ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನವರಾತ್ರಿಯ ಶುಭ ಸಂದರ್ಭದಲ್ಲಿ ಮೋದಿ ಸರ್ಕಾರವು ದೇಶದ ಎಲ್ಲಾ ತಾಯಂದಿರು ಮತ್ತು ಸಹೋದರಿಯರಿಗೆ ʻಮುಂದಿನ ತಲೆಮಾರಿನ ಸರಕು ಮತ್ತು ಸೇವಾ ತೆರಿಗೆʼ (ನೆಕ್ಸ್ಟ್‌ಜೆನ್ ಜಿಎಸ್‌ಟಿ) ಸುಧಾರಣೆಗಳʼ  ಉಡುಗೊರೆಯನ್ನು ನೀಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಹೇಳಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನರಿಗೆ ನೀಡಿದ ಜಿಎಸ್‌ಟಿ ಸುಧಾರಣೆಗಳ ಭರವಸೆಯನ್ನು ಇಂದಿನಿಂದ ದೇಶಾದ್ಯಂತ ಜಾರಿಗೆ ತರಲಾಗಿದೆ

390ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿಯಲ್ಲಿ ಐತಿಹಾಸಿಕ ಕಡಿತ ಮಾಡಲಾಗಿದೆ

ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆಯು ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ

ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆಯು ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಸೇವೆ ಸಲ್ಲಿಸುವ ಮೋದಿ ಅವರ ಉಕ್ಕಿನ ಸಂಕಲ್ಪಕ್ಕೆ ಸಾಕ್ಷಿಯಾಗಿದೆ

ಹಲವಾರು ಹಾಲಿನ ಉತ್ಪನ್ನಗಳ ಮೇಲೆ ಶೂನ್ಯ ʻಜಿಎಸ್‌ಟಿʼ ಇರಬಹುದು ಅಥವಾ ಸಾಬೂನು, ಟೂತ್‌ಬ್ರಷ್ ಮತ್ತು ಶಾಂಪೂದಂತಹ ದೈನಂದಿನ ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಾಗಿರಬಹುದು, ಒಟ್ಟಾರೆ ಈ ಸುಧಾರಣೆಯು ಸಮಾಜದ ಪ್ರತಿಯೊಂದು ವರ್ಗಕ್ಕೂ ಉಡುಗೊರೆಯನ್ನು ತರಲಿದೆ

ಕೃಷಿ, ಆರೋಗ್ಯ ರಕ್ಷಣೆ, ಜವಳಿ ಮತ್ತು ಕೃತಕ ನಾರುಗಳಂತಹ ಕ್ಷೇತ್ರಗಳಲ್ಲಿ ಜಿಎಸ್‌ಟಿಯನ್ನು ಕಡಿಮೆ ಮಾಡುವ ಮೂಲಕ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ವಹಿಸಲಾಗಿದೆ

ಆಹಾರ ಮತ್ತು ಗೃಹೋಪಯೋಗಿ ವಸ್ತುಗಳು, ಗೃಹ ನಿರ್ಮಾಣ ಸಾಮಗ್ರಿಗಳು, ವಾಹನಗಳು, ಕೃಷಿ, ಸೇವೆಗಳು, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ವಿಮೆಯಂತಹ ಕ್ಷೇತ್ರಗಳ ಮೇಲಿನ ಜಿಎಸ್ಟಿ ಪರಿಹಾರವು ಜನರ ಜೀವನದಲ್ಲಿ ಸಂತೋಷವನ್ನು ತರುತ್ತದೆ ಮತ್ತು ಅವರ ಉಳಿತಾಯವನ್ನು ಹೆಚ್ಚಿಸಲಿದೆ

ಪ್ರತಿಯೊಬ್ಬರೂ ತಮ್ಮ ದೈನಂದಿನ ಬಳಕೆಗೆ ಸ್ಥಳೀಯ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಪ್ರತಿ ಮನೆಯನ್ನು ಸ್ವಾವಲಂಬನೆಯ ಸಂಕೇತವನ್ನಾಗಿ ಮಾಡಬೇಕು ಮತ್ತು ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸಲು ಕೊಡುಗೆ ನೀಡಬೇಕು

Posted On: 22 SEP 2025 1:17PM by PIB Bengaluru

ನವರಾತ್ರಿಯ ಶುಭ ಸಂದರ್ಭದಲ್ಲಿ ಮೋದಿ ಸರ್ಕಾರವು ದೇಶದ ಎಲ್ಲಾ ತಾಯಂದಿರು ಮತ್ತು ಸಹೋದರಿಯರಿಗೆ ʻಮುಂದಿನ ತಲೆಮಾರಿನ ಸರಕು ಮತ್ತು ಸೇವಾ ತೆರಿಗೆʼ(‌ʻನೆಕ್ಸ್ಟ್‌ಜೆನ್‌ ಜಿಎಸ್‌ಟಿ) ಸುಧಾರಣೆಗಳನ್ನು ಉಡುಗೊರೆಯಾಗಿ ನೀಡಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹೇಳಿದ್ದಾರೆ.

ಈ ಕುರಿತು ʻಎಕ್ಸ್‌ʼ ವೇದಿಕೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು “ನವರಾತ್ರಿಯ ಶುಭ ಸಂದರ್ಭದಲ್ಲಿ, ಮೋದಿ ಸರ್ಕಾರವು ದೇಶದ ಎಲ್ಲಾ ತಾಯಂದಿರು ಮತ್ತು ಸಹೋದರಿಯರಿಗೆ ‌ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆಗಳ ಉಡುಗೊರೆಯನ್ನು ನೀಡಿದೆ. ದೇಶದ ಜನರಿಗೆ ಮೋದಿ ಅವರು ನೀಡಿದ ಜಿಎಸ್‌ಟಿ ಸುಧಾರಣೆಗಳ ಭರವಸೆಯನ್ನು ಇಂದಿನಿಂದ ದೇಶಾದ್ಯಂತ ಜಾರಿಗೆ ತರಲಾಗಿದೆ. ಈ ಜಿಎಸ್‌ಟಿ ಸುಧಾರಣೆಯು 390ಕ್ಕೂ ಹೆಚ್ಚು ವಸ್ತುಗಳ ಮೇಲಿನ ತೆರಿಗೆಯಲ್ಲಿ ಐತಿಹಾಸಿಕ ಕಡಿತವನ್ನು ಒಳಗೊಂಡಿದೆ. ಆಹಾರ ಮತ್ತು ಗೃಹೋಪಯೋಗಿ ವಸ್ತುಗಳು, ಗೃಹ ನಿರ್ಮಾಣ ಸಾಮಗ್ರಿಗಳು, ವಾಹನಗಳು, ಕೃಷಿ, ಸೇವೆಗಳು, ಆಟಿಕೆಗಳು, ಕ್ರೀಡೆ, ಕರಕುಶಲ ವಸ್ತುಗಳು, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ವಿಮೆಯಂತಹ ಕ್ಷೇತ್ರಗಳ ಮೇಲೆ ʻಜಿಎಸ್‌ಟಿʼ ದರದಲ್ಲಿ ಅಭೂತಪೂರ್ವ ಇಳಿಕೆ ಮಾಡಲಾಗಿದ್ದು, ಈ ಜಿಎಸ್‌ಟಿ ಪರಿಹಾರವು ಜನರ ಜೀವನದಲ್ಲಿ ಸಂತೋಷವನ್ನು ತರುತ್ತದೆ ಮತ್ತು ಅವರ ಉಳಿತಾಯವನ್ನು ಹೆಚ್ಚಿಸಲಿದೆ,ʼʼ ಎಂದು ಹೇಳಿದ್ದಾರೆ.

“ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆಯು ಮಹತ್ವದ ಪಾತ್ರ ವಹಿಸಲಿದೆ. ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ಅವರು ದೇಶೀಯ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದರು ಮತ್ತು ʻನೆಕ್ಸ್ಟ್‌ಜೆನ್‌ ಜಿಎಸ್‌ಟಿʼ ಸುಧಾರಣೆಯು ಸ್ವಾವಲಂಬನೆಯನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ವಿವರಿಸಿದ್ದರು. ಕೃಷಿ, ಆರೋಗ್ಯ ರಕ್ಷಣೆ, ಜವಳಿ ಮತ್ತು ಮಾನವ ಕೃತಕ ನಾರುಗಳ ಕ್ಷೇತ್ರಗಳಲ್ಲಿ ಜಿಎಸ್‌ಟಿಯನ್ನು ಕಡಿಮೆ ಮಾಡುವ ಮೂಲಕ, ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ದೈನಂದಿನ ಬಳಕೆಯಲ್ಲಿ ದೇಶೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಪ್ರತಿ ಮನೆಯನ್ನು ಸ್ವಾವಲಂಬನೆಯ ಸಂಕೇತವನ್ನಾಗಿ ಮಾಡುವ ಮೂಲಕ ಸ್ವಾವಲಂಬಿ ರಾಷ್ಟ್ರವನ್ನು ನಿರ್ಮಿಸಲು ನೀವು ಸಹ ಕೊಡುಗೆ ನೀಡಬಹುದು,ʼʼ ಎಂದು ಎಂದು ಶ್ರೀ ಅಮಿತ್ ಶಾ ಕರೆ ನೀಡಿದ್ದಾರೆ.

“ಮೋದಿ ಸರ್ಕಾರವು ಮಧ್ಯಮ ವರ್ಗದವರಿಗೆ ಸಾಕಷ್ಟು ಅವಕಾಶಗಳನ್ನು ತೆರೆಯುವ ಮೂಲಕ ಅವರ ಆದಾಯವನ್ನು ಹೆಚ್ಚಿಸುತ್ತಿದೆ ಮತ್ತು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳ ಮೂಲಕ ಅವರ ಉಳಿತಾಯದಲ್ಲಿ ನಿರಂತರ ಹೆಚ್ಚಳವನ್ನು ಖಚಿತಪಡಿಸಿದೆ. ದೈನಂದಿನ ಅಗತ್ಯ ವಸ್ತುಗಳು, ಆರೋಗ್ಯ ಉತ್ಪನ್ನಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಶೈಕ್ಷಣಿಕ ವಸ್ತುಗಳ ಮೇಲಿನ ಜಿಎಸ್‌ಟಿ ದರಗಳ ತೀವ್ರ ಕಡಿತವು ಜನರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಇನ್ನೂ ಹೆಚ್ಚಿನ ಉಳಿತಾಯಕ್ಕೆ ಅವರನ್ನು ಪ್ರೋತ್ಸಾಹಿಸುತ್ತದೆ ಎಂದು ʼʼ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

“ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಸೇವೆ ಸಲ್ಲಿಸುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಉಕ್ಕಿನ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಹೊಸ ಸುಧಾರಣೆಗಳು ವ್ಯಾಪಕ ಶ್ರೇಣಿಯ ಸರಕುಗಳ ಮೇಲಿನ ಜಿಎಸ್‌ಟಿ ದರಗಳಲ್ಲಿ ತೀವ್ರ ಕಡಿತದ ಮೂಲಕ ಅವರ ವೆಚ್ಚಗಳನ್ನು ಮತ್ತಷ್ಟು ಕಡಿಮೆ ಮಾಡುತ್ತವೆ. ಇದೇ ವೇಳೆ, ವಿಶ್ವದ ಅತ್ಯಂತ ಸಮೃದ್ಧ ದೇಶವಾಗುವ ಹಾದಿಯಲ್ಲಿ ಭಾರತದ ಬೆಳವಣಿಗೆಯ ಚಕ್ರಕ್ಕೆ ಈ ಸುಧಾರಣೆಗಳು ಇನ್ನಷ್ಟು ವೇಗವಾಗಿ ನೀಡುತ್ತವೆ. ಹಲವಾರು ಹಾಲಿನ ಉತ್ಪನ್ನಗಳ ಮೇಲೆ ಶೂನ್ಯ ಜಿಎಸ್‌ಟಿ ಆಗಿರಬಹುದು ಅಥವಾ ಸಾಬೂನು, ಟೂತ್‌ಬ್ರಷ್, ಟೂತ್‌ಪೇಸ್ಟ್, ಕೂದಲಿನ ತೈಲ ಮತ್ತು ಶಾಂಪೂದಂತಹ ದೈನಂದಿನ ಅಗತ್ಯ ವಸ್ತುಗಳ ಮೇಲೆ ಅಭೂತಪೂರ್ವ ಜಿಎಸ್‌ಟಿ ಕಡಿತವಾಗಿರಬಹುದು ಒಟ್ಟಾರೆ ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆಯು ಪ್ರತಿ ಮನೆಗೂ ಸಂತೋಷದ ಉಡುಗೊರೆಯನ್ನು ತಂದಿದೆ,ʼʼ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದ್ದಾರೆ. “ಜೀವ ವಿಮೆ, ಆರೋಗ್ಯ ವಿಮೆ, ಹಿರಿಯ ನಾಗರಿಕರ ಪಾಲಿಸಿಗಳು, 33 ಜೀವ ರಕ್ಷಕ ಔಷಧಗಳು ಮತ್ತು ರೋಗನಿರ್ಣಯ ಕಿಟ್‌ಗಳ ಮೇಲೆ ಶೂನ್ಯ ಜಿಎಸ್‌ಟಿಯಿಂದ ಹಿಡಿದು, ಆಮ್ಲಜನಕ, ಶಸ್ತ್ರಚಿಕಿತ್ಸಾ ಉಪಕರಣಗಳು, ವೈದ್ಯಕೀಯ, ದಂತ ಮತ್ತು ಪಶುವೈದ್ಯಕೀಯ ಸಾಧನಗಳ ಮೇಲಿನ ಕನಿಷ್ಠ ಜಿಎಸ್‌ಟಿಯವರೆಗೆ, ಹೊಸ ಜಿಎಸ್‌ಟಿ ಸುಧಾರಣೆಯು ಜನರ ಉಳಿತಾಯದಲ್ಲಿ ಐತಿಹಾಸಿಕ ಹೆಚ್ಚಳಕ್ಕೆ ಕಾರಣವಾಗಲಿದೆ.  ಕೃಷಿ ಉಪಕರಣಗಳು ಮತ್ತು ರಸಗೊಬ್ಬರ ಕ್ಷೇತ್ರದಲ್ಲಿನ ಜಿಎಸ್‌ಟಿ ಕಡಿತದ ಬಗ್ಗೆ ರೈತರು ಉತ್ಸುಕರಾಗಿದ್ದಾರೆ.  ಜೊತೆಗೆ ಈಗ ಜನರು ವಾಹನಗಳನ್ನು ಖರೀದಿಸುವ ಮೊದಲು ಎರಡು ಬಾರಿ ಯೋಚಿಸಬೇಕಾಗಿಲ್ಲ. ಈ ಜಿಎಸ್‌ಟಿ ಸುಧಾರಣೆಯು ಸ್ವಾವಲಂಬನೆಯನ್ನು ಹೆಚ್ಚಿಸುತ್ತದೆ. ನೀವು ಕೂಡಾ ನಿಮ್ಮ ದೈನಂದಿನ ಬಳಕೆಯಲ್ಲಿ ದೇಶೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳಬೇಕು,ʼʼ ಎಂದು ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ.

 

 

*****


(Release ID: 2169562)