ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಮಂತ್ರಿ ಅವರ ಭಾರತ ಭೇಟಿಯ ಫಲಶ್ರುತಿ

प्रविष्टि तिथि: 09 OCT 2025 1:55PM by PIB Bengaluru
ಕ್ರಮ ಸಂ ವಿವರಗಳು
I. ತಂತ್ರಜ್ಞಾನ ಮತ್ತು ನಾವಿನ್ಯತೆ  
1. ಭಾರತ-ಯುಕೆ ಸಂಪರ್ಕ ಮತ್ತು ನಾವಿನ್ಯತಾ ಕೇಂದ್ರದ ಸ್ಥಾಪನೆ.
2. ಭಾರತ-ಯುಕೆ ಕೃತಕ ಬುದ್ಧಿಮತ್ತೆ (ಎಐ) ಜಂಟಿ ಕೇಂದ್ರ ಸ್ಥಾಪನೆ.
3. ಯುಕೆ-ಭಾರತ ನಿರ್ಣಾಯಕ ಖನಿಜಗಳ ಸರಬರಾಜು ಸರಪಳಿ ವೀಕ್ಷಣಾಲಯದ ಎರಡನೇ ಹಂತದ ಉದ್ಘಾಟನೆ ಮತ್ತು ಐಐಟಿ-ಐಎಸ್‌ಎಂ ಧನ್‌ ಬಾದ್‌ನಲ್ಲಿ ಹೊಸ ಉಪಗ್ರಹ ಕ್ಯಾಂಪಸ್ ಸ್ಥಾಪನೆ.
4. ಸ್ಥಿರ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸಲು ಮತ್ತು ಹಸಿರು ತಂತ್ರಜ್ಞಾನ ಉತ್ತೇಜನಕ್ಕೆ ನಿರ್ಣಾಯಕ ಖನಿಜಗಳ ಉದ್ಯಮ ಗಿಲ್ಡ್ ಸ್ಥಾಪನೆ.
II. ಶಿಕ್ಷಣ
5. ಬೆಂಗಳೂರಿನಲ್ಲಿ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದ ಆವರಣವನ್ನು ತೆರೆಯಲು ಉದ್ದೇಶ ಪತ್ರದ ಹಸ್ತಾಂತರ.
6. GIFT (ಗುಜರಾತ್ ಅಂತಾರಾಷ್ಟ್ರೀಯ ಹಣಕಾಸು ತಂತ್ರಜ್ಞಾನ) ನಗರದಲ್ಲಿ ಸರ್ರೆ ವಿಶ್ವವಿದ್ಯಾಲಯದ ಕ್ಯಾಂಪಸ್ ತೆರೆಯಲು ತಾತ್ವಿಕ ಅನುಮೋದನೆ.
III. ವ್ಯಾಪಾರ ಮತ್ತು ಹೂಡಿಕೆ  
7. ಪುನಾರ್ ರಚಿಸಲಾದ ಭಾರತ-ಯುಕೆ ಸಿಇಒ ವೇದಿಕೆಯ ಉದ್ಘಾಟನಾ ಸಭೆ
8. ಭಾರತ-ಯುಕೆ ಜಂಟಿ ಆರ್ಥಿಕ ವ್ಯಾಪಾರ ಸಮಿತಿ (JETCO) ಮರುಸ್ಥಾಪನೆ - ಇದು ಸಿಇಟಿಎ ಅನುಷ್ಠಾನವನ್ನು ಬೆಂಬಲಿಸುತ್ತದೆ ಮತ್ತು ಎರಡೂ ದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ.
9. ಹವಾಮಾನ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ನವೀನ ಉದ್ಯಮಿಗಳನ್ನು ಬೆಂಬಲಿಸಲು ಯುಕೆ ಸರ್ಕಾರ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ನಡುವಿನ ಒಪ್ಪಂದದ ಅಡಿಯಲ್ಲಿ ಒಂದು ಕಾರ್ಯತಂತ್ರದ ಉಪಕ್ರಮವಾದ ಹವಾಮಾನ ತಂತ್ರಜ್ಞಾನ ಸ್ಟಾರ್ಟ್ಅಪ್ ನಿಧಿಯಲ್ಲಿ ಹೊಸ ಜಂಟಿ ಹೂಡಿಕೆ.
IV. ಹವಾಮಾನ, ಆರೋಗ್ಯ ಮತ್ತು ಸಂಶೋಧನೆ
10. ಜೈವಿಕ-ವೈದ್ಯಕೀಯ ಸಂಶೋಧನಾ ವೃತ್ತಿ ಕಾರ್ಯಕ್ರಮದ ಹಂತ III ರ ಉದ್ಘಾಟನೆ.
11. ಕಡಲಾಚೆಯ ಪವನ ಕಾರ್ಯಪಡೆ ಸ್ಥಾಪನೆ.
12. ಆರೋಗ್ಯ ಸಂಶೋಧನೆಯ ಕುರಿತು ICMR ಮತ್ತು NIHR, ಯುನೈಟೆಡ್ ಕಿಂಗ್‌ಡಮ್ ನಡುವಿನ ಉದ್ದೇಶ ಪತ್ರ (LoI).

 

*****


(रिलीज़ आईडी: 2176792) आगंतुक पटल : 26
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam