ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯಾದಲ್ಲಿ ಮೈಕ್ರೋಸಾಫ್ಟ್ ನ ಅತಿದೊಡ್ಡ ಹೂಡಿಕೆ; ಜಾಗತಿಕ ಎಐ ಕೇಂದ್ರವಾಗಿ ಭಾರತ - ಪ್ರಧಾನಮಂತ್ರಿ ಸ್ವಾಗತ


ಕೃತಕ ಬುದ್ಧಿಮತ್ತೆ (ಎಐ) ಕುರಿತಾಗಿ ಭಾರತದ ಬಗ್ಗೆ ಜಗತ್ತು ಆಶಾವಾದಿಯಾಗಿದೆ: ಪ್ರಧಾನಮಂತ್ರಿ

प्रविष्टि तिथि: 09 DEC 2025 7:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೈಕ್ರೋಸಾಫ್ಟ್ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ (ಸಿಇಒ) ಶ್ರೀ ಸತ್ಯ ನಾಡೆಲ್ಲಾ ಅವರೊಂದಿಗಿನ ಫಲಪ್ರದ ಚರ್ಚೆಯ ನಂತರ ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ನಾಯಕತ್ವದ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

ಏಷ್ಯಾದಲ್ಲಿನ ಈವರೆಗಿನ ಅತಿದೊಡ್ಡ ಹೂಡಿಕೆಯನ್ನು ಭಾರತದಲ್ಲಿ ಮಾಡುವುದಾಗಿ ಮೈಕ್ರೋಸಾಫ್ಟ್ ಘೋಷಿಸಿರುವುದನ್ನು ಪ್ರಧಾನಮಂತ್ರಿ ಸ್ವಾಗತಿಸುತ್ತಾ, ನಾವಿನ್ಯತೆ ಮತ್ತು ತಂತ್ರಜ್ಞಾನಕ್ಕೆ ವಿಶ್ವಾಸಾರ್ಹ ತಾಣವಾಗಿ ದೇಶ ಬೆಳವಣಿಗೆ ಹೊಂದುತ್ತಿರುವ ಬಗ್ಗೆ ಒತ್ತಿಹೇಳಿದ್ದಾರೆ. 

ಶ್ರೀ ಸತ್ಯ ನಾಡೆಲ್ಲಾ ಅವರ ಪೋಸ್ಟ್ ಗೆ ಪ್ರಧಾನಮಂತ್ರಿಗಳ ಪ್ರತಿಕ್ರಿಯೆ ಹೀಗಿದೆ:

"ಕೃತಕ ಬುದ್ಧಿಮತ್ತೆ  ವಿಷಯವಾಗಿ ಭಾರತದ ಬಗ್ಗೆ ಜಗತ್ತು ಆಶಾವಾದಿಯಾಗಿದೆ!

ಶ್ರೀ ಸತ್ಯ ನಾಡೆಲ್ಲಾ ಅವರೊಂದಿಗೆ ಅತ್ಯಂತ ಫಲಪ್ರದ ಚರ್ಚೆ ನಡೆಸಿದೆ. ಏಷ್ಯಾದಲ್ಲಿ ಮೈಕ್ರೋಸಾಫ್ಟ್ ಅತಿದೊಡ್ಡ ಹೂಡಿಕೆಯನ್ನು ಮಾಡುವ ಸ್ಥಳ ಭಾರತವಾಗಿರುವುದು ಅತ್ಯಂತ ಸಂತಸದಾಯಕ. 

ಉತ್ತಮ ಭೂಮಿಗಾಗಿ ಭಾರತದ ಯುವಜನರು ಈ ಅವಕಾಶವನ್ನು ನವೀನ ಆವಿಷ್ಕಾರಗಳಿಗೆ ಮತ್ತು ಎಐ ಶಕ್ತಿಯ ಸಮರ್ಥ ಅಳವಡಿಕೆಗೆ ಬಳಸಿಕೊಳ್ಳಬಲ್ಲರು."

 

*****


(रिलीज़ आईडी: 2201172) आगंतुक पटल : 12
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Punjabi , Gujarati , Odia , Tamil , Telugu , Malayalam