ಪ್ರಧಾನ ಮಂತ್ರಿಯವರ ಕಛೇರಿ
ಸ್ವಸ್ತ ನಾರಿ, ಸಶಕ್ತ ಪರಿವಾರ ಅಭಿಯಾನವು ಮೂರು ಗಿನ್ನೆಸ್ ವಿಶ್ವ ದಾಖಲೆಗಳನ್ನು ಸೃಷ್ಟಿಮಾಡಿದ್ದಕ್ಕೆ ಪ್ರಧಾನಮಂತ್ರಿ ಅವರಿಂದ ಶ್ಲಾಘನೆ
Posted On:
01 NOV 2025 2:16PM by PIB Bengaluru
ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನವು ಮೂರು ಗಿನ್ನೆಸ್ ವಿಶ್ವ ದಾಖಲೆ™ ಪ್ರಶಸ್ತಿಗಳನ್ನು ಸೃಷ್ಟಿಸಿದ್ದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಈ ಸಾಧನೆಯ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, ಇಂತಹ ಉಪಕ್ರಮಗಳು ಬಹಳ ಶ್ಲಾಘನೀಯ ಎಂದು ಹೇಳಿದ್ದಾರೆ. ಈ ರೀತಿಯ ಸಾಮೂಹಿಕ ಚಳುವಳಿಗಳು ಮಹಿಳಾ ಸಬಲೀಕರಣ ಪ್ರಯತ್ನಕ್ಕೆ ಮತ್ತಷ್ಟು ಪ್ರಚೋದನೆಯನ್ನು ನೀಡಿ, ನಾರಿ ಶಕ್ತಿಯ ಜೀವನದ ಮೇಲೆ ಪರಿವರ್ತನಾತ್ಮಕ ಪರಿಣಾಮವನ್ನು ಬೀರುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ;
“ಇದು ತುಂಬಾ ಶ್ಲಾಘನೀಯ! ಇಂತಹ ಸಾಮೂಹಿಕ ಚಳುವಳಿಗಳು ನಮ್ಮ ಮಹಿಳಾ ಸಬಲೀಕರಣ ಪ್ರಯತ್ನಗಳಿಗೆ ಪ್ರಚೋದನೆಯನ್ನು ನೀಡಿ ನಮ್ಮ ನಾರಿ ಶಕ್ತಿಯ ಜೀವನದ ಮೇಲೆ ಪರಿವರ್ತನಾತ್ಮಕ ಪರಿಣಾಮ ಬೀರುತ್ತವೆ”.
*****
(Release ID: 2185356)
Visitor Counter : 4
Read this release in:
English
,
Urdu
,
हिन्दी
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam