iffi banner

‘ಸೋಲೊಪ್ಪಿಕೊಳ್ಳುವುದು ಒಂದು ಆಯ್ಕೆಯಲ್ಲʼ ಹೇಗೆ ಎಂಬುದನ್ನು ಮಾಸ್ಟರ್‌ ಕ್ಲಾಸ್‌ ನಲ್ಲಿ ವಿವರಿಸಿದ ಅನುಪಮ್ ಖೇರ್


"ವೈಫಲ್ಯ ಕೇವಲ ಒಂದು ಘಟನೆ, ಒಬ್ಬ ವ್ಯಕ್ತಿ ಎಂದಿಗೂ ವೈಫಲ್ಯವಲ್ಲ": ಖೇರ್

ಗೋವಾದ ಪಣಜಿಯಲ್ಲಿರುವ ಕಲಾ ಮಂದಿರದಲ್ಲಿ ಇಂದು ನಡೆದ ಮೊದಲ ಮಾಸ್ಟರ್‌ ಕ್ಲಾಸ್‌ ನಲ್ಲಿ, ಖ್ಯಾತ ನಟ ಅನುಪಮ್ ಖೇರ್ ತಮ್ಮ ಮೋಡಿಮಾಡುವ ಪ್ರಸ್ತುತಿಯೊಂದಿಗೆ ನೂರಾರು ಜನರನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. 'ಸೋಲೊಪ್ಪಿಕೊಳ್ಳುವುದು ಒಂದು ಆಯ್ಕೆಯಲ್ಲ' ಎಂಬ ವಿಷಯದ ಕುರಿತು ನಡೆದ ಗೋಷ್ಠಿಯಲ್ಲಿ, ಅವರು ತಮ್ಮ ವಿಶಿಷ್ಟ ಜ್ಞಾನ ಮತ್ತು ಆಲೋಚನೆಗಳಿಂದ ಪ್ರೇಕ್ಷಕರ ಹೃದಯಗಳನ್ನು ಗೆದ್ದರು.

ಚಿತ್ರೀಕರಣಕ್ಕೆ ಕೆಲವೇ ದಿನಗಳ ಮೊದಲು 'ಸಾರಾಂಶ್' ಚಿತ್ರದಲ್ಲಿನ ಪ್ರಮುಖ ಪಾತ್ರವನ್ನು ಕಳೆದುಕೊಂಡು ಅದನ್ನು ಮರಳಿ ಪಡೆದ ಕಥೆಯನ್ನು ಹಂಚಿಕೊಳ್ಳುವ ಮೂಲಕ ಅನುಪಮ್ ಖೇರ್ ಗೋಷ್ಠಿಯನ್ನು ಪ್ರಾರಂಭಿಸಿದರು. ಆರು ತಿಂಗಳ ಕಾಲ ಪಾತ್ರಕ್ಕಾಗಿ ತಯಾರಿ ನಡೆಸಿದ ನಂತರ, ಹಠಾತ್ ನಿರಾಕರಣೆ ಅವರಿಗೆ ಆಘಾತವನ್ನುಂಟುಮಾಡಿತು. ತೀವ್ರ ಹತಾಶೆಯಲ್ಲಿ ಮತ್ತು ಮುಂಬೈಗೆ ಶಾಶ್ವತವಾಗಿ ವಿದಾಯ ಹೇಳುವ ದೃಢನಿಶ್ಚಯದಲ್ಲಿ, ಅವರು ಕೊನೆಯ ಬಾರಿಗೆ ನಿರ್ದೇಶಕ ಮಹೇಶ್ ಭಟ್ ಅವರನ್ನು ಭೇಟಿ ಮಾಡಲು ಹೋದರು. ಅನುಪಮ್ ಖೇರ್ ಅವರ ಬಲವಾದ ಪ್ರತಿಕ್ರಿಯೆಯನ್ನು  ನೋಡಿದ ಭಟ್ ಅವರನ್ನು ಮರುಪರಿಶೀಲಿಸಿ ಮತ್ತೆ ತಂಡಕ್ಕೆ ಸೇರಿಸಿಕೊಂಡರು. ಈ ಚಿತ್ರವು ನಂತರ  ಖೇರ್ ಅವರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲಾಯಿತು. ಈ ಅನುಭವದ ಬಗ್ಗೆ ಪ್ರತಿಕ್ರಿಯಿಸಿದ ಖೇರ್, 'ಸಾರಾಂಶ್' ಬಿಟ್ಟುಕೊಡದಿರಲು ಪಾಠ ಕಲಿಸಿತು ಎಂದು ಹೇಳಿದರು. ಈ ಹಿನ್ನಡೆ ಅವರ ಏಳಿಗೆಯ ಆರಂಭ ಮಾತ್ರ ಎಂದು ಅವರು ಹೇಳಿದರು.

"ನನ್ನ ಎಲ್ಲಾ ಪ್ರೇರಣಾ ಭಾಷಣಗಳು ನನ್ನ ಜೀವನ ಅನುಭವಗಳನ್ನು ಆಧರಿಸಿವೆ"

ಅನುಪಮ್ ಖೇರ್ ಅವರು ತಮ್ಮ ಸ್ವಂತ ಜೀವನದ ಅನೇಕ ಉದಾಹರಣೆಗಳನ್ನು ಗೋಷ್ಠಿಯಲ್ಲಿ  ಹಂಚಿಕೊಂಡರು. 14 ಸದಸ್ಯರ ಅವಿಭಕ್ತ ಕುಟುಂಬ ಮತ್ತು ಕೆಳಮಧ್ಯಮ ವರ್ಗದ ಮನೆಯಲ್ಲಿ ವಾಸಿಸುತ್ತಿದ್ದರೂ, ಅವರ ಅಜ್ಜ ಶಾಂತ ಸ್ವಭಾವ ಮತ್ತು ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದರು ಎಂದು ಅವರು ಹೇಳಿದರು. ಪ್ರತಿಕೂಲ ಸಂದರ್ಭಗಳ ನಡುವೆಯೂ ಅವರು ತಮ್ಮ ಸಂತೋಷದ ಬಾಲ್ಯವನ್ನು ನೆನಪಿಸಿಕೊಂಡರು ಮತ್ತು ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳುವ ತಮ್ಮ ಅಜ್ಜನ ಬೋಧನೆಗಳನ್ನು ಹಂಚಿಕೊಂಡರು.

"ವೈಫಲ್ಯ ಕೇವಲ ಒಂದು ಘಟನೆ, ಒಬ್ಬ ವ್ಯಕ್ತಿ ಎಂದಿಗೂ ವೈಫಲ್ಯವಲ್ಲ"

ಅನುಪಮ್ ಖೇರ್ ತಮ್ಮ ಬಾಲ್ಯದ ಹೃದಯಸ್ಪರ್ಶಿ ನೆನಪುಗಳನ್ನು ಹಂಚಿಕೊಂಡರು, ಅರಣ್ಯ ಇಲಾಖೆಯಲ್ಲಿ ಗುಮಾಸ್ತರಾಗಿದ್ದ ತಮ್ಮ ತಂದೆ ತಮ್ಮ ವಿಶ್ವ ದೃಷ್ಟಿಕೋನವನ್ನು ಹೇಗೆ ರೂಪಿಸಿಕೊಂಡರು ಎಂಬುದನ್ನು ನೆನಪಿಸಿಕೊಂಡರು. 60 ವಿದ್ಯಾರ್ಥಿಗಳಿದ್ದ ತರಗತಿಯಲ್ಲಿ ಖೇರ್ 58 ನೇ ಸ್ಥಾನ ಪಡೆದಿದ್ದಾರೆ ಎಂದು ಅವರ ತಂದೆ ರಿಪೋರ್ಟ್ ಕಾರ್ಡ್‌ನಿಂದ ತಿಳಿದುಕೊಂಡ ಘಟನೆಯನ್ನು ಖೇರ್ ನೆನಪಿಸಿಕೊಂಡರು. ಫಲಿತಾಂಶದ ಬಗ್ಗೆ ಅಸಮಾಧಾನಗೊಳ್ಳುವ ಬದಲು, ಅವರ ತಂದೆ ಸ್ವಲ್ಪ ಸಮಯದವರೆಗೆ ಮೌನವಾಗಿದ್ದರು ಮತ್ತು "ಒಂದು ತರಗತಿಯಲ್ಲಿ ಅಥವಾ ಕ್ರೀಡೆಯಲ್ಲಿ ಮೊದಲ ಸ್ಥಾನ ಪಡೆಯುವ ಹುಡುಗನಿಗೆ ಆ ದಾಖಲೆಯನ್ನು ಕಾಯ್ದುಕೊಳ್ಳುವ ಒತ್ತಡವಿರುತ್ತದೆ, ಏಕೆಂದರೆ ಅದಕ್ಕಿಂತ ಕಡಿಮೆ ಇರುವ ಯಾವುದನ್ನಾದರೂ ವೈಫಲ್ಯವೆಂದು ಪರಿಗಣಿಸಲಾಗುತ್ತದೆ. ಆದರೆ 58 ನೇ ಸ್ಥಾನ ಪಡೆದ ಹುಡುಗನಿಗೆ ತನ್ನ ಸ್ಥಾನವನ್ನು ಸುಧಾರಿಸಿಕೊಳ್ಳಲು ಒಂದು ದೊಡ್ಡ ಅವಕಾಶವಿದೆ. ಆದ್ದರಿಂದ, ನನಗೆ ಒಂದು ಉಪಕಾರ ಮಾಡು, ಮುಂದಿನ ಬಾರಿ 48 ನೇ ಸ್ಥಾನಕ್ಕೆ ಬಾ" ಎಂದು ಹೇಳಿದರು.

"ನಿಮ್ಮ ಸ್ವಂತ ಜೀವನಚರಿತ್ರೆಯಲ್ಲಿ ಮುಖ್ಯ ಪಾತ್ರವಾಗಿರಿ"

ಗೋಷ್ಠಿಯ ಉದ್ದಕ್ಕೂ, ಅವರು ತಮ್ಮ ಜೀವನದ ಹಲವಾರು ಘಟನೆಗಳು ಮತ್ತು ಉದಾಹರಣೆಗಳನ್ನು ನೀಡುವ ಮೂಲಕ ಪ್ರೇಕ್ಷಕರು ತಮ್ಮ ದೃಷ್ಟಿಕೋನವನ್ನು ಸುಧಾರಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ವ್ಯಕ್ತಿತ್ವ ಎಂದರೆ ನೀವು ಹೇಗಿದ್ದೀರೋ ಹಾಗೆಯೇ ಆರಾಮವಾಗಿರುವುದು ಎಂದು ಅವರು ವಿವರಿಸಿದರು. ಪ್ರೇಕ್ಷಕರು ತಮ್ಮನ್ನು ತಾವು ನಂಬಬೇಕು ಮತ್ತು ತಮ್ಮದೇ ಆದ ಜೀವನಚರಿತ್ರೆಯಲ್ಲಿ ಕೇಂದ್ರ ಪಾತ್ರವಾಗಬೇಕೆಂದು ಅವರು ಪದೇ ಪದೇ ಒತ್ತಾಯಿಸಿದರು. "ಜೀವನ ಏಕೆ ಸುಲಭ ಅಥವಾ ಸರಳವಾಗಿರಬೇಕು? ಜೀವನದಲ್ಲಿ ಏಕೆ ಸಮಸ್ಯೆಗಳಿರಬಾರದು?” ಎಂದು ಅವರು ಪ್ರಶ್ನಿಸಿದ ಅವರು, “ಏಕೆಂದರೆ ನಿಮ್ಮ ಜೀವನ ಚರಿತ್ರೆಯೇ ನಿಮ್ಮ ಜೀವನ ಚರಿತ್ರೆಯನ್ನು ಸೂಪರ್‌ ಸ್ಟಾರ್ ಜೀವನ ಚರಿತ್ರೆಯನ್ನಾಗಿ ಮಾಡುತ್ತದೆ" ಎಂದು ಹೇಳಿದರು.

ಪ್ರಶ್ನೋತ್ತರ ಅವಧಿಯ ಉದ್ದಕ್ಕೂ ಈ ಮೋಜಿನ ಏಕವ್ಯಕ್ತಿ ಪ್ರದರ್ಶನವು ಎಲ್ಲರ ಗಮನವನ್ನು ಸೆಳೆಯಿತು. ಅವರ ಅಂತಿಮ ಉತ್ತರದಲ್ಲಿ, "'ಸೋಲೊಪ್ಪಿಕೊಳ್ಳುವುದು ಒಂದು ಆಯ್ಕೆಯಲ್ಲ' ಎಂಬುದು ಕೇವಲ ಒಂದು ಮಾತಲ್ಲ. ಅದು ತುಂಬಾ ಕಠಿಣ ಪರಿಶ್ರಮ. ನೀವು ಏನನ್ನಾದರೂ ಬಯಸಿದರೆ, ನೀವು ತ್ಯಾಗ ಮಾಡಬೇಕು ಮತ್ತು ಪರಿಶ್ರಮ ಪಡಲು ನಿಮ್ಮನ್ನು ಮನವೊಲಿಸಿಕೊಳ್ಳಬೇಕು ಎಂದು ನಾನು ನಂಬುತ್ತೇನೆ. ನೀವು ನಿರಾಶೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸ್ನೇಹಿತರೇ, ನೀವು ಸೋಲೊಪ್ಪಿಕೊಂಡರೆ, ಕಥೆ ಅಲ್ಲಿಗೆ ಕೊನೆಗೊಳ್ಳುತ್ತದೆ" ಎಂದು ಹೇಳಿದರು.

ಐ ಎಫ್ ಎಫ್ ಐ ಬಗ್ಗೆ

1952ರಲ್ಲಿ ಪ್ರಾರಂಭವಾದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ ಎಫ್‌ ಡಿ ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್‌ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ.ಎಫ್.ಎಫ್.ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತರರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್‌ ಗಳು, ಗೌರವಗಳು ಮತ್ತು ವೇವ್ಸ್‌ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Post Link: https://x.com/PIB_Panaji/status/1991438887512850647?s=20

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


रिलीज़ आईडी: 2193309   |   Visitor Counter: 3

इस विज्ञप्ति को इन भाषाओं में पढ़ें: Konkani , English , Urdu , हिन्दी , Marathi , Gujarati