ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕಾಗಿ ವಿಶ್ವ ನಾಯಕರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ


Posted On: 17 SEP 2025 3:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ 75ನೇ ಹುಟ್ಟುಹಬ್ಬದಂದು ಶುಭಾಶಯ ತಿಳಿಸಿದ್ದಕ್ಕಾಗಿ ವಿಶ್ವ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಗಯಾನಾ ಅಧ್ಯಕ್ಷರಾದ ಡಾ. ಇರ್ಫಾನ್ ಅಲಿ ಅವರಿಗೆ ನೀಡಿದ ಸಂದೇಶದಲ್ಲಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದರು:

"ಅಧ್ಯಕ್ಷ ಅಲಿಯವರೇ, ನಿಮ್ಮ ದಯಾಪೂರ್ಣ ಶುಭಾಶಯಗಳಿಗೆ ಧನ್ಯವಾದಗಳು. ಭಾರತ ಮತ್ತು ಗಯಾನಾ ನಡುವಿನ ಸ್ನೇಹ ಮತ್ತು ಪರಸ್ಪರ ನಂಬಿಕೆಯ ಆಳವಾದ ಬಂಧಗಳನ್ನು ಪ್ರತಿಬಿಂಬಿಸುವ ನಿಮ್ಮ ಆತ್ಮೀಯ ಭಾವನೆಗಳಿಂದ ನಾನು ಭಾವುಕನಾಗಿದ್ದೇನೆ."

ನ್ಯೂಜಿಲೆಂಡ್ ಪ್ರಧಾನಮಂತ್ರಿ ಶ್ರೀ ಕ್ರಿಸ್ಟೋಫರ್ ಲಕ್ಸನ್ ಅವರಿಗೆ ನೀಡಿದ ಪ್ರತಿಸ್ಪಂದನೆಯಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದರು:

"ಪ್ರಧಾನಮಂತ್ರಿ ಶ್ರೀ ಲಕ್ಸನ್, ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ತಮ್ಮ ಸ್ನೇಹವನ್ನು ನಾನು ತುಂಬಾ ಗೌರವಿಸುತ್ತೇನೆ. ವಿಕಸಿತ ಭಾರತ 2047 ಕಡೆಗೆ ಸಾಗುತ್ತಿರುವ ಭಾರತದ ಪ್ರಯಾಣದಲ್ಲಿ ನ್ಯೂಜಿಲೆಂಡ್ ಪ್ರಮುಖ ಪಾಲುದಾರ ದೇಶವಾಗಿದೆ."

ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರಿಗೆ ನೀಡಿದ ಸಂದೇಶದಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದರು:

"ನನ್ನ ಸ್ನೇಹಿತ, ಪ್ರಧಾನಮಂತ್ರಿ ಶ್ರೀ ಅಲ್ಬನೀಸ್, ನಿಮ್ಮ ದಯಾಪೂರ್ಣ ಶುಭಾಶಯಗಳಿಗೆ ಧನ್ಯವಾದಗಳು. ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತು ನಮ್ಮ ಜನರ-ಜನರ ನಡುವಿನ ನಿಕಟ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಸಮಯಾವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ."

ಭೂತಾನ್ ಪ್ರಧಾನಮಂತ್ರಿ ಶ್ರೀ ತ್ಸೆರಿಂಗ್ ಟೋಬ್ಗೆ ಅವರಿಗೆ ನೀಡಿದ ಸಂದೇಶದಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದರು:

"ಪ್ರಧಾನಮಂತ್ರಿ ಶ್ರೀ ತ್ಸೆರಿಂಗ್ ಟೋಬ್ಗೆ, ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ಭೂತಾನ್ನೊಂದಿಗಿನ ನಮ್ಮ ವಿಶೇಷ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾನು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ."

ಡೊಮಿನಿಕಾ ಪ್ರಧಾನಮಂತ್ರಿ ಶ್ರೀ ರೂಸ್ ವೆಲ್ಟ್ ಸ್ಕೆರಿಟ್ ಅವರಿಗೆ ನೀಡಿದ ಪ್ರತಿಸ್ಪಂದನೆಯಲ್ಲಿ ಶ್ರೀ ಮೋದಿ ಅವರು ಹೀಗೆ ಹೇಳಿದರು:

"ಪ್ರಧಾನಮಂತ್ರಿ ಶ್ರೀ ಸ್ಕೆರಿಟ್, ನಿಮ್ಮ ದಯಾಪೂರ್ಣ  ಶುಭಾಶಯಗಳಿಗೆ ಧನ್ಯವಾದಗಳು. ಡೊಮಿನಿಕಾ ಕಾಮನ್ ವೆಲ್ತ್ ನೊಂದಿಗೆ ಸ್ನೇಹ ಮತ್ತು ಒಗ್ಗಟ್ಟಿನ ಬಲವಾದ ಬಂಧಗಳನ್ನು ಭಾರತವು ಆಳವಾಗಿ ಪಾಲಿಸುತ್ತದೆ."

 

*****

 


(Release ID: 2167840) Visitor Counter : 2