ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಮನೀಷಾ ರಾಮದಾಸ್, ಮನ್‌ದೀಪ್ ಕೌರ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 26 OCT 2023 9:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್ SL3-SU5 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಮನೀಷಾ ರಾಮದಾಸ್ ಮತ್ತು ಮನ್‌ದೀಪ್ ಕೌರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಅವರ ಅನುಕರಣೀಯ ಸಮನ್ವಯ ಮತ್ತು ದೃಢಸಂಕಲ್ಪವನ್ನು ಸಹ ಅವರು ಶ್ಲಾಘಿಸಿದರು.

ಪ್ರಧಾನಮಂತ್ರಿ ಅವರು 'ಎಕ್ಸ್' (X) ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಮಹಿಳೆಯರ ಡಬಲ್ಸ್ ಬ್ಯಾಡ್ಮಿಂಟನ್ SL3-SU5 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮನೀಷಾ ರಾಮದಾಸ್ ಮತ್ತು ಮನ್‌ದೀಪ್ ಕೌರ್ ಅವರಿಗೆ ಅಭಿನಂದನೆಗಳು.

ಅವರು ಅನುಕರಣೀಯ ಸಮನ್ವಯ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿದ್ದಾರೆ."

 

*****


(ಪ್ರಕಟಣೆ ಐ.ಡಿ.: 2189236) ವಿಸಿಟರ್ ಕೌಂಟರ್ : 20