ಪ್ರಧಾನ ಮಂತ್ರಿಯವರ ಕಛೇರಿ
ಭಾರತ-ಮಾರಿಷಸ್ ಜಂಟಿ ಘೋಷಣೆ; ವಿಶೇಷ ಆರ್ಥಿಕ ಪ್ಯಾಕೇಜ್
Posted On:
11 SEP 2025 1:53PM by PIB Bengaluru
ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಮಾರಿಷಸ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಸನ್ಮಾನ್ಯ ಡಾ. ನವೀನ್‌ಚಂದ್ರ ರಾಮಗೂಲಂ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಇಬ್ಬರೂ ಪ್ರಧಾನಮಂತ್ರಿ ಇಂದು ವಾರಣಾಸಿಯಲ್ಲಿ ವ್ಯಾಪಕ ಶ್ರೇಣಿಯ ದ್ವಿಪಕ್ಷೀಯ ವಿಷಯಗಳ ಕುರಿತು ತುಂಬಾ ಫಲಪ್ರದ ಸಮಾಲೋಚನೆಗಳನ್ನು ನಡೆಸಿದರು. ಮಾರಿಷಸ್ ಸರ್ಕಾರ ಸಲ್ಲಿಸಿದ ಮನವಿ ಆಧರಿಸಿ ಭಾರತ ಮತ್ತು ಮಾರಿಷಸ್ ಜಂಟಿಯಾಗಿ ಕಾರ್ಯಗತಗೊಳಿಸಲು ಈ ಕೆಳಗಿನ ಯೋಜನೆಗಳನ್ನು ತಾತ್ವಿಕವಾಗಿ ಒಪ್ಪಿಕೊಂಡಿವೆ.
ಅನುದಾನದ ಆಧಾರದಲ್ಲಿ ಕೈಗೊಳ್ಳಲಿರುವ ಯೋಜನೆಗಳು/ನೆರವು
I. ಹೊಸ ಸರ್ ಸೀವೂ ಸಗೂರ್ ರಾಮಗೂಲಂ ರಾಷ್ಟ್ರೀಯ ಆಸ್ಪತ್ರೆ.
II. ಆಯುಷ್ ಶ್ರೇಷ್ಠತಾ ಕೇಂದ್ರ.
III. ಪಶುವೈದ್ಯಕೀಯ ಶಾಲೆ ಮತ್ತು ಪಶು ಆಸ್ಪತ್ರೆ.
IV. ಹೆಲಿಕಾಪ್ಟರ್‌ಗಳ ಪೂರೈಕೆಗೆ ಅವಕಾಶ.
ಈ ಯೋಜನೆ ಮತ್ತು ಮನವಿ ಮಾಡಿದ ನೆರವಿನ ವೆಚ್ಚವು ಸುಮಾರು 215 ಮಿಲಿಯನ್ ಅಮೆರಿಕನ್ ಡಾಲರ್ /ಎಂ.ಯು.ಆರ್ 9.80 ಬಿಲಿಯನ್ ಎಂದು ಅಂದಾಜಿಸಲಾಗಿದೆ.
ಅನುದಾನ ಮತ್ತು ಲೈನ್ ಆಫ್ ಕ್ರೆಡಿಟ್ (ಎಲ್.ಒ.ಸಿ) ಆಧಾರದ ಮೇಲೆ ಕೈಗೊಳ್ಳಬೇಕಾದ ಯೋಜನೆಗಳು/ನೆರವು
I. ಎಸ್.ಎಸ್.ಆರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಎ.ಟಿ.ಸಿ ಟವರ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದು.
II. ಮೋಟಾರು ಮಾರ್ಗ ಎಂ4 ಅಭಿವೃದ್ಧಿ.
III. ಎರಡನೇ ಹಂತದ ರಿಂಗ್ ರಸ್ತೆ ಅಭಿವೃದ್ಧಿ.
IV. ಸಿ.ಎಚ್.ಸಿ.ಎಲ್ ನಿಂದ ಬಂದರು ಉಪಕರಣಗಳ ಸ್ವಾಧೀನ.
ಈ ಯೋಜನೆಗಳು/ನೆರವಿನ ಅಂದಾಜು ವೆಚ್ಚವು ಸುಮಾರು 440 ಮಿಲಿಯನ್ ಅಮೆರಿಕನ್ ಡಾಲರ್ /ಎಂ.ಯು.ಆರ್ 20.10 ಬಿಲಿಯನ್ ಆಗಿರುತ್ತದೆ.
2. ಕಾರ್ಯತಾಂತ್ರಿಕವಾಗಿ ಎರಡೂ ದೇಶಗಳು ಈ ಕೆಳಗಿನವುಗಳಿಗೆ ತಾತ್ವಿಕವಾಗಿ ಒಪ್ಪಿಕೊಂಡಿವೆ:
I. ಮಾರಿಷಸ್‌ನಲ್ಲಿ ಬಂದರಿನ ಪುನರಾಭಿವೃದ್ಧಿ ಮತ್ತು ಪುನರ್ ರಚನೆ; ಮತ್ತು
II. ಚಾಗೋಸ್ ಸಮುದ್ರ ಸಂರಕ್ಷಿತ ಪ್ರದೇಶದ ಅಭಿವೃದ್ಧಿ ಮತ್ತು ಸರ್ವೇಕ್ಷಣದಲ್ಲಿ ಸಹಾಯ.
3. ಭಾರತ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ 25 ಮಿಲಿಯನ್ ಅಮೆರಿಕನ್ ಡಾಲರ್ ಬಜೆಟ್ ನೆರವವನ್ನು ನೀಡುತ್ತದೆ ಎಂದು ಸಹ ತಾತ್ವಿಕವಾಗಿ ಒಪ್ಪಿಕೊಂಡಿದೆ.
*****
(Release ID: 2165654)
Visitor Counter : 2
Read this release in:
English
,
Urdu
,
Marathi
,
Hindi
,
Bengali-TR
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam