ಪ್ರಧಾನ ಮಂತ್ರಿಯವರ ಕಛೇರಿ
78ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ
प्रविष्टि तिथि:
15 AUG 2024 9:20PM by PIB Bengaluru
78ನೇ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಮತ್ತು ಹಾರೈಸಿದ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದರು.
ಭೂತಾನ್ ಪ್ರಧಾನಮಂತ್ರಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಪ್ರಧಾನ ಮಂತ್ರಿ:
"ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದಕ್ಕಾಗಿ ಪ್ರಧಾನಮಂತ್ರಿ ತ್ಸೆರಿಂಗ್ ಟೋಬ್ಗೆ ಅವರಿಗೆ ಧನ್ಯವಾದಗಳು,."
ನೇಪಾಳ ಪ್ರಧಾನಮಂತ್ರಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ,
"ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಮಂತ್ರಿ ಕೆ ಪಿ ಶರ್ಮಾ ಓಲಿ ಅವರಿಗೆ ತುಂಬು ಧನ್ಯವಾದಗಳು. ಭಾರತ ಮತ್ತು ನೇಪಾಳ ನಡುವಿನ ಇರುವ ಬಲವಾದ ಬಾಂಧವ್ಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ."
ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷರ ಟ್ವೀಟ್‌ಗೆ ಪ್ರಧಾನಮಂತ್ರಿ ಮೋದಿ ಪ್ರತಿಕ್ರಿಯೆ ನೀಡಿದ್ದು:
"ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೆ, ನಮ್ಮ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೆನೆ. ಭಾರತವು ಮಾಲ್ಡೀವ್ಸ್ ಅನ್ನು ಮೌಲ್ಯಯುತ ಸ್ನೇಹಿತ ಎಂದು ಪರಿಗಣಿಸುತ್ತದೆ. ನಮ್ಮೆರಡು ರಾಷ್ಟ್ರಗಳು ನಮ್ಮ ಜನರ ಪ್ರಯೋಜನಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಲೇ ಇರುತ್ತವೆ."
ಫ್ರಾನ್ಸ್ ಅಧ್ಯಕ್ಷರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಮೋದಿ:
"ನಮ್ಮ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ನನ್ನ ಆತ್ಮೀಯ ಸ್ನೇಹಿತರಾದ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರ ಭಾರತ ಭೇಟಿಯನ್ನು ಮಾತ್ರವಲ್ಲದೆ, ಭಾರತ-ಫ್ರಾನ್ಸ್ ಪಾಲುದಾರಿಕೆಗೆ ಹೆಚ್ಚಿನ ಬಲ ನೀಡಿದ ನಮ್ಮ ವಿವಿಧ ಸಂಭಾಷಣೆಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಜಾಗತಿಕ ಒಳಿತಿಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತಲೇ ಇರುತ್ತೇವೆ."
ಮಾರಿಷಸ್ ಪ್ರಧಾನಮಂತ್ರಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿ:
"ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ ಪ್ರವಿಂದ್ ಕುಮಾರ್ ಜುಗ್ನೌತ್(ಜಗನ್ನಾಥ್) ಅವರಿಗೆ ಧನ್ಯವಾದಗಳು. ನಮ್ಮ ರಾಷ್ಟ್ರಗಳ ನಡುವಿನ ಸ್ನೇಹವು ಬೆಳೆಯುತ್ತಲೇ ಇರಲಿ, ಇನ್ನಷ್ಟು ಬಹುಮುಖಿಯಾಗಲಿ."
ಯುಎಇ ಪ್ರಧಾನಮಂತ್ರಿ ಗೌರವಾನ್ವಿತ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ:
"ನಿಮ್ಮ ಶುಭಾಶಯಗಳಿಗೆ ಕೃತಜ್ಞತೆಗಳು @HHShkMohd. ಭಾರತ ಮತ್ತು ಯುಎಇ ನಡುವಿನ ಬಲವಾದ ಸಂಬಂಧಗಳಿಗೆ ನೀವು ತೋರಿರುವ ವೈಯಕ್ತಿಕ ಬದ್ಧತೆ ಶ್ಲಾಘನೀಯ. ನಮ್ಮ ರಾಷ್ಟ್ರಗಳು ಮುಂಬರುವ ವರ್ಷಗಳಲ್ಲಿ ಪೋಷಿಸಲ್ಪಟ್ಟ ಸ್ನೇಹದ ಬಂಧಗಳನ್ನು ಗಟ್ಟಿಗೊಳಿಸುತ್ತಲೇ ಇರುತ್ತವೆ."
ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ಅವರ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳಿಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ,
"ಸ್ವಾತಂತ್ರ್ಯ ದಿನಾಚರಣೆಯ ನಿಮ್ಮ ಶುಭಾಶಯಗಳಿಗಾಗಿ ಕೃತಜ್ಞತೆಗಳು, ಪ್ರಧಾನಮಂತ್ರಿ @GiorgiaMeloni. ಭಾರತ-ಇಟಲಿ ಸ್ನೇಹವು ಬೆಳೆಯುತ್ತಲೇ ಇರಲಿ, ಉತ್ತಮ ಪೃಥ್ವಿಗೆ ಸದಾ ಕೊಡುಗೆ ನೀಡಲಿ" ಎಂದು ಪೋಸ್ಟ್ ಮಾಡಿದ್ದಾರೆ.
ಭಾರತೀಯ ಸ್ವಾತಂತ್ರ್ಯ ದಿನದಂದು ಶುಭಾಶಯ ಕೋರಿದ್ದಕ್ಕಾಗಿ ಗಯಾನಾ ಗಣರಾಜ್ಯದ ಅಧ್ಯಕ್ಷ ಡಾ. ಇರ್ಫಾನ್ ಅಲಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.
ಡಾ. ಅಲಿ ಅವರಿಗೆ ಪ್ರತಿಕ್ರಿಯೆ ನೀಡಿದ ಶ್ರೀ ಮೋದಿ,
"ನಿಮ್ಮ ಶುಭಾಶಯಗಳಿಗಾಗಿ ಧನ್ಯವಾದಗಳು, ಘನತೆವೆತ್ತ ಗೌರವಾನ್ವಿತ @presidentaligy. ನಮ್ಮ ಜನರ ನಡುವಿನ ಸ್ನೇಹವನ್ನು ಮತ್ತಷ್ಟು ಬಲಪಡಿಸಲು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ."
*****
(रिलीज़ आईडी: 2176743)
आगंतुक पटल : 16
इस विज्ञप्ति को इन भाषाओं में पढ़ें:
Bengali
,
Urdu
,
Malayalam
,
Manipuri
,
Assamese
,
Odia
,
English
,
हिन्दी
,
Marathi
,
Punjabi
,
Gujarati
,
Tamil
,
Telugu