ಪ್ರಧಾನ ಮಂತ್ರಿಯವರ ಕಛೇರಿ
ಪ್ರಣಬ್ ಮುಖರ್ಜಿ ಜನ್ಮ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ಗೌರವ ಸಲ್ಲಿಸಿದ್ದಾರೆ
प्रविष्टि तिथि:
11 DEC 2025 10:27AM by PIB Bengaluru
ಇಂದು ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದರು. ದಶಕಗಳ ಕಾಲ ತಮ್ಮ ಸಾರ್ವಜನಿಕ ಜೀವನದಲ್ಲಿ ಪ್ರಣಬ್ ಮುಖರ್ಜಿ ಅವರು ಅಚಲ ಸಮರ್ಪಣಾಭಾವದಿಂದ ಭಾರತಕ್ಕೆ ಸೇವೆ ಸಲ್ಲಿಸಿದ ಒಬ್ಬ ಶ್ರೇಷ್ಠ ರಾಜನೀತಿಜ್ಞ ಮತ್ತು ಅಸಾಧಾರಣ ಜ್ಞಾನ ಹೊಂದಿದ್ದ ತಜ್ಞ ಎಂದು ಬಣ್ಣಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ:
''ಶ್ರೀ ಪ್ರಣಬ್ ಮುಖರ್ಜಿ ಅವರಿಗೆ ಅವರ ಜನ್ಮ ದಿನಾಚರಣೆಯಂದು ಗೌರವಪೂರ್ವಕ ನಮನಗಳು. ಒಬ್ಬ ಶ್ರೇಷ್ಠ ರಾಜನೀತಿಜ್ಞ ಮತ್ತು ಅಸಾಧಾರಣ ಜ್ಞಾನ ಹೊಂದಿದ್ದ ತಜ್ಞ, ಅವರು ದಶಕಗಳ ಕಾಲದ ತಮ್ಮ ಸಾರ್ವಜನಿಕ ಜೀವನದಲ್ಲಿ ಅಚಲ ಸಮರ್ಪಣಾಭಾವದಿಂದ ಭಾರತಕ್ಕೆ ಸೇವೆ ಸಲ್ಲಿಸಿದರು. ಅವರ ಬುದ್ಧಿಶಕ್ತಿ ಮತ್ತು ಚಿಂತನೆಯ ಸ್ಪಷ್ಟತೆಯು ನಮ್ಮ ಪ್ರಜಾಪ್ರಭುತ್ವವನ್ನು ಪ್ರತಿ ಹಂತದಲ್ಲೂ ಶ್ರೀಮಂತಗೊಳಿಸಿತು. ನಾನು ಅವರ ಜೊತೆ ಮಾತುಕತೆ ನಡೆಸಿದ ಅಷ್ಟೂ ಸಮಯಗಳಲ್ಲಿ ಅವರಿಂದ ಕಲಿಯಲು ತುಂಬಾ ವಿಷಯಗಳು ಸಿಕ್ಕಿರುವುದು ನನ್ನ ಸೌಭಾಗ್ಯ.”
*****
(रिलीज़ आईडी: 2202267)
आगंतुक पटल : 6
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam