ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಚಲನಚಿತ್ರ ಪ್ರಮಾಣೀಕರಣಕ್ಕಾಗಿ ರಚಿಸಲಾದ ಪ್ರತಿಯೊಂದು ಪರೀಕ್ಷಾ ಮತ್ತು ಪರಿಷ್ಕರಣಾ ಸಮಿತಿಯಲ್ಲಿ 50% ರಷ್ಟು ಮಹಿಳೆಯರ ಭಾಗವಹಿಸುವಿಕೆಯನ್ನು ಸಿ.ಬಿ.ಎಫ್.ಸಿ. ಖಚಿತಪಡಿಸಿದೆ


ಡೇಟಾ ಸುರಕ್ಷತೆ, ವ್ಯವಸ್ಥೆಯ ಸಮಗ್ರತೆ ಮತ್ತು ಗೌಪ್ಯತಾ ಪರಿಗಣನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಕ್ಯೂ.ಆರ್. ಕೋಡ್ ನಲ್ಲಿ ಮಾರ್ಪಾಡುಗಳು; ಈ ಬದಲಾವಣೆಗಳು ಸಾರ್ವಜನಿಕರಿಗೆ ಲಭ್ಯ ಅಗತ್ಯ ಪ್ರಮಾಣೀಕರಣ ಮಾಹಿತಿಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ

प्रविष्टि तिथि: 05 DEC 2025 2:47PM by PIB Bengaluru

ಮಂಡಳಿ ಮತ್ತು ಸಲಹಾ ಸಮಿತಿಗಳಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳಾ ಸದಸ್ಯರನ್ನು ಕಡ್ಡಾಯಗೊಳಿಸುವ ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 2024ರ ಪ್ರಕಾರ ಮಹಿಳೆಯರ ಸೂಕ್ತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದಲ್ಲದೆ, ನಿಯಮಗಳ ಅಡಿಯಲ್ಲಿ ಒದಗಿಸಲಾದ ಚಲನಚಿತ್ರಗಳ ಪರೀಕ್ಷೆಗಾಗಿ ರಚಿಸಲಾದ ಪ್ರತಿಯೊಂದು ಪರೀಕ್ಷಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಯಲ್ಲಿ 50% ರಷ್ಟು ಮಹಿಳೆಯರ ಪ್ರಾತಿನಿಧ್ಯವನ್ನು ಸಿ.ಬಿ.ಎಫ್.ಸಿ. ಈ ಮೂಲಕ ಖಚಿತಪಡಿಸುತ್ತದೆ.

ಮಂಡಳಿ ಸದಸ್ಯರ ಅಧಿಕಾರಾವಧಿಯನ್ನು ಸಿನಿಮಾಟೋಗ್ರಾಫ್ ಕಾಯ್ದೆ, 1952 ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ. ಸಿನಿಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಗಳು, 2024ರ ನಿಯಮ 3ರ ಅಡಿಯಲ್ಲಿ, ಪ್ರತಿಯೊಬ್ಬ ಸದಸ್ಯರು ಕೇಂದ್ರ ಸರ್ಕಾರದ ಇಚ್ಛೆಯವರೆಗೆ ಮೂರು ವರ್ಷಗಳನ್ನು ಮೀರದ ಅವಧಿಗೆ ಅಧಿಕಾರದಲ್ಲಿರುತ್ತಾರೆ, ಹಾಗೂ, ಈ ಸದಸ್ಯರ ಅವಧಿಯು ಅವರ ಸ್ಥಾನದಲ್ಲಿ ಹೊಸ ಸದಸ್ಯರನ್ನು ನೇಮಿಸುವವರೆಗೆ ಮುಂದುವರಿಯುತ್ತದೆ.

ಮಂಡಳಿಯ ಸದಸ್ಯರೊಂದಿಗೆ ತನ್ನ ಸಭೆಗಳನ್ನು ಆನ್ ಲೈನ್ ಮೂಲಕ ಸಿ.ಬಿ.ಎಫ್.ಸಿ. ನಡೆಸುತ್ತದೆ. 2017 ರಿಂದ, ಪ್ರಮಾಣೀಕರಣ ಕಾರ್ಯಪ್ರವಾಹವನ್ನು ಇ-ಸಿನಿಪ್ರಮಾನ್ ಆನ್ ಲೈನ್ ಪ್ರಮಾಣೀಕರಣ ವೇದಿಕೆಯ ಮೂಲಕ ಪ್ರಧಾನವಾಗಿ ಡಿಜಿಟಲ್ ಮಾಡಲಾಗಿದೆ, ಇದರ ಮೂಲಕ ಅರ್ಜಿಗಳ ಸಲ್ಲಿಕೆ, ಸಂಸ್ಕರಣೆ ಮತ್ತು ಅನುಮೋದನೆಗಳನ್ನು ಆನ್ ಲೈನ್ ನಲ್ಲಿ ಮಾಡಲಾಗುತ್ತದೆ. ಸಲ್ಲಿಸಿದ ಚಲನಚಿತ್ರಗಳ ಪ್ರಮಾಣವನ್ನು ಆಧರಿಸಿ ಚಲನಚಿತ್ರಗಳ ಪರೀಕ್ಷಾ ಮತ್ತು ಪರಿಷ್ಕರಣಾ ಸಮಿತಿಗಳ ಸಭೆಗಳನ್ನು ಅಗತ್ಯವಿರುವಂತೆ ನಡೆಸಲಾಗುತ್ತದೆ, ಇದು ಸಕಾಲಿಕ ಪ್ರಮಾಣೀಕರಣವನ್ನು ಖಚಿತಪಡಿಸುತ್ತದೆ.

ಕ್ಯೂ.ಆರ್. ಕೋಡ್ ವ್ಯವಸ್ಥೆಯು ಸಾರ್ವಜನಿಕರಿಗೆ ಚಲನಚಿತ್ರ ಶೀರ್ಷಿಕೆ, ಭಾಷೆ, ಅವಧಿ, ಅರ್ಜಿದಾರರ ಹೆಸರು, ನಿರ್ಮಾಪಕರ ಹೆಸರು, ಸಾರಾಂಶ ಮತ್ತು ಪಾತ್ರವರ್ಗ / ಸಿನಿಮಾ ವಿವರಗಳಂತಹ ಮೂಲಭೂತ ಪ್ರಮಾಣೀಕರಣ-ಸಂಬಂಧಿತ ಮಾಹಿತಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಡೇಟಾ ಸುರಕ್ಷತೆ, ವ್ಯವಸ್ಥೆಯ ಸಮಗ್ರತೆ ಮತ್ತು ಗೌಪ್ಯತಾ ಪರಿಗಣನೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಇ-ಸಿನಿಪ್ರಮಾನ್ ಪೋರ್ಟಲ್ ನಲ್ಲಿ ಕ್ಯೂ.ಆರ್. ಕೋಡ್ ಅಡಿಯಲ್ಲಿ ಲಭ್ಯವಾಗಬಹುದಾದ ವಿಷಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಈ ಬದಲಾವಣೆಗಳು ಸಾರ್ವಜನಿಕರಿಗೆ ಲಭ್ಯವಾಗುವ ಅಗತ್ಯ ಪ್ರಮಾಣೀಕರಣ ಮಾಹಿತಿಗಳಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ.

ಪ್ರತಿ ವರ್ಷ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ತನ್ನ ವಾರ್ಷಿಕ ವರದಿಯನ್ನು ಸಿ.ಬಿ.ಎಫ್.ಸಿ. ಸಲ್ಲಿಸುತ್ತದೆ. ಈ ಮಾಹಿತಿಯನ್ನು ಸಚಿವಾಲಯದ ಕ್ರೋಢೀಕೃತ ವಾರ್ಷಿಕ ವರದಿಯಲ್ಲಿ ಸೇರಿಸಲಾಗುತ್ತದೆ, ಇದನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತದೆ ಮತ್ತು ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.

ಈ ಮಾಹಿತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ರಾಜ್ಯಸಭೆಯಲ್ಲಿ ಶ್ರೀಮತಿ ಸಾಗರಿಕಾ ಘೋಷ್ ಅವರ ನಕ್ಷತ್ರ ಹಾಕದ ಪ್ರಶ್ನೆಗೆ ಉತ್ತರಿಸುತ್ತಾ ಸಲ್ಲಿಸಿದ್ದಾರೆ.

 

*****


(रिलीज़ आईडी: 2199398) आगंतुक पटल : 13
इस विज्ञप्ति को इन भाषाओं में पढ़ें: English , Urdu , हिन्दी , Bengali-TR , Assamese , Odia , Tamil , Telugu , Malayalam