ಐಎಫ್ ಎಫ್ ಐ 2025 ಜಾಗತಿಕ ಸಿನಿಮಾ ಶಾಂತಿಯನ್ನು ಉತ್ತೇಜಿಸುವುದನ್ನು ಆಚರಿಸುತ್ತದೆ: ಪ್ರತಿಷ್ಠಿತ ಐಸಿಎಫ್ ಟಿ-ಯುನೆಸ್ಕೋ ಗಾಂಧಿ ಪದಕಕ್ಕಾಗಿ ಹತ್ತು ಚಲನಚಿತ್ರಗಳ ಸ್ಪರ್ಧೆ
56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ಐ2025), ಅಂತಾರಾಷ್ಟ್ರೀಯ ಚಲನಚಿತ್ರ, ದೂರದರ್ಶನ ಮತ್ತು ಶ್ರವ್ಯ ದೃಶ್ಯ ಸಂವಹನ ಮಂಡಳಿ (ಐಸಿಎಫ್ ಟಿ) ಸಹಯೋಗದೊಂದಿಗೆ ವಾರ್ಷಿಕ ಐಸಿಎಫ್ ಟಿ-ಯುನೆಸ್ಕೋ (ICFT–UNESCO)ಗಾಂಧಿ ಪದಕವನ್ನು ಪ್ರದಾನ ಮಾಡುತ್ತದೆ. ಇದು ಯುನೆಸ್ಕೋ ಪ್ರತಿಪಾದಿಸುವ ಸಹಿಷ್ಣುತೆ, ಅಂತರಸಾಂಸ್ಕೃತಿಕ ಸಂವಾದ ಮತ್ತು ಜಾಗತಿಕ ಶಾಂತಿ ಸಂಸ್ಕೃತಿಯ ಆದರ್ಶಗಳನ್ನು ಎತ್ತಿಹಿಡಿಯುವ ಚಲನಚಿತ್ರಗಳಿಗೆ ನೀಡಲಾಗುವ ಗೌರವವಾಗಿದೆ. 2016 ರಲ್ಲಿ 46 ನೇ ಐಎಫ್ ಎಫ್ ಐ ನಲ್ಲಿ ಪರಿಚಯಿಸಲಾದ ಈ ಪ್ರಶಸ್ತಿಯು ಉತ್ಸವದ ಅತ್ಯಂತ ಗೌರವಾನ್ವಿತ ಮನ್ನಣೆಗಳಲ್ಲಿ ಒಂದಾಗಿದ್ದು, ಸಹಾನುಭೂತಿ, ಸಾಮರಸ್ಯ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪ್ರೇರೇಪಿಸುವ ಸಿನಿಮಾವನ್ನು ಉತ್ತೇಜಿಸುತ್ತದೆ.
ಈ ವರ್ಷ ವಿಶ್ವದಾದ್ಯಂತದ ಹತ್ತು ಅಸಾಧಾರಣ ಚಲನಚಿತ್ರಗಳು ಪ್ರತಿಷ್ಠಿತ ಪದಕಕ್ಕಾಗಿ ಸ್ಪರ್ಧಿಸುತ್ತಿವೆ. ಈ ಸಾಲಿನಲ್ಲಿರುವ ಚಿತ್ರಗಳು ಯುಕೆ, ನಾರ್ವೆ, ಕೊಸೊವೊ, ಇರಾಕ್, ಚಿಲಿ, ಜಪಾನ್ ಮತ್ತು ಭಾರತದಿಂದ ಮೂರು ಚಿತ್ರಗಳು, ವೈವಿಧ್ಯಮಯ ಕಥೆ ನಿರೂಪಣೆಯ ಮತ್ತು ಜಾಗತಿಕ ಪ್ರಾತಿನಿಧ್ಯಕ್ಕೆ ಐಎಫ್ ಎಫ್ ಐನ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಸ್ಪರ್ಧೆಯಲ್ಲಿರುವ ಚಲನಚಿತ್ರಗಳಲ್ಲಿ Brides (UK), Hana (Kosovo), K Poper (Iran), The President's Cake (USA-Iraq-Qatar), Safe House (Norway), Tanvi The Great (India), The Wave (chile), Vimukt (India), White Snow (India) ಮತ್ತು Yakushima’s Illusion (ಇಲ್ಯೂಷನ್) (Belgium–France–Japan–Luxembourg) ಸೇರಿವೆ.
ಐಎಫ್ ಎಫ್ ಐ2025 ಗಾಗಿ ICFT-UNESCO ಗಾಂಧಿ ಪದಕ ತೀರ್ಪುಗಾರರ ತಂಡಕ್ಕೆ ಡಾ. ಪ್ರೊ. ಅಹ್ಮದ್ ಬೆಡ್ಜೌಯಿ (ಅಲ್ಜೀರಿಯಾ) ಅಧ್ಯಕ್ಷರಾಗಿದ್ದಾರೆ, ಕ್ಸುಯುವಾನ್ ಹುನ್ (ಚೀನಾ), ಸೆರ್ಗೆ ಮೈಕೆಲ್ (ಫ್ರಾನ್ಸ್), ಟೋಬಿಯಾಸ್ ಬಿಯಾನ್‌ಕೋನ್ (ಸ್ವಿಟ್ಜರ್ಲೆಂಡ್) ಮತ್ತು ಜಾರ್ಜಸ್ ಡುಪಾಂಟ್ (ಲಕ್ಸೆಂಬರ್ಗ್) ಸದಸ್ಯರಾಗಿದ್ದಾರೆ.
ಪಿಐಬಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ICFT–UNESCO ಪ್ಯಾರಿಸ್‌ನ ಗೌರವ ಪ್ರತಿನಿಧಿ, ಖ್ಯಾತ ಚಲನಚಿತ್ರ ನಿರ್ಮಾಪಕ ಮನೋಜ್ ಕದಾಂಹ್, ಈ ಪ್ರಶಸ್ತಿಯು ಮಾನವೀಯ ಮೌಲ್ಯಗಳು ಮತ್ತು ಅಹಿಂಸೆ, ಕೋಮು ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಬಿಂಬಿಸುವ ದೃಶ್ಯಗಳನ್ನು ಪ್ರದರ್ಶಿಸುವ ಚಲನಚಿತ್ರಗಳನ್ನು ಗುರುತಿಸುತ್ತದೆ ಎಂದು ಹೇಳಿದರು. 2025 ಐಎಫ್‌ಎಫ್‌ಐ ಜೊತೆ ಐಸಿಎಫ್‌ಟಿಯ ಪಾಲುದಾರಿಕೆಯ ಹನ್ನೊಂದನೇ ವರ್ಷವನ್ನು ಸೂಚಿಸುತ್ತದೆ ಎಂದು ಉಲ್ಲೇಖಿಸಿದ ಅವರು, ಇದು ಅರ್ಥಪೂರ್ಣ ಸಿನಿಮಾವನ್ನು ಉತ್ತೇಜಿಸುವ ಹಂಚಿಕೆಯ ಧ್ಯೇಯವನ್ನು ಒತ್ತಿಹೇಳುತ್ತದೆ ಎಂದರು.
1956 ರಲ್ಲಿ ಸ್ಥಾಪನೆಯಾದ ಐಸಿಎಫ್‌ಟಿ, ಚಲನಚಿತ್ರ ತಂತ್ರಜ್ಞರಿಗೆ ಅತ್ಯಂತ ಹಳೆಯ ಜಾಗತಿಕ ಸಂಘವಾಗಿದೆ ಮತ್ತು ವೈವಿಧ್ಯಮಯ ಆಡಿಯೋವಿಶುವಲ್ ಥೀಮ್‌ಗಳಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ಮನೌಜ್ ಕದಾಂಹ್ ಪ್ರಮುಖವಾಗಿ ಉಲ್ಲೇಖಿಸಿದರು. ಚಲನಚಿತ್ರ ನಿರ್ಮಾಣದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಕುರಿತು ಉದಯೋನ್ಮುಖ ಸಂಭಾಷಣೆಗಳನ್ನು ಸಹ ಅವರು ಚರ್ಚಿಸಿದರು, ಚಿತ್ರೀಕರಣ ಮಾಡಲು ಕಷ್ಟಕರವಾದ ದೃಶ್ಯಗಳನ್ನು ರಚಿಸಲು AI ಸಹಾಯ ಮಾಡಬಹುದಾದರೂ, "ಚಲನಚಿತ್ರಗಳಲ್ಲಿ ಮಾನವ ಅಂಶ ಇರಬೇಕು - ಭಾವನೆಗಳನ್ನು ಗಣಕೀಕರಿಸಲಾಗುವುದಿಲ್ಲ" ಎಂದು ತಿಳಿಸಿದರು.
ಎನ್‌ಎಫ್‌ಡಿಸಿಯ ಕಲಾತ್ಮಕ ನಿರ್ದೇಶಕ (ಪ್ರೋಗ್ರಾಮಿಂಗ್) ಪಂಕಜ್ ಸಕ್ಸೇನಾ, ಐಸಿಎಫ್‌ಟಿ–ಯುನೆಸ್ಕೋ ಗಾಂಧಿ ಪದಕವು ಐಎಫ್‌ಎಫ್‌ಐನ ಮೂರು ಪ್ರೋಗ್ರಾಮ್ಡ್ ಸ್ಪರ್ಧೆಗಳಲ್ಲಿ ಒಂದಾಗಿದೆ ಮತ್ತು ಶಾಂತಿ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಸಿನಿಮಾದ ಮೂಲಕ ನಾಗರಿಕತೆಗಳು ಮತ್ತು ಸಂಸ್ಕೃತಿಗಳನ್ನು ಒಟ್ಟಿಗೆ ತರುವ ವಿಶಿಷ್ಟ ಉದ್ದೇಶದಿಂದ ರೂಪಿಸಲ್ಪಟ್ಟಿದೆ ಎಂದು ಒತ್ತಿ ಹೇಳಿದರು. ಉತ್ಸವದಲ್ಲಿ ಮಹಿಳಾ ಚಲನಚಿತ್ರ ನಿರ್ಮಾಪಕರ ಪ್ರಾತಿನಿಧ್ಯ ಹೆಚ್ಚುತ್ತಿರುವುದನ್ನು ಅವರು ಉಲ್ಲೇಖಿಸಿದರು, ಮಹಿಳಾ ಧ್ವನಿಗಳಿಂದ ನಡೆಸಲ್ಪಡುವ ಶಕ್ತಿಶಾಲಿ ಚಲನಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಯಾವುದೇ ಒಂದು ಪ್ರದೇಶದ ಪ್ರಾಬಲ್ಯವಿಲ್ಲದೆ ಜಗತ್ತನ್ನು ಪ್ರತಿಬಿಂಬಿಸುವ ಗುರಿಯನ್ನು ಐಎಫ್ ಎಫ್ ಐ ಹೊಂದಿದೆ ಎಂದು ಪುನರುಚ್ಚರಿಸಿದರು.
ಚಲನಚಿತ್ರೋತ್ಸವಗಳು ಸಿನಿಮೀಯ ಅಭಿರುಚಿಯನ್ನು ಹೆಚ್ಚಿಸುವ, ಸಮಗ್ರ ಕಲಾತ್ಮಕತೆಯನ್ನು ಆಚರಿಸುವ ಮತ್ತು ಮಾನವ ಸ್ಥಿತಿಯನ್ನು ಪ್ರತಿಬಿಂಬಿಸುವ ಕೃತಿಗಳನ್ನು ಸಂಗ್ರಹಿಸಬೇಕು ಎಂದು ಪಂಕಜ್ ಸಕ್ಸೇನಾ ಒತ್ತಿ ಹೇಳಿದರು. ಹಿಂಸೆಯು ಒಂದು ಆದಿಸ್ವರೂಪದ ಪ್ರವೃತ್ತಿ ಎಂದು ಒಪ್ಪಿಕೊಂಡರೂ, ಅದನ್ನು ವಾಣಿಜ್ಯ ವೈಭವೀಕರಣದ ಸಾಧನವಾಗಿ ಅಲ್ಲ, ಜವಾಬ್ದಾರಿಯುತವಾಗಿ ಚಿತ್ರಿಸುವ ಅಗತ್ಯವನ್ನು ಅವರು ಪ್ರಸ್ತಾಪಿಸಿದರು.
ಐಸಿಎಫ್ ಟಿ-ಯುನೆಸ್ಕೋದ ಗಾಂಧಿ ಪದಕದ ಬಗ್ಗೆ:
ಮಹಾತ್ಮ ಗಾಂಧಿ ಅವರ ಸಾರ್ವತ್ರಿಕ ಆದರ್ಶಗಳನ್ನು ಪ್ರತಿನಿಧಿಸುವ ಐಎಫ್ ಎಫ್ ಐನ ಐಸಿಎಫ್ ಟಿ-ಯುನೆಸ್ಕೋ ವಿಭಾಗವು ಶಾಂತಿ, ಅಹಿಂಸೆ ಮತ್ತು ಅಂತರಸಾಂಸ್ಕೃತಿಕ ತಿಳುವಳಿಕೆಯನ್ನು ಸಾಕಾರಗೊಳಿಸುವ ಚಲನಚಿತ್ರಗಳನ್ನು ಗೌರವಿಸುತ್ತದೆ. ಜಾಗತಿಕವಾಗಿ ಗೌರವಾನ್ವಿತ ಈ ಪ್ರಶಸ್ತಿಯು ಕಲಾತ್ಮಕ ಪ್ರತಿಭೆಗಳನ್ನು ಮೀರಿದ, ಒಳಗೊಳ್ಳುವಿಕೆ, ಸಾಮಾಜಿಕ ಅರಿವು ಮತ್ತು ನೈತಿಕ ಪ್ರತಿಬಿಂಬದ ವಿಷಯಗಳನ್ನು ಅಳವಡಿಸಿಕೊಳ್ಳುವ ಕೃತಿಗಳನ್ನು ಗುರುತಿಸುತ್ತದೆ. ವರ್ಷಗಳಲ್ಲಿ, ಗಾಂಧಿ ಪದಕವು ಸಂಸ್ಕೃತಿಗಳ ನಡುವೆ ಸಹಾನುಭೂತಿ, ಏಕತೆ ಮತ್ತು ಸಂವಾದವನ್ನು ಬೆಳೆಸುವ ನಿರೂಪಣೆಗಳ ಮೂಲಕ ಚಲನಚಿತ್ರ ನಿರ್ಮಾಪಕರನ್ನು ಗುರುತಿಸಿದೆ - ಮಾನವೀಯತೆಯನ್ನು ಬೆಳಗಿಸಲು ಮತ್ತು ಸಮಾಜಗಳಾದ್ಯಂತ ಸೇತುವೆಗಳನ್ನು ನಿರ್ಮಿಸಲು ಚಲನಚಿತ್ರದ ಪರಿವರ್ತಕ ಶಕ್ತಿಯನ್ನು ದೃಢಪಡಿಸುತ್ತದೆ.

ಪೂರ್ಣ ಸುದ್ದಿಗೋಷ್ಠಿಗೆ ವೀಕ್ಷಿಸಿ:
ಐ ಎಫ್ ಎಫ್ ಐ ಕುರಿತು
1952 ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿ ಮುಂಚೂಣಿಯಲ್ಲಿ ನಿಂತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯಡಿ ಬರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಮತ್ತು ಗೋವಾ ರಾಜ್ಯ ಸರ್ಕಾರ, ಗೋವಾ ಮನರಂಜನಾ ಸೊಸೈಟಿ (ಇ ಎಸ್ ಜಿ) ಜಂಟಿಯಾಗಿ ಆಯೋಜಿಸಿರುವ ಈ ಉತ್ಸವವು ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ಗಳು ದಿಟ್ಟ ಪ್ರಯೋಗಗಳನ್ನು ಒಳಗೊಂಡಿವೆ ಮತ್ತು ಕಲಾವಿದ ದಿಗ್ಗಜರು ಭಯವಿಲ್ಲದ ಮೊದಲ ಬಾರಿಗೆ ಬರುವವರೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐಎಫ್ ಎಫ್ ಐ ನಿಜವಾಗಿಯೂ ಮಿಂಚುವಂತೆ ಮಾಡುವುದು ಅದರಲ್ಲಿನ ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ಗಳು, ಗೌರವಗಳು ಮೊದಲಾದ ಅದ್ಭುತ ಸಮ್ಮಿಶ್ರಣಗಳು ಮತ್ತು ಅಧಿಕ ಶಕ್ತಿಯ ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳು ಹೊಸ ಎತ್ತರಕ್ಕೆ ಏರುತ್ತವೆ. ನವೆಂಬರ್ 20ರಿಂದ 28ರವರೆಗೆ ಗೋವಾದ ಬೆರಗುಗೊಳಿಸುವ ಕರಾವಳಿ ಹಿನ್ನೆಲೆಇರುವ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿರುವ 56 ನೇ ಆವೃತ್ತಿಯ ಚಲನಚಿತ್ರೋತ್ಸವದಲ್ಲಿ ನಾನಾ ಭಾಷೆಗಳ, ಪ್ರಕಾರಗಳ, ನಾವೀನ್ಯತೆಗಳ ಮತ್ತು ಧ್ವನಿಗಳ ಬೆರಗುಗೊಳಿಸುವ ವರ್ಣಪಟಲಕ್ಕೆ ಭರವಸೆ ನೀಡುವ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ- ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಸಂಭ್ರಮದ ಆಚರಣೆಯಾಗಿದೆ.
For more information, Click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
*****
रिलीज़ आईडी:
2195852
| Visitor Counter:
4
इस विज्ञप्ति को इन भाषाओं में पढ़ें:
English
,
Gujarati
,
Konkani
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Punjabi
,
Tamil
,
Telugu
,
Malayalam