ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಅಭಿವೃದ್ದಿಯ ಗಾಥೆಯಲ್ಲಿ ಅರುಣಾಚಲ ಪ್ರದೇಶದ ಪಾತ್ರವನ್ನು ಎತ್ತಿ ತೋರಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
11 OCT 2025 1:51PM by PIB Bengaluru
ರಾಷ್ಟ್ರದ ಅಭಿವೃದ್ಧಿಯ ಪ್ರಯಾಣದಲ್ಲಿ ಅರುಣಾಚಲ ಪ್ರದೇಶದ ಪರಿವರ್ತನೆ ಮತ್ತು ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾರವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಪ್ರಪ್ರಥಮವಾಗಿ ಈಶಾನ್ಯ ಭಾರತವು ನಮ್ಮ ದೇಶದ ಬೆಳವಣಿಗೆಯ ಕಥೆಯ ಪರಿಧಿಯನ್ನು ಮಾತ್ರವಲ್ಲದೆ, ಭಾರತದ ಮಿಡಿಯುವ ಹೃದಯವಾದ ಕಥೆಯನ್ನು ಈ ಲೇಖನ ಹೇಳುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದ್ದಾರೆ. ಹೊಸ ವಿಮಾನ ನಿಲ್ದಾಣಗಳಿಂದ ಸಬಲೀಕೃತ ಸ್ವಸಹಾಯ ಗುಂಪುಗಳು ಮತ್ತು ಸಂಪರ್ಕದಿಂದ ಸೃಜನಶೀಲತೆಯವರೆಗೆ, ಅರುಣಾಚಲ ಪ್ರದೇಶವು ವಿಕಸಿತ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರು ಬರೆದ ಲೇಖನಕ್ಕೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
“ಮೊದಲ ಬಾರಿಗೆ, ಈಶಾನ್ಯವು ಪರಿಧಿಯಲ್ಲ, ಇದು ಭಾರತದ ಬೆಳವಣಿಗೆಯ ಹೃದಯ ಮಿಡಿತದ ಕಥೆಯಾಗಿದೆ. ಹೊಸ ವಿಮಾನ ನಿಲ್ದಾಣಗಳಿಂದ ಸಬಲೀಕೃತ ಸ್ವಸಹಾಯ ಗುಂಪುಗಳವರೆಗೆ ಮತ್ತು ಸಂಪರ್ಕದಿಂದ ಸೃಜನಶೀಲತೆಯವರೆಗೆ, ಅರುಣಾಚಲ ಪ್ರದೇಶವು ವಿಕಸಿತ ಭಾರತದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಸಚಿವರಾದ ಶ್ರೀ @JM_Sindia ಅವರು ಬರೆದ ಎಲ್ಲರೂ ಓದಲೇಬೇಕಾದ ಲೇಖನವಿದು.”
*****
(Release ID: 2177827)
Visitor Counter : 4