ಪ್ರಧಾನ ಮಂತ್ರಿಯವರ ಕಛೇರಿ
ಥೈಲ್ಯಾಂಡ್ ನ ಮಾತೃ ರಾಣಿ ಅವರಾದ, ಘನತೆವೆತ್ತ ರಾಣಿ ಸಿರಿಕಿಟ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
26 OCT 2025 3:39PM by PIB Bengaluru
ಥೈಲ್ಯಾಂಡ್ ನ ಮಾತೃ ರಾಣಿ ಅವರಾದ, ಘನತೆವೆತ್ತ ರಾಣಿ ಸಿರಿಕಿಟ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಅವರು ಸಲ್ಲಿಸಿದ ಸೇವೆ ಮತ್ತು ಸಮರ್ಪಣೆಯನ್ನು ನೆನೆದ ಪ್ರಧಾನಮಂತ್ರಿ, ಅವರ ಪರಂಪರೆ ಪ್ರಪಂಚದಾದ್ಯಂತದ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದ್ದರ:
"ಥೈಲ್ಯಾಂಡ್ ನ ಮಾತೃ ರಾಣಿಯವರಾದ, ಘನತೆವೆತ್ತ ರಾಣಿ ಸಿರಿಕಿಟ್ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಸಾರ್ವಜನಿಕ ಸೇವೆಗೆ, ಅವರ ಜೀವಮಾನದ ಸಮರ್ಪಣೆಯು ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಈ ತೀವ್ರ ದುಃಖದ ಸಮಯದಲ್ಲಿ ಘನತೆವೆತ್ತ ದೊರೆ, ರಾಜಮನೆತನದ ಸದಸ್ಯರು ಮತ್ತು ಥೈಲ್ಯಾಂಡ್ ಜನರಿಗೆ ನನ್ನ ಹೃದಯದಾಳದ ಸಂತಾಪಗಳು."
*****
(Release ID: 2182717)
Visitor Counter : 6
Read this release in:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam