ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮರಗಳು ಮತ್ತು ಸರೋವರಗಳನ್ನು ಒಳಗೊಂಡ ಪ್ರಕೃತಿಯೊಂದಿಗೆ ಬೆಂಗಳೂರು ಗಾಢವಾದ ಸಂಬಂಧ ಹೊಂದಿದೆ: ಪ್ರಧಾನಮಂತ್ರಿ

प्रविष्टि तिथि: 01 APR 2023 9:33AM by PIB Bengaluru

ಮರಗಳು ಮತ್ತು ಸರೋವರಗಳನ್ನು ಒಳಗೊಂಡ ಪ್ರಕೃತಿಯೊಂದಿಗೆ ಬೆಂಗಳೂರು ಒಂದು ಗಾಢವಾದ ಸಂಬಂಧವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ವೈವಿಧ್ಯಮಯ ಮರಗಳ ಸಂಗ್ರಹದ ವಿವರವಾದ ವಿವರಣೆಯ ಕುರಿತು ಪ್ರಕೃತಿ ಪ್ರೇಮಿ, ತೋಟಗಾರ ಮತ್ತು ಕಲಾವಿದೆ ಶ್ರೀಮತಿ ಸುಭಾಷಿಣಿ ಚಂದ್ರಮಣಿ ಅವರ ಟ್ವೀಟ್ ಥ್ರೆಡ್‌ಗಳಿಗೆ ಪ್ರತ್ಯುತ್ತರ ನೀಡಿದ ಪ್ರಧಾನಿಯವರು, ಜನರು ತಮ್ಮ ಪಟ್ಟಣಗಳು ಮತ್ತು ನಗರಗಳ ಇಂತಹ ಅಂಶಗಳನ್ನು ಪ್ರದರ್ಶಿಸಲು ಇತರ ವಿಷಯಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು.

ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಬೆಂಗಳೂರು ಮತ್ತು ಅದರ ಮರಗಳ ಬಗ್ಗೆ ಇದು ಒಂದು ಆಸಕ್ತಿದಾಯಕ ಥ್ರೆಡ್ ಆಗಿದೆ. ಮರಗಳು ಮತ್ತು ಸರೋವರಗಳನ್ನು ಒಳಗೊಂಡ ಪ್ರಕೃತಿಯೊಂದಿಗೆ ಬೆಂಗಳೂರು ಒಂದು ಗಾಢವಾದ ಸಂಬಂಧವನ್ನು ಹೊಂದಿದೆ.

ಇತರರು ಸಹ ತಮ್ಮ ಪಟ್ಟಣಗಳು ಮತ್ತು ನಗರಗಳ ಇಂತಹ ಅಂಶಗಳನ್ನು ಪ್ರದರ್ಶಿಸಲು ನಾನು ಒತ್ತಾಯಿಸುತ್ತೇನೆ. ಇದು ಒಂದು ಆಸಕ್ತಿದಾಯಕ ಓದು ಆಗಿರುತ್ತದೆ."

 

*****

 


(रिलीज़ आईडी: 2188802) आगंतुक पटल : 20
इस विज्ञप्ति को इन भाषाओं में पढ़ें: Marathi , English , Urdu , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam