ಪ್ರಧಾನ ಮಂತ್ರಿಯವರ ಕಛೇರಿ
ಭಾರತ ಬಗ್ಗೆ ವಿಶ್ವಾಸದ ಮಾತುಗಳಿಗೆ ಸಿಂಗಾಪುರ ಪ್ರಧಾನಮಂತ್ರಿ ಲಾರೆನ್ಸ್ ವಾಂಗ್ ಗೆ ಧನ್ಯವಾದ ಹೇಳಿದ ಪ್ರಧಾನಮಂತ್ರಿ ಮೋದಿ
प्रविष्टि तिथि:
04 SEP 2025 1:04PM by PIB Bengaluru
ಭಾರತ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ ಸಿಂಗಾಪುರ ಪ್ರಧಾನಮಂತ್ರಿ ಶ್ರೀ ಲಾರೆನ್ಸ್ ವಾಂಗ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಧನ್ಯವಾದ ಹೇಳಿದ್ದಾರೆ. ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಪಯಣದಲ್ಲಿ ಸಿಂಗಾಪುರವು ಮೌಲ್ಯಯುತ ಪಾಲುದಾರ ದೇಶ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಮೋದಿ ಹೀಗೆ ಬಾರೆದಿದ್ದಾರೆ: "ಭಾರತದ ಮೇಲಿನ ವಿಶ್ವಾಸದ ಮಾತುಗಳಿಗೆ ಪ್ರಧಾನಮಂತ್ರಿ ವಾಂಗ್ ಅವರಿಗೆ ಧನ್ಯವಾದಗಳು! ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಪಯಣದಲ್ಲಿ ಸಿಂಗಾಪುರ ದೇಶವು ಮೌಲ್ಯಯುತ ಪಾಲುದಾರವಾಗಿದೆ. ನಮ್ಮ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ ಸುಧಾರಿತ ಉತ್ಪಾದನೆ, ಕೌಶಲ್ಯ ಮತ್ತು ಡಿಜಿಟಲ್ ಚೌಕಟ್ಟುಗಳ ಮೇಲೆ ಕೇಂದ್ರೀಕರಿಸುವ ಮಾರ್ಗಸೂಚಿಯ ತ್ವರಿತ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ.'' ಎಂದು ಹೇಳಿದ್ದಾರೆ.
****
(रिलीज़ आईडी: 2163811)
आगंतुक पटल : 17
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam