ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಐಸಿಸಿ ಮಹಿಳಾ ವಿಶ್ವಕಪ್ 2025 ಚಾಂಪಿಯನ್‌ಗಳೊಂದಿಗೆ ಪ್ರಧಾನಮಂತ್ರಿ ಸಂವಾದ


ಟ್ರೋಫಿ ಗೆದ್ದು, ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ

ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಮೂಲಕ ಇತರರನ್ನು ಪ್ರೇರೇಪಿಸುವಂತೆ ಆಟಗಾರರಿಗೆ ಪ್ರಧಾನಮಂತ್ರಿ ಕರೆ, ಪ್ರತಿ ಆಟಗಾರ್ತಿಯೂ ಒಂದು ವರ್ಷದಲ್ಲಿ ಮೂರು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಭೇಟಿ ನೀಡಲು ಸೂಚನೆ  

ಬೊಜ್ಜಿನ ಸಮಸ್ಯೆ ಎದುರಿಸಲು ಫಿಟ್ ಇಂಡಿಯಾ ಆಂದೋಲನಕ್ಕೆ ಒತ್ತು ನೀಡುವಂತೆ ಪ್ರಧಾನಮಂತ್ರಿಕರೆ; ಎಲ್ಲರ, ವಿಶೇಷವಾಗಿ ದೇಶದ ಹೆಣ್ಣುಮಕ್ಕಳ ಪ್ರಯೋಜನಕ್ಕಾಗಿ ಅದನ್ನು ಉತ್ತೇಜಿಸಲು ಆಟಗಾರರಿಗೆ ಆಗ್ರಹ

Posted On: 06 NOV 2025 1:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಲೋಕ ಕಲ್ಯಾಣ ಮಾರ್ಗದ ನಂಬರ್‌ 7ರಲ್ಲಿ ಐಸಿಸಿ ಮಹಿಳಾ ವಿಶ್ವಕಪ್‌ 2025 ಚಾಂಪಿಯನ್ ಗಳೊಂದಿಗೆ ಸಂವಾದ ನಡೆಸಿದರು. 2025ರ ನವೆಂಬರ್ 2ರಂದು ರಾತ್ರಿ ನಡೆದ ಫೈನಲ್ಸ್‌ ನಲ್ಲಿ ಭಾರತ ತಂಡ ದಕ್ಷಿಣಾ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿತು. ದೇವ ದೀಪಾವಳಿ ಮತ್ತು ಗುರುಪುರಬ್ ಎರಡನ್ನೂ ಗುರುತಿಸುವ ಈ ದಿನವು ಬಹಳ ಮಹತ್ವದ ದಿನವಾಗಿದೆ ಎಂದು ಪ್ರಧಾನಮಂತ್ರಿಹೇಳಿದರು ಮತ್ತು ಹಾಜರಿದ್ದ ಎಲ್ಲಾ ಆಟಗಾರ್ತಿಯರಿಗೂ ಶುಭ ಕೋರಿದರು.

ಪ್ರಧಾನಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದ ತಂಡದ ತರಬೇತುದಾರ ಶ್ರೀ ಅಮೋಲ್ ಮಜುಂದಾರ್, ಪ್ರಧಾನಮಂತ್ರಿಅವರನ್ನು ಭೇಟಿಯಾಗಿದ್ದು ಹಮ್ಮೆ ತಂದಿದೆ ಮತ್ತು ಇದು ತಮ್ಮ ಸೌಭಾಗ್ಯ ಎಂದು ಹೇಳಿದರು. ರಾಷ್ಟ್ರದ ಹೆಣ್ಣುಮಕ್ಕಳ ನೇತೃತ್ವದ ಅಭಿಯಾನವಾಗಿ ಆಟಗಾರ್ತಿಯರ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಾ, ಕಳೆದೆರಡು ವರ್ಷಗಳಲ್ಲಿ ಅವರ ಅಚಲ ಬದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯುವತಿಯರು ಪ್ರತಿ ಅಭ್ಯಾಸ ಅವಧಿಯಲ್ಲೂ ಅಷ್ಟೇ ತೀವ್ರವಾಗಿ ಗಮನಹರಿಸುತ್ತಾ ಮತ್ತು ಶಕ್ತಿಯಿಂದ ಆಡಿದರು ಮತ್ತು ಅವರ ಕಠಿಣ ಪರಿಶ್ರಮವು ಫಲವನ್ನು ನೀಡಿದೆ ಎಂದು ಅವರು ಹೇಳಿದರು.

ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 2017ರಲ್ಲಿ ಟ್ರೋಫಿ ಇಲ್ಲದೆ ಪ್ರಧಾನಮಂತ್ರಿಅವರನ್ನು ಭೇಟಿಯಾಗಿದ್ದನ್ನು ನೆನಪು ಮಾಡಿಕೊಂಡರು ಮತ್ತು ಅವರು ಹಲವು ವರ್ಷಗಳಿಂದ ಶ್ರಮಿಸಿ ಇದೀಗ ಟ್ರೋಫಿಯನ್ನು ನೀಡುತ್ತಿರುವುದಕ್ಕೆ ತುಂಬಾ ಹೆಮ್ಮೆ ಇದೆ ಎಂದರು. ಪ್ರಧಾನಮಂತ್ರಿ ಅವರು ತಮ್ಮ ಸಂತೋಷವನ್ನು ದ್ವಿಗುಣಗೊಳಿಸಿದ್ದಾರೆ ಮತ್ತು ಇದು ತುಂಬಾ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಅವರನ್ನು ಅಗ್ಗಾಗ್ಗೆ ಭೇಟಿಯಾಗುವುದು ಮತ್ತು ಅವರೊಂದಿಗೆ ತಂಡದ ಛಾಯಾಚಿತ್ರಗಳನ್ನು ತೆಗೆಸಿಕೊಳ್ಳುವುದನ್ನು ಮುಂದುವರಿಸಬೇಕು ಎಂಬುದು ಪ್ರಧಾನಮಂತ್ರಿಅವರ ಗುರಿಯಾಗಿದೆ ಎಂದು ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು ತಂಡದ ಸಾಧನೆಯನ್ನು ಗುರುತಿಸಿದರು ಮತ್ತು ಅವರು ನಿಜವಾಗಿಯೂ ಮಹತ್ವದ್ದನ್ನು ಸಾಧಿಸಿದ್ದಾರೆ ಎಂದು ಹೇಳಿದರು. ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ, ಬದಲಾಗಿ ಅದು ಜನರ ಜೀವನದ ಒಂದು ಅವಿಭಾಜ್ಯ ಭಾಗವಾಗಿದೆ ಎಂದು ಅವರು ಒತ್ತಿ ಹೇಳಿದರು. ಕ್ರಿಕೆಟ್ ಪಂದ್ಯದಲ್ಲಿ ಚೆನ್ನಾಗಿ ಆಡಿದಾಗ, ದೇಶದಲ್ಲಿ ಏಳಿಗೆಯ ಭಾವನೆ ಮೂಡುತ್ತದೆ ಮತ್ತು ಸ್ವಲ್ಪ ಹಿನ್ನಡೆ ಕೂಡ ಇಡೀ ದೇಶವನ್ನು ಅಲುಗಾಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಸತತ ಮೂರು ಪಂದ್ಯಗಳಲ್ಲಿ ಸೋತ ನಂತರ ತಂಡವು ಟ್ರೋಲಿಂಗ್ ಅನ್ನು ಹೇಗೆ ಎದುರಿಸಿತು ಎಂಬುದನ್ನು ಅವರು ಪ್ರಸ್ತಾಪಿಸಿದರು.

2017ರಲ್ಲಿ ಫೈನಲ್‌ನಲ್ಲಿ ಸೋಲುಂಡ ನಂತರ ನಾವು ಪ್ರಧಾನಮಂತ್ರಿಅವರನ್ನು ಭೇಟಿಯಾಗಿದ್ದೆವು, ಆದರೆ ಮುಂದಿನ ಅವಕಾಶ ಸಿಕ್ಕಾಗಲೆಲ್ಲಾ ನೀವು ಅತ್ಯುತ್ತಮ ಪ್ರದರ್ಶನ ನೀಡಬೇಕೆಂದು ಅವರು ಪ್ರೇರೇಪಿಸುತ್ತಿದ್ದರು ಎಂದು ಹರ್ಮನ್‌ಪ್ರೀತ್ ಕೌರ್ ಪುನರುಚ್ಚರಿಸಿದರು. ಅಂತಿಮವಾಗಿ ಟ್ರೋಫಿ ಗೆದ್ದು ಮತ್ತೆ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವರು ಸ್ಮೃತಿ ಮಂಧಾನ ಅವರನ್ನು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದರು. 2017ರಲ್ಲಿ ತಂಡವು ಟ್ರೋಫಿ ಗೆದ್ದು ತವರಿಗೆ ಬಂದಿರಲಿಲ್ಲ ಎಂಬುದನ್ನು ನೆನಪಿಸಿಕೊಂಡ ಸ್ಮೃತಿ ಮಂಧಾನ, ಆದರೆ ನಿರೀಕ್ಷೆಗಳನ್ನು ನಿಭಾಯಿಸುವ ಬಗ್ಗೆ ಪ್ರಧಾನಮಂತ್ರಿಅವರನ್ನು ಪ್ರಶ್ನೆ ಕೇಳಿದ್ದನ್ನು ಸ್ಮರಿಸಿದರು.  ಅವರ ಉತ್ತರವು ತಮ್ಮೊಂದಿಗೆ ಉಳಿಯಿತು ಮತ್ತು ಮುಂದಿನ ಆರರಿಂದ ಏಳು ವರ್ಷಗಳಲ್ಲಿ ಹಲವಾರು ಹೃದಯವಿದ್ರಾವಕ ವಿಶ್ವಕಪ್ ಸೋಲುಗಳ ಹೊರತಾಗಿಯೂ ತಂಡಕ್ಕೆ ಅಪಾರವಾಗಿ ಸಹಾಯ ಮಾಡಿತು ಎಂದು ಅವರು ಹೇಳಿದರು. ಭಾರತವು ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಅನ್ನು ಆಯೋಜಿಸುವುದು ಅದೃಷ್ಟವೆಂದು ಭಾವಿಸಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಅವರು ಸದಾ ಸ್ಫೂರ್ತಿಯ ಸೆಲೆಯಾಗಿದ್ದಾರೆ, ವಿಶೇಷವಾಗಿ ಇಸ್ರೋ ಉಡಾವಣೆಗಳಿಂದ ಹಿಡಿದು ಇತರ ರಾಷ್ಟ್ರೀಯ ಸಾಧನೆಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಈಗ ಸಾಧನೆಗಳನ್ನು ಮಾಡುತ್ತಿದ್ದಾರೆ. ಅವರು ಉತ್ತಮವಾಗಿ ಪ್ರದರ್ಶನ ನೀಡಲು ಮತ್ತು ಇತರ ಯುವತಿಯರಿಗೆ ಸ್ಫೂರ್ತಿ ನೀಡಲು ಆಳವಾದ ಪ್ರೇರಕ ಮತ್ತು ಸಬಲೀಕರಣ ಎಂದು ಅವರು ವಿವರಿಸಿದರು. ಇಡೀ ರಾಷ್ಟ್ರವು ತಂಡದತ್ತ ನೋಡುತ್ತಿದೆ ಮತ್ತು ಹೆಮ್ಮೆಪಡುತ್ತಿದೆ ಮತ್ತು ಅವರ ಅನುಭವಗಳನ್ನು ಕೇಳಲು ಅವರು ನಿಜವಾಗಿಯೂ ಬಯಸುತ್ತಾರೆ ಎಂದು ಶ್ರೀ ನರೇಂದ್ರ ಮೋದಿ ಪ್ರತಿಕ್ರಿಯಿಸಿದರು. ಈ ಅಭಿಯಾನದ ಅತ್ಯುತ್ತಮ ಭಾಗವೆಂದರೆ ಪ್ರತಿಯೊಬ್ಬ ಆಟಗಾರ್ತಿಯೂ ಮನೆಗೆ ಹೋಗಿ ತಮ್ಮ ಕಥೆಯನ್ನು ಹಂಚಿಕೊಳ್ಳಬಹುದು, ಏಕೆಂದರೆ ಯಾರೊಬ್ಬರ ಕೊಡುಗೆಯೂ ಕಡಿಮೆಯೇನಲ್ಲ ಎಂದು ಸ್ಮೃತಿ ಮಂಧಾನ ಹೇಳಿದರು. ನಿರೀಕ್ಷೆಗಳನ್ನು ನಿಭಾಯಿಸುವ ಬಗ್ಗೆ ಪ್ರಧಾನಿಯವರ ಹಿಂದಿನ ಸಲಹೆ ಸದಾ ತನ್ನ ಮನಸ್ಸಿನಲ್ಲಿ ಉಳಿಯುತ್ತಿತ್ತು ಮತ್ತು ಅವರ ಶಾಂತ ಮತ್ತು ಸಂಯಮದ ನಡವಳಿಕೆಯೇ ಸ್ಫೂರ್ತಿಯ ಮೂಲವಾಗಿದೆ ಎಂದು ಅವರು ಪುನರುಚ್ಚರಿಸಿದರು.

ಜೆಮಿಮಾ ರೊಡ್ರಿಗಸ್ ತಂಡದ ಪ್ರಯಾಣದ ಬಗ್ಗೆ ಬೆಳಕು ಚೆಲ್ಲುತ್ತಾ, ಮೂರು ಪಂದ್ಯಗಳಲ್ಲಿ ಸೋತಾಗ ಒಂದು ತಂಡವು ಎಷ್ಟು ಬಾರಿ ಗೆಲ್ಲುತ್ತದೆ ಎಂಬುದರ ಮೂಲಕ ವ್ಯಾಖ್ಯಾನಿಸಲ್ಪಡುವುದಿಲ್ಲ, ಆದರೆ ಪತನದ ನಂತರ ಅದು ಹೇಗೆ ಮೇಲೇರುತ್ತದೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು. ನಮ್ಮ ಈ ತಂಡವು ಅದನ್ನು ಉತ್ತಮವಾಗಿ ಮಾಡಿದೆ ಎಂದು ಅವರು ದೃಢಪಡಿಸಿದರು ಮತ್ತು ಅದಕ್ಕಾಗಿಯೇ ಇದು ಚಾಂಪಿಯನ್ ತಂಡವಾಗಿದೆ ಎಂದರು. ತಂಡದೊಳಗಿನ ಒಗ್ಗಟ್ಟನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿ, ನಾನು ಈವರೆಗೆ ನೋಡಿದ ಅತ್ಯುತ್ತಮ ತಂಡ ಎಂದು ಕರೆದರು. ಯಾವುದೇ ಆಟಗಾರ್ತಿ ಉತ್ತಮವಾಗಿ ಪ್ರದರ್ಶನ ನೀಡಿದಾಗಲೆಲ್ಲಾ, ಎಲ್ಲರೂ ತಾವು ರನ್ ಗಳಿಸಿದಂತೆ ಅಥವಾ ವಿಕೆಟ್ ಪಡೆದಂತೆ ಸಂಭ್ರಮಿಸುತ್ತಾರೆ ಎಂದು ಅವರು ಹಂಚಿಕೊಂಡರು. ಅದೇ ರೀತಿ, ಯಾರಾದರೂ ಕೆಳಗೆ ಬಿದ್ದಾಗಲೆಲ್ಲಾ, ತಂಡದ ಇತರ ಆಟಗಾರ್ತಿಯರು ತಮ್ಮ ಭುಜದ ಮೇಲೆ ಕೈಯಿಟ್ಟು, "ಚಿಂತಿಸಬೇಡ, ಮುಂದಿನ ಪಂದ್ಯದಲ್ಲಿ ನೀನು ಅದನ್ನು ಸಾಧಿಸುತ್ತೀಯ’’ ಎಂದು ಹೇಳುತ್ತಿದ್ದರು. ಈ ಬೆಂಬಲ ಮತ್ತು ಒಗ್ಗಟ್ಟಿನ ಮನೋಭಾವವು ನಿಜವಾಗಿಯೂ ತಂಡವನ್ನು ವ್ಯಾಖ್ಯಾನಿಸಿತು ಎಂದರು.

ಜೆಮಿಮಾ ರೊಡ್ರಿಗಸ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸ್ನೇಹ ರಾಣಾ, ಯಶಸ್ಸಿನ ಕ್ಷಣಗಳಲ್ಲಿ ಎಲ್ಲರೂ ಒಗಟ್ಟಿನಿಂದು ನಿಲ್ಲುವುದು, ಕುಸಿಯುತ್ತಿದ್ದ ಸಮಯದಲ್ಲಿ ಪರಸ್ಪರ ಬೆಂಬಲಿಸುವುದು ಇನ್ನೂ ಮುಖ್ಯ ಎಂದು ಹೇಳಿದರು. ಒಂದು ತಂಡವಾಗಿ ಮತ್ತು ಒಂದು ಘಟಕವಾಗಿ, ಏನೇ ಘಟಿಸಿದರೂ ಎಂದಿಗೂ ಪರಸ್ಪರ ಒಬ್ಬರನ್ನು ಒಬ್ಬರು ಕೈ ಬಿಡುವುದಿಲ್ಲ ಮತ್ತು ಸದಾ ಒಬ್ಬರನ್ನೊಬ್ಬರು ಮೇಲಕ್ಕೆತ್ತುತ್ತಾರೆ ಎಂದು ಅವರು ಒತ್ತಿ ಹೇಳಿದರು. ಇದು ಅವರ ತಂಡದ ಅತ್ಯುತ್ತಮ ಗುಣ ಎಂದು ಅವರು ಖಚಿತಪಡಿಸಿದರು.

ಹರ್ಮನ್‌ಪ್ರೀತ್ ಕೌರ್ ಸದಾ ಎಲ್ಲರೂ ನಗುತ್ತಲೇ ಇರುವಂತೆ ಪ್ರೋತ್ಸಾಹಿಸುತ್ತಿದ್ದರು ಎಂದು ಕ್ರಾಂತಿ ಗೌಡ್ ಹೇಳಿದರು. ಯಾರಾದರೂ ಸ್ವಲ್ಪ ಆತಂಕಗೊಂಡಂತೆ ಕಂಡುಬಂದರೂ, ತಂಡದ ಮನೋಭಾವವು ನಗುತ್ತಲೇ ಇರುವುದನ್ನು, ಆದ್ದರಿಂದ ಪರಸ್ಪರ ನಗುವುದನ್ನು ನೋಡುವುದರಿಂದ ಎಲ್ಲರೂ ಹರ್ಷಚಿತ್ತದಿಂದ ಮತ್ತು ಆತ್ಮವಿಶ್ವಾಸದಿಂದಿರಲು ಸಹಾಯಕವಾಯಿತು ಎಂದು ಅವರು ಹಂಚಿಕೊಂಡರು. ತಂಡದಲ್ಲಿ ಎಲ್ಲರನ್ನೂ ನಗಿಸಲು ಯಾರಾದರೂ ಇದ್ದಾರೆಯೇ ಎಂದು ಪ್ರಧಾನಮಂತ್ರಿ ಕೇಳಿದರು, ಅದಕ್ಕೆ ಜೆಮಿಮಾ ರೊಡ್ರಿಗಸ್ ಆ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಕ್ರಾಂತಿ ಪ್ರತಿಕ್ರಿಯಿಸಿದರು. ಹರ್ಲೀನ್ ಕೌರ್ ದಿಯೋಲ್  ಇಡೀ ತಂಡದಲ್ಲಿ ಒಗ್ಗಟ್ಟು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜೆಮಿಮಾ ಹೇಳಿದರು.

ಪ್ರತಿ ತಂಡದಲ್ಲಿ ಸುತ್ತಲಿನ ವಾತಾವರಣವನ್ನು ಹಾಸ್ಯದಿಂದ ಕೂಡಿರುವಂತೆ ನೋಡಿಕೊಳ್ಳುವ  ಯಾರಾದರೂ ಇರಬೇಕೆಂಬುದನ್ನು ನಾನು ನಂಬುತ್ತೇನೆ ಎಂದು ಹರ್ಲೀನ್ ಕೌರ್ ದಿಯೋಲ್ ತಮ್ಮ ಅನಿಸಿಕೆ ಹಂಚಿಕೊಂಡರು. ಯಾರಾದರೂ ಒಬ್ಬಂಟಿಯಾಗಿ ಕುಳಿತಿರುವುದನ್ನು ಗಮನಿಸಿದಾಗ ಅಥವಾ ತನಗೆ ಸ್ವಲ್ಪ ಬಿಡುವಿನ ಸಮಯ ಸಿಕ್ಕಾಗ, ಸಣ್ಣ ಸಣ್ಣ ರೀತಿಯಲ್ಲಿ ಇತರರೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು. ತನ್ನ ಸುತ್ತಲಿನ ಜನರು ಸಂತೋಷವಾಗಿರುವಾಗ ಅದು ತನಗೆ ಸಂತೋಷವನ್ನು ನೀಡುತ್ತದೆ ಎಂದು ಅವರು ಹರ್ಷ  ವ್ಯಕ್ತಪಡಿಸಿದರು.

ತಂಡ ಇಲ್ಲಿಗೆ ಬಂದ ನಂತರ ಏನಾದರೂ ಮಾಡಿದೆಯೇ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕೇಳಿದರು. ಇತರರು ತನ್ನನ್ನು ನೀವು  ತುಂಬಾ ಜೋರಾಗಿ ಮಾತನಾಡುತ್ತೀಯಾ, ಸ್ವಲ್ಪ ಸಮಾಧಾನದಿಂದ ಇರಬೇಕೆಂದು ಹೇಳಿದ್ದಾಗಿ ಲಘುಧಾಟಿಯಲ್ಲಿ ಹೇಳಿದರು. ನಂತರ ಅವರು ಪ್ರಧಾನಮಂತ್ರಿ ಅವರನ್ನು ಅವರ ಚರ್ಮದ ಆರೈಕೆಯ ಬಗ್ಗೆ ಕೇಳಿ, ಅದು ತುಂಬಾ ಹೊಳೆಯುತ್ತಿರುತ್ತದಲ್ಲಾ ಹೇಗೆ ಎಂದರು, ಪ್ರಧಾನಿಯವರು ಸಾಧಾರಣವಾಗಿ ಪ್ರತಿಕ್ರಿಯಿಸಿ, ಆ ವಿಷಯದ ಬಗ್ಗೆ ತಾವು ಹೆಚ್ಚು ಗಮನ ಹರಿಸಿಲ್ಲ ಎಂದು ಹೇಳಿದರು. ಕೋಟ್ಯಂತರ ಭಾರತೀಯರ ಪ್ರೀತಿಯೇ ತಮ್ಮನ್ನು ಹೊಳೆಯುವಂತೆ ಮಾಡುತ್ತದೆ ಎಂದು ಒಬ್ಬ ಆಟಗಾರ್ತಿ ಹೇಳಿದರು. ಸಮಾಜದಿಂದ ಅಂತಹ ಪ್ರೀತಿ ನಿಜಕ್ಕೂ ಒಂದು ದೊಡ್ಡ ಶಕ್ತಿ ಎಂದು ಪ್ರಧಾನಮಂತ್ರಿಅವರು ಒಪ್ಪಿಕೊಂಡರು. ಸರ್ಕಾರದ ಮುಖ್ಯಸ್ಥರಾಗಿ ಸೇರಿದಂತೆ ಸರ್ಕಾರದಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿದ್ದೇನೆ ಮತ್ತು ಇಷ್ಟು ದೀರ್ಘಾವಧಿಯ ನಂತರವೂ ಅಂತಹ ಆಶೀರ್ವಾದಗಳನ್ನು ಪಡೆಯುವುದು ಶಾಶ್ವತ ಪರಿಣಾಮ ಬೀರುತ್ತದೆ ಎಂದು ಅವರು ಉಲ್ಲೇಖಿಸಿದರು.

ತಂಡದ ತರಬೇತುದಾರರು ತಂಡದಲ್ಲಿನ ವಿಭಿನ್ನ ವ್ಯಕ್ತಿತ್ವಗಳ ಬಗ್ಗೆ ಕೇಳಿದ ವೈವಿಧ್ಯಯಮ ಪ್ರಶ್ನೆಗಳಿಗೆ  ಪ್ರತಿಕ್ರಿಯಿಸಿದರು. ಅವರು ಎರಡು ವರ್ಷಗಳಿಂದ ಅವರ ಮುಖ್ಯ ತರಬೇತುದಾರನಾಗಿದ್ದೇನೆಂದು ಹಂಚಿಕೊಂಡರು. ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಒಂದು ಕಥೆಯನ್ನು ಅವರು ವಿವರಿಸಿದರು, ಅಲ್ಲಿ ಅವರು ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದರು. ಶಿಷ್ಟಾಚಾರದ ನಿರ್ಬಂಧಗಳಿಂದಾಗಿ ಕೇವಲ 20 ಜನರಿಗೆ ಮಾತ್ರ ಅವಕಾಶವಿತ್ತು, ಆದ್ದರಿಂದ ಸಹಾಯಕ ಸಿಬ್ಬಂದಿ ಹಾಜರಾಗಲು ಸಾಧ್ಯವಾಗಲಿಲ್ಲ. ಎಲ್ಲಾ ಆಟಗಾರರು ಮತ್ತು ಮೂವರು ನುರಿತ ತರಬೇತುದಾರರು ಹಾಜರಾಗಿದ್ದರು ಎಂದರು. ಶಿಷ್ಟಾಚಾರದ ಪ್ರಕಾರ ಕೇವಲ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿರುವುದರಿಂದ ನನಗೆ ತುಂಬಾ ವಿಷಾದವಾಯಿತು ಎಂದು ಸಹಾಯಕ ಸಿಬ್ಬಂದಿಗೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಸಿಬ್ಬಂದಿ ಆ ಛಾಯಾಚಿತ್ರದ ಅಗತ್ಯವಿಲ್ಲ ಎಂದು ಹೇಳಿದರು - ನವೆಂಬರ್ 4 ಅಥವಾ 5 ರಂದು ಪ್ರಧಾನಮಂತ್ರಿಮೋದಿಯವರೊಂದಿಗೆ ಒಂದು ಛಾಯಾಚಿತ್ರವನ್ನು ಬಯಸಿದ್ದೆವು, ಇಂದು ಆ ಆಸೆ ಈಡೇರಿತು ಎಂದರು.

ಹರ್ಮನ್‌ ಪ್ರೀತ್ ಕೌರ್ ಅವರು ತನಗೆ ಮಾತ್ರ ಹಿನ್ನಡೆಗಳು ಸಂಭವಿಸುತ್ತಿವೆ ಎಂದು ಭಾವಿಸಿದ ಕ್ಷಣಗಳು ಇದ್ದವು, ಆದರೆ ಆ ಹೋರಾಟಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲವರ್ಧನೆಗೊಳಿಸಲೆಂದೇ ಬರೆದವು ಎಂದು ಹಂಚಿಕೊಂಡರು. ಅದನ್ನು ಹಂಚಿಕೊಳ್ಳುವಾಗ ಹರ್ಮನ್‌ಪ್ರೀತ್ ಅವರಿಗೆ ಯಾವ ಭಾವನೆಗಳು ಅನಿಸಿದವು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕೇಳಿದರು, ಇದು ತುಂಬಾ ಸ್ಪೂರ್ತಿದಾಯಕವಾಗಿದೆ ಎಂದು ಉಲ್ಲೇಖಿಸಿದರು. ಒಂದು ದಿನ ಅವರು ಟ್ರೋಫಿಯನ್ನು ಎತ್ತಿಹಿಡಿಯುತ್ತೇವೆಂಬ ನಂಬಿಕೆ ಸದಾ ಇತ್ತು ಮತ್ತು ತಂಡದಲ್ಲಿ ಮೊದಲ ದಿನದಿಂದಲೇ ಆ ವಿಶೇಷ ಭಾವನೆ ಇತ್ತು ಎಂದು ಆಟಗಾರ್ತಿಯರು ಪ್ರತಿಕ್ರಿಯಿಸಿದರು. ಅವರು ಪದೇ ಪದೇ ಸವಾಲುಗಳನ್ನು ಎದುರಿಸತ್ತಿದ್ದನ್ನು ಪ್ರಧಾನಮಂತ್ರಿ ಒಪ್ಪಿಕೊಂಡರು ಮತ್ತು ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ ಇತರರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಅವರ ಧೈರ್ಯ ಮತ್ತು ಸಾಮರ್ಥ್ಯವನ್ನು ಶ್ಲಾಘಿಸಿದರು. ಪ್ರತಿ ಪಂದ್ಯಾವಳಿಯಲ್ಲಿ ತಮ್ಮ ಆತ್ಮ ವಿಶ್ವಾಸ ಮತ್ತು ಸ್ಥಿರ ಸುಧಾರಣೆಯನ್ನು ಎತ್ತಿ ತೋರಿಸುವ ಮೂಲಕ ಹರ್ಮನ್‌ಪ್ರೀತ್ ತಂಡದ ಗೆಲುವಿನ ಯಶಸ್ಸನ್ನು ಎಲ್ಲಾ ಸದಸ್ಯರಿಗೆ ಅರ್ಪಿಸಿದರು. ಕಳೆದ ಎರಡು ವರ್ಷಗಳಲ್ಲಿ, ಅವರು ಮಾನಸಿಕ ಶಕ್ತಿಯ ಮೇಲೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ, ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಒಪ್ಪಿಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದರು. ಈ ಪಯಣವು ವರ್ತಮಾನದಲ್ಲಿ ಹೇಗೆ ಬದುಕಬೇಕೆನ್ನುವುದನ್ನು ಕಲಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಕೌರ್‌ ಸಹ ಅದನ್ನು ಒಪ್ಪಿಕೊಂಡರು ಮತ್ತು ಅದಕ್ಕಾಗಿಯೇ ತಮ್ಮ ತಂಡದ ಸದಸ್ಯರನ್ನು ಪ್ರೇರೇಪಿಸಲು ಹೆಚ್ಚುವರಿಯಾಗಿ ನಾನೇನು ಮಾಡುತ್ತೇನೆಂದು ಹೇಳುತ್ತಾ ವಾಸ್ತವತೆಯಿಂದ ಜೀವನ ಎದುರಿಸುವ ನಂಬಿಕೆಯನ್ನು ಬಲಪಡಿಸಿದೆಂದರು. ಪ್ರಧಾನಮಂತ್ರಿ ಮತ್ತು ತಮ್ಮ ತರಬೇತುದಾರರ ಮಾರ್ಗದರ್ಶನವು ತಮ್ಮನ್ನು ಸರಿಯಾದ ಹಾದಿಯಲ್ಲಿ ಇರಿಸಿದೆ ಎಂದು ಅವರು ಖಚಿತಪಡಿಸಿದರು.

ನಂತರ ಪ್ರಧಾನಮಂತ್ರಿ, ದೀಪ್ತಿ ಶರ್ಮಾ ಅವರನ್ನು ಆ ದಿನ ನಿರ್ವಹಿಸಿದ ಡಿವೈ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿ ಎಸ್ ಪಿ) ಪಾತ್ರದ ಬಗ್ಗೆ ಕೇಳಿದರು, ಅವರು ಎಲ್ಲವನ್ನೂ ನಿಯಂತ್ರಿಸುತ್ತಿರಬೇಕು ಎಂದು ತಮಾಷೆ ಮಾಡಿದರು. ಅದಕ್ಕೆ ಉತ್ತರಿಸಿದ ದೀಪ್ತಿ, ತಮ್ಮ ಭೇಟಿಯಾಗಲು ಕಾಯುತ್ತಿದ್ದೆ ಮತ್ತು ಆ ಕ್ಷಣವನ್ನು ಆನಂದಿಸುತ್ತಿದ್ದೇನೆಂದು  ಉತ್ತರಿಸಿದರು. ನಿಜವಾದ ಆಟಗಾರ್ತಿ ಎಂದರೆ ವೈಫಲ್ಯದಿಂದ ಮೇಲೇದ್ದು ಮತ್ತೆ ಮುಂದುವರಿಯಲು ಕಲಿಯುವವಳು ಎಂದು ಪ್ರಧಾನಮಂತ್ರಿ2017 ರಲ್ಲಿ ಹೇಳಿದ್ದನ್ನು ದೀಪ್ತಿ ನೆನಪಿಸಿಕೊಂಡರು. ಶ್ರೀ ನರೇಂದ್ರ ಮೋದಿ ಅವರ ಮಾತುಗಳು ಸದಾ ತಮ್ಮನ್ನು ಪ್ರೇರೇಪಿಸುತ್ತವೆ ಮತ್ತು ತಾನು ಅಗ್ಗಾಗೆ ಅವರ ಭಾಷಣಗಳನ್ನು ಕೇಳುತ್ತಿರುತ್ತೇನೆ ಎಂದು ಹೇಳಿದರು. ಹಲವರು ಧ್ವನಿಗಳು ಏರಿಸಿದರೂ ಸಹ, ಅವರ ಶಾಂತ ಮತ್ತು ಸಂಯಮದ ಸನ್ನಿವೇಶಗಳನ್ನು ನಿಭಾಯಿಸುವುದು ವೈಯಕ್ತಿಕವಾಗಿ ತಮಗೆ ಆಟದಲ್ಲಿ ಸಹಾಯ ಮಾಡಿತು ಎಂದು ಅವರು ಹೇಳಿದರು.

ಶ್ರೀ ನರೇಂದ್ರ ಮೋದಿ ಅವರು, ದೀಪ್ತಿ ಅವರನ್ನು ತಮ್ಮ ಹನುಮಾನ್ ಜಿ ಟ್ಯಾಟೂ ಬಗ್ಗೆ ಮತ್ತು ಅದು ಅವರಿಗೆ ಹೇಗೆ ಪಂದ್ಯ ಗೆಲ್ಲಲು ಸಹಾಯ ಮಾಡಿತು ಎಂದು ಕೇಳಿದರು. ತಾನು ತನಗಿಂತ ಹನುಮಾನ್ ಜಿ ಮೇಲೆ ಹೆಚ್ಚಿನ ನಂಬಿಕೆ ಇಡುತ್ತೇನೆ ಮತ್ತು ಕಷ್ಟಗಳನ್ನು ಎದುರಿಸಿದಾಗಲೆಲ್ಲಾ, ಹನುಮಾನ್ ಹೆಸರನ್ನು ಹೇಳುವುದರಿಂದ ಅವುಗಳನ್ನು ನಿವಾರಿಸಲು ಶಕ್ತಿ ಸಿಗುತ್ತದೆ ಎಂದು ದೀಪ್ತಿ ಉತ್ತರಿಸಿದರು. ದೀಪ್ತಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ಜೈ ಶ್ರೀ ರಾಮ್" ಎಂದು ಬರೆದಿರುವುದನ್ನು ಎಂದು ಪ್ರಧಾನಮಂತ್ರಿಪ್ರಸ್ತಾಪಿಸಿದರು, ಅದನ್ನು ದೀಪ್ತಿ ಖಚಿತಪಡಿಸಿದರು.  ಜೀವನದಲ್ಲಿ ನಂಬಿಕೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ, ಉನ್ನತ ಶಕ್ತಿಗೆ ಶರಣಾಗುವ ಸಾಂತ್ವನವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಪ್ರತಿಕ್ರಿಯಿಸಿದರು. ನಂತರ ಅವರು ಮೈದಾನದಲ್ಲಿ ಅವರ ದೃಢನಿಶ್ಚಯದ ಬಗ್ಗೆ ಮತ್ತು ಅವರ ಪ್ರಾಬಲ್ಯದ ಗ್ರಹಿಕೆಯಲ್ಲಿ ಸತ್ಯವಿದೆಯೇ ಎಂದು ಕೇಳಿದರು. ಅದು ನಿಖರವಾಗಿ ಹಾಗಲ್ಲ ಎಂದು ಅವರು ಪ್ರತಿಕ್ರಿಯಿಸಿದರು, ಆದರೆ ಚೆಂಡು ಎಸೆಯುವುದರಲ್ಲಿ ಸ್ವಲ್ಪ ಭಯವಿದೆ ಎಂದು ಒಪ್ಪಿಕೊಂಡರು ಮತ್ತು ತಂಡದ ಸದಸ್ಯರು ಆಗಾಗ್ಗೆ ಆರಾಮಾಗಿರು ಎಂದು ತಮಾಷೆ ಮಾಡುತ್ತಿದ್ದರೆಂದರು. ಪ್ರಧಾನಮಂತ್ರಿ ಅವರು ತಮ್ಮ ಹೆಜ್ಜೆ ಬಗ್ಗೆ ಹಾಗೂ ಇನ್ಸ್ಟಾಗ್ರಾಂ ಟ್ಯಾಗ್ ಲೈನ್‌ ಬಗ್ಗೆ ವೈಯಕ್ತಿಕವಾಗಿ ಕೇಳಿದ್ದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಪ್ರಧಾನಮಂತ್ರಿ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಪಂದ್ಯ ಗೆದ್ದ  ನಂತರ ಅವರು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ ಚೆಂಡಿನ ಬಗ್ಗೆ ಕೇಳಿದರು – ಅದು ಉದ್ದೇಶ ಪೂರ್ವಕವಾಗಿ ಮಾಡಿದ್ದರೋ ಅಥವಾ ಯಾರಾದರೂ  ಮಾರ್ಗದರ್ಶನ ಮಾಡಿದ್ದರೂ ಎಂದು ಕೇಳಿದರು. ಅಂತಿಮ ಚೆಂಡು ಮತ್ತು ಕ್ಯಾಚ್ ತನ್ನ ಬಳಿಗೆ ಬರುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲವಾದ್ದರಿಂದ ಅದು ದೈವಿಚ್ಛೆ ಎಂದು ಹರ್ಮನ್‌ ಪ್ರೀತ್ ಉತ್ತರಿಸಿದರು. ಆದರೆ ಅದು ಘಟಿಸಿದಾಗ, ವರ್ಷಗಳ ಪ್ರಯತ್ನ ಮತ್ತು ಕಾಯುವಿಕೆಯ ಪರಾಕಾಷ್ಠೆ ತಲುಪಿದಂತೆ ಭಾಸವಾಯಿತು ಮತ್ತು ತಾನು ಆ ಚೆಂಡನ್ನು ತಾನೇ ಇಟ್ಟುಕೊಳ್ಳಲು ನಿರ್ಧರಿಸಿದೆನು, ಚೆಂಡು ಇನ್ನೂ ತನ್ನ ಚೀಲದಲ್ಲಿದೆ ಎಂದು ಅವರು ಹೇಳಿದರು.

ಶಫಾಲಿ ವರ್ಮಾ ಅವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಕುಸ್ತಿಪಟುಗಳನ್ನು ಉತ್ಪಾದಿಸುವ ಸ್ಥಳವಾದ ರೋಹ್ಟಕ್‌ನಿಂದ ಬಂದವರು ಮತ್ತು ಅವರು ಕ್ರಿಕೆಟ್‌ನಲ್ಲಿ ಹೇಗೆ ಯಶಸ್ಸುಕಂಡುಕೊಂಡರೆಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಫಾಲಿ, ರೋಹ್ಟಕ್‌ನಲ್ಲಿ ಕುಸ್ತಿ ಮತ್ತು ಕಬಡ್ಡಿ ನಿಜಕ್ಕೂ ಪ್ರಮುಖವಾಗಿವೆ, ಆದರೆ  ತಮ್ಮ ತಂದೆ ತನ್ನ ಕ್ರಿಕೆಟ್ ಪಯಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಪ್ರಧಾನಮಂತ್ರಿ ಅವರು ಸಾಂಪ್ರದಾಯಿಕ ಅಖಾಡ ಕ್ರೀಡೆಗಳನ್ನು ಎಂದಾದರೂ ಆಡಿದ್ದೀರಾ ಎಂದು ಕೇಳಿದಾಗ, ಇಲ್ಲ ತಾವು ಹಾಗೆ ಆಡಿಲ್ಲ ಎಂದು ಖಚಿತಪಡಿಸಿದರು. ತಮ್ಮ ತಂದೆ ಕ್ರಿಕೆಟಿಗರಾಗಬೇಕೆಂಬ ಆಕಾಂಕ್ಷೆ ಹೊಂದಿದ್ದರು ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರು ತನ್ನ ಮಕ್ಕಳಿಗೆ ತಮ್ಮ ಆಕಾಂಕ್ಷೆಯನ್ನು ವರ್ಗಾಯಿಸಿದರು ಎಂದು ಅವರು ಹಂಚಿಕೊಂಡರು. ತಾನು  ಮತ್ತು ತನ್ನ ಸಹೋದರ ಒಟ್ಟಿಗೆ ಪಂದ್ಯಗಳನ್ನು ನೋಡುತ್ತಿದ್ದವು, ಇದು ನನ್ನಲ್ಲಿ ಕ್ರಿಕೆಟ್‌ನಲ್ಲಿ ಆಳವಾದ ಆಸಕ್ತಿಯನ್ನು ಹುಟ್ಟುಹಾಕಿತು ಮತ್ತು ಕ್ರಿಕೆಟಿಗರಾಗಲು ಕಾರಣವಾಯಿತು ಎಂದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ಯಾಚ್ ಹಿಡಿಯುವ ಮೊದಲು ಅವರು ನಗುವುದನ್ನು ನೋಡಿದ್ದನ್ನು ನೆನಪು ಮಾಡಿಕೊಂಡರು ಮತ್ತು ಅದಕ್ಕೆ ಕಾರಣವನ್ನು ಕೇಳಿದರು. ಮಾನಸಿಕವಾಗಿ ಚೆಂಡನ್ನು ತನ್ನ ಬಳಿಗೆ ಬರುವಂತೆ ಕರೆಯುತ್ತಿದ್ದೆ ಮತ್ತು ಅದು ಬಂದಾಗ ನನಗೆ ನಗದೆ ಇರಲು ಸಾಧ್ಯವಾಗಲಿಲ್ಲ ಎಂದು ಅವರು ಉತ್ತರಿಸಿದರು. ಚೆಂಡು ಬೇರೆಲ್ಲಿಗೂ ಹೋಗುವುದಿಲ್ಲವೆಂಬ ವಿಶ್ವಾಸ ತಮಗೆ ಇದ್ದಂತೆ ತೋರುತ್ತಿತ್ತು ಎಂದು ಪ್ರಧಾನಮಂತ್ರಿಹೇಳಿದರು. ಅದಕ್ಕೆ ಅವರು ಒಂದು ವೇಳೆ ಚೆಂಡು ಬೇರೆಡೆ ಹೋಗಿದ್ದರೆ, ನಾನು ಅದಕ್ಕಾಗಿ ಡೈವ್ ಮಾಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದರು.

ಸೆಮಿಫೈನಲ್ ಸಮಯದಲ್ಲಿ ಆ ಕ್ಷಣದಲ್ಲಿ ನಿಮ್ಮ ಭಾವನೆಗಳನ್ನು ವಿವರಿಸಿ ಎಂದು ಪ್ರಧಾನಮಂತ್ರಿಕೇಳಿದಾಗ ಜೆಮಿಮಾ ರೊಡ್ರಿಗಸ್,  ತಂಡವು ಆಗಾಗ್ಗೆ ಆಸ್ಟ್ರೇಲಿಯಾ ವಿರುದ್ಧ ಸ್ವಲ್ಪ ಅಂತರದಲ್ಲಿ ಸೋತಿತ್ತು. ಪಂದ್ಯವನ್ನು ಗೆಲ್ಲುವುದು ಮತ್ತು ಕೊನೆಯವರೆಗೂ ಆಡುವುದು ನನ್ನ ಏಕೈಕ ಗುರಿಯಾಗಿತ್ತು. ಪಂದ್ಯದ ದಿಕ್ಕನ್ನು ಬದಲಿಸಲು ತಂಡಕ್ಕೆ ಒಂದು ದೀರ್ಘ ಪಾಲುದಾರಿಕೆ ಅಗತ್ಯವಿದೆ ಎಂದು ಹೇಳುತ್ತಲೇ ಇತ್ತು ಮತ್ತು ಆ ನಂಬಿಕೆಯು ಸಾಮೂಹಿಕ ತಂಡದ ಪ್ರಯತ್ನಕ್ಕೆ ಕಾರಣವಾಯಿತು ಎಂದು ಅವರು ಒತ್ತಿ ಹೇಳಿದರು. ನಾನು ಶತಕ ಗಳಿಸಿದರೂ, ಹರ್ಮನ್‌ಪ್ರೀತ್ ಕೌರ್, ದೀಪ್ತಿ, ರಿಚಾ ಮತ್ತು ಅಮನ್‌ಜೋತ್ ಅವರ ಕೊಡುಗೆಗಳು ಗೆಲುವಿಗೆ ಕಾರಣವಾದವು, ಅವರ ಪ್ರಭಾವಶಾಲಿ ಇನ್ನಿಂಗ್ಸ್ ಗೆಲುವನ್ನು ತಂದುಕೊಟ್ಟಿತು ಎಂದರು. ತಂಡವು ಅದನ್ನು ಮಾಡಬಹುದು ಎಂದು ಎಲ್ಲರೂ ನಂಬಿದ್ದರು, ಅದು ಸಾಧ್ಯವಾಯಿತು ಎಂದು ಹೇಳಿದರು.

ವಿಶ್ವಕಪ್ ಗೆದ್ದ ಅನುಭವ, ಮೂರು ಪಂದ್ಯಗಳಲ್ಲಿ ಸೋತ ನಂತರ ಅವರ ಅನುಭವ ಹೇಗಿತ್ತು ಮತ್ತು ಅವರು ಹೇಗೆ ಪುಟಿದೆದ್ದರು ಎಂಬುದನ್ನು ತಿಳಿದುಕೊಳ್ಳಲು ಪ್ರಧಾನಮಂತ್ರಿಉತ್ಸುಕರಾಗಿದ್ದಾರೆ ಎಂದು ಜೆಮಿಮಾ ಹೇಳಿದರು.

ವಿಶ್ವಕಪ್ ಗೆಲ್ಲುವುದು ವೈಯಕ್ತಿಕವಾಗಿ ತನಗೆ ಮತ್ತು ತನ್ನ ಹಳ್ಳಿಯ ಜನರಿಗೆ ಹೆಮ್ಮೆಯ ಭಾವನೆಯಾಗಿತ್ತು ಎಂದು ಕ್ರಾಂತಿ ಗೌಡ್ ಹಂಚಿಕೊಂಡರು. ತಾನು ಬೌಲಿಂಗ್ ಮಾಡಿದಾಗಲೆಲ್ಲಾ, ಹರ್ಮನ್ಪ್ರೀತ್ ಕೌರ್ ನೀನೇ ಮೊದಲ ವಿಕೆಟ್ ತೆಗೆದುಕೊಳ್ಳುವವಳು ಎಂದು ಹೇಳುತ್ತಿದ್ದರು, ಅದು ತನ್ನನ್ನು ಬೌಲಿಂಗ್ ಮಾಡಲು ಪ್ರೇರೇಪಿಸಿತು ಎಂದು  ಹಂಚಿಕೊಂಡರು. ಕ್ರಾಂತಿ ತನ್ನ ಅಣ್ಣನ ಕ್ರಿಕೆಟ್ ಮೇಲಿನ ಪ್ರೀತಿ ಮತ್ತು ಪ್ರಧಾನಿಯ ಮೇಲಿನ ಮೆಚ್ಚುಗೆಯ ಬಗ್ಗೆಯೂ ಮಾತನಾಡಿದರು. ತಂದೆ ಕೆಲಸ ಕಳೆದುಕೊಂಡ ಕಾರಣ ಅವರ ಸಹೋದರ ಅಕಾಡೆಮಿಗೆ ಸೇರಲು ಸಾಧ್ಯವಾಗಲಿಲ್ಲ, ಆದರೆ ಅನೌಪಚಾರಿಕ ಆಟವಾಡುವುದನ್ನು ಮುಂದುವರೆಸಿದರು. ಅವರಿಂದ ಪ್ರೇರಿತರಾಗಿ ನಾನು ಟೆನಿಸ್ ಚೆಂಡುಗಳನ್ನು ಬಳಸುವ ಹುಡುಗರೊಂದಿಗೆ ಆಟವಾಡಲು ಆರಂಭಿಸಿದೆನು ಎಂದರು. ತನ್ನ ಕ್ರಿಕೆಟ್ ಪಯಣವು ಸ್ಥಳೀಯ ಲೆದರ್ ಬಾಲ್ ಪಂದ್ಯಾವಳಿಯ ಸಮಯದಲ್ಲಿ ಔಪಚಾರಿಕವಾಗಿ ಆರಂಭವಾಯಿತು, ಎಂಎಲ್ ಎ ಟ್ರೋಫಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಂಡದ ಸಹ ಆಟಗಾರನ ಬದಲಿಗೆ ಆಡಲು ಕೇಳಿದರು. ತನ್ನ ಉದ್ದ ಕೂದಲಿನ ಹೊರತಾಗಿಯೂ ತನ್ನನ್ನು ತಂಡಕ್ಕೆ ಸೇರಲು ಆಹ್ವಾನಿಸಲಾಯಿತು, ಮತ್ತು ತನ್ನ ಮೊದಲ ಪಂದ್ಯದಲ್ಲಿ, ತಾನು ಎರಡು ವಿಕೆಟ್‌ಗಳನ್ನು ಪಡೆದು 25 ರನ್‌ಗಳನ್ನು ಗಳಿಸಿ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗಳಿಸಿದೆ. ಅದು ತಮ್ಮ ಕ್ರಿಕೆಟ್ ವೃತ್ತಿಜೀವನದ ಆರಂಭಕ್ಕೆ ನಾಂದಿ ಹಾಡಿತೆಂದರು.

ಕಳೆದ ಎರಡು ಪಂದ್ಯಗಳಲ್ಲಿ ಶಫಾಲಿ ವರ್ಮಾ ಆಡುವ ಅವಕಾಶ ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ತನಗೆ ತಂಡದಿಂದ ಕರೆ ಬರುವ ಮೊದಲು ತಾನು ದೇಶೀಯ ಕ್ರಿಕೆಟ್ ಆಡುತ್ತಿದ್ದೆ ಎಂದು ಶಫಾಲಿ ಖಚಿತಪಡಿಸಿದರು. ಪ್ರತೀಕಾಗೆ ನಡೆದ ಘಟನೆ ದುರದೃಷ್ಟಕರ ಮತ್ತು ಯಾವುದೇ ಆಟಗಾರ್ತಿ ಇನ್ನೊಬ್ಬ ಆಟಗಾರ್ತಿಗೆ ಹಾಗೆ ಆಗುವುದನ್ನು ಬಯಸುವುದಿಲ್ಲ ಎಂದು ಅವರು ಒಪ್ಪಿಕೊಂಡರು. ಆದರೂ, ಅವರು ಕರೆದಾಗ ಅವರು ಆತ್ಮವಿಶ್ವಾಸವನ್ನು ತೋರಿಸಿದರು ಮತ್ತು ಇಡೀ ತಂಡವು ತಮ್ಮ ಮೇಲೆ ನಂಬಿಕೆ ಇಟ್ಟಿತು. ಅಗತ್ಯವಿರುವ ಯಾವುದೇ ವಿಧಾನದಿಂದ ತಂಡವನ್ನು ಗೆಲ್ಲಲು ಸಹಾಯ ಮಾಡಲು ತಾನು ದೃಢಸಂಕಲ್ಪ ಮಾಡಿದೆನು ಎಂದರು.

ಪ್ರತೀಕಾ ರಾವಲ್ ಗಾಯಗೊಂಡ ನಂತರ, ತಂಡದಲ್ಲಿ ಅನೇಕರು ಪ್ರತೀಕಾಗಾಗಿ ವಿಶ್ವಕಪ್ ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸಿದು ಎಂದು ಹಂಚಿಕೊಂಡರು. ತಾನು ಅಧಿಕೃತವಾಗಿ ತಂಡದಲ್ಲಿಲ್ಲದಿದ್ದರೂ ಮತ್ತು 16ನೇ ಆಟಗಾರ್ತಿಯಾಗಿದ್ದರೂ, ತನ್ನನ್ನು ಗಾಲಿ ಕುರ್ಚಿಯಲ್ಲಿ ವೇದಿಕೆಯ ಮೇಲೆ ಕರೆತಂದು ಪೂರ್ಣ ಗೌರವ ನೀಡಲಾಯಿತು ಎಂದರು. ಪ್ರತೀಕ್ಷಾ ತಂಡವನ್ನು ಒಂದು ಕುಟುಂಬ ಎಂದು ವಿವರಿಸಿದರು, ಅಲ್ಲಿ ಪ್ರತಿಯೊಬ್ಬ ಆಟಗಾರನನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ ಮತ್ತು ಅಂತಹ ಒಂದು ಘಟಕವು ಒಟ್ಟಿಗೆ ಆಡಿದಾಗ, ಅವರನ್ನು ಸೋಲಿಸುವುದು ತುಂಬಾ ಕಷ್ಟಕರವಾಗುತ್ತದೆ ಎಂದರು. ತಂಡವು ಫೈನಲ್ ಗೆಲ್ಲಲು ನಿಜವಾಗಿಯೂ ಅರ್ಹವಾಗಿದೆ ಎಂದು ತಂಡ ದೃಢಪಡಿಸಿತು ಎಂದರು, ಅದನ್ನು ಒಪ್ಪಿದ ಪ್ರಧಾನಮಂತ್ರಿ, ಮೈದಾನದಲ್ಲಿ ಮಾತ್ರವಲ್ಲದೆ ಅದರ ಹೊರಗೆಯೂ ಸಹ ತಂಡದ ಮನೋಭಾವವು ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದರು.. ಒಟ್ಟಿಗೆ ಸಮಯ ಕಳೆಯುವುದು ಬಾಂಧವ್ಯವನ್ನು ನಿರ್ಮಿಸುತ್ತದೆ ಮತ್ತು ಪರಸ್ಪರರ ದೌರ್ಬಲ್ಯಗಳು ಮತ್ತು ಸಾಮರ್ಥ್ಯಗಳನ್ನು ತಿಳಿದುಕೊಳ್ಳುವುದು ಪರಸ್ಪರ ಮರೆ ಮಾಚಿಕೊಳ್ಳಲು ಮತ್ತು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ನಂತರ ಶ್ರೀ ನರೇಂದ್ರ ಮೋದಿ ಅವರು, ಒಂದು ನಿರ್ದಿಷ್ಟ ಕ್ಯಾಚ್ ಬಹಳ ಪ್ರಸಿದ್ಧವಾಗಿದೆ ಎಂದು ಹೇಳಿದರು. ಅಮನ್‌ಜೋತ್ ಕೌರ್ ಅವರು ತಾವು ಮೊದಲು ಅನೇಕ ಬ್ಲೈಂಡರ್‌ ಗಳನ್ನು ಮಾಡಿದರೂಗಳನ್ನು ಅಂತಹ ಅಂತಹ ಖ್ಯಾತಿಯನ್ನು ಗಳಿಸಿಲ್ಲ ಮತ್ತು ಎಡವಿ ಬಿದ್ದ ನಂತರವೂ ಅದು ಚೆನ್ನಾಗಿ ಅನಿಸಿತು ಎಂದು ಪ್ರತಿಕ್ರಿಯಿಸಿದರು. ಕ್ಯಾಚ್ ಒಂದು ಮಹತ್ವದ ತಿರುವು ಪಡೆದುಕೊಂಡಿತು ಮತ್ತು ಅದನ್ನು ತೆಗೆದುಕೊಂಡ ನಂತರ, ಅವರು ಟ್ರೋಫಿಯನ್ನು ನೋಡಲು ಆರಂಭಿಸಿರಬೇಕು ಎಂದು ಪ್ರಧಾನಮಂತ್ರಿಹೇಳಿದರು. ಆ ಕ್ಯಾಚ್‌ನಲ್ಲಿ ತಾನು ನಿಜವಾಗಿಯೂ ಟ್ರೋಫಿಯನ್ನು ನೋಡಿದೆ ಎಂದು ಅಮನ್‌ಜೋತ್ ಉತ್ತರಿಸಿದರು ಮತ್ತು ಸಂಭ್ರಮದಲ್ಲಿ ತನ್ನ ಮೇಲೆ ಹಾರಿದ ಜನರ ಸಂಖ್ಯೆಯನ್ನು ನೋಡಿ ನನಗೆ ಮತ್ತಷ್ಟು ಉಲ್ಲಾಸವಾಯಿತೆಂದರು.

ಸೂರ್ಯಕುಮಾರ್ ಯಾದವ್, ಈ ಹಿಂದೆ ಇದೇ ರೀತಿಯ ಕ್ಯಾಚ್ ತೆಗೆದುಕೊಂಡಿದ್ದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು ಮತ್ತು ಆಟಗಾರರೊಬ್ಬರ ಕ್ಯಾಚ್ ಅನ್ನು ಮರು ಟ್ವೀಟ್ ಮಾಡಿದ್ದನ್ನು ನೆನಪಿಸಿಕೊಂಡರು.

ಹರ್ಲೀನ್ ಕೌರ್ ದಿಯೋಲ್ ಇಂಗ್ಲೆಂಡ್‌ನಲ್ಲಿ ದೀರ್ಘಕಾಲದಿಂದ ಅಂತಹ ಕ್ಯಾಚ್‌ಗಳನ್ನು ಅಭ್ಯಾಸ ಮಾಡುತ್ತಿದ್ದ ನೆನಪನ್ನು ಹಂಚಿಕೊಂಡರು. ಫೀಲ್ಡಿಂಗ್ ಮಾಡುವಾಗ ಕ್ಯಾಚ್ ತಪ್ಪಿಸಿಕೊಂಡದ್ದನ್ನು ಅವರು ನೆನಪಿಸಿಕೊಂಡರು, ನಂತರ ಹರ್ಮನ್‌ ಪ್ರೀತ್ ಕೌರ್ ಅವರನ್ನು ಗದರಿಸಿ, ಉತ್ತಮ ಫೀಲ್ಡರ್‌ಗಳು ಅಂತಹ ಕ್ಯಾಚ್‌ಗಳನ್ನು ತಪ್ಪಿಸಿಕೊಳ್ಳಬಾರದು ಎಂದು ಹೇಳಿದರು. ಅವರ ಹಿಂದೆ ನಿಂತಿದ್ದ ಜೆಮಿಮಾ ಅವರನ್ನು ಸಮಾಧಾನಪಡಿಸಿದರು ಮತ್ತು ಕ್ಯಾಚ್ ತನಗೆ ಸಾಧ್ಯ ಎಂದು ಹೇಳಿದರು. ನಂತರ ಅವರು ಮುಂದಿನ ಎರಡು ಓವರ್‌ಗಳಲ್ಲಿ ಉತ್ತಮ ಕ್ಯಾಚ್ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು ಮತ್ತು ಅದರ ನಂತರ ಚೆಂಡು ಬಂದಿತು ಮತ್ತು ಅವರು ತಮ್ಮ ಭರವಸೆಯನ್ನು ಪೂರೈಸಿದರು. ಹಾಗಾಗಿ ಸವಾಲು ಕೆಲಸ ಮಾಡಿದಂತಾಯಿತು ಎಂದು ಶ್ರೀ ನರೇಂದ್ರ ಮೋದಿ ತಮಾಷೆಯಾಗಿ ಹೇಳಿದರು.

ಪ್ರಧಾನಮಂತ್ರಿ, ರಿಚಾ ಘೋಷ್ ಅವರು ಎಲ್ಲಿ ಆಡುತ್ತಾರೋ ಅಲ್ಲಿ ಸದಾ ಗೆಲ್ಲುತ್ತಾರೆ ಎಂದು ಉಲ್ಲೇಖಿಸಿದರು. ರಿಚಾ ಅದು ಖಚಿತವಿಲ್ಲ ಎಂದು ಪ್ರತಿಕ್ರಿಯಿಸಿದರು, ಆದರೆ ರಿಚಾ 19 ವರ್ಷದೊಳಗಿನವರ, ಹಿರಿಯರ ಮಟ್ಟದ ಮತ್ತು ಡಬ್ಲೂಪಿಎಲ್ ಪಂದ್ಯಾವಳಿಗಳಲ್ಲಿ ಟ್ರೋಫಿಗಳನ್ನು ಗೆದ್ದಿದ್ದಾರೆ ಮತ್ತು ಅನೇಕ ದೊಡ್ಡ ದೊಡ್ಡ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ ಎಂದು ಉಲ್ಲೇಖಿಸಿದರು. ರಿಚಾ ತಮ್ಮ ಬ್ಯಾಟಿಂಗ್ ಸಮಯದಲ್ಲಿ ವಿಶೇಷವಾಗಿ ಸಿಕ್ಸರ್‌ಗಳನ್ನು ಹೊಡೆಯುವಾಗ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಅವರಂತಹ ತಂಡದ ಆಟಗಾರರಿಂದ ಅಪಾರ ನಂಬಿಕೆಯನ್ನು ಗಳಿಸಿಕೊಂಡೆನು ಎಂದು ಅನುಭವ ಅವರು ಹಂಚಿಕೊಂಡರು. ರನ್‌ಗಳು ಅಗತ್ಯವಿರುವ ಆದರೆ ಚೆಂಡುಗಳು ಕಡಿಮೆ ಇರುವ ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ಚೆಂಡನ್ನು ಗಡಿಯಾಚೆ ತಲುಪಿಸುವ ಅವರ ಸಾಮರ್ಥ್ಯದಲ್ಲಿ ಇಡೀ ತಂಡವು ನಂಬಿಕೆ ಇಟ್ಟಿತ್ತು. ಆ ನಂಬಿಕೆ ನನಗೆ ಆತ್ಮವಿಶ್ವಾಸವನ್ನು ನೀಡಿತು ಮತ್ತು ಪ್ರತಿ ಪಂದ್ಯದಲ್ಲೂ ತನ್ನ ದೈಹಿಕ ಭಾಷೆಯಲ್ಲಿ ಅದು ಪ್ರತಿಫಲನಗೊಂಡಿತು.

ಮತ್ತೊಬ್ಬ ಆಟಗಾರ್ತಿ ರಾಧಾ ಯಾದವ್, ಮೂರು ಪಂದ್ಯಗಳಲ್ಲಿ ಸೋತರೂ, ಸೋಲಿನಲ್ಲಿ ಒಗ್ಗಟ್ಟು ಅತ್ಯುತ್ತಮವಾಗಿತ್ತು ಎಂದು ನೆನಪಿಸಿಕೊಂಡರು - ಎಲ್ಲರೂ ಪರಸ್ಪರ ಬೆಂಬಲ ನೀಡಿದರು ಮತ್ತು ಪ್ರಾಮಾಣಿಕ ಮತ್ತು ಅಚಲ ಬೆಂಬಲದೊಂದಿಗೆ ಮುಕ್ತವಾಗಿ ಸಂವಹನ ನಡೆಸಿವು. ಈ ಸಾಮೂಹಿಕ ಮನೋಭಾವವೇ ನಮಗೆ ಟ್ರೋಫಿಯನ್ನು ತಂದುಕೊಟ್ಟಿತು ಎಂಬುದು ನನ್ನ ನಂಬಿಕೆಯಾಗಿದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕಠಿಣ ಪರಿಶ್ರಮವೇ ನಿಮಗೆ ಗೆಲುವು ತಂದುಕೊಟ್ಟಿತು. ಅಂತಹ ಪ್ರದರ್ಶನಕ್ಕೆ ನೀವು ನಿಮ್ಮನ್ನು   ಹೇಗೆ ಸಿದ್ಧಪಡಿಸಿಕೊಂಡಿರಿ ಎಂದು ಕೇಳಿದರು. ತಂಡವು ದೀರ್ಘಕಾಲದವರೆಗೆ ಗುಣಮಟ್ಟದ ಕ್ರಿಕೆಟ್ ಆಡುತ್ತಿದೆ ಮತ್ತು ಫಿಟ್‌ನೆಸ್, ಫೀಲ್ಡಿಂಗ್ ಅಥವಾ ಕೌಶಲ್ಯದ ವಿಷಯದಲ್ಲಿ ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿದೆ ಎಂದು ಆಟಗಾರ್ತಿ ವಿವರಿಸಿದರು. ಒಗ್ಗಟ್ಟಿನಿಂದಿರುವುದು ವಿಷಯಗಳನ್ನು ಸುಲಭಗೊಳಿಸಿತು, ಆದರೆ ಒಂಟಿಯಾಗಿ ಕೆಲಸ ಮಾಡುವುದು ತುಂಬಾ ಕಷ್ಟಕರವಾಗಿತ್ತು ಎಂದು ಅವರು ಒತ್ತಿ ಹೇಳಿದರು. ತನ್ನ ತಂದೆಯನ್ನು ಬೆಂಬಲಿಸಲು ತನ್ನ ಮೊದಲ ಬಹುಮಾನದ ಹಣವನ್ನು ಖರ್ಚು ಮಾಡಿದ್ದೀರಾ ಎಂದು ಪ್ರಧಾನಮಂತ್ರಿ ಕೇಳಿದರು, ಅದಕ್ಕೆ ಅವರು ಹೌದು ಎಂದರು. ನಮ್ಮ ಕುಟುಂಬವು ಸವಾಲುಗಳನ್ನು ಎದುರಿಸಿದೆ, ಆದರೆ ತಮ್ಮ ತಂದೆ ಮತ್ತು ತಾಯಿ ಆ ತೊಂದರೆಗಳು ತಮ್ಮ ವೃತ್ತಿಯ ಮೇಲೆ ಪರಿಣಾಮ ಬೀರಲು ಎಂದಿಗೂ ಬಿಡಲಿಲ್ಲ ಎಂದರು.

ಸ್ನೇಹ ರಾಣಾ ವರ್ಷಗಳ ಕಠಿಣ ಪರಿಶ್ರಮದ ಬಗ್ಗೆ ಮಾತನಾಡಿದರು ಮತ್ತು ನಿರ್ದಿಷ್ಟ ಬ್ಯಾಟರ್‌ಗಳನ್ನು ನಿಭಾಯಿಸಲು ತಮ್ಮ ಬೌಲಿಂಗ್ ತರಬೇತುದಾರ ಆವಿಷ್ಕರ್ ಸಾಲ್ವಿ ಅವರೊಂದಿಗೆ ನಿಯಮಿತವಾಗಿ ತಂತ್ರಗಳನ್ನು ಹೇಗೆ ಚರ್ಚಿಸುತ್ತಿದ್ದರು ಎಂಬುದನ್ನು ಹಂಚಿಕೊಂಡರು. ಈ ತಂತ್ರಗಳನ್ನು ನಾಯಕ, ಉಪನಾಯಕ ಮತ್ತು ಮುಖ್ಯ ತರಬೇತುದಾರರೊಂದಿಗೆ ಸಂಯೋಜಿಸಲಾಯಿತು ಮತ್ತು ನಂತರ ಮೈದಾನದಲ್ಲಿ ಪುನರಾವರ್ತಿಸಲಾಯಿತು. ಪ್ರತಿಯೊಂದು ಪಂದ್ಯವೂ ಯೋಜಿಸಿದಂತೆ ನಡೆಯದಿದ್ದರೂ ಮುಂದಿನ ಅವಕಾಶದಲ್ಲಿ ಸುಧಾರಿಸಿಕೊಳ್ಳಲು ತಾವು ಉತ್ತೇಜಿತವಾಗಿದ್ದೇವೆಂದರು.

ಉಮಾ ಚೆಟ್ರಿ ಪ್ರಧಾನಿಯವರ ಮುಂದೆ ಮಾತನಾಡುವಾಗ ತುಂಬಾ ಉತ್ಸಾಹಭರಿತರಾಗಿದ್ದರು ಎಂದು ಒಪ್ಪಿಕೊಂಡರು. ಪ್ರಧಾನಮಂತ್ರಿ ಅವರು ತಮ್ಮ ಮನಸ್ಸಿಗೆ ತೋಚಿದ್ದನ್ನು ಮಾತನಾಡಲು ಉಮಾ ಅವರನ್ನು ಪ್ರೋತ್ಸಾಹಿಸಿದರು. ನಂತರ ಅವರು ತಮ್ಮ ಚೊಚ್ಚಲ ಪಂದ್ಯ ವಿಶ್ವಕಪ್ ಸಮಯದಲ್ಲಿ ಏನೇನಾಯಿತು ಎಂದು ಹಂಚಿಕೊಂಡರು, ಮತ್ತು ತಾನು ಆಡಿದ ಪ್ರತಿಯೊಂದು ಚೊಚ್ಚಲ ಪಂದ್ಯದಂತೆ ಆ ದಿನ ಮಳೆಯಾಯಿತು. ನಾನು ವಿಕೆಟ್‌ಗಳನ್ನು ಮಾತ್ರ ಉರುಳಿಸುತ್ತಿದೆ, ಆದರೆ ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಪಾದಾರ್ಪಣೆ ಮಾಡುವುದು ಒಂದು ದೊಡ್ಡ ಕ್ಷಣವಾಗಿರುವುದರಿಂದ ತುಂಬಾ ಸಂತೋಷವಾಯಿತು ಎಂದರು. ದೇಶಕ್ಕಾಗಿ ಆಡಲು ಉತ್ಸುಕನಾಗಿದ್ದೆನು ಮತ್ತು ಭಾರತವನ್ನು ಗೆಲ್ಲಲು ಸಹಾಯ ಮಾಡಲು ತಮ್ಮ ಕೈಲಾದಷ್ಟು ನೀಡಲು ನಿರ್ಧರಿಸಿದ್ದೆನು ಎಂದರು. ಇಡೀ ತಂಡವು ತನ್ನನ್ನು ನಂಬಿದ್ದಕ್ಕಾಗಿ ಮತ್ತು ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ನಿರಂತರವಾಗಿ  ಬೆಂಬಲಿಸಿದ್ದಕ್ಕಾಗಿ ತಾವು ಅತ್ಯಂತ ಕೃತಜ್ಞರಾಗಿರುವುದಾಗಿ ಹೇಳಿದರು. ಭಾರತಕ್ಕಾಗಿ ಆಡಿದ ಈಶಾನ್ಯದಿಂದ ಬಂದ ಮೊದಲ ಹುಡುಗಿ ಅವರು ಎಂದು ತರಬೇತುದಾರರು ಪ್ರಮುಖವಾಗಿ ಉಲ್ಲೇಖಿಸಿದರು.. ಪ್ರಧಾನಮಂತ್ರಿಶ್ರೀ ನರೇಂದ್ರ ಮೋದಿ ಅವರು ಅಸ್ಸಾಂ ಮೂಲದವರು ಎಂದು ಗುರುತಿಸಿದರು.

ರೇಣುಕಾ ಸಿಂಗ್ ಠಾಕೂರ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ನೀವು ಬರುವಾಗ ನವಿಲುಗಳನ್ನು ನೋಡಿದ್ದೀರಾ ಎಂದು ಕೇಳಿದರು. ಆಟಗಾರ್ತಿ ತಾನು ಮತ್ತೊಂದು ನವಿಲನ್ನು ನೋಡಿದ್ದೇನೆ ಎಂದು ಉತ್ತರಿಸಿದರು ಮತ್ತು ತಾನು ಚಿತ್ರಿಸಬಹುದಾದ ಏಕೈಕ ವಿಷಯವೆಂದರೆ ನವಿಲು, ಅದನ್ನು ತಾನು ಚಿತ್ರಿಸಿ ಇಟ್ಟುಕೊಂಡಿದ್ದೇನೆ ಎಂದು ಹಂಚಿಕೊಂಡರು. ತನಗೆ ಬೇರೆ ಏನನ್ನೂ ಚಿತ್ರಿಸಲು ಸಾಧ್ಯವಿಲ್ಲ ಮತ್ತು ಮುಂದೆ ಪಕ್ಷಿಯನ್ನು ಪ್ರಯತ್ನಿಸದಂತೆ ನಿರುತ್ಸಾಹಗೊಂಡಿದ್ದೇನೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಅವರು ಆಕೆಯ ತಾಯಿಯ ಬಗ್ಗೆ ಆಳವಾದ ಗೌರವವನ್ನು ವ್ಯಕ್ತಪಡಿಸಿದರು, ತಮ್ಮ ಮಗಳನ್ನು ಒಂಟಿ ಪೋಷಕಿಯಾಗಿ ಬೆಳೆಸುವಲ್ಲಿ ಮತ್ತು ಕಷ್ಟಕರವಾದ ಜೀವನದ ಮೂಲಕ ಪ್ರಗತಿಗೆ ಸಹಾಯ ಮಾಡುವಲ್ಲಿ ಅವರು ನೀಡಿದ ಅಪಾರ ಕೊಡುಗೆಯನ್ನು ಶ್ಲಾಘಿಸಿದರು. ತಮ್ಮ ತಾಯಿಗೆ ತಮ್ಮ ವೈಯಕ್ತಿಕ ಶುಭಾಶಯಗಳನ್ನು ತಿಳಿಸವುಂತೆ ಪ್ರಧಾನಮಂತ್ರಿಕೋರಿದರು.

ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ಅರುಂಧತಿ ರೆಡ್ಡಿ, ತಮ್ಮ ತಾಯಿ ಪ್ರಧಾನಿಯವರಿಗೆ ಸಂದೇಶ ಕಳುಹಿಸಿದ್ದಾರೆ, ಅವರನ್ನು ತಮ್ಮ ಹೀರೋ ಎಂದು ಕರೆದಿದ್ದರು ಎಂದು ಹಂಚಿಕೊಂಡರು. ತಮ್ಮ ತಾಯಿ ನಾಲ್ಕೈದು ಬಾರಿ ಕರೆ ಮಾಡಿ ತಮ್ಮ ಹೀರೋನನ್ನು ಯಾವಾಗ ಭೇಟಿಯಾಗುತ್ತೀರಿ ಎಂದು ಕೇಳಿದರೆಂದು ತಿಳಿಸಿದರು.

ಆಟಗಾರರು ಮೈದಾನದಲ್ಲಿ ತಮ್ಮ ಯಶಸ್ಸಿನ ನಂತರ ದೇಶವು ಈಗ ಅವರಿಂದ ಏನನ್ನು ನಿರೀಕ್ಷಿಸುತ್ತದೆ ಎಂದು ಪ್ರಧಾನಮಂತ್ರಿಕೇಳಿದರು. ಅದಕ್ಕೆ ಸ್ಮೃತಿ ಪ್ರತಿಕ್ರಿಯಿಸಿ, ಪ್ರತಿ ಬಾರಿ ವಿಶ್ವಕಪ್‌ಗೆ ತಯಾರಿ ನಡೆಸುವಾಗ, ಅದನ್ನು ಗೆಲ್ಲುವುದು ಮಹಿಳಾ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಭಾರತದ ಮಹಿಳಾ ಕ್ರೀಡೆಗಳಲ್ಲಿಯೂ ಭಾರಿ ಪರಿಣಾಮ ಬೀರುತ್ತದೆ ಎಂದು ಅವರು ನಂಬುತ್ತಾರೆಂದರು. ಇದು ಕ್ರಾಂತಿಯನ್ನು ಆರಂಭಿಸುತ್ತದೆ ಎಂದು ಅವರು ಹೇಳಿದರು ಮತ್ತು ತಂಡವು ಆ ಬದಲಾವಣೆಗೆ ಚಾಲನೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.

ನಿಮ್ಮ ಯಶಸ್ಸಿನಿಂದಾಗಿ ಜನತೆ ಹೆಚ್ಚಿನ ಪ್ರೇರಣಾ ಶಕ್ತಿಯನ್ನು ಪಡೆದಿದ್ದಾರೆ ಎಂದು ಪ್ರಧಾನಮಂತ್ರಿಹೇಳಿದರು. ಮನೆಗೆ ಹಿಂದಿರುಗಿದ ನಂತರ ನೀವು ಓದಿದ ಶಾಲೆಗಳಿಗೆ ಭೇಟಿ ನೀಡಬೇಕು ಮತ್ತು ವಿದ್ಯಾರ್ಥಿಗಳೊಂದಿಗೆ ಒಂದು ದಿನ ಸಂವಹನ ನಡೆಸಬೇಕು ಎಂದು ಅವರು ಆಟಗಾರ್ತಿಯರಿಗೆ ಸೂಚಿಸಿದರು. ಮಕ್ಕಳು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರು ನಿಮ್ಮನ್ನು ಜೀವನ ಪರ್ಯಂತ ನೆನಪಿಸಿಕೊಳ್ಳುತ್ತಾರೆ ಮತ್ತು ಅನುಭವವು ಆಟಗಾರರನ್ನು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು. ನಂತರ ಶ್ರೀ ನರೇಂದ್ರ ಮೋದಿ ಮೂರು ಶಾಲೆಗಳನ್ನು ಆಯ್ಕೆ ಮಾಡಿ ಪ್ರತಿ ವರ್ಷ ಒಂದು ಶಾಲೆಯನ್ನು ಭೇಟಿ ಮಾಡಿ, ಇದು ಆಟಗಾರ್ತಿಯರು ಮತ್ತು ವಿದ್ಯಾರ್ಥಿಗಳನ್ನು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಫಿಟ್ ಇಂಡಿಯಾ ಆಂದೋಲನಕ್ಕೆ ಕೊಡುಗೆ ನೀಡುವ ಮಹತ್ವವನ್ನು ಪ್ರಧಾನಮಂತ್ರಿಒತ್ತಿ ಹೇಳಿದರು, ವಿಶೇಷವಾಗಿ ಬೊಜ್ಜು ನಿವಾರಣೆಯಲ್ಲಿ. ಖರೀದಿಯ ಸಮಯದಲ್ಲಿ ತೈಲ ಬಳಕೆಯನ್ನು ಶೇ. 10 ರಷ್ಟು ಕಡಿಮೆ ಮಾಡಲು ಅವರು ಸಲಹೆ ನೀಡಿದರು ಮತ್ತು ಆಟಗಾರರಿಂದ ಅಂತಹ ಸಂದೇಶಗಳನ್ನು ಕೇಳುವುದು ಜನತೆಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಫಿಟ್ ಇಂಡಿಯಾವನ್ನು, ವಿಶೇಷವಾಗಿ ಹೆಣ್ಣುಮಕ್ಕಳನ್ನು ಬೆಂಬಲಿಸಲು ಮತ್ತು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಅವರು ಆಟಗಾರರನ್ನು ಉತ್ತೇಜಿಸಿದರು.

ತಂಡ ಆಟಗಾರ್ತಿಯರೊಂದಿಗೆ ಸಂವಾದ ನಡೆಸಲು ಅವಕಾಶ ಸಿಕ್ಕಿದ್ದಕ್ಕೆ ಪ್ರಧಾನಮಂತ್ರಿಶ್ರೀ ನರೇಂದ್ರ ಮೋದಿ ಸಂತೋಷ ವ್ಯಕ್ತಪಡಿಸಿದರು, ಇದೇ ಕೆಲವು ಆಟಗಾರರನ್ನು ಹಿಂದೆ ಭೇಟಿ ಮಾಡಿದ್ದರೂ ಸಹ ಹಲವು ಆಟಗಾರ್ತಿಯರನ್ನು ಮೊದಲ ಬಾರಿಗೆ ಭೇಟಿಯಾಗುತ್ತಿದ್ದಾರೆನಿಸಿತು ಎಂದರು. ಆಟಗಾರ್ತಿಯರನ್ನು ಭೇಟಿಯಾಗಲು ನಾನು ಸದಾ ಎದುರು ನೋಡುತ್ತಿದ್ದೇನೆ ಮತ್ತು ಅವರಿಗೆ ಉತ್ತಮ ಆರೋಗ್ಯವನ್ನು ಬಯಸುತ್ತೇನೆ ಎಂದು ಹೇಳಿದರು.

ಪ್ರಧಾನಮಂತ್ರಿ ಅವರ ಮಾತುಗಳನ್ನು ಖಂಡಿತವಾಗಿಯೂ ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಸಂದೇಶವನ್ನು ರವಾನಿಸುತ್ತಾರೆ ಎಂದು ಸ್ಮೃತಿ ಮಂಧಾನ ಪ್ರತಿಕ್ರಿಯಿಸಿದರು. ಇಡೀ ತಂಡವು ಅಂತಹ ಸಂದೇಶಗಳನ್ನು ಬೆಂಬಲಿಸಲು ಸದಾ ಸಿದ್ಧವಾಗಿದೆ ಮತ್ತು ಕರೆದಾಗಲೆಲ್ಲಾ ಬರುತ್ತೇವೆ ಎಂದು ಅವರು ಹೇಳಿದರು.

ನಾವೆಲ್ಲರೂ ಒಗ್ಗೂಡಿ ದೇಶವನ್ನು ಮುಂದಕ್ಕೆ ಕೊಂಡೊಯ್ಯೋಣ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ತಮ್ಮ ಮಾತು ಮುಗಿಸಿದರು ಮತ್ತು ಎಲ್ಲರಿಗೂ ಮತ್ತೊಮ್ಮೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

 

*****

 

 


(Release ID: 2187189) Visitor Counter : 16