ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಭವಿಷ್ಯದಲ್ಲಿ ನಾರಿ ಶಕ್ತಿ ಹೇಗೆ ಕೇಂದ್ರ ಬಿಂದು ಎಂಬುದರ ಕುರಿತು ಲೇಖನ ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 01 DEC 2025 3:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭಾರತದ ಭವಿಷ್ಯದಲ್ಲಿ ನಾರಿ ಶಕ್ತಿ ಹೇಗೆ ಕೇಂದ್ರ ಬಿಂದುವಾಗಲಿದೆ ಎಂಬ ಕುರಿತು ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. “ಭಾರತ ಅಮೃತ ಕಾಲದಲ್ಲಿ ಪ್ರವೇಶಿಸುತ್ತಿದ್ದಂತೆ, ಈ ಪದವು ಇನ್ನು ಮುಂದೆ ಕೇವಲ ಘೋಷಣೆಯಾಗಿ ಉಳಿದಿಲ್ಲ; ಇದು ರಾಷ್ಟ್ರೀಯ ಧ್ಯೇಯವಾಗಿದೆ. ಒನ್-ಸ್ಟಾಪ್ ಕೇಂದ್ರಗಳಿಂದ ತ್ವರಿತಗತಿ ನ್ಯಾಯಾಲಯಗಳವರೆಗೆ, ಸಹಾಯವಾಣಿಗಳಿಂದ ಸಾಮಾಜಿಕ ಭದ್ರತಾ ಕೇಂದ್ರಗಳವರೆಗೆ, ಮಿಷನ್ ಶಕ್ತಿಯ ಅಡಿಯಲ್ಲಿ ಸರ್ಕಾರವು ಮಹಿಳೆಯರಿಗೆ ಘನತೆ ಮತ್ತು ಅವಕಾಶಗಳನ್ನು ಖಾತ್ರಿಪಡಿಸುತ್ತಿದೆ’’ ಎಂದು ಶ್ರೀ ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣಾದೇವಿ ಅವರ ಪೋಸ್ಟ್‌ಗೆ ಶ್ರೀ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.  

"ನಾರಿ ಶಕ್ತಿ ಭಾರತದ ಭವಿಷ್ಯದ ಕೇಂದ್ರ ಬಿಂದು. ಭಾರತ ಅಮೃತ ಕಾಲದಲ್ಲಿ ಪ್ರವೇಶಿಸುತ್ತಿದ್ದಂತೆ, ಈ ಪದವು ಕೇವಲ ಘೋಷಣೆಯಾಗಿ ಉಳಿದಿಲ್ಲ; ಅದು ರಾಷ್ಟ್ರೀಯ ಧ್ಯೇಯವಾಗಿದೆ. ಒನ್-ಸ್ಟಾಪ್ ಕೇಂದ್ರಗಳಿಂದ ತ್ವರಿತಗತಿ ನ್ಯಾಯಾಲಯಗಳವರೆಗೆ, ಸಹಾಯವಾಣಿಗಳಿಂದ ಸಾಮಾಜಿಕ ಭದ್ರತಾ ಕೇಂದ್ರಗಳವರೆಗೆ, ಮಿಷನ್ ಶಕ್ತಿಯ ಅಡಿಯಲ್ಲಿ, ಸರ್ಕಾರವು ಮಹಿಳೆಯರಿಗೆ ಘನತೆ ಮತ್ತು ಅವಕಾಶಗಳನ್ನು ಖಾತ್ರಿಪಡಿಸುತ್ತಿದೆ.

ಕೇಂದ್ರ ಸಚಿವರಾದ ಶ್ರೀಮತಿ @Annapurna4BJP ಅವರಿಂದ ಬಹಳ ವಿವೇಕಯುತ ಆತ್ಮಾವಲೋಕನ. ಓದಿ!"

 

*****


(रिलीज़ आईडी: 2197340) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Manipuri , Assamese , Punjabi , Gujarati , Odia , Tamil , Telugu , Malayalam