ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರತಿಯೊಬ್ಬ ನಾಗರಿಕರಿಗೂ ಆರ್ಥಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, '2047 ರ ವೇಳೆಗೆ ಎಲ್ಲರಿಗೂ ವಿಮೆ'ಯ ಬಗ್ಗೆ ಒತ್ತು ನೀಡಿದ್ದಾರೆ.

प्रविष्टि तिथि: 04 SEP 2025 8:55PM by PIB Bengaluru

ಸಾರ್ವತ್ರಿಕ ಆರ್ಥಿಕ ರಕ್ಷಣೆ ಮತ್ತು ಆರೋಗ್ಯ ರಕ್ಷಣೆಗೆ ಸರ್ಕಾರದ ಪ್ರಮುಖ ಹೆಜ್ಜೆಯ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಡಿಗೆರೆಹಾಕಿದರು. #NextGenGST ಸುಧಾರಣೆಗಳ ಇತ್ತೀಚಿನ ಹಂತವು ಜೀವ ಮತ್ತು ಆರೋಗ್ಯ ವಿಮಾ ಉತ್ಪನ್ನಗಳ ಮೇಲೆ ಗಮನಾರ್ಹ ತೆರಿಗೆ ವಿನಾಯಿತಿಯನ್ನು ನೀಡಿ, ಅವುಗಳನ್ನು ಹೆಚ್ಚು ಕೈಗೆಟುಕುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಸುಲಭವಾಗಿ ದೊರಕುವಂತೆ ಮಾಡುತ್ತದೆ.

ಎಕ್ಸ ನಲ್ಲಿ ಶ್ರೀ ನರೇಂದ್ರ ಭರೀಂದ್ವಾಲ್ ಅವರ ಪೋಸ್ಟ್‌ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು:

"ಹಲವಾರು ವರ್ಷಗಳಲ್ಲಿ, ಪ್ರತಿಯೊಬ್ಬ ನಾಗರಿಕರಿಗೂ ಆರ್ಥಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಯನ್ನು ನೀಡಲು ನಾವು ಶ್ರಮಿಸಿದ್ದೇವೆ.

ಜೀವ ಮತ್ತು ಆರೋಗ್ಯ ವಿಮೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಮುಂದಿನ ಪೀಳಿಗೆಯ GST ಸುಧಾರಣೆಗಳು, '2047 ರ ವೇಳೆಗೆ ಎಲ್ಲರಿಗೂ ವಿಮೆ' ಎಂಬ ನಮ್ಮ ಧ್ಯೇಯದ ಮತ್ತೊಂದು ಪ್ರಮುಖ ಮೈಲಿಗಲ್ಲು.

ಒಟ್ಟಾಗಿ, ನಾವು ಸ್ವಸ್ಥ ಮತ್ತು ಸಮರ್ಥ ಭಾರತದತ್ತ ಸಾಗುತ್ತಿದ್ದೇವೆ.

#NextGenGST" ಎಂದು ಟ್ವೀಟ್ ಮಾಡಿದ್ದಾರೆ.

 

****


(रिलीज़ आईडी: 2164144) आगंतुक पटल : 35
इस विज्ञप्ति को इन भाषाओं में पढ़ें: Odia , Assamese , Bengali , Telugu , Malayalam , Tamil , English , Urdu , Marathi , हिन्दी , Manipuri , Punjabi , Gujarati