ಸಂಸ್ಕೃತಿ ಸಚಿವಾಲಯ
ವರ್ಷಾಂತ್ಯದ ವಿಮರ್ಶೆ-2025: ಸಂಸ್ಕೃತಿ ಸಚಿವಾಲಯ
ತಮಿಳುನಾಡು ಮತ್ತು ಕಾಶಿಯ ನಡುವಿನ ಸಾಂಸ್ಕೃತಿಕ ಹಾಗೂ ಬೌದ್ಧಿಕ ಬಾಂಧವ್ಯವನ್ನು 'ಕಾಶಿ ತಮಿಳು ಸಂಗಮಂ 3.0' ಆಚರಿಸಿತು
ರಾಷ್ಟ್ರೀಯ ಗೀತೆ “ವಂದೇ ಮಾತರಂ”ನ 150 ವರ್ಷಗಳನ್ನು ಭಾರತವು ಹೆಮ್ಮೆಯಿಂದ ಆಚರಿಸಿತು
2025ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾರತದ ಶ್ರೀಮಂತ ಬುಡಕಟ್ಟು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಚಿವಾಲಯವು ಪ್ರದರ್ಶಿಸಿತು
ಕಲಾಗ್ರಾಮ: ಮಹಾಕುಂಭ 2025ರ ಸಾಂಸ್ಕೃತಿಕ ರತ್ನ
ಗೌಡೀಯ ಮಿಷ ನ್‌ನ ಸ್ಥಾಪಕರಾದ ಶ್ರೀಲ ಪ್ರಭುಪಾದರ 150ನೇ ಜಯಂತಿಯನ್ನು ಭಾರತವು ಸ್ಮರಿಸಿತು
ತಮಿಳುನಾಡಿನಲ್ಲಿ 'ಕಂಬ ರಾಮಾಯಣ ಉತ್ಸವ'ದ ಉದ್ಘಾಟನೆಯೊಂದಿಗೆ ಕಂಬ ರಾಮಾಯಣ ಸಂಪ್ರದಾಯವು ಪುನರುಜ್ಜೀವನಗೊಂಡಿತು
ಸಂಸ್ಕೃತಿ ಸಚಿವಾಲಯವು ಮಧ್ಯಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಭೋಪಾಲ್ ನಲ್ಲಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಿತು
2025ರ ಜೂನ್ 25 ರಂದು ಸಂಸ್ಕೃತಿ ಸಚಿವಾಲಯವು ‘ಸಂವಿಧಾನ ಹತ್ಯಾ ದಿವಸ್’ ಅನ್ನು ಆಚರಿಸಿತು
ತಮಿಳುನಾಡಿನಲ್ಲಿ ಚೋಳ ಚಕ್ರವರ್ತಿ ಮೊದಲನೇ ರಾಜೇಂದ್ರ ಚೋಳನ ಜನ್ಮದಿನದ ಅಂಗವಾಗಿ ಸಚಿವಾಲಯವು 'ಆಡಿ ತಿರುವಾತಿರೈ ಉತ್ಸವ'ವನ್ನು ಆಯೋಜಿಸಿತು
‘ಮರಾಠಾ ಮಿಲಿಟರಿ ಲ್ಯಾಂಡ್‌ಸ್ಕೇಪ್ಸ್ ಆಫ್ ಇಂಡಿಯಾ’ ಭಾರತದ 44ನೇ ತಾಣವಾಗಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ
ತ್ರಿವರ್ಣ ಧ್ವಜದ ಭಾವನೆಯೊಂದಿಗೆ ಬಾಂಧವ್ಯವನ್ನು ಇನ್ನಷ್ಟು ಗಾಢವಾಗಿಸುವ ಮೂಲಕ ಭಾರತವು 'ಹರ್ ಘರ್ ತಿರಂಗಾ 2025' ಅನ್ನು ಆಚರಿಸಿತು
ಭಾರತದ ಹಸ್ತಪ್ರತಿ ಪರಂಪರೆಯನ್ನು ಸಂರಕ್ಷಿಸಲು, ಡಿಜಿಟಲೀಕರಣಗೊಳಿಸಲು ಮತ್ತು ಪ್ರಸಾರ ಮಾಡಲು ಮೀಸಲಾದ 'ಜ್ಞಾನ ಭಾರತಂ' ಎಂಬ ಮಹತ್ವದ ರಾಷ್ಟ್ರೀಯ ಉಪಕ್ರಮಕ್ಕೆ ಸಂಸ್ಕೃತಿ ಸಚಿವಾಲಯವು ಚಾಲನೆ ನೀಡಿತು
प्रविष्टि तिथि:
10 DEC 2025 2:21PM by PIB Bengaluru
2025ನೇ ಸಾಲಿನಲ್ಲಿ ಸಂಸ್ಕೃತಿ ಸಚಿವಾಲಯದ ಪ್ರಮುಖ ಉಪಕ್ರಮಗಳು ಮತ್ತು ಸಾಧನೆಗಳು ಈ ಕೆಳಗಿನಂತಿವೆ:
ತಮಿಳುನಾಡು ಮತ್ತು ಕಾಶಿಯ ನಡುವಿನ ಸಾಂಸ್ಕೃತಿಕ ಹಾಗೂ ನಾಗರಿಕತೆಯ ಬಾಂಧವ್ಯವನ್ನು ಆಚರಿಸುವ ಸಲುವಾಗಿ, ಕಾಶಿ ತಮಿಳು ಸಂಗಮಂ 3.0 ಅನ್ನು 2025ರ ಫೆಬ್ರವರಿ 15 ರಿಂದ 24ರವರೆಗೆ ವಾರಣಾಸಿಯಲ್ಲಿ ನಡೆಸಲಾಯಿತು. 869ಕ್ಕೂ ಹೆಚ್ಚು ಕಲಾವಿದರು ಹಾಗೂ 190 ಸ್ಥಳೀಯ ಜಾನಪದ ಮತ್ತು ಶಾಸ್ತ್ರೀಯ ತಂಡಗಳ ಪ್ರದರ್ಶನಗಳೊಂದಿಗೆ, ಕೆಟಿಎಸ್ 3.0 ಸುಮಾರು 2 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿತು, ಸಾಂಸ್ಕೃತಿಕ ಹಾಗೂ ಬೌದ್ಧಿಕ ಸಂಬಂಧಗಳನ್ನು ಬಲಪಡಿಸುವ ಜತೆಗೆ, 'ಏಕ್ ಭಾರತ್ ಶ್ರೇಷ್ಠ ಭಾರತ್' ಭಾವನೆಯನ್ನು ಉತ್ತೇಜಿಸಿತು.
ಸಂಸ್ಕೃತಿ ಸಚಿವಾಲಯವು 2025ರ ನವೆಂಬರ್ 7ರಂದು ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರಗೀತೆ “ವಂದೇ ಮಾತರಂ”ನ 150 ವರ್ಷಗಳ ಸ್ಮರಣಾರ್ಥದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಗಿದ್ದ ಹಾಗೂ ಇಂದಿಗೂ ರಾಷ್ಟ್ರೀಯ ಹೆಮ್ಮೆ ಮತ್ತು ಏಕತೆಯನ್ನು ಉಂಟುಮಾಡುವ ಈ ಕಾಲಾತೀತ ಕೃತಿಯ 150 ವರ್ಷಗಳನ್ನು ಆಚರಿಸುವ ಸಲುವಾಗಿ, 2025ರ ನವೆಂಬರ್ 7ರಿಂದ 2026ರ ನವೆಂಬರ್ 7ರವರೆಗೆ ನಡೆಯಲಿರುವ ವರ್ಷಪೂರ್ತಿಯ ರಾಷ್ಟ್ರವ್ಯಾಪಿ ಸ್ಮರಣಾರ್ಥ ಕಾರ್ಯಕ್ರಮಗಳಿಗೆ ಈ ಸಮಾರಂಭವು ಮುನ್ನುಡಿ ಬರೆಯಿತು. ಇದಕ್ಕಾಗಿ ಸಚಿವಾಲಯವು https://vandemataram150.in/ ವೆಬ್ ಸೈಟ್ ನಲ್ಲಿ ವಿಶೇಷ ಅಭಿಯಾನವೊಂದನ್ನು ಆರಂಭಿಸಿದ್ದು, ಇದರಲ್ಲಿ ಈಗಾಗಲೇ 1.60ಕ್ಕೂ ಹೆಚ್ಚು ಕೋಟಿ ಭಾರತೀಯರು ತಾವು ಹಾಡಿರುವ ವಂದೇ ಮಾತರಂ ಗಾಯನವನ್ನು ರೆಕಾರ್ಡ್ ಮಾಡಿದ್ದಾರೆ.

ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ರಾಷ್ಟ್ರಗೀತೆ “ವಂದೇ ಮಾತರಂ”ನ 150 ವರ್ಷಗಳ ಸ್ಮರಣಾರ್ಥ ಕಾರ್ಯಕ್ರಮದ ಸಂದರ್ಭದಲ್ಲಿ, ಮಾಹಿತಿ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ರಾಷ್ಟ್ರಗೀತೆ ಗಾಯನದಲ್ಲಿ ಭಾಗವಹಿಸಿದರು.
2025ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸಂಸ್ಕೃತಿ ಸಚಿವಾಲಯವು ಭಾರತದ ಶ್ರೀಮಂತ ಬುಡಕಟ್ಟು ಮತ್ತು ಜಾನಪದ ಪರಂಪರೆಯನ್ನು ಬಿಂಬಿಸುವ ‘ಜಯತಿ ಜೈ ಮಮಃ ಭಾರತಂ (ಜೆಜೆಎಂಬಿ)’ ಎಂಬ ಬೃಹತ್ ಸಾಂಸ್ಕೃತಿಕ ಪ್ರದರ್ಶನವನ್ನು ಪ್ರಸ್ತುತಪಡಿಸಿತು. 5,000ಕ್ಕೂ ಹೆಚ್ಚು ಕಲಾವಿದರು 50ಕ್ಕೂ ಹೆಚ್ಚು ವೈವಿಧ್ಯಮಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ಇದು ಯುವ ಶಕ್ತಿ, ಕಲಾತ್ಮಕ ಪರಂಪರೆ ಮತ್ತು ಮಹಿಳಾ ಸಬಲೀಕರಣವನ್ನು ಸಂಕೇತಿಸುವುದರ ಜೊತೆಗೆ, ‘ವಿಕಸಿತ ಭಾರತ’, ‘ವಿರಾಸತ್ ಭಿ ವಿಕಾಸ್ ಭಿ’ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ನಂತಹ ಧ್ಯೇಯವಾಕ್ಯಗಳನ್ನು ಒಳಗೊಂಡಿತ್ತು. 'ಅತಿದೊಡ್ಡ ಭಾರತೀಯ ಜಾನಪದ ವೈವಿಧ್ಯಮಯ ನೃತ್ಯ' ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನಿಂದ ಮಾನ್ಯತೆ ಪಡೆದ ಈ ಪ್ರದರ್ಶನವು, ರೋಮಾಂಚಕ ವೇಷಭೂಷಣಗಳು ಮತ್ತು ಸುಸಂಘಟಿತ ನೃತ್ಯ ಸಂಯೋಜನೆಯ ಮೂಲಕ ಭಾರತದ ‘ವೈವಿಧ್ಯತೆಯಲ್ಲಿ ಏಕತೆ’ಯನ್ನು ಎತ್ತಿ ತೋರಿಸಿತು.

ಸಂಸ್ಕೃತಿ ಸಚಿವಾಲಯವು 2025ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾರತದ ಶ್ರೀಮಂತ ಬುಡಕಟ್ಟು ಮತ್ತು ಜಾನಪದ ಪರಂಪರೆಯನ್ನು ಬಿಂಬಿಸುವ ‘ಜಯತಿ ಜೈ ಮಮಃ ಭಾರತಂ’ ಎಂಬ ಬೃಹತ್ ಸಾಂಸ್ಕೃತಿಕ ಪ್ರದರ್ಶನವನ್ನು ಪ್ರಸ್ತುತಪಡಿಸಿತು.
ಕೋಟ್ಯಂತರ ಯಾತ್ರಾರ್ಥಿಗಳು ಭಾಗವಹಿಸುತ್ತಿದ್ದ ಪ್ರಯಾಗ್ ರಾಜ್ ನ ಮಹಾಕುಂಭದ ಸೆಕ್ಟರ್-7ರಲ್ಲಿ, 10.24 ಎಕರೆ ಪ್ರದೇಶದಲ್ಲಿ ಸಂಸ್ಕೃತಿ ಸಚಿವಾಲಯವು ‘ಕಲಾಗ್ರಾಮ’ವನ್ನು ಸ್ಥಾಪಿಸಿತ್ತು (2025ರ ಜನವರಿ 13 ರಿಂದ ಫೆಬ್ರವರಿ 26 ರವರೆಗೆ). 2025ರ ಜನವರಿ 12 ರಂದು ಕೇಂದ್ರ ಸಂಸ್ಕೃತಿ ಸಚಿವರಿಂದ ಉದ್ಘಾಟನೆಗೊಂಡ ಈ ಕಲಾಗ್ರಾಮವು, ದೇಶಾದ್ಯಂತದ ಸುಮಾರು 15,000 ಕಲಾವಿದರು ಮತ್ತು ಕುಶಲಕರ್ಮಿಗಳಿಗೆ 45 ದಿನಗಳ ಕಾಲ ಪರಿಣಾಮಕಾರಿ ವೇದಿಕೆಯನ್ನು ಒದಗಿಸಿತು. ಈ ಮೂಲಕ ಭಾರತದ ವೈವಿಧ್ಯಮಯ ನೃತ್ಯ, ಸಂಗೀತ, ಆಹಾರ ಪದ್ಧತಿಗಳು, ಕಲೆ ಮತ್ತು ಕರಕುಶಲ ಸಂಪ್ರದಾಯಗಳನ್ನು ಪ್ರದರ್ಶಿಸಲಾಯಿತು. ಇದು ಸಂದರ್ಶಕರಿಗೆ ಈ ಕಾರ್ಯಕ್ರಮವನ್ನು ವೀಕ್ಷಿಸಲು ಮತ್ತು ಸಕ್ರಿಯವಾಗಿ ಪಾಲ್ಗೊಳ್ಳಲು ಅನನ್ಯ ಅವಕಾಶವನ್ನು ಒದಗಿಸಿದ್ದು ಮಾತ್ರವಲ್ಲದೆ, ಮಹಾಕುಂಭಕ್ಕೆ ಭೇಟಿ ನೀಡುವ ಜನಸಮೂಹಕ್ಕೆ ಸಮುದಾಯದ ಬಾಂಧವ್ಯವನ್ನು ಬಲಪಡಿಸಲು ಹಾಗೂ ಆರ್ಥಿಕ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸಲು ಒಂದು ಅವಕಾಶವಾಗಿತ್ತು. ಇದಲ್ಲದೆ, ನಮ್ಮ ‘ವೈವಿಧ್ಯತೆಯಲ್ಲಿ ಏಕತೆ’ಯ ಸೌಂದರ್ಯವನ್ನು ಅನಾವರಣಗೊಳಿಸುವ ಮೂಲಕ ಮತ್ತು “ಏಕ್ ಭಾರತ್ ಶ್ರೇಷ್ಠ ಭಾರತ್” ಆಶಯವನ್ನು ಪೋಷಿಸುವ ಮೂಲಕ, ವಿವಿಧ ಸಮುದಾಯಗಳ ನಡುವೆ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಪ್ರಶಂಸಿಸಲು ಇದು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿತು. ಮಹಾಕುಂಭ ಲೋಗೋ, 2025ರ ಪ್ರೊಜೆಕ್ಷನ್ ಮ್ಯಾಪಿಂಗ್: ವಿವಿಧ ಕೇಂದ್ರ ರಕ್ಷಿತ ಸ್ಮಾರಕಗಳ ಮೇಲೆ ಮಹಾಕುಂಭದ ಲೋಗೋವನ್ನು ಪ್ರದರ್ಶಿಸಲಾಯಿತು.
ಈ ಕಲಾಗ್ರಾಮದ ಕೆಲವು ಮುಖ್ಯಾಂಶಗಳು ಹೀಗಿವೆ:
- ಮುಖ್ಯ ದ್ವಾರ: 635 ಅಡಿ ಅಗಲ ಮತ್ತು 54 ಅಡಿ ಎತ್ತರವಿದ್ದು, 12 ಜ್ಯೋತಿರ್ಲಿಂಗಗಳು ಮತ್ತು ಶಿವನು ಹಾಲಾಹಲವನ್ನು ಸೇವಿಸಿದ ಕಥೆಯನ್ನು ಚಿತ್ರಿಸುತ್ತದೆ. ಇದು ಕಲೆ ಮತ್ತು ಆಧ್ಯಾತ್ಮಿಕತೆಯ ಸಂಗಮ.
- ಅನುಭೂತ್ ಮಂಟಪ: ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದುಬಂದ ಕಥೆಯನ್ನು ವಿವರಿಸುವ 360 ಡಿಗ್ರಿ ತಲ್ಲೀನಗೊಳಿಸುವ ಅನುಭವ.
- ಅವಿರಲ್ ಶಾಶ್ವತ್ ಕುಂಭ್: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI), ಭಾರತೀಯ ರಾಷ್ಟ್ರೀಯ ಪತ್ರಾಗಾರ (NAI) ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (IGNCA) ದಿಂದ ಡಿಜಿಟಲ್ ಪ್ರದರ್ಶನ.
- ಆಹಾರ ವಲಯ: ಪ್ರಯಾಗರಾಜ್‌ನ ಸ್ಥಳೀಯ ಪಾಕಪದ್ಧತಿಯ ಹೊರತಾಗಿ ಎಲ್ಲಾ ವಲಯ ಸಾಂಸ್ಕೃತಿಕ ಕೇಂದ್ರಗಳಿಂದ ಸಾತ್ವಿಕ ಪಾಕಪದ್ಧತಿ.
- ಸಂಸ್ಕೃತಿ ಅಂಗಳಗಳು: ಏಳು ವಲಯ ಸಾಂಸ್ಕೃತಿಕ ಕೇಂದ್ರಗಳ ಅಂಗಳದಲ್ಲಿ ಸಾಂಪ್ರದಾಯಿಕ ಭಾರತೀಯ ಕರಕುಶಲ ಮತ್ತು ಕೈಮಗ್ಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ.


ಪ್ರಯಾಗ್ ರಾಜ್ ನ ಸೆಕ್ಟರ್ -7 ರಲ್ಲಿ 10.24 ಎಕರೆ ಭೂಮಿಯಲ್ಲಿ ಸಂಸ್ಕೃತಿ ಸಚಿವಾಲಯವು ಮಹಾಕುಂಭ ಕಲಾಗ್ರಾಮವನ್ನು ಸ್ಥಾಪಿಸಿತ್ತು
ಗೌಡಿಯ ಮಿಷನ್ ನ ಸ್ಥಾಪಕರಾದ ಶ್ರೀಲ ಪ್ರಭುಪಾದರ 150ನೇ ಆಗಮನದ (ಜಯಂತಿ) ಸ್ಮರಣಾರ್ಥದ ಸಮಾರೋಪ ಸಮಾರಂಭವನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಸೈನ್ಸ್ ಸಿಟಿಯಲ್ಲಿ 2025ರ ಫೆಬ್ರವರಿ 28 ರಂದು ಆಯೋಜಿಸಲಾಗಿತ್ತು. ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಶ್ರೀಲ ಪ್ರಭುಪಾದರ ಜೀವನಕ್ಕೆ ಸಂಬಂಧಿಸಿದ ವಸ್ತುಗಳು ಮತ್ತು ಕಲಾಕೃತಿಗಳನ್ನು ಒಳಗೊಂಡಂತೆ ಅವರ ಜೀವನವನ್ನು ಬಿಂಬಿಸುವ ಪ್ರದರ್ಶನವನ್ನು ಒಳಗೊಂಡಿತ್ತು.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, 2025ರ ಮಾರ್ಚ್ 18 ರಂದು ಶ್ರೀರಂಗಂ ದೇವಸ್ಥಾನದಲ್ಲಿ ಕೇಂದ್ರ ಸಂಸ್ಕೃತಿ ಸಚಿವರಿಂದ 'ಕಂಬ ರಾಮಾಯಣ ಉತ್ಸವ'ದ ಉದ್ಘಾಟನೆಯೊಂದಿಗೆ ತಮಿಳುನಾಡಿನಲ್ಲಿ ಕಂಬ ರಾಮಾಯಣ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲಾಯಿತು. ಇದರ ನಂತರ 20 ದೇವಾಲಯಗಳಲ್ಲಿ ಕಂಬ ರಾಮಾಯಣ ಪ್ರದರ್ಶನ ನಡೆಯಿತು ಮತ್ತು 2025ರ ಏಪ್ರಿಲ್ 6ರಂದು ರಾಮನವಮಿಯ ದಿನದಂದು ಕಂಬನ್ ಮೇಡುನಲ್ಲಿ ಬೃಹತ್ ಸಮಾರೋಪದೊಂದಿಗೆ ಇದು ಸಂಪನ್ನಗೊಂಡಿತು. ಈ ಒಂದು ತಿಂಗಳ ಉತ್ಸವವು ಈಗ ವಾರ್ಷಿಕ ಕಾರ್ಯಕ್ರಮವಾಗಲಿದ್ದು, ಪ್ರತಿ ವರ್ಷ ಮಾರ್ಚ್ ನಲ್ಲಿ ತಿರುಚ್ಚಿರಾಪ್ಪಳ್ಳಿಯ ಶ್ರೀರಂಗಂ ದೇವಸ್ಥಾನದಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಏಪ್ರಿಲ್ ನಲ್ಲಿ ಕಂಬನ್ ಮೇಡುನಲ್ಲಿ ರಾಮನವಮಿ ಆಚರಣೆ ಮತ್ತು ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳಲಿದೆ.

ತಮಿಳುನಾಡಿನ ಶ್ರೀರಂಗಂ ದೇವಸ್ಥಾನದಲ್ಲಿ ಕಂಬ ರಾಮಾಯಣ ಉತ್ಸವದ ಉದ್ಘಾಟನಾ ಸಮಾರಂಭ
2025ರ ಮೇ 31 ರಂದು, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ಮಧ್ಯಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಭೋಪಾಲ್ ನ ಜಂಬೂರಿ ಮೈದಾನದಲ್ಲಿ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತು. ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಲೋಕಮಾತೆ ದೇವಿ ಅಹಲ್ಯಾಬಾಯಿ ಮಹಿಳಾ ಸಬಲೀಕರಣ ಮಹಾಸಮ್ಮೇಳನ'ವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಅಹಲ್ಯಾಬಾಯಿ ಅವರ ಶಾಶ್ವತ ಪರಂಪರೆಗೆ ಗೌರವ ಸಲ್ಲಿಸಿದರು. ಪ್ರಧಾನ ಮಂತ್ರಿಯವರು ಅವರ ಗೌರವಾರ್ಥ ಸ್ಮರಣಾರ್ಥ ಅಂಚೆ ಚೀಟಿ ಮತ್ತು ವಿಶೇಷ ನಾಣ್ಯವನ್ನು ಇದೇ ವೇಳೆ ಬಿಡುಗಡೆ ಮಾಡಿದರು. ಆಚರಣೆಯ ಭಾಗವಾಗಿ, ಬುಡಕಟ್ಟು, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳಿಗೆ ನೀಡಿದ ಕೊಡುಗೆಗಾಗಿ ಗೌರವಾನ್ವಿತ ಪ್ರಧಾನ ಮಂತ್ರಿಯವರು ಖ್ಯಾತ ಮಹಿಳಾ ಕಲಾವಿದೆ ಡಾ. ಜಯಮತಿ ಕಶ್ಯಪ್ ಅವರಿಗೆ 'ದೇವಿ ಅಹಲ್ಯಾಬಾಯಿ ಪ್ರಶಸ್ತಿ'ಯನ್ನು ಪ್ರದಾನ ಮಾಡಿದರು. ತಮ್ಮ ಭೇಟಿಯ ಸಮಯದಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿಯವರು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಮತ್ತು ಪರಂಪರೆಯ ಕುರಿತಾದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ರೂಪಿಸುವಲ್ಲಿ ಅವರ ಮಹತ್ವದ ಪಾತ್ರವನ್ನು ಎತ್ತಿ ತೋರಿಸುವ ಕಿರುಚಿತ್ರವನ್ನು ವೀಕ್ಷಿಸಿದರು.
ಸಂಸ್ಕೃತಿ ಸಚಿವಾಲಯವು ದೆಹಲಿ ಸರ್ಕಾರದ ಸಹಯೋಗದೊಂದಿಗೆ, 1975ರಲ್ಲಿ ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ 50ನೇ ವರ್ಷದ ನೆನಪಿಗಾಗಿ 2025ರ ಜೂನ್ 25ರಂದು ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ‘ಸಂವಿಧಾನ ಹತ್ಯಾ ದಿವಸ್’ ಅನ್ನು ಆಚರಿಸಿತು. ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಮಹತ್ವವನ್ನು ಈ ದಿನವು ನೆನಪಿಸಿತು.

ದೆಹಲಿ ಸರ್ಕಾರದ ಸಹಯೋಗದೊಂದಿಗೆ ಸಂಸ್ಕೃತಿ ಸಚಿವಾಲಯವು ಜೂನ್ 25, 2025 ರಂದು ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ 'ಸಂವಿಧಾನ ಹತ್ಯೆ ದಿವಸ್' ಆಚರಿಸಿತು
ಸಂಸ್ಕೃತಿ ಸಚಿವಾಲಯವು ಚೋಳ ಚಕ್ರವರ್ತಿ ಮೊದಲನೇ ರಾಜೇಂದ್ರ ಚೋಳನ ಜನ್ಮದಿನದ ಅಂಗವಾಗಿ, ತಮಿಳುನಾಡಿನ ಗಂಗೈಕೊಂಡ ಚೋಳಪುರಂನಲ್ಲಿ 2025ರ ಜುಲೈ 23 ರಿಂದ 27ರವರೆಗೆ 'ಆಡಿ ತಿರುವಾತಿರೈ ಉತ್ಸವ'ವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಭಾರತೀಯ ನೌಕಾ ಇತಿಹಾಸದ ಮೈಲಿಗಲ್ಲಾದ ಚೋಳರ ಕಡಲ ದಂಡಯಾತ್ರೆಯ 1,000 ವರ್ಷಗಳ ವಾರ್ಷಿಕೋತ್ಸವವನ್ನೂ ಸ್ಮರಿಸಿತು. ಈ ಉತ್ಸವವು ತಮಿಳು ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ಶೈವ ಸಿದ್ಧಾಂತದ ಅಂಶಗಳಲ್ಲಿ ಆಳವಾಗಿ ಬೇರೂರಿದೆ. ಯುನೆಸ್ಕೋ (UNESCO) ಮಾನ್ಯತೆ ಪಡೆದ ಸ್ಮಾರಕವಾದ ಗಂಗೈಕೊಂಡ ಚೋಳೀಶ್ವರಂ ದೇವಾಲಯದಲ್ಲಿ ನಡೆದ ಈ 5 ದಿನಗಳ ಉತ್ಸವದಲ್ಲಿ ಸ್ಥಳೀಯ ಕಲಾವಿದರು ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭವನ್ನು ಗುರುತಿಸಲು ಸ್ಮರಣಾರ್ಥ ನಾಣ್ಯವನ್ನೂ ಬಿಡುಗಡೆ ಮಾಡಲಾಯಿತು. ಸಮಾರೋಪದ ದಿನದಂದು ಗೌರವಾನ್ವಿತ ಪ್ರಧಾನ ಮಂತ್ರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರಕ್ಕೆ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ನೀಡಿದ ಕೊಡುಗೆಗಳಿಗೆ ರಾಷ್ಟ್ರೀಯ ಗೌರವವನ್ನು ಸಲ್ಲಿಸುವ ಸಲುವಾಗಿ, ಅವರ 125ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 2025ರ ಜುಲೈ 9 ರಂದು ನವದೆಹಲಿಯ ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. 2025ರ ಜುಲೈನಿಂದ 2027ರ ಜುಲೈವರೆಗೆ ನಡೆಯಲಿರುವ ಎರಡು ವರ್ಷಗಳ ದೀರ್ಘಾವಧಿಯ ಸ್ಮರಣಾರ್ಥ ಆಚರಣೆಯ ಭಾಗವಾಗಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಗೌರವಾರ್ಥ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಾಯಿತು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125 ನೇ ಜನ್ಮ ದಿನಾಚರಣೆಯ ಉದ್ಘಾಟನಾ ಸಮಾರಂಭವು ಜುಲೈ 9, 2025 ರಂದು ನವದೆಹಲಿಯ ಸಿರಿ ಫೋರ್ಟ್ ಸಭಾಂಗಣದಲ್ಲಿ ನಡೆಯಿತು
ಉತ್ತರ ಪ್ರದೇಶದ ಪಿಪ್ರಹ್ವಾದಲ್ಲಿ 1898ರಲ್ಲಿ ಪತ್ತೆಯಾಗಿದ್ದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳ ಒಂದು ಭಾಗವನ್ನು ಸೋಥೆಬಿ ಸಂಸ್ಥೆಯು ಹರಾಜಿಗೆ ಹಾಕಿತ್ತು. ಸಚಿವಾಲಯವು ಈ ಬಗ್ಗೆ ಕಠಿಣ ನಿಲುವು ತಳೆದು, ಹರಾಜನ್ನು ತಡೆಯಲು ಕಾನೂನು ನೋಟಿಸ್ ಜಾರಿ ಮಾಡಿತು. ಕಾನೂನು ಮತ್ತು ನೈತಿಕ ಒತ್ತಡದ ಪರಿಣಾಮವಾಗಿ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿತು ಮತ್ತು ಸಚಿವಾಲಯವು ಇದನ್ನು ಮಾತುಕತೆಗೆ ಒಂದು ಅವಕಾಶವಾಗಿ ಬಳಸಿಕೊಂಡಿತು. ಈ ಅಮೂಲ್ಯ ಅವಶೇಷಗಳು 127 ವರ್ಷಗಳ ನಂತರ, 2025ರ ಜುಲೈ 30 ರಂದು ಭಾರತಕ್ಕೆ ಮರಳಿವೆ. ಹಾಂಗ್ ಕಾಂಗ್ ನಲ್ಲಿ ನಡೆಯಲಿದ್ದ ಹರಾಜನ್ನು ತಡೆಯಲು ನಡೆಸಿದ ಸಂಘಟಿತ ಕಾನೂನು ಮತ್ತು ರಾಜತಾಂತ್ರಿಕ ಪ್ರಯತ್ನಗಳ ನಂತರ, ಭಾರತೀಯ ಕೈಗಾರಿಕಾ ಸಂಸ್ಥೆಯೊಂದು ಖಾಸಗಿಯಾಗಿ ಇವುಗಳನ್ನು ಸ್ವಾಧೀನಪಡಿಸಿಕೊಂಡು ಭಾರತ ಸರ್ಕಾರಕ್ಕೆ ಹಸ್ತಾಂತರಿಸಿತು. ಚಿನ್ನ, ಗಾರ್ನೆಟ್ ಮತ್ತು ಸ್ಪಟಿಕದ ಆಭರಣಗಳನ್ನು ಒಳಗೊಂಡಿರುವ ಈ ಅವಶೇಷಗಳನ್ನು ಯಶಸ್ವಿಯಾಗಿ ಭಾರತಕ್ಕೆ ಮರಳಿ ತರಲಾಗಿದೆ.

1898ರಲ್ಲಿ ಉತ್ತರ ಪ್ರದೇಶದ ಪಿಪ್ರಾಹ್ವಾದಲ್ಲಿ ಪತ್ತೆಯಾದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳನ್ನು ಸಂಸ್ಕೃತಿ ಸಚಿವಾಲಯ ಯಶಸ್ವಿಯಾಗಿ ಪಡೆದುಕೊಂಡಿತು
ಯುನೆಸ್ಕೋ ತನ್ನ ವಿಶ್ವ ಪಾರಂಪರಿಕ ಸಮಿತಿಯ 47ನೇ ಅಧಿವೇಶನದಲ್ಲಿ, 2024-25ರ ಸಾಲಿಗೆ ಭಾರತದ ಅಧಿಕೃತ ನಾಮನಿರ್ದೇಶನವಾಗಿದ್ದ ‘ಮರಾಠಾ ಮಿಲಿಟರಿ ಲ್ಯಾಂಡ್ ಸ್ಕೇಪ್ಸ್ ಆಫ್ ಇಂಡಿಯಾ’ (ಭಾರತದ ಮರಾಠಾ ಸೈನ್ಯದ ಭೂದೃಶ್ಯಗಳು) ಅನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಿತು. ತಜ್ಞರ ಸಮಿತಿಯಾದ ಐಕಾಮೋಸ್ (ICOMOS) ಇದಕ್ಕೆ ನಕಾರಾತ್ಮಕ ವರದಿಯನ್ನು ನೀಡಿತ್ತು. ಆದರೆ ಸಂಸ್ಕೃತಿ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಿ, ಭಾರತವನ್ನು ಬೆಂಬಲಿಸುವಂತೆ ಸದಸ್ಯ ರಾಷ್ಟ್ರಗಳ ಮನವೊಲಿಸುವಲ್ಲಿ ಯಶಸ್ವಿಯಾಯಿತು. ಈ ಮಾನ್ಯತೆ ಪಡೆದ ಭಾರತದ 44ನೇ ತಾಣ ಇದಾಗಿದೆ. ಅತಿ ಹೆಚ್ಚು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಹೊಂದುವ ಮೂಲಕ ಭಾರತವು ಈಗ ಜಾಗತಿಕವಾಗಿ 6ನೇ ಸ್ಥಾನದಲ್ಲಿದೆ ಮತ್ತು ಏಷ್ಯಾ-ಪೆಸಿಫಿಕ್ ವಲಯದಲ್ಲಿ 2ನೇ ಸ್ಥಾನದಲ್ಲಿದೆ.



‘ಮರಾಠಾ ಮಿಲಿಟರಿ ಲ್ಯಾಂಡ್‌ಸ್ಕೇಪ್ಸ್ ಆಫ್ ಇಂಡಿಯಾ’ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ
ವಿವಿಧ ವಲಯಗಳಲ್ಲಿನ ಪ್ರಗತಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಶ್ರಮವನ್ನು ಗುರುತಿಸುವ “ನಯಾ ಭಾರತ್” (ನವ ದೆಹಲಿ) ಎಂಬ ಧ್ಯೇಯವಾಕ್ಯದೊಂದಿಗೆ, 2025ರ ಆಗಸ್ಟ್ 15 ರಂದು ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭವನ್ನು ಗುರುತಿಸಲು, ದೇಶಾದ್ಯಂತ 'ಹರ್ ಘರ್ ತಿರಂಗಾ' ಅಭಿಯಾನವನ್ನು ಆಯೋಜಿಸಲಾಯಿತು. ರಕ್ಷಿತ ಸ್ಮಾರಕಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು:
- ಹಂತ I (2ನೇ – 8ನೇ ಆಗಸ್ಟ್, 2025): ತಿರಂಗಾ ರಂಗೋಲಿ.
- ಹಂತ II (9ನೇ – 12ನೇ ಆಗಸ್ಟ್, 2025): ಸೆಲ್ಫಿ ಬೂತ್‌ಗಳ ಸ್ಥಾಪನೆ, ಬ್ಯಾನರ್‌ಗಳ ಪ್ರದರ್ಶನ ಮತ್ತು ತಿರಂಗಾ ಯಾತ್ರೆ.
- ಹಂತ III (13ನೇ – 15ನೇ ಆಗಸ್ಟ್, 2025): ರಕ್ಷಿತ ಸ್ಮಾರಕಗಳ ಮೇಲೆ ತ್ರಿವರ್ಣ ದೀಪಾಲಂಕಾರ ಮತ್ತು ರಾಷ್ಟ್ರಧ್ವಜದ ಪ್ರೊಜೆಕ್ಷನ್.
ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಈ ವರ್ಷದ ಹರ್ ಘರ್ ತಿರಂಗಾ ಅಭಿಯಾನವು ವಿಶಿಷ್ಟವಾಗಿತ್ತು. ಸ್ವಚ್ಛತೆಯ ಕುರಿತಾದ ಜಂಟಿ ಅಭಿಯಾನಕ್ಕಾಗಿ ಸಚಿವಾಲಯವು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ವರ್ಷದ ಅಭಿಯಾನದಲ್ಲಿ, ಮಿತವ್ಯಯ ಕ್ರಮಗಳನ್ನು ಸಹ ಕೈಗೊಳ್ಳಲಾಯಿತು, ಇದರ ಪರಿಣಾಮವಾಗಿ ವೆಚ್ಚದಲ್ಲಿ 15% ಇಳಿಕೆ ಕಂಡುಬಂದಿದೆ, ಆದರೆ ವ್ಯಾಪ್ತಿ ಮತ್ತು ಸೆಲ್ಫಿ ಅಪ್‌ಲೋಡ್‌ಗಳು ಕಳೆದ ವರ್ಷದ ಅಭಿಯಾನಕ್ಕಿಂತ 50% ಹೆಚ್ಚಾಗಿದೆ. 'ಸಮಗ್ರ ಸರ್ಕಾರಿ ವಿಧಾನ'ವನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ರಾಜ್ಯಗಳು ಹಾಗೂ ರಾಜ್ಯ ಸಂಸ್ಥೆಗಳನ್ನು ಭಾಗವಹಿಸುವಂತೆ ಉತ್ತೇಜಿಸುವ ಮೂಲಕ ಇದನ್ನು ಸಾಧಿಸಲು ಸಾಧ್ಯವಾಯಿತು. ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಆರಂಭದ ಸಂಕೇತವಾಗಿ 2025ರ ಆಗಸ್ಟ್ 12 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಭಾರತೀಯ ಧ್ವಜವನ್ನು ಪ್ರದರ್ಶಿಸುವ ಸಾವಿರಾರು ಬೈಕ್ ಸವಾರರನ್ನು ಒಳಗೊಂಡಿದ್ದ ಈ ರ್ಯಾಲಿಯಲ್ಲಿ ಕೇಂದ್ರ ಸಚಿವರು, ದೆಹಲಿ ಸರ್ಕಾರದ ಸಚಿವರು ಮತ್ತು ಸಂಸದರು ಭಾಗವಹಿಸಿದ್ದರು.

ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಲು, ಸಂಸ್ಕೃತಿ ಸಚಿವಾಲಯವು ದೇಶಾದ್ಯಂತ ಹರ್ ಘರ್ ತಿರಂಗ ಅಭಿಯಾನವನ್ನು ಆಯೋಜಿಸಿತ್ತು
ರಾಷ್ಟ್ರೀಯ ಸ್ವಯಂಸೇವಕ ಸಂಘವು 2025ರ ಅಕ್ಟೋಬರ್ 1 ರಂದು ತನ್ನ 100ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಸಂದರ್ಭದಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿಗಳು ₹100 ಮುಖಬೆಲೆಯ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದರು, ಇದು ಸ್ವತಂತ್ರ ಭಾರತದಲ್ಲಿ "ಭಾರತ ಮಾತೆ"ಯ ಚಿತ್ರವನ್ನು ಹೊಂದಿರುವ ಮೊದಲ ನಾಣ್ಯವಾಗಿದೆ. ಇದರೊಂದಿಗೆ, ಶತಮಾನೋತ್ಸವದ ಗೌರವಾರ್ಥವಾಗಿ, 1963ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದನ್ನು ಸ್ಮರಿಸುವ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರು.

ಶತಮಾನೋತ್ಸವದ ಗೌರವಾರ್ಥವಾಗಿ, ಗೌರವಾನ್ವಿತ ಪ್ರಧಾನ ಮಂತ್ರಿಗಳು ₹100 ಮುಖಬೆಲೆಯ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಹಾಗೂ ಆರ್ ಎಸ್ ಎಸ್ ಸ್ವಯಂಸೇವಕರು ಭಾಗವಹಿಸಿದ್ದ 1963ರ ಗಣರಾಜ್ಯೋತ್ಸವ ಪರೇಡ್ ಅನ್ನು ಸ್ಮರಿಸುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು
ಭಾರತದ ಹಸ್ತಪ್ರತಿ ಪರಂಪರೆಯನ್ನು ಸಂರಕ್ಷಿಸಲು, ಡಿಜಿಟಲೀಕರಣಗೊಳಿಸಲು ಮತ್ತು ಪ್ರಸಾರ ಮಾಡಲು ಕೈಗೊಂಡಿರುವ ಐತಿಹಾಸಿಕ ರಾಷ್ಟ್ರೀಯ ಉಪಕ್ರಮವಾದ 'ಜ್ಞಾನ ಭಾರತಂ'ನ ಭಾಗವಾಗಿ ಸಚಿವಾಲಯವು ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಉದ್ಘಾಟನೆಯ ಅಂಗವಾಗಿ, 2025ರ ಸೆಪ್ಟೆಂಬರ್ 11 ರಿಂದ 13 ರವರೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ಎಂಟು ವಿಷಯಗಳನ್ನು ಒಳಗೊಂಡ “ಹಸ್ತಪ್ರತಿ ಪರಂಪರೆಯ ಮೂಲಕ ಭಾರತದ ಜ್ಞಾನ ಪರಂಪರೆಯನ್ನು ಮರುಪಡೆಯುವುದು” ಎಂಬ ವಿಷಯದ ಕುರಿತು ಪ್ರಪ್ರಥಮ ‘ಜ್ಞಾನ ಭಾರತಂ ಅಂತಾರಾಷ್ಟ್ರೀಯ ಸಮ್ಮೇಳನ’ವನ್ನು ನಡೆಸಲಾಯಿತು. ಇದರಲ್ಲಿ ಭಾರತ ಮತ್ತು ವಿದೇಶಗಳಿಂದ 1,100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. 2025ರ ಸೆಪ್ಟೆಂಬರ್ 12 ರಂದು, ಗೌರವಾನ್ವಿತ ಪ್ರಧಾನ ಮಂತ್ರಿಗಳು ‘ಜ್ಞಾನ ಭಾರತಂ ವೆಬ್ ಪೋರ್ಟಲ್’ ಅನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು, ಭಾರತದ ಜ್ಞಾನ ಪರಂಪರೆಯು ಸಂರಕ್ಷಣೆ, ಆವಿಷ್ಕಾರ ಮತ್ತು ಸೇರ್ಪಡೆ ಹಾಗೂ ಅಳವಡಿಕೆ ಎಂಬ ಮೂರು ಆಧಾರಸ್ತಂಭಗಳ ಮೇಲೆ ನಿಂತಿದೆ ಎಂದು ಒತ್ತಿ ಹೇಳಿದರು. 'ವಿಕಸಿತ ಭಾರತ 2047'ರ ಆಶಯದೊಂದಿಗೆ ತನ್ನ ಹಸ್ತಪ್ರತಿ ಪರಂಪರೆಯನ್ನು ರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸುವ 'ದೆಹಲಿ ಘೋಷಣೆ'ಯೊಂದಿಗೆ 2025ರ ಸೆಪ್ಟೆಂಬರ್ 13 ರಂದು ಸಮ್ಮೇಳನವು ಮುಕ್ತಾಯಗೊಂಡಿತು.

ಭಾರತದ ಜ್ಞಾನ ಪರಂಪರೆಯು ಸಂರಕ್ಷಣೆ, ಆವಿಷ್ಕಾರ ಮತ್ತು ಸೇರ್ಪಡೆ ಹಾಗೂ ಅಳವಡಿಕೆ ಎಂಬ ಮೂರು ಸ್ತಂಭಗಳನ್ನು ಆಧರಿಸಿದೆ ಎಂದು ಒತ್ತಿ ಹೇಳುತ್ತಾ, ಗೌರವಾನ್ವಿತ ಪ್ರಧಾನ ಮಂತ್ರಿಗಳು ‘ಜ್ಞಾನ ಭಾರತಂ ವೆಬ್ ಪೋರ್ಟಲ್’ ಅನ್ನು ಔಪಚಾರಿಕವಾಗಿ ಉದ್ಘಾಟಿಸಿದರು
ಸಂಸ್ಕೃತಿ ಸಚಿವಾಲಯದ ಪ್ರಮುಖ ಉಪಕ್ರಮವಾದ 'ಜ್ಞಾನ ಭಾರತಂ', ದೇಶದಾದ್ಯಂತದ 17 ಪ್ರಮುಖ ಸಂಸ್ಥೆಗಳೊಂದಿಗೆ ತಿಳುವಳಿಕಾ ಒಪ್ಪಂದಗಳಿಗೆ (MoU) ಸಹಿ ಹಾಕುವ ಮೂಲಕ 2025ರ ಅಕ್ಟೋಬರ್ 25 ರಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿತು. ಈ ಸಮಾರಂಭವು ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಜೈಪುರ ಹೌಸ್) ನಲ್ಲಿ ನಡೆಯಿತು.
ಸೇವಾ ಪರ್ವ 2025 ಅನ್ನು 2025ರ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಯಶಸ್ವಿಯಾಗಿ ಆಚರಿಸಲಾಯಿತು. ಇದು ಸೇವೆ, ಸೃಜನಶೀಲತೆ ಮತ್ತು ನಾಗರಿಕರ ಭಾಗವಹಿಸುವಿಕೆಯ ಬೃಹತ್ ಆಂದೋಲನವಾಗಿ ರೂಪುಗೊಂಡಿತು. ಆಚರಣೆಯ ಭಾಗವಾಗಿ, ಸಚಿವಾಲಯವು ತನ್ನ ನೋಡಲ್ ಸಂಸ್ಥೆಗಳ ಮೂಲಕ ದೇಶದಾದ್ಯಂತ ಗುರುತಿಸಲಾದ 75 ಸ್ಥಳಗಳಲ್ಲಿ “ವಿಕಸಿತ ಭಾರತ ಕೇ ರಂಗ್, ಕಲಾ ಕೇ ಸಂಗ್” ಎಂಬ ವಿಷಯದ ಅಡಿಯಲ್ಲಿ ಒಂದು ದಿನದ ಕಲಾ ಕಾರ್ಯಾಗಾರಗಳನ್ನು ಆಯೋಜಿಸಿತು. ಪ್ರತಿ ಕಾರ್ಯಾಗಾರದಲ್ಲಿ ಶಾಲಾ ವಿದ್ಯಾರ್ಥಿಗಳು, ಕಾಲೇಜು ಯುವಜನರು, ವೃತ್ತಿಪರ ಕಲಾವಿದರು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳು ಒಗ್ಗೂಡಿ “ಸೇವಾ ಪರ್ವ್ – ವಿಕಸಿತ ಭಾರತದ ದೃಷ್ಟಿಕೋನ” ಎಂಬ ವಿಷಯದ ಮೇಲೆ ಕಲಾಕೃತಿಗಳನ್ನು ರಚಿಸಿದರು. ಇದಲ್ಲದೆ, ಸಚಿವಾಲಯದ ಅಡಿಯಲ್ಲಿರುವ ಸಂಸ್ಥೆಗಳು ಪ್ರಮುಖ ಪಾರಂಪರಿಕ ತಾಣಗಳಲ್ಲಿ 'ಸ್ವಚ್ಛತಾ ಹೀ ಸೇವಾ' ಅಭಿಯಾನಗಳನ್ನು ಕೈಗೊಂಡವು. ಈ ಉಪಕ್ರಮಗಳು ಸೇವೆ ಮತ್ತು ಪಾರಂಪರಿಕ ಸಂರಕ್ಷಣೆಯನ್ನು ಸಾಂಸ್ಕೃತಿಕ ಅಭಿವ್ಯಕ್ತಿಯೊಂದಿಗೆ ಸಂಯೋಜಿಸಿದವು. ಅಲ್ಲದೆ, ಸೃಜನಶೀಲತೆಯನ್ನು ನಾಗರಿಕ ಪ್ರಜ್ಞೆಯೊಂದಿಗೆ ಜೋಡಿಸುವ ಆಶಯವನ್ನು ಇವು ಬಲಪಡಿಸಿದವು.

ಸೇವಾ ಪರ್ವ 2025ರ ಅಂಗವಾಗಿ, ಸಂಸ್ಕೃತಿ ಸಚಿವಾಲಯವು ತನ್ನ ನೋಡಲ್ ಸಂಸ್ಥೆಗಳ ಮೂಲಕ ದೇಶಾದ್ಯಂತ ಗುರುತಿಸಲಾದ 75 ಸ್ಥಳಗಳಲ್ಲಿ “ವಿಕಸಿತ ಭಾರತ ಕೇ ರಂಗ್, ಕಲಾ ಕೇ ಸಂಗ್” ಎಂಬ ವಿಷಯದ ಅಡಿಯಲ್ಲಿ ಒಂದು ದಿನದ ಕಲಾ ಕಾರ್ಯಾಗಾರಗಳನ್ನು ಆಯೋಜಿಸಿತು
ರಾಷ್ಟ್ರೀಯ ಏಕತಾ ದಿವಸ್ (ಅಕ್ಟೋಬರ್ 31, 2025) ರಂದು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯನ್ನು ಪ್ರಸ್ತುತಪಡಿಸಿತು. ಈ ಸಂದರ್ಭದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ಗೌರವಾನ್ವಿತ ಪ್ರಧಾನ ಮಂತ್ರಿಗಳು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ಸಂಗೀತ ನಾಟಕ ಅಕಾಡೆಮಿ ಮತ್ತು ಪಶ್ಚಿಮ ವಲಯ ಸಾಂಸ್ಕೃತಿಕ ಕೇಂದ್ರಗಳು ರೂಪಿಸಿದ “ಲೋಹ ಪುರುಷ್ ನಮಸ್ತುಭ್ಯಂ” ಎಂಬ ಬೃಹತ್ ನೃತ್ಯ ಸಂಯೋಜನೆಯು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಇದರಲ್ಲಿ ಭಾರತದಾದ್ಯಂತದ 800ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ರಾಷ್ಟ್ರೀಯ ಏಕತಾ ದಿವಸ್ ರಂದು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಗೌರವಾನ್ವಿತ ಪ್ರಧಾನಮಂತ್ರಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು
ಸಂಸ್ಕೃತಿ ಸಚಿವಾಲಯವು ಇ-ತ್ಯಾಜ್ಯ ವಿಲೇವಾರಿಗೆ ವಿಶೇಷ ಒತ್ತು ನೀಡುವುದರೊಂದಿಗೆ ‘ವಿಶೇಷ ಅಭಿಯಾನ 5.0’ ಅನ್ನು ಪೂರ್ಣಗೊಳಿಸಿತು. ಸಾರ್ವಜನಿಕ ಕುಂದುಕೊರತೆಗಳು ಮತ್ತು ಮೇಲ್ಮನವಿಗಳ ವಿಲೇವಾರಿಯಲ್ಲಿ 100% ಸಾಧನೆ, ಸಂಸದರ ಉಲ್ಲೇಖಗಳಲ್ಲಿ 74%, ಪ್ರಧಾನ ಮಂತ್ರಿ ಕಚೇರಿಯ (PMO) ಉಲ್ಲೇಖಗಳಲ್ಲಿ 68% ಮತ್ತು ರಾಜ್ಯ ಸರ್ಕಾರದ ಉಲ್ಲೇಖಗಳಲ್ಲಿ 64% ರಷ್ಟು ವಿಲೇವಾರಿ ಸಾಧನೆಯನ್ನು ಮಾಡಲಾಗಿದೆ. ಇದಲ್ಲದೆ, 599 ತಾಣಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ 100% ಸಾಧನೆಯನ್ನು ದಾಖಲಿಸಲಾಗಿದೆ.


ಸಂಸ್ಕೃತಿ ಸಚಿವಾಲಯವು ಇ-ತ್ಯಾಜ್ಯ ವಿಲೇವಾರಿಗೆ ವಿಶೇಷ ಒತ್ತು ನೀಡುವುದರೊಂದಿಗೆ ‘ವಿಶೇಷ ಅಭಿಯಾನ 5.0’ ಅನ್ನು ಪೂರ್ಣಗೊಳಿಸಿತು
2025ರ ನವೆಂಬರ್ 12 ರಂದು ನವದೆಹಲಿಯ ದ್ವಾರಕಾದ ಯಶೋಭೂಮಿಯಲ್ಲಿ ನಡೆದ 'ಟ್ರೈಬಲ್ ಬಿಸಿನೆಸ್ ಕಾನ್ಕ್ಲೇವ್ 2025' (ಬುಡಕಟ್ಟು ಉದ್ಯಮ ಸಮಾವೇಶ) ರ ಯಶಸ್ವಿ ಸಂಘಟನೆಯಲ್ಲಿ ಸಂಸ್ಕೃತಿ ಸಚಿವಾಲಯವು ಪ್ರಮುಖ ಪಾತ್ರ ವಹಿಸಿದೆ. ' ಜಂಜಾಟಿಯ ಗೌರವ್ ವರ್ಷ್' ಮತ್ತು 'ವಿಕಸಿತ ಭಾರತ @2047' ರ ರಾಷ್ಟ್ರೀಯ ದೃಷ್ಟಿಕೋನದ ಆಶಯದೊಂದಿಗೆ, ಭಾರತದ ಬುಡಕಟ್ಟು ಸಮುದಾಯಗಳ ಕಲಾತ್ಮಕ ಶ್ರೇಷ್ಠತೆ, ಸಾಹಿತ್ಯಿಕ ವೈವಿಧ್ಯತೆ ಮತ್ತು ಸೃಜನಶೀಲ ಉದ್ಯಮಶೀಲತೆಯನ್ನು ಆಚರಿಸಲು ಈ ಸಮಾವೇಶವು ಉತ್ತಮ ವೇದಿಕೆಯಾಯಿತು. ಬುಡಕಟ್ಟು ವ್ಯವಹಾರಗಳ ಸಚಿವಾಲಯ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (DPIIT) ಮತ್ತು ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ಆಯೋಜಿಸಿದ ಈ ಸಮಾವೇಶವು, ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆಯುತ್ತಿರುವ 'ಜಂಜಾಟಿಯ ಗೌರವ್ ವರ್ಷ್' ಆಚರಣೆಯಲ್ಲಿ ಮಹತ್ವದ ಮೈಲಿಗಲ್ಲಾಯಿತು. ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ “ಬುಡಕಟ್ಟು ಪರಂಪರೆಯಿಂದ ಉದ್ಯಮದವರೆಗೆ: ಸುಸ್ಥಿರ ಉದ್ಯಮಶೀಲತೆಯನ್ನು ಉತ್ತೇಜಿಸುವುದು” (Tribal Heritage to Enterprise: Promoting Sustainable Entrepreneurship) ಎಂಬ ವಿಷಯದ ಕುರಿತಾದ ಚರ್ಚಾಗೋಷ್ಠಿಯು ಈ ಸಮಾವೇಶದ ಪ್ರಮುಖ ಆಕರ್ಷಣೆಯಾಗಿತ್ತು.


ಸಂಸ್ಕೃತಿ ಸಚಿವಾಲಯವು 2025ರ ನವೆಂಬರ್ 12 ರಂದು ನವದೆಹಲಿಯ ದ್ವಾರಕಾದ ಯಶೋಭೂಮಿಯಲ್ಲಿ ‘ಟ್ರೈಬಲ್ ಬಿಸಿನೆಸ್ ಕಾನ್ಕ್ಲೇವ್ 2025’ ಅನ್ನು ಯಶಸ್ವಿಯಾಗಿ ಆಯೋಜಿಸಿತು
ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH), 'ಪ್ರಾಜೆಕ್ಟ್ ಗಜ-ಲೋಕ್: ಎಲಿಫೆಂಟ್ ಲ್ಯಾಂಡ್ಸ್ ಅಂಡ್ ದೇರ್ ಕಲ್ಚರಲ್ ಸಿಂಬಾಲಿಸಂ ಇನ್ ಏಷ್ಯಾ' (ಏಷ್ಯಾ ಆನೆಗಳ ನೆಲೆಗಳು ಮತ್ತು ಸಾಂಸ್ಕೃತಿಕ ಸಂಕೇತ) ಎಂಬ ಪ್ರವರ್ತಕ ಅಂತಾರಾಷ್ಟ್ರೀಯ ಉಪಕ್ರಮದ ಆರಂಭವನ್ನು ಘೋಷಿಸಲು ಹೆಮ್ಮೆಪಡುತ್ತದೆ. ಈ ಸಂಸ್ಕೃತಿ-ನಿಸರ್ಗ ಕಾರ್ಯಕ್ರಮವು ಏಷ್ಯಾ ಆನೆಯ ಸುತ್ತಲಿನ ಆಳವಾದ ಸಂಪರ್ಕಗಳನ್ನು ದಾಖಲಿಸಲು ಮತ್ತು ಅನ್ವೇಷಿಸಲು ಮೀಸಲಾಗಿದೆ. ಇದು ಖಂಡದಾದ್ಯಂತ ಸಂಸ್ಕೃತಿ, ಇತಿಹಾಸ, ಪರಿಸರ ವಿಜ್ಞಾನ ಮತ್ತು ಹವಾಮಾನ ವೈಪರೀತ್ಯವನ್ನು ಎದುರಿಸುವ ಸಾಮರ್ಥ್ಯದ ಪರಸ್ಪರ ಬೆರೆತ ಕಥನಗಳನ್ನು ಎತ್ತಿ ತೋರಿಸುತ್ತದೆ. ಪ್ರಾಜೆಕ್ಟ್ ಗಜ-ಲೋಕ್ ಅಧಿಕೃತವಾಗಿ 2025ರ ನವೆಂಬರ್ 19 ರಿಂದ 25 ರವರೆಗೆ ನಡೆಯುವ ಸಾರ್ವಜನಿಕ ಪ್ರದರ್ಶನ ಮತ್ತು 2025ರ ನವೆಂಬರ್ 20 ರಂದು ನವದೆಹಲಿಯ INTACH ನಲ್ಲಿ ನಡೆಯುವ ದುಂಡುಮೇಜಿನ ಸಭೆಯೊಂದಿಗೆ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮಗಳನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ (ICH) ವಿಭಾಗವು ಆಯೋಜಿಸಿದೆ.

ಕೇಂದ್ರ ಸಂಸ್ಕೃತಿ ಸಚಿವರು 2025ರ ನವೆಂಬರ್ 18 ರಂದು ‘ಪ್ರಾಜೆಕ್ಟ್ ಮೌಸಮ್’ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿದರು. “ಹಿಂದೂ ಮಹಾಸಾಗರ ವಲಯದ ಕಡಲ ಜಾಲಗಳ ಅಡ್ಡಹಾದಿಯಲ್ಲಿರುವ ದ್ವೀಪಗಳು” (Islands at the Crossroads of Maritime Networks within Indian Ocean Region) ಎಂಬ ಶೀರ್ಷಿಕೆಯ ಈ ಕಾರ್ಯಾಗಾರವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI) ಹುಮಾಯೂನ್ ಸಮಾಧಿ ವಿಶ್ವ ಪಾರಂಪರಿಕ ತಾಣದ ವಸ್ತುಸಂಗ್ರಹಾಲಯದಲ್ಲಿ ಆಯೋಜಿಸಿತ್ತು. ಈ ಯೋಜನೆಯು ಪಾರಂಪರಿಕ ಅಧ್ಯಯನಗಳು, ವೈಜ್ಞಾನಿಕ ಸಂಶೋಧನೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಅನನ್ಯ ಸಂಗಮವಾಗಿದ್ದು, ಕಡಲ ಪರಂಪರೆಯನ್ನು ಸಂರಕ್ಷಿಸುವ ಭಾರತದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸಾಗರ ಸಂಪರ್ಕಿತ ಸಾಂಸ್ಕೃತಿಕ ಭೂದೃಶ್ಯಗಳನ್ನು ದಾಖಲಿಸಲು ಮತ್ತು ರಕ್ಷಿಸಲು ಹೊಸ ಮಾರ್ಗಗಳನ್ನು ತೆರೆಯುವ ಹಾಗೂ ಇದನ್ನು ಕ್ರಿಯಾತ್ಮಕ ಮತ್ತು ಸಹಯೋಗದ ಚಳವಳಿಯನ್ನಾಗಿ ರೂಪಿಸುವ ಈ ಉಪಕ್ರಮದ ಗುರಿಯನ್ನು ಸಚಿವರು ಒತ್ತಿ ಹೇಳಿದರು.

ಕೇಂದ್ರ ಸಂಸ್ಕೃತಿ ಸಚಿವರು 2025ರ ನವೆಂಬರ್ 18 ರಂದು ‘ಪ್ರಾಜೆಕ್ಟ್ ಮೌಸಮ್’ ಕುರಿತ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿದರು
ಬುದ್ಧ ಧರ್ಮದ ಜನ್ಮಭೂಮಿ ಮತ್ತು ಬೌದ್ಧ ಪರಂಪರೆಯ ಜಾಗತಿಕ ಕೇಂದ್ರವಾಗಿ ಭಾರತಕ್ಕಿರುವ ಅಪ್ರತಿಮ ಸ್ಥಾನವನ್ನು ಸ್ಥಾನವನ್ನು ಪುನರುಚ್ಚರಿಸುವ ಸಲುವಾಗಿ, ಆಗ್ನೇಯ ಏಷ್ಯಾ ಮತ್ತು ಭಾರತದಲ್ಲಿ ಅತಿದೊಡ್ಡ ಅಂತಾರಾಷ್ಟ್ರೀಯ ಬೌದ್ಧ ಕಾರ್ಯಕ್ರಮವಾದ 'ಅಂತಾರಾಷ್ಟ್ರೀಯ ತ್ರಿಪಿಟಕ ಪಠಣ ಸಮಾರಂಭ'ವನ್ನು ದೇಶವು ಮತ್ತೊಮ್ಮೆ ಆಯೋಜಿಸುತ್ತಿದೆ. ಇದು 2025ರ ಡಿಸೆಂಬರ್ 2 ರಿಂದ 13 ರವರೆಗೆ ಬಿಹಾರದ ಬೋಧಗಯಾದಲ್ಲಿ ನಡೆಯಲಿದೆ. ಇದರೊಂದಿಗೆ, ಜೇತಿಯನ್ ಕಣಿವೆಯಿಂದ ರಾಜಗೀರ್‌ನ ಪವಿತ್ರ ಬಿದಿರು ತೋಪಾದ ವೇಣುವನಕ್ಕೆ ಬುದ್ಧನ ಹೆಜ್ಜೆಗುರುತುಗಳನ್ನು ಮರುಶೋಧಿಸುವ ಸ್ಮರಣಾರ್ಥ ಪಾದಯಾತ್ರೆಯನ್ನು ಆಯೋಜಿಸಲಾಗುವುದು. ಪವಿತ್ರ ಜ್ಞಾನೋದಯ ಪೀಠವಾದ ಬೋಧಗಯಾದಲ್ಲಿ ನಡೆಯುವ ಈ 12 ದಿನಗಳ ಆಧ್ಯಾತ್ಮಿಕ ಸಮಾವೇಶವನ್ನು, ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟವು (IBC), ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಮತ್ತು ಅಮೆರಿಕದ ಲೈಟ್ ಆಫ್ ಬುದ್ಧ ಧರ್ಮ ಫೌಂಡೇಶನ್ ಇಂಟರ್ನ್ಯಾಷನಲ್ (LBDFI) ಸಹಯೋಗದೊಂದಿಗೆ ಆಯೋಜಿಸಲಿದೆ.
12 ದಿನಗಳ ಈ ಕಾರ್ಯಕ್ರಮದ ಪ್ರಮುಖ ಮುಖ್ಯಾಂಶಗಳು:
• ಪವಿತ್ರ ಬೋಧಿ ವೃಕ್ಷದ ಅಡಿಯಲ್ಲಿ ಪ್ರತಿದಿನ ಪಾಲಿ ಧರ್ಮಗ್ರಂಥಗಳ ಪಠಣ.
• ಪ್ರಖ್ಯಾತ ಧಮ್ಮ ಗುರುಗಳಿಂದ ಪ್ರವಚನಗಳು.
• ಸಂವಾದಾತ್ಮಕ ಪ್ರಶ್ನೋತ್ತರ ಕಲಾಪಗಳು.
• ಭಾರತ ಮತ್ತು ವಿದೇಶಗಳ ಕಲಾವಿದರನ್ನು ಒಳಗೊಂಡ ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಪ್ರದರ್ಶನ.
• ಉದ್ಘಾಟನಾ ದಿನದಂದು ಐಬಿಸಿ (IBC) ಪ್ರಾಯೋಜಿತ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ

ಆಗ್ನೇಯ ಏಷ್ಯಾ ಮತ್ತು ಭಾರತದ ಅತಿದೊಡ್ಡ ಅಂತಾರಾಷ್ಟ್ರೀಯ ಬೌದ್ಧ ಕಾರ್ಯಕ್ರಮವಾದ 'ಅಂತಾರಾಷ್ಟ್ರೀಯ ತ್ರಿಪಿಟಕ ಪಠಣ ಸಮಾರಂಭ'ದ ಪೂರ್ವಭಾವಿ ಪತ್ರಿಕಾಗೋಷ್ಠಿಯು ನವದೆಹಲಿಯಲ್ಲಿ ನಡೆಯಿತು
ಅಮೂರ್ತ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿನ ಅಂತರ ಸರ್ಕಾರಿ ಸಮಿತಿಯ 20ನೇ ಅಧಿವೇಶನವು 2025ರ ಡಿಸೆಂಬರ್ 8 ರಿಂದ 13 ರವರೆಗೆ ಭಾರತದ ನವದೆಹಲಿಯಲ್ಲಿ ನಡೆಯಲಿದೆ. ಈ ಅಧಿವೇಶನದ ಅಧ್ಯಕ್ಷತೆಯನ್ನು ಯುನೆಸ್ಕೋದಲ್ಲಿನ (UNESCO) ಭಾರತದ ರಾಯಭಾರಿ ಮತ್ತು ಖಾಯಂ ಪ್ರತಿನಿಧಿ ವಹಿಸಲಿದ್ದಾರೆ.
*****
(रिलीज़ आईडी: 2202110)
आगंतुक पटल : 5