ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹುಟ್ಟುಹಬ್ಬದ ನಿಮಿತ್ತ ಹರಿದು ಬಂದ ಅಸಂಖ್ಯಾತ ಶುಭಾಶಯಗಳು ಮತ್ತು ಆಶೀರ್ವಾದಗಳಿಗಾಗಿ ಪ್ರಧಾನಮಂತ್ರಿ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ

Posted On: 17 SEP 2025 8:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ 75ನೇ ಹುಟ್ಟುಹಬ್ಬದಂದು ದೇಶಾದ್ಯಂತ ಮತ್ತು ವಿದೇಶಗಳಿಂದ ಹರಿದು ಬಂದಿರುವ ಅಸಂಖ್ಯಾತ ಸಂಖ್ಯೆಯ ಶುಭಾಶಯಗಳು, ಆಶೀರ್ವಾದಗಳು ಮತ್ತು ಪ್ರೀತಿಯ ಸಂದೇಶಗಳಿಗಾಗಿ ಸಂಪೂರ್ಣ ಜನಶಕ್ತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಈ ಪ್ರೀತಿ ನನ್ನನ್ನು ಇನ್ನೂ ಬಲಪಡಿಸುತ್ತದೆ ಮತ್ತು ಪ್ರೇರೇಪಿಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.

ಇಂದು ಎಕ್ಸ್ ತಾಣದ ಖಾತೆಯಲ್ಲಿ  ಹಂಚಿಕೆ ಮಾಡಿಕೊಂಡ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

“ಜನ ಶಕ್ತಿಗೆ ಕೃತಜ್ಞತೆಗಳು.

ದೇಶಾದ್ಯಂತ ಮತ್ತು ವಿದೇಶಗಳಿಂದ ಹರಿದು ಬಂದಿರುವ ಅಸಂಖ್ಯಾತ ಶುಭಾಶಯಗಳು, ಆಶೀರ್ವಾದಗಳು ಮತ್ತು ಪ್ರೀತಿಯ ಸಂದೇಶಗಳಿಂದ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಹಾಗೂ ಉತ್ಸುಕನಾಗಿದ್ದೇನೆ. ಈ ಪ್ರೀತಿ ನನ್ನನ್ನು ಬಲಪಡಿಸುತ್ತದೆ ಮತ್ತು ಇನ್ನೂ ಪ್ರೇರೇಪಿಸುತ್ತದೆ. ಇದಕ್ಕಾಗಿ ನಾನು ಸರ್ವ ಜನರಿಗೆ ಈ ಮೂಲಕ ಧನ್ಯವಾದ ಹೇಳುತ್ತೇನೆ."

 

 

*****

 


(Release ID: 2167872)