ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ 2025 ರಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ
Posted On:
06 OCT 2025 4:28PM by PIB Bengaluru
ನವದೆಹಲಿಯಲ್ಲಿ ನಡೆದ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ 2025 ರಲ್ಲಿಐತಿಹಾಸಿಕ ಪ್ರದರ್ಶನ ನೀಡಿದ ಭಾರತೀಯ ಪ್ಯಾರಾ-ಅಥ್ಲೀಟ್ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತವು ತನ್ನ ಅತ್ಯುತ್ತಮ ಪದಕಗಳ ಸಂಖ್ಯೆಯನ್ನು ದಾಖಲಿಸಿದೆ. 6 ಚಿನ್ನದ ಪದಕಗಳು ಸೇರಿದಂತೆ 22 ಪದಕಗಳನ್ನು ಭಾರತ ಗೆದ್ದುಕೊಂಡಿದೆ. ಇದು ರಾಷ್ಟ್ರದ ಪ್ಯಾರಾ-ಸ್ಪೋರ್ಟ್ಸ್ ಪ್ರಯಾಣದಲ್ಲಿಹೊಸ ಮೈಲಿಗಲ್ಲಾಗಿದೆ. ಭಾರತವು ಮೊದಲ ಬಾರಿಗೆ ಪ್ರತಿಷ್ಠಿತ ಜಾಗತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದಕ್ಕೆ ಶ್ರೀ ನರೇಂದ್ರ ಮೋದಿ ಅವರು ಹೆಮ್ಮೆ ವ್ಯಕ್ತಪಡಿಸಿದರು.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ:
ನಮ್ಮ ಪ್ಯಾರಾ-ಅಥ್ಲೀಟ್ ಗಳ ಐತಿಹಾಸಿಕ ಪ್ರದರ್ಶನ!
ಈ ವರ್ಷದ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಬಹಳ ವಿಶೇಷವಾಗಿದೆ. ಭಾರತೀಯ ತಂಡವು 6 ಚಿನ್ನದ ಪದಕಗಳು ಸೇರಿದಂತೆ 22 ಪದಕಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿತು. ನಮ್ಮ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಅವರ ಯಶಸ್ಸು ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ತಂಡದ ಪ್ರತಿಯೊಬ್ಬ ಸದಸ್ಯರ ಬಗ್ಗೆ ನಾನು ಹೆಮ್ಮೆಪಡುತ್ತೇನೆ ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ.
ದೆಹಲಿಯಲ್ಲಿಟೂರ್ನಿಯನ್ನು ಆಯೋಜಿಸಿರುವುದು ಭಾರತಕ್ಕೆ ಗೌರವವಾಗಿದೆ. ಪಂದ್ಯಾವಳಿಯ ಭಾಗವಾಗಿದ್ದ ಸುಮಾರು 100 ರಾಷ್ಟ್ರಗಳ ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಗೆ ಕೃತಜ್ಞತೆಗಳು,’’ ಎಂದಿದ್ದಾರೆ.
*****
(Release ID: 2175662)
Visitor Counter : 5
Read this release in:
Malayalam
,
English
,
Urdu
,
Hindi
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu