ಪ್ರಧಾನ ಮಂತ್ರಿಯವರ ಕಛೇರಿ
ಇಥಿಯೋಪಿಯಾದ ಅಡಿಸ್ ಅಬಾಬಾದಲ್ಲಿರುವ ಅಡ್ವಾ ವಿಜಯ ಸ್ಮಾರಕದಲ್ಲಿ ಪ್ರಧಾನಮಂತ್ರಿ ಗೌರವ ಸಮರ್ಪಣೆ
प्रविष्टि तिथि:
17 DEC 2025 1:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಸ್ ಅಬಾಬಾದಲ್ಲಿರುವ ಅಡ್ವಾ ವಿಜಯ ಸ್ಮಾರಕದಲ್ಲಿ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು. 1896ರಲ್ಲಿ ಅಡ್ವಾ ಕದನದಲ್ಲಿ ತಮ್ಮ ರಾಷ್ಟ್ರದ ಸಾರ್ವಭೌಮತ್ವಕ್ಕಾಗಿ ಪರಮೋಚ್ಛ ತ್ಯಾಗ ಮಾಡಿದ ಧೈರ್ಯಶಾಲಿ ಇಥಿಯೋಪಿಯನ್ ಸೈನಿಕರಿಗೆ ಈ ಸ್ಮಾರಕವನ್ನು ಸಮರ್ಪಿಸಲಾಗಿದೆ. ಈ ಸ್ಮಾರಕವು ಅಡ್ವಾ ವೀರರ ನಿರಂತರ ಚೈತನ್ಯ ಮತ್ತು ದೇಶದ ಹೆಮ್ಮೆಯ ಸ್ವಾತಂತ್ರ್ಯ, ಘನತೆ ಮತ್ತು ಸ್ಥಿತಿಸ್ಥಾಪಕತ್ವದ ಪರಂಪರೆಗೆ ಸಲ್ಲುವ ಗೌರವವಾಗಿದೆ.
ಪ್ರಧಾನಮಂತ್ರಿಗಳ ಸ್ಮಾರಕ ಭೇಟಿಯು ಭಾರತ ಮತ್ತು ಇಥಿಯೋಪಿಯಾ ನಡುವಿನ ವಿಶೇಷ ಐತಿಹಾಸಿಕ ಸಂಪರ್ಕವನ್ನು ಎತ್ತಿ ತೋರಿಸುತ್ತದೆ, ಇದನ್ನು ಎರಡೂ ದೇಶಗಳ ಜನರು ಇಂದಿಗೂ ಪಾಲಿಸುತ್ತಿದ್ದಾರೆ.
*****
(रिलीज़ आईडी: 2205624)
आगंतुक पटल : 6
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Bengali-TR
,
Punjabi
,
Gujarati
,
Odia
,
Tamil
,
Telugu
,
Malayalam