ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯ ಚಿತ್ತರಂಜನ್ ಉದ್ಯಾನವನದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಪ್ರಧಾನಮಂತ್ರಿ ಭಾಗಿ
ಎಲ್ಲಾ ನಾಗರಿಕರ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಪ್ರಧಾನಮಂತ್ರಿ ಪ್ರಾರ್ಥನೆ
Posted On:
30 SEP 2025 9:24PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಚಿತ್ತರಂಜನ್ ಉದ್ಯಾನವನದಲ್ಲಿ ಮಹಾ ಅಷ್ಟಮಿಯ ಶುಭ ಸಂದರ್ಭದಲ್ಲಿ ಇಂದು ನಡೆದ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡರು.
ಬಂಗಾಳಿ ಸಂಸ್ಕೃತಿಯೊಂದಿಗೆ ದೃಢ ಬಾಂಧವ್ಯಕ್ಕೆ ಚಿತ್ತರಂಜನ್ ಉದ್ಯಾನವನ ಹೆಸರುವಾಸಿಯಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಅಲ್ಲಿನ ಆಚರಣೆಗಳು ನಮ್ಮ ಸಮಾಜದಲ್ಲಿನ ಏಕತೆ ಮತ್ತು ಸಾಂಸ್ಕೃತಿಕ ಚೈತನ್ಯವನ್ನು ನಿಜವಾಗಿಯೂ ಪ್ರತಿಬಿಂಬಿಸುತ್ತವೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿಯವರು ಎಲ್ಲಾ ನಾಗರಿಕರ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರಧಾನಮಂತ್ರಿಯವರು ಕಾರ್ಯಕ್ರಮದ ಮುಖ್ಯಾಂಶಗಳನ್ನು ಹಂಚಿಕೊಳ್ಳುತ್ತಾ ಹೀಗೆ ಹೇಳಿದ್ದಾರೆ: "ದೆಹಲಿಯಲ್ಲಿ ನಡೆದ ಅತ್ಯಂತ ಸ್ಮರಣೀಯ ದುರ್ಗಾ ಪೂಜೆ ಆಚರಣೆಯ ಮುಖ್ಯಾಂಶಗಳು! ಎಲ್ಲೆಲ್ಲೂ ಸಂತೋಷ ಮತ್ತು ಸಮೃದ್ಧಿ ತುಂಬಿರಲಿ…."
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ :
"ಇಂದು, ಮಹಾ ಅಷ್ಟಮಿಯ ಶುಭ ಸಂದರ್ಭದಲ್ಲಿ, ನಾನು ದೆಹಲಿಯ ಚಿತ್ತರಂಜನ್ ಉದ್ಯಾನವನದಲ್ಲಿ ನಡೆಯುವ ದುರ್ಗಾ ಪೂಜೆ ಆಚರಣೆಯಲ್ಲಿ ಭಾಗಿಯಾಗಿದ್ದೆ. ಚಿತ್ತರಂಜನ್ ಉದ್ಯಾನವನವು ಬಂಗಾಳಿ ಸಂಸ್ಕೃತಿಯೊಂದಿಗಿನ ನಿಕಟ ನಂಟಿಗೆ ಹೆಸರುವಾಸಿಯಾಗಿದೆ. ಈ ಆಚರಣೆಗಳು ನಮ್ಮ ಸಮಾಜದಲ್ಲಿನ ಏಕತೆ ಮತ್ತು ಸಾಂಸ್ಕೃತಿಕ ಚೈತನ್ಯದ ನೈಜ ಪ್ರತಿಬಿಂಬವಾಗಿದೆ. ಎಲ್ಲರ ಸಂತೋಷ ಮತ್ತು ಸೌಖ್ಯಕ್ಕಾಗಿ ಪ್ರಾರ್ಥಿಸಿದೆ."
ಪ್ರಧಾನಮಂತ್ರಿಯವರು ಆಚರಣೆಯ ಮುಖ್ಯಾಂಶಗಳನ್ನು ಹೀಗೆ ಹೇಳಿದ್ದಾರೆ "ದೆಹಲಿಯ ಅತ್ಯಂತ ಸ್ಮರಣೀಯ ದುರ್ಗಾ ಪೂಜೆ ಆಚರಣೆಯ ಪ್ರಮುಖ ಅಂಶಗಳು!
ಎಲ್ಲೆಲ್ಲೂ ಸಂತೋಷ ಮತ್ತು ಸಮೃದ್ಧಿ ಇರಲಿ..."
“আজ মহা অষ্টমীর পুণ্যদিনে, আমি দিল্লীর চিত্তরঞ্জন পার্কের দুর্গাপুজোয় অংশ নিতে গিয়েছিলাম। চিত্তরঞ্জন পার্ক, বাঙালী সংস্কৃতির সঙ্গে ওতপ্রোতভাবে জড়িত। আমাদের সমাজের ঐক্য ও সাংস্কৃতিক প্রাণময়তার প্রকৃত রূপ ফুটে ওঠে এই অনুষ্ঠানগুলিতে। সকলের সুখ ও কল্যাণের জন্যে প্রার্থনা করেছি আমি।”
*****
(Release ID: 2173455)
Visitor Counter : 8
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam