ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ಶ್ರೀಮತಿ ಜೊಡಿ ಹೇಡನ್ ಅವರ ವಿವಾಹ ನಿಮಿತ್ತ ಅವರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ

ಪ್ರಕಟಣಾ ದಿನಾಂಕ: 29 NOV 2025 9:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಆತ್ಮೀಯ ಸ್ನೇಹಿತ, ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ಶ್ರೀಮತಿ ಜೊಡಿ ಹೇಡನ್ ಅವರ ವಿವಾಹಕ್ಕಾಗಿ  ಅವರುಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಎಕ್ಸ್ ತಾಣದ ಸಂದೇಶದಲ್ಲಿ ಶ್ರೀ ಮೋದಿ ಅವರು ಹೀಗೆ ತಿಳಿಸಿದ್ದಾರೆ:

“ನನ್ನ ಆತ್ಮೀಯ ಸ್ನೇಹಿತ, ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಮತ್ತು ಶ್ರೀಮತಿ ಜೊಡಿ ಹೇಡನ್ ಅವರ ವಿವಾಹಕ್ಕಾಗಿ ಅವರುಗಳಿಗೆ ಅಭಿನಂದನೆಗಳು. ಅವರ ದಾಂಪತ್ಯ ಜೀವನ ಸಂತೋಷದಿಂದ ಕಳೆಯಲಿ ಎಂದು ಆಶಿಸುತ್ತೇನೆ.

@AlboMP ”

****


(ಪ್ರಕಟಣೆ ಐ.ಡಿ.: 2196471) ವಿಸಿಟರ್ ಕೌಂಟರ್ : 54