ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಸೆಮಿಕಾನ್ ಇಂಡಿಯಾ 2025ರ ಸಂದರ್ಭದಲ್ಲಿ ಪ್ರಮುಖ ಸಿಇಒಗಳೊಂದಿಗೆ ಸಂವಾದ ನಡೆಸಿದರು

Posted On: 03 SEP 2025 8:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೆಮಿಕಾನ್ ಇಂಡಿಯಾ 2025ರ ಸಂದರ್ಭದಲ್ಲಿ ಸೆಮಿಕಂಡಕ್ಟರ್ ವಲಯದ ಪ್ರಮುಖ ಸಿಇಒಗಳೊಂದಿಗೆ ಸಂವಾದ ನಡೆಸಿದರು. "ಈ ವಲಯದಲ್ಲಿ ಭಾರತದ ನಿರಂತರ ಸುಧಾರಣಾ ಪ್ರಯಾಣದ ಬಗ್ಗೆ ನಾನು ಮಾತನಾಡಿದ್ದೇನೆ, ಇದರಲ್ಲಿ ಬಲವಾದ ಮೂಲಸೌಕರ್ಯ ನಿರ್ಮಿಸುವುದು ಹಾಗೂ ಕೌಶಲ್ಯ ಮತ್ತು ನಾವೀನ್ಯತೆಗೆ ಒತ್ತು ನೀಡುವುದು ಸೇರಿದೆ" ಎಂದು ಶ್ರೀ ಮೋದಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ:

"ಇಂದು ಬೆಳಗ್ಗೆ, ಸೆಮಿಕಾನ್ ಇಂಡಿಯಾ 2025ರ ಸಂದರ್ಭದಲ್ಲಿ ಸೆಮಿಕಂಡಕ್ಟರ್‌ಗಳ ವಲಯದ ಪ್ರಮುಖ ಸಿಇಒಗಳೊಂದಿಗೆ ಸಂವಾದ ನಡೆಸಿದೆ. ಭಾರತದ ಸಾಮರ್ಥ್ಯದ ಬಗ್ಗೆ ಅವರ ವಿಶ್ವಾಸ ಸ್ಪಷ್ಟವಾಗಿದೆ ಮತ್ತು ಅವರು ಸೆಮಿಕಂಡಕ್ಟರ್ ನಾವೀನ್ಯತೆ ಮತ್ತು ಉತ್ಪಾದನೆಗೆ ಜಾಗತಿಕ ಕೇಂದ್ರವಾಗಿ ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ದೃಢ ಮೂಲಸೌಕರ್ಯ ನಿರ್ಮಿಸುವುದು ಹಾಗೂ ಕೌಶಲ್ಯ ಮತ್ತು ನಾವೀನ್ಯತೆಗೆ ಒತ್ತು ನೀಡುವುದನ್ನು ಒಳಗೊಂಡಂತೆ ಈ ವಲಯದಲ್ಲಿ ಭಾರತದ ನಿರಂತರ ಸುಧಾರಣಾ ಪ್ರಯಾಣದ ಬಗ್ಗೆ ನಾನು ಮಾತನಾಡಿದೆ."

 

 

*****

 


(Release ID: 2163669) Visitor Counter : 2