ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಐ.ಎಫ್‌.ಎಫ್‌.ಐ 2025 ಮಾಧ್ಯಮ ಮಾನ್ಯತೆ: ಗಡುವು ನವೆಂಬರ್‌ 10ರವರೆಗೆ ವಿಸ್ತರಿಸಲಾಗಿದೆ

Posted On: 05 NOV 2025 5:41PM by PIB Bengaluru

56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್‌.ಎಫ್‌.ಐ) ಅನ್ನು ವರದಿ ಮಾಡಲು ಮಾಧ್ಯಮ ಮಾನ್ಯತೆಯ ಗಡುವನ್ನು 2025ರ ನವೆಂಬರ್‌ 10 ರವರೆಗೆ ವಿಸ್ತರಿಸಲಾಗಿದೆ. ಇನ್ನೂ ತಮ್ಮ ಅರ್ಜಿಗಳನ್ನು ಪೂರ್ಣಗೊಳಿಸದ ಪತ್ರಕರ್ತರಿಗೆ ಈಗ ಹಾಗೆ ಮಾಡಲು ಹೆಚ್ಚುವರಿ ಸಮಯವಿದೆ.

ಮಾನ್ಯತೆ ಪೋರ್ಟಲ್‌ ಇಲ್ಲಿತೆರೆದಿರುತ್ತದೆ:

🔗 https://accreditation.pib.gov.in/eventregistration/login.aspx

ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು ಚಲನಚಿತ್ರ ಪ್ರದರ್ಶನಗಳು, ಮಾಸ್ಟರ್‌ ಕ್ಲಾಸ್‌ಗಳು, ಪ್ಯಾನಲ್‌ ಚರ್ಚೆಗಳು ಮತ್ತು ಪತ್ರಿಕಾಗೋಷ್ಠಿಗಳು ಸೇರಿದಂತೆ ವಿಶೇಷ ಉತ್ಸವದ ಕಾರ್ಯಕ್ರಮಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಈ ಉತ್ಸವವು 2025 ನವೆಂಬರ್‌ 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ.

ಹೆಚ್ಚುವರಿಯಾಗಿ, ಫಿಲ್ಮ್‌ ಅಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾನ್ಯತೆ ಪಡೆದ ಪತ್ರಕರ್ತರಿಗಾಗಿ ವಾರ್ತಾ ಶಾಖೆ ಸಹಯೋಗದೊಂದಿಗೆ ನವೆಂಬರ್‌ 18 ರಂದು ಪಣಜಿಯಲ್ಲಿ ಚಲನಚಿತ್ರ ಮೆಚ್ಚುಗೆ ಕೋರ್ಸ್‌ ಅನ್ನು ನಡೆಸಲಿದೆ. ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳಿಗೆ ಮೊದಲು ಬಂದವರು, ಮೊದಲು ಸೇವೆ ಸಲ್ಲಿಸುವ ಆಧಾರದ ಮೇಲೆ ಭಾಗವಹಿಸುವಿಕೆಯನ್ನು ನೀಡಲಾಗುವುದು.

ಐ.ಎಫ್‌.ಎಫ್‌.ಐ 2025 ಮಾಧ್ಯಮ ಮಾನ್ಯತೆಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಪತ್ರಕರ್ತರಿಗೆ ಶೀಘ್ರದಲ್ಲೇ ತಿಳಿಸಲಾಗುವುದು. ಸಹಾಯಕ್ಕಾಗಿ, ಪತ್ರಕರ್ತರು ಪಿ.ಐ.ಬಿ ಐ.ಎಫ್‌.ಎಫ್‌.ಐ ಮೀಡಿಯಾ ಸಪೋರ್ಟ್‌ ಡೆಸ್ಕ್‌ ಅನ್ನು ಇಲ್ಲಿ ಸಂಪರ್ಕಿಸಬಹುದು.

📧 iffi.mediadesk@pib.gov.in

ಐ.ಎಫ್‌.ಎಫ್‌.ಐ ಏಷ್ಯಾದ ಪ್ರಮುಖ ಸಿನೆಮಾ ಆಚರಣೆಯಾಗಿದ್ದು, ಗೋವಾದಲ್ಲಿ ಪ್ರತಿ ವರ್ಷ ಸಾವಿರಾರು ಚಲನಚಿತ್ರ ವೃತ್ತಿಪರರು ಮತ್ತು ಉತ್ಸಾಹಿಗಳನ್ನು ಒಟ್ಟುಗೂಡಿಸುತ್ತದೆ. ಪರಿಷ್ಕೃತ ಗಡುವಿಗೆ ಮುಂಚಿತವಾಗಿ ತಮ್ಮ ಸಲ್ಲಿಕೆಗಳನ್ನು ಪೂರ್ಣಗೊಳಿಸಲು ಪತ್ರಕರ್ತರನ್ನು ಪ್ರೊತ್ಸಾಹಿಸಲಾಗುತ್ತದೆ.

 

*****


(Release ID: 2186774) Visitor Counter : 4