ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದಾದ್ಯಂತ ಜನರನ್ನು ಸಂಪರ್ಕಿಸುವ ಸಾಮೂಹಿಕ ಚಳುವಳಿಯ ಮೂಲಕ ನಿರ್ಮಿಸಲಾದ ಏಕತೆಯ ಪ್ರತಿಮೆಯು ಸರ್ದಾರ್ ಪಟೇಲ್ ಅವರಿಗೆ ನೀಡುವ ಗೌರವವಾಗಿದೆ: ಪ್ರಧಾನಮಂತ್ರಿ

Posted On: 31 OCT 2025 12:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಏಕತೆಯ ಪ್ರತಿಮೆ’ಯು ಸರ್ದಾರ್ ವಲ್ಲಭಭಾಯಿ ಪಟೇಲ್ ಗೆ ನೀಡುವ ಗೌರವವಾಗಿದೆ ಮತ್ತು ಭಾರತದಾದ್ಯಂತದ ನಾಗರಿಕರು, ವಿಶೇಷವಾಗಿ, ಈ ಪ್ರದೇಶದ ಹಳ್ಳಿಗಳ ನಾಗರಿಕರು ಈ ಪ್ರತಿಮೆಯ ಪ್ರತಿಮೆಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ಜನರ ಚಳವಳಿಯ ಗಮನಾರ್ಹ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಮೋದಿ ಆರ್ಕೈವ್ ಎಕ್ಸ್ ಹ್ಯಾಂಡಲ್ ನ ಸರಣಿ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಸಂದೇಶ ಹಂಚಿಕೆ ಮಾಡಿದ್ದಾರೆ;

“‘ಏಕತಾ ಪ್ರತಿಮೆ’ಯು ಸರ್ದಾರ್ ಪಟೇಲ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಮತ್ತು ಗಮನಾರ್ಹವಾದ ಸಂಗತಿಯೆಂದರೆ, ಇದನ್ನು ಬೃಹತ್ ಚಳುವಳಿಯ ಪರಿಣಾಮವಾಗಿ ನಿರ್ಮಿಸಲಾಗಿದೆ, ಇಲ್ಲಿ ಭಾರತದಾದ್ಯಂತ ಜನರು, ವಿಶೇಷವಾಗಿ ಭಾರತದ ಹಳ್ಳಿಗಳ ಮಂದಿ, ಈ ಐತಿಹಾಸಿಕ ಪ್ರತಿಮೆಯೊಂದಿಗೆ ನೇರವಾದ ಸಂಪರ್ಕ ಹೊಂದಿದ್ದಾರೆಂದು ಭಾವಿಸಿದ್ದಾರೆ.

ಕೆವಾಡಿಯಾದ “ಏಕತಾ ಪ್ರತಿಮೆ’ಗೆ ಭೇಟಿ ನೀಡಿ ಮತ್ತು ಅದರ ಭವ್ಯತೆಯನ್ನು ನೀವೇ ಕಣ್ಣಾರೆ ಕಂಡುಕೊಳ್ಳಿ…”

 

*****

 


(Release ID: 2184627) Visitor Counter : 3