ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಸಿ. ರಾಜಗೋಪಾಲಾಚಾರಿ ಅವರ ಜಯಂತಿ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
10 DEC 2025 8:48AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಸಿ. ರಾಜಗೋಪಾಲಾಚಾರಿ ಅವರ ಜನ್ಮ ವಾರ್ಷಿಕೋತ್ಸವದ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ಬುದ್ಧಿಜೀವಿ ಮತ್ತು ರಾಜಕಾರಣಿಯಾಗಿ ಅವರನ್ನು ಸ್ಮರಿಸಿರುವ ಪ್ರಧಾನಮಂತ್ರಿ, ಮೌಲ್ಯಗಳನ್ನು ಸೃಷ್ಟಿಸುವಲ್ಲಿ ಮತ್ತು ಮನುಕುಲದ ಘನತೆಯನ್ನು ಉಲೇಖಿಸುವಲ್ಲಿ ನಂಬಿಕೆ ಇಟ್ಟಿದ್ದ ರಾಜಾಜಿ ಅವರು 20ನೇ ಶತಮಾನದ ಅತ್ಯಂತ ತೀಕ್ಷ್ಣ ಮನಸ್ಸಿನವರಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಾರ್ವಜನಿಕ ಜೀವನಕ್ಕೆ ಅವರ ನಿರಂತರ ಕೊಡುಗೆಗಳನ್ನು ರಾಷ್ಟ್ರವು ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
”ಶ್ರೀ ಸಿ. ರಾಜಗೋಪಾಲಾಚಾರಿ ಅವರನ್ನು ಸ್ಮರಿಸಿಕೊಂಡಾಗ ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ಬುದ್ಧಿಜೀವಿ, ರಾಜನೀತಿಜ್ಞರು, ಇವು ಮನಸ್ಸಿಗೆ ಬರುವ ಕೆಲವು ವಿವರಣೆಗಳು. ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನಗಳು. ಮೌಲ್ಯಗಳನ್ನು ಸೃಷ್ಟಿಸುವಲ್ಲಿ ಮತ್ತು ಮಾನವರ ಘನತೆಯನ್ನು ಎತ್ತಿಹಿಡಿಯುವಲ್ಲಿ ನಂಬಿಕೆ ಇಟ್ಟಿದ್ದ ಅವರು 20ನೇ ಶತಮಾನದ ಅತ್ಯಂತ ತೀಕ್ಷ್ಣ ಮನಸ್ಸುಗಳಲ್ಲಿ ಒಬ್ಬರಾಗಿದ್ದರು. ಅವರ ನಿರಂತರ ಕೊಡುಗೆಗಳನ್ನು ನಮ್ಮ ರಾಷ್ಟ್ರವು ಕೃತಜ್ಞತೆಯಿಂದ ಸ್ಮರಿಸುತ್ತದೆ.
ರಾಜಾಜಿಯವರ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು ಯುವ ರಾಜಾಜಿಯ ಚಿತ್ರ, ಸಂಪುಟ ಸಚಿವರಾಗಿ ಅವರ ನೇಮಕಾತಿಯ ಅಧಿಸೂಚನೆ, 1920ರ ದಶಕದ ಸ್ವಯಂಸೇವಕರೊಂದಿಗಿನ ಚಿತ್ರ ಮತ್ತು ಗಾಂಧಿಜಿ ಜೈಲಿನಲ್ಲಿದ್ದ ಕಾರಣ ರಾಜಾಜಿ ಸಂಪಾದಿಸಿದ 1922ರ ಯಂಗ್ ಇಂಡಿಯಾ ಆವೃತ್ತಿಯನ್ನು ಒಳಗೊಂಡ ಆರ್ಕೈವ್‌ಗಳಿಂದ ಕೆಲವು ಆಸಕ್ತಿದಾಯಕ ವಸ್ತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.’’
*****
(रिलीज़ आईडी: 2201319)
आगंतुक पटल : 5
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Gujarati
,
Tamil
,
Telugu
,
Malayalam