ಪ್ರಧಾನ ಮಂತ್ರಿಯವರ ಕಛೇರಿ
ಜೋರ್ಡಾನ್ ನ ಅಮ್ಮನ್ ಗೆ ಆಗಮಿಸಿದ ಪ್ರಧಾನಮಂತ್ರಿ ಅವರಿಗೆ ಭವ್ಯ ಸ್ವಾಗತ
प्रविष्टि तिथि:
15 DEC 2025 5:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜೋರ್ಡಾನ್ ರಾಜಧಾನಿ ಅಮ್ಮನ್ ನಗರಕ್ಕೆ ಆಗಮಿಸಿದರು. ಎರಡು ದೇಶಗಳ ನಡುವಿನ ಆಪ್ತ ಸಂಬಂಧಗಳನ್ನು ಪ್ರತಿಬಿಂಬಿಸುವ ವಿಶೇಷ ಗೌರವದ ಸೂಚಕವಾಗಿ, ಅಮ್ಮನ್ ವಿಮಾನ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಮೋದಿ ಅವರಿಗೆ ಜೋರ್ಡಾನ್ ಪ್ರಧಾನಮಂತ್ರಿ ಗೌರವಾನ್ವಿತ ಡಾ. ಜಾಫರ್ ಹಸನ್ ಅವರು ಹಾರ್ದಿಕವಾಗಿ ಬರಮಾಡಿಕೊಂಡು ಭವ್ಯ ಸ್ವಾಗತವನ್ನು ನೀಡಿದರು.
ಜೋರ್ಡಾನ್, ಎಥಿಯೋಪಿಯಾ ಮತ್ತು ಒಮಾನ್ ದೇಶಗಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಮಂತ್ರಿ ಮೋದಿ ಅವರ ಇದು ಮೊದಲ ಹಂತದ ಭೇಟಿಯಾಗಿದೆ, ಬರೋಬ್ಬರಿ 37 ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿ ಅವರ ಪೂರ್ಣ ಪ್ರಮಾಣದ ಜೋರ್ಡಾನ್ ನ ದ್ವಿಪಕ್ಷೀಯ ಭೇಟಿ ಇದಾಗಿದ್ದು, ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಗಿದೆ.
****
(रिलीज़ आईडी: 2204208)
आगंतुक पटल : 11
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Bengali-TR
,
Punjabi
,
Gujarati
,
Tamil
,
Telugu
,
Malayalam