ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸ್ಟಾರ್ಟ್ಅಪ್ ಆಕ್ಸಿಲರೇಟರ್ ವೇವ್‌ಎಕ್ಸ್, ನವೆಂಬರ್ 20-24, 2025 ರವರೆಗೆ ನಡೆಯಲಿರುವ ಐ ಎಫ್ ಎಫ್ ಐ ಗೋವಾ 2025ರ ವೇವ್ಸ್ ಬಜಾರ್ ನಲ್ಲಿ ಭಾಗವಹಿಸಲು ನವೋದ್ಯಮಗಳನ್ನು ಆಹ್ವಾನಿಸುತ್ತಿದೆ
ಐ ಎಫ್ ಎಫ್ ಐ ಗೋವಾ 2025ರಲ್ಲಿ ವೇವ್‌ಎಕ್ಸ್ ಅಡಿಯಲ್ಲಿ ವೇವ್ಸ್ ಬಜಾರ್ ಗಾಗಿ ಬೂತ್ ಬುಕಿಂಗ್ ಗಳು ತೆರೆದಿವೆ
ವೇವ್ ಎಕ್ಸ್ ಬೂತ್ ಗಳು ವೇವ್ಸ್ ಬಜಾರ್ ನಲ್ಲಿ ಉದಯೋನ್ಮುಖ ಎವಿಜಿಸಿ-ಎಕ್ಸ್ ಆರ್ ಮತ್ತು ಮೀಡಿಯಾ-ಟೆಕ್ ಸ್ಟಾರ್ಟ್‌ಅಪ್ ಗಳನ್ನು ಪ್ರದರ್ಶಿಸುತ್ತವೆ, ಇದು ಜಾಗತಿಕ ಗೋಚರತೆ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಒದಗಿಸುತ್ತದೆ
Posted On:
06 NOV 2025 12:32PM by PIB Bengaluru
ಗೋವಾದಲ್ಲಿ ನಡೆಯಲಿರುವ 2025ರ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದಲ್ಲಿ (ಐ ಎಫ್ ಎಫ್ ಐ) ವೇವ್ಸ್ ಬಜಾರ್ ನಲ್ಲಿ ವೇವ್‌ಎಕ್ಸ್ ನಿಂದ ನಡೆಸಲ್ಪಡುವ ವಿಶೇಷ ನವೋದ್ಯಮ ಪ್ರದರ್ಶನ ವಲಯವಾದ ವೇವ್‌ಎಕ್ಸ್ ಬೂತ್ ಗಳಿಗೆ ಬುಕಿಂಗ್ ಗಳನ್ನು ತೆರೆದಿರುವುದಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಘೋಷಿಸಿದೆ.
ಈ ಉಪಕ್ರಮವು ಎವಿಜಿಸಿ-ಎಕ್ಸ್ ಆರ್ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ) ಮತ್ತು ಮನರಂಜನಾ ವಲಯಗಳಲ್ಲಿನ ಉದಯೋನ್ಮುಖ ನವೋದ್ಯಮಗಳಿಗೆ ಜಾಗತಿಕ ಉದ್ಯಮದ ನಾಯಕರು, ಹೂಡಿಕೆದಾರರು ಮತ್ತು ನಿರ್ಮಾಣ ಸ್ಟುಡಿಯೋಗಳೊಂದಿಗೆ ಸಂಪರ್ಕ ಸಾಧಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
2025ರ ನವೆಂಬರ್ 20 ರಿಂದ 24 ರವರೆಗೆ ನಿಗದಿಯಾಗಿರುವ ವೇವ್ಸ್ ಬಜಾರ್, ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾತೃಗಳು, ನಿರ್ಮಾಪಕರು ಮತ್ತು ಮಾಧ್ಯಮ ವೃತ್ತಿಪರರ ಕ್ರಿಯಾತ್ಮಕ ಭಾಗವಹಿಸುವಿಕೆಗೆ ಹೆಸರುವಾಸಿಯಾದ ಐ ಎಫ್ ಎಫ್ ಐ ನ ಪ್ರಮುಖ ನೆಟ್‌ವರ್ಕಿಂಗ್ ಕೇಂದ್ರವಾದ ಫಿಲ್ಮ್ ಬಜಾರ್ ಬಳಿ ಇದೆ.
ಪ್ರತಿ ಬೂತ್ ನ ಪ್ರತಿ ಸ್ಟಾಲ್‌ಗೆ 30,000 ರೂ.ಗಳ ಅತ್ಯಲ್ಪ ವೆಚ್ಚದಲ್ಲಿ (ಹಂಚಿಕೆ ಆಧಾರದ ಮೇಲೆ) ಲಭ್ಯವಿರುತ್ತದೆ. ಭಾಗವಹಿಸುವ ನವೋದ್ಯಮಗಳು ಈ ಕೆಳಗಿನ ಸೌಲಭ್ಯಗಳನ್ನು ಪಡೆಯುತ್ತವೆ:
- 2 ಪ್ರತಿನಿಧಿ ಪಾಸ್ ಗಳು
- ಊಟ ಮತ್ತು ಹೈ ಟೀ
- ಸಂಜೆ ನೆಟ್‌ವರ್ಕಿಂಗ್ ಅವಕಾಶ
- ಜಾಗತಿಕ ಚಲನಚಿತ್ರ, ಮಾಧ್ಯಮ ಮತ್ತು ತಂತ್ರಜ್ಞಾನ ವೃತ್ತಿಪರರಿಗೆ ನೇರ ಗೋಚರತೆ
ಆಸಕ್ತ ನವೋದ್ಯಮಗಳು http://wavex.wavesbazaar.com ನಲ್ಲಿ ನೋಂದಾಯಿಸಿಕೊಳ್ಳಬಹುದು. ಪ್ರಶ್ನೆಗಳನ್ನು wavex-mib[at]gov[dot]in ನಲ್ಲಿ ಕೇಳಬಹುದು. ಸೀಮಿತ ಸ್ಟಾಲ್ ಗಳು ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತದೆ.
ಗೋವಾದ ಐ ಎಫ್ ಎಫ್ ಐ ಬಗ್ಗೆ
1952ರಲ್ಲಿ ಆರಂಭವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಗೋವಾದ ಐಎಫ್‌ಎಫ್‌ಐ ಬಗ್ಗೆ) ಏಷ್ಯಾದ ಅತ್ಯಂತ ಮಹತ್ವದ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ, ಇದು ವಿಶ್ವ ಸಿನೆಮಾದಲ್ಲಿನ ಶ್ರೇಷ್ಠತೆಯನ್ನು ಆಚರಿಸುತ್ತದೆ ಮತ್ತು ಚಲನಚಿತ್ರ ನಿರ್ಮಾತೃಗಳು, ಕಲಾವಿದರು ಮತ್ತು ಸಿನಿಮಾ ಪ್ರಿಯರಿಗೆ ಭೇಟಿಯ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಗೋವಾದಲ್ಲಿ ವಾರ್ಷಿಕವಾಗಿ ನಡೆಯುವ ಐ ಎಫ್ ಎಫ್ ಐ ಜಾಗತಿಕ ಚಲನಚಿತ್ರ ಸಮುದಾಯದಾದ್ಯಂತ ಭಾಗವಹಿಸುವಿಕೆಯನ್ನು ಆಕರ್ಷಿಸುತ್ತದೆ ಮತ್ತು ಸೃಜನಶೀಲ ಸಹಯೋಗ ಮತ್ತು ಅವಕಾಶಗಳಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್ ಎಫ್ ಐ) 56ನೇ ಆವೃತ್ತಿಯು 2025ರ ನವೆಂಬರ್ 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ.
ವೇವ್‌ಎಕ್ಸ್ ಬಗ್ಗೆ
ವೇವ್‌ಎಕ್ಸ್ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಸ್ಟಾರ್ಟ್‌ಅಪ್ ಆಕ್ಸಿಲರೇಟರ್ ಮತ್ತು ಇನ್‌ಕ್ಯುಬೇಶನ್ ಉಪಕ್ರಮವಾಗಿದ್ದು, ಎವಿಜಿಸಿ-ಎಕ್ಸ್ ಆರ್ ಮತ್ತು ಮಾಧ್ಯಮ-ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಸಮರ್ಪಿತವಾಗಿದೆ. ಪ್ರಮುಖ ಶೈಕ್ಷಣಿಕ, ಉದ್ಯಮ ಮತ್ತು ಇನ್‌ಕ್ಯುಬೇಶನ್ ನೆಟ್‌ವರ್ಕ್ ಗಳ ಸಹಯೋಗದ ಮೂಲಕ, ವೇವ್‌ಎಕ್ಸ್ ಸೃಷ್ಟಿಕರ್ತರು ಮತ್ತು ನವೋದ್ಯಮಗಳು ತಮ್ಮ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ, ಭಾರತದ ಬೆಳೆಯುತ್ತಿರುವ ಸೃಜನಶೀಲ ಆರ್ಥಿಕತೆಗೆ ಕೊಡುಗೆ ನೀಡುತ್ತದೆ.
*****
(Release ID: 2186888)
Visitor Counter : 8
Read this release in:
English
,
Urdu
,
हिन्दी
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam