ಪ್ರಧಾನ ಮಂತ್ರಿಯವರ ಕಛೇರಿ
ನೌಕಾಪಡೆ ದಿನದ ಅಂಗವಾಗಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ ಪ್ರಧಾನಮಂತ್ರಿ ಅವರು ಶುಭಾಶಯ ತಿಳಿಸಿದ್ದಾರೆ
प्रविष्टि तिथि:
04 DEC 2025 8:41AM by PIB Bengaluru
ಇಂದು ನೌಕಾಪಡೆ ದಿನದ ಅಂಗವಾಗಿ ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ನಮ್ಮ ನೌಕಾಪಡೆ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ಸಮಾನಾರ್ಥಕವಾಗಿದೆ ಎಂದು ಹೇಳಿದ್ದಾರೆ. ನೌಕಾಪಡೆ ಸಿಬ್ಬಂದಿ ನಮ್ಮ ತೀರಗಳನ್ನು ರಕ್ಷಿಸುತ್ತಾರೆ ಮತ್ತು ನಮ್ಮ ಕಡಲ ಹಿತಾಸಕ್ತಿಗಳನ್ನು ಹೆಚ್ಚಿಸುತ್ತಾರೆ. ''ಈ ವರ್ಷದ ದೀಪಾವಳಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಅಂದು ನಾನು ಐಎನ್‌ಎಸ್ ವಿಕ್ರಾಂತ್‌ನಲ್ಲಿರುವ ನೌಕಾಪಡೆ ಸಿಬ್ಬಂದಿಯೊಂದಿಗೆ ಕಳೆದೆ. ಭಾರತೀಯ ನೌಕಾಪಡೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ" ಎಂದು ಶ್ರೀ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಅವರು ಈ ಕುರಿತು ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ:
"ಭಾರತೀಯ ನೌಕಾಪಡೆಯ ಎಲ್ಲಾ ಸಿಬ್ಬಂದಿಗೆ ನೌಕಾಪಡೆಯ ದಿನದ ಶುಭಾಶಯಗಳು. ನಮ್ಮ ನೌಕಾಪಡೆ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ಸಮಾನಾರ್ಥಕವಾಗಿದೆ. ಅವರು ನಮ್ಮ ತೀರಗಳನ್ನು ರಕ್ಷಿಸುತ್ತಾರೆ ಮತ್ತು ನಮ್ಮ ಕಡಲ ಹಿತಾಸಕ್ತಿಗಳನ್ನು ಎತ್ತಿಹಿಡಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ನಮ್ಮ ನೌಕಾಪಡೆಯು ಸ್ವಾವಲಂಬನೆ ಮತ್ತು ಆಧುನೀಕರಣದ ಮೇಲೆ ಕೇಂದ್ರೀಕರಿಸಿದೆ. ಇದು ನಮ್ಮ ಭದ್ರತಾ ಉಪಕರಣವನ್ನು ಹೆಚ್ಚಿಸಿದೆ.
ಈ ವರ್ಷದ ದೀಪಾವಳಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಅದನ್ನು ನಾನು ಐಎನ್ ಎಸ್ ವಿಕ್ರಾಂತ್‌ನಲ್ಲಿರುವ ನೌಕಾ ಸಿಬ್ಬಂದಿಯೊಂದಿಗೆ ಕಳೆದಿದ್ದೇನೆ. ಭಾರತೀಯ ನೌಕಾಪಡೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.''
****
(रिलीज़ आईडी: 2198593)
आगंतुक पटल : 67
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam