ಪ್ರಧಾನ ಮಂತ್ರಿಯವರ ಕಛೇರಿ
ರಷ್ಯಾ ಅಧ್ಯಕ್ಷರ ಅನುಯಾಯಿಗಳಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭೇಟಿ
ಸಂಪರ್ಕ, ಹಡಗು ನಿರ್ಮಾಣ ಮತ್ತು ನೀಲಿ ಆರ್ಥಿಕತೆಯಲ್ಲಿ ಸಹಕಾರವನ್ನು ಬಲಪಡಿಸುವ ಬಗ್ಗೆ ಅವರು ಚರ್ಚೆ ನಡೆಸಿದರು
ಮುಂದಿನ ತಿಂಗಳು ಭಾರತದಲ್ಲಿ ಅಧ್ಯಕ್ಷರಾದ ಪುಟಿನ್ ಅವರಿಗೆ ಆತಿಥ್ಯ ನೀಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ ಪ್ರಧಾನಮಂತ್ರಿ
प्रविष्टि तिथि:
18 NOV 2025 9:05PM by PIB Bengaluru
ರಷ್ಯಾ ಒಕ್ಕೂಟದ ಸಾಗರ ಮಂಡಳಿಯ ಅಧ್ಯಕ್ಷರಾದ ಮತ್ತು ರಷ್ಯಾದ ರಾಷ್ಟಾಧ್ಯಕ್ಷರಾದ ಪುಟಿನ್ ಅವರ ಅನುಯಾಯಿಯಾದ ಶ್ರೀ ನಿಕೊಲಾಯ್ ಪತ್ರುಶೇವ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಸಂಪರ್ಕ, ಕೌಶಲ್ಯ ಅಭಿವೃದ್ಧಿ, ಹಡಗು ನಿರ್ಮಾಣ ಮತ್ತು ನೀಲಿ ಆರ್ಥಿಕತೆಯ ಸಹಯೋಗದಲ್ಲಿ ಹೊಸ ಅವಕಾಶಗಳು ಸೇರಿದಂತೆ ಸಮುದ್ರ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಕುರಿತಾಗಿ ಅವರಿಬ್ಬರೂ ಚರ್ಚೆ ನಡೆಸಿದರು.
ಪ್ರಧಾನಮಂತ್ರಿ ಅವರು ಅಧ್ಯಕ್ಷರಾದ ಪುಟಿನ್ ಅವರಿಗೆ ತಮ್ಮ ಆತ್ಮೀಯ ಶುಭಾಶಯಗಳನ್ನು ತಿಳಿಸಿ, ಮುಂದಿನ ತಿಂಗಳು ಭಾರತದಲ್ಲಿ ಅವರನ್ನು ಆಹ್ವಾನಿಸಿ ಆತಿಥ್ಯ ನೀಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.
*****
(रिलीज़ आईडी: 2191553)
आगंतुक पटल : 5
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam