗಿಡಮೂಲಿಕೆ ಪರಿಹಾರಗಳು ಮತ್ತು ಪ್ರಾಚೀನ ವೈದ್ಯಕೀಯ ಪದ್ಧತಿಗಳನ್ನು ಪ್ರದರ್ಶಿಸುತ್ತಾ, ಆಧುನಿಕ ಆರೋಗ್ಯ ವಲಯದಲ್ಲಿ ಅವುಗಳ ಹೆಚ್ಚುತ್ತಿರುವ ಪ್ರಸ್ತುತತೆ ಮತ್ತು ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಿತು.
@WHO”
“WHO ಸಾಂಪ್ರದಾಯಿಕ ಔಷಧ ಕುರಿತಾದ ಎರಡನೇ ಜಾಗತಿಕ ಶೃಂಗಸಭೆಯಲ್ಲಿ ಅಶ್ವಗಂಧದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.
@WHO”
"WHO ಮಹಾನಿರ್ದೇಶಕರಾದ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದೆ. ಸಮಗ್ರ ಆರೋಗ್ಯಕ್ಕಾಗಿ, ರೋಗ ಬರದಂತೆ ತಡೆಗಟ್ಟುವ ಆರೈಕೆ ನೀಡುವಲ್ಲಿ ಮತ್ತು ಕ್ಷೇಮವನ್ನು ಉತ್ತೇಜಿಸುವಲ್ಲಿ ಸಾಂಪ್ರದಾಯಿಕ ಔಷಧದ ಅಗಾಧ ಸಾಮರ್ಥ್ಯದ ಬಗ್ಗೆ ನಾವು ಚರ್ಚಿಸಿದೆವು. ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಪುರಾವೆ ಆಧಾರಿತ ಅಭ್ಯಾಸಗಳು ಮತ್ತು ಜಾಗತಿಕ ಸಹಕಾರದ ಮಹತ್ವದ ಬಗ್ಗೆಯೂ ಸಹ ಸಭೆಯಲ್ಲಿ ಒತ್ತಿ ಹೇಳಲಾಯಿತು.
@WHO
@DrTedros”
*****
(रिलीज़ आईडी: 2207062)
आगंतुक पटल : 6