ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಸ್ಥ ಹೆಣ್ಣು, ಸಶಕ್ತ ಕುಟುಂಬ ಅಭಿಯಾನವನ್ನು ಭಾರತದ ನಾರಿ ಶಕ್ತಿಗೆ ಪರಿಣಾಮಕಾರಿಯಾಗಿ ಮತ್ತು ಅನುಕೂಲಕರವಾಗಿ ತಲುಪಿಸಲು ಶ್ರಮಿಸಿದವರಿಗೆ ಪ್ರಧಾನಮಂತ್ರಿ ಶ್ಲಾಘನೆ

Posted On: 04 OCT 2025 3:41PM by PIB Bengaluru

ಭಾರತದ ನಾರಿ ಶಕ್ತಿಗೆ ಸ್ವಸ್ಥ ಸ್ತ್ರೀ, ಸಶಕ್ತ ಕುಟುಂಬ (ಸ್ವಾಸ್ಥ್ಯ ನಾರಿ, ಸಶಕ್ತ್ ಪರಿವಾರ್) ಅಭಿಯಾನವನ್ನು ಪರಿಣಾಮಕಾರಿ ಮತ್ತು ಅನುಕೂಲಕರವಾಗಿ ಮಾಡಲು ಅವಿರತವಾಗಿ ಶ್ರಮಿಸಿದ ಎಲ್ಲರ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಅಭಿಯಾನವನ್ನು ಜನರ ಭಾಗವಹಿಸುವಿಕೆಯ ಅದ್ಭುತ ಉದಾಹರಣೆ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ, ಇಂತಹ ಸಾಮೂಹಿಕ ಕ್ರಿಯೆಯು ಜನರ ಜೀವನವನ್ನು ಸುಧಾರಿಸಲು ಮತ್ತು ಆರೋಗ್ಯಕರ, ಸಬಲೀಕೃತ ಸಮಾಜವನ್ನು ನಿರ್ಮಿಸುವಲ್ಲಿ ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಜೆ ಪಿ ನಡ್ಡಾ ಅವರ 'ಎಕ್ಸ್' ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

"ಶ್ಲಾಘನೀಯ ಪ್ರಯತ್ನ! ನಮ್ಮ ನಾರಿ ಶಕ್ತಿಗೆ ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಅನುಕೂಲಕರವಾಗಿ ಅಭಿಯಾನ ತಲುಪಿಸಲು ಶ್ರಮಿಸಿದ ಎಲ್ಲರಿಗೂ  ಅಭಿನಂದನೆಗಳು. ಜನರ ಪಾಲ್ಗೊಳ್ಳುವಿಕೆಯೊಂದಿಗೆ‌ ಜೀವನ‌ ಸುಧಾರಣೆಗೆ ಇದು ಅತ್ಯುತ್ತಮ ಉದಾಹರಣೆಯಾಗಿದೆ."

 

 

*****

 


(Release ID: 2174848) Visitor Counter : 6